← Malachi (2/4) → |
1. | ಈಗ ಓ ಯಾಜಕರೇ, ಈ ಆಜ್ಞೆ ನಿಮಗಾಗಿ ಅದೆ. |
2. | ಸೈನ್ಯಗಳ ಕರ್ತನು ಹೇಳುವದೇ ನಂದರೆ ನೀವು ಕೇಳದೆ, ಹೃದಯದಲ್ಲಿ ಇಟ್ಟುಕೊಳ್ಳದೆ, ನನ್ನ ಹೆಸರಿಗೆ ಮಹಿಮೆಯನ್ನು ಕೊಡದೆ ಹೋದರೆ ನಿಮ್ಮ ಮೇಲೆ ಶಾಪವನ್ನು ಕಳುಹಿಸುವೆನು, ನಿಮ್ಮ ಆಶೀರ್ವಾದಗಳನ್ನು ಶಪಿಸುವೆನು; ಹೌದು, ಅವು ಗಳನ್ನು ಆಗಲೇ ಶಪಿಸಿದ್ದಾಯಿತು; ನೀವು ಅವುಗಳನ್ನು ಹೃದಯದಲ್ಲಿ ಇಟ್ಟುಕೊಳ್ಳುವದಿಲ್ಲ. |
3. | ಇಗೋ, ನಾನು ನಿಮ್ಮ ಸಂತತಿಯನ್ನು ಕೆಡಿಸಿ, ನಿಮ್ಮ ಮುಖಗಳ ಮೇಲೆ ಕಸವನ್ನು ಚೆಲ್ಲುತ್ತೇನೆ; ನಿಮ್ಮ ಪವಿತ್ರ ಹಬ್ಬಗಳನ್ನು ಸಹ ಕಸವೆಂದು ಚೆಲ್ಲುತ್ತೇನೆ. ಆಗ ಒಬ್ಬನು ನಿಮ್ಮನ್ನು ಅದರೊಂದಿಗೆ ತೆಗೆದುಬಿಡುವನು. |
4. | ಸೈನ್ಯಗಳ ಕರ್ತನು ಹೇಳುವದೇನಂದರೆ--ನನ್ನ ಒಡಂಬಡಿಕೆ ಲೇವಿಯ ಸಂಗಡ ಇರುವ ಹಾಗೆ ಈ ಆಜ್ಞೆಯನ್ನು ನಿಮಗೆ ಕಳುಹಿಸಿದ್ದೇನೆಂದು ತಿಳುಕೊಳ್ಳುವಿರಿ. |
5. | ನನ್ನ ಜೀವದ ಮತ್ತು ಸಮಾಧಾನದ ನನ್ನ ಒಡಂಬಡಿಕೆಯು ಅವನ ಸಂಗಡ ಇತ್ತು; ಅವುಗಳನ್ನು ಅವನಿಗೆ ಕೊಟ್ಟೆನು; ಅವನು ನನಗೆ ಭಯಪಟ್ಟು ನನ್ನ ಹೆಸರಿಗೆ ಅಂಜಿ ಕೊಂಡನು. |
6. | ಸತ್ಯದ ನ್ಯಾಯಪ್ರಮಾಣವು ಅವನ ಬಾಯಲ್ಲಿ ಇತ್ತು; ಅಕ್ರಮವು ಅವನ ತುಟಿಗಳಲ್ಲಿ ಸಿಕ್ಕಲಿಲ್ಲ. ಅವನು ಸಮಾಧಾನದಿಂದಲೂ ನ್ಯಾಯ ದಿಂದಲೂ ನನ್ನ ಸಂಗಡ ನಡೆದುಕೊಂಡು ಅನೇಕರನ್ನು ಅಕ್ರಮದಿಂದ ತಿರುಗಿಸಿದನು. |
7. | ಯಾಜಕನ ತುಟಿಗಳು ತಿಳುವಳಿಕೆಯನ್ನು ಕಾಪಾಡತಕ್ಕದ್ದು, ನ್ಯಾಯಪ್ರಮಾಣ ವನ್ನು ಅವನ ಬಾಯಲ್ಲಿ ಹುಡುಕತಕ್ಕದ್ದು; ಯಾಕಂದರೆ ಅವನು ಸೈನ್ಯಗಳ ಕರ್ತನ ಸೇವಕನೇ. |
8. | ಆದರೆ ನೀವು ಮಾರ್ಗವನ್ನು ಬಿಟ್ಟುಹೋಗಿದ್ದೀರಿ; ಅನೇಕರನ್ನು ನ್ಯಾಯಪ್ರಮಾಣಕ್ಕೆ ಎಡವುವಂತೆ ಮಾಡಿದ್ದೀರಿ; ಲೇವಿಯ ಒಡಂಬಡಿಕೆಯನ್ನು ಕೆಡಿಸಿದ್ದೀರೆಂದು ಸೈನ್ಯ ಗಳ ಕರ್ತನು ಹೇಳುತ್ತಾನೆ. |
9. | ಆದದರಿಂದ ನೀವು ನನ್ನ ಮಾರ್ಗಗಳನ್ನು ಕೈಕೊಳ್ಳದೆ, ನನ್ನ ನ್ಯಾಯ ಪ್ರಮಾಣದ ವಿಷಯವಾಗಿ ಮುಖದಾಕ್ಷಿಣ್ಯ ತೋರಿಸಿದ ಪ್ರಕಾರವೇ ನಾನು ನಿಮ್ಮನ್ನು ಜನರೆಲ್ಲರ ಮುಂದೆ ಅಸಡ್ಡೆ ಮಾಡಲ್ಪಟ್ಟ ವರನ್ನಾಗಿಯೂ ನೀಚರನ್ನಾಗಿಯೂ ಮಾಡಿದ್ದೇನೆ. |
10. | ನಮ್ಮೆಲ್ಲರಿಗೆ ಒಬ್ಬನೇ ತಂದೆಯಲ್ಲವೋ? ನಮ್ಮನ್ನು ಒಬ್ಬನೇ ದೇವರು ಸೃಷ್ಟಿಸಿದನಲ್ಲವೋ? ಯಾಕೆ ಪ್ರತಿ ಯೊಬ್ಬನು ತನ್ನ ಸಹೋದರನಿಗೆ ವಿರೋಧವಾಗಿ ವಂಚನೆಯಿಂದ ನಡೆದು ನಮ್ಮ ತಂದೆಗಳ ಒಡಂಬಡಿಕೆ ಯನ್ನು ಅಪವಿತ್ರ ಮಾಡುತ್ತೇವೆ? |
11. | ಯೆಹೂದವು ವಂಚನೆಯಾಗಿ ನಡೆದುಕೊಂಡಿದೆ; ಇಸ್ರಾಯೇಲಿನ ಲ್ಲಿಯೂ ಯೆರೂಸಲೇಮಿನಲ್ಲಿಯೂ ಅಸಹ್ಯವಾದದ್ದನ್ನು ಮಾಡಿದೆ. ಕರ್ತನು ಪ್ರೀತಿ ಮಾಡಿದ ಪರಿಶುದ್ಧವಾ ದದ್ದನ್ನು ಯೆಹೂದವು ಅಪವಿತ್ರಮಾಡಿ ಅನ್ಯ ದೇವರ ಮಗಳನ್ನು ಮದುವೆ ಮಾಡಿಕೊಂಡಿದೆ. |
12. | ಇದನ್ನು ಮಾಡುವ ಮನುಷ್ಯನನ್ನು ಅಂದರೆ, ಯಜಮಾನನನ್ನು ಜ್ಞಾನಿಯನ್ನು ಸೈನ್ಯಗಳ ಕರ್ತನಿಗೆ ಕಾಣಿಕೆ ಅರ್ಪಿಸುವ ವನನ್ನು ಕರ್ತನು ಯಾಕೋಬಿನ ಗುಡಾರಗಳೊಳಗಿಂದ ತೆಗೆದುಬಿಡುವನು. |
13. | ನೀವು ತಿರಿಗಿ ಇದನ್ನು ಮಾಡಿ ದ್ದೀರಿ, ಕರ್ತನ ಬಲಿಪೀಠಗಳನ್ನು ಕಣ್ಣೀರುಗಳಿಂದಲೂ ಅಳುವಿಕೆಯಿಂದಲೂ ಕೂಗುವಿಕೆಯಿಂದಲೂ ಮುಚ್ಚಿ ದ್ದೀರಿ; ಆದದರಿಂದ ಆತನು ಕಾಣಿಕೆಯನ್ನು ಇನ್ನು ಮೇಲೆ ಲಕ್ಷ್ಯ ಮಾಡದೆ ಅದನ್ನು ಮೆಚ್ಚಿಕೆಯಾದದ್ದೆಂದು ನಿಮ್ಮ ಕೈಯಿಂದ ಅಂಗೀಕರಿಸುವದಿಲ್ಲ. |
14. | ಆದಾಗ್ಯೂ ನೀವು--ಯಾತಕ್ಕೆ ಅನ್ನುತ್ತೀರಿ? ಕರ್ತನು ನಿನಗೂ ನೀನು ವಂಚಿಸಿದ ನಿನ್ನ ಯೌವನದ ಹೆಂಡತಿಗೂ ಸಾಕ್ಷಿಯಾಗಿ ದ್ದನು; ಆದಾಗ್ಯೂ ಅವಳು ನಿನ್ನ ಜತೆಯವಳೂ ನಿನ್ನ ಒಡಂಬಡಿಕೆಯ ಹೆಂಡತಿಯೂ ಆಗಿದ್ದಾಳೆ. |
15. | ಅವನಲ್ಲಿ ಆತ್ಮ ಉಳಿದಿದ್ದರೂ ಆತನು ಅವಳನ್ನು ಒಂಟಿಗಳಾಗಿ ಮಾಡಲಿಲ್ಲವೋ? ಮತ್ತು ಒಬ್ಬಳನ್ನು ಯಾಕೆ? ಅವನು ದೇವಭಕ್ತಿಯುಳ್ಳ ಸಂತಾನವನ್ನು ಹುಡುಕುವದಕ್ಕಾ ಗಿಯೇ; ಆದದರಿಂದ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ; ಒಬ್ಬನಾದರೂ ತನ್ನ ಯೌವನದ ಹೆಂಡತಿಯನ್ನು ವಂಚಿಸದೆ ಇರಲಿ, |
16. | ಇಸ್ರಾಯೇಲಿನ ದೇವರಾದ ಕರ್ತನು--ನಾನು ತಳ್ಳಿಬಿಡುವದನ್ನೂ ಒಬ್ಬನು ತನ್ನ ವಸ್ತ್ರವನ್ನು ಬಲಾತ್ಕಾರದಿಂದ ಮುಚ್ಚುವದನ್ನೂ ಹಗೆಮಾಡುತ್ತೇನೆಂದು ಸೈನ್ಯಗಳ ಕರ್ತನು ಹೇಳು ತ್ತಾನೆ; ಹೀಗಿರುವದರಿಂದ ನೀವು ವಂಚಿಸದ ಹಾಗೆ ನಿಮ್ಮ ಆತ್ಮವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿರಿ. |
17. | ನಿಮ್ಮ ಮಾತುಗಳಿಂದ ಕರ್ತನಿಗೆ ಬೇಸರಮಾಡಿ ದ್ದೀರಿ; ಆದಾಗ್ಯೂ--ನಾವು ಯಾವದರಲ್ಲಿ ಆತನಿಗೆ ಬೇಸರಮಾಡಿದ್ದೇವೆ ಎಂದು ಅನ್ನುತ್ತೀರಿ; ಕೆಟ್ಟದ್ದನ್ನು ಮಾಡುವವರೆಲ್ಲರೂ ಕರ್ತನ ದೃಷ್ಟಿಯಲ್ಲಿ ಒಳ್ಳೆಯವರು, ಅವರಲ್ಲಿ ಆತನು ಮೆಚ್ಚುತ್ತಾನೆಂದೂ ನ್ಯಾಯದ ದೇವರು ಎಲ್ಲಿ ಎಂದೂ ನೀವು ಹೇಳುವದರಿಂದಲೇ. |
← Malachi (2/4) → |