← Luke (7/24) → |
1. | ತನ್ನ ಎಲ್ಲಾ ಮಾತುಗಳನ್ನು ಜನರೆಲ್ಲರೂ ಕೇಳುವಂತೆ ಹೇಳಿ ಮುಗಿಸಿದ ಮೇಲೆ ಆತನು ಕಪೆರ್ನೌಮಿನಲ್ಲಿ ಪ್ರವೇಶಿಸಿದನು. |
2. | ಆಗ ಒಬ್ಬ ಶತಾಧಿಪತಿಗೆ ಪ್ರಿಯನಾಗಿದ್ದ ಆಳು ಅಸ್ವಸ್ಥನಾಗಿ ಸಾಯುವಹಾಗಿದ್ದನು. |
3. | ಅವನು ಯೇಸುವಿನ ವಿಷಯ ಕೇಳಿದಾಗ ಆತನು ಬಂದು ತನ್ನ ಆಳನ್ನು ಗುಣ ಮಾಡಬೇಕೆಂದು ಬೇಡಿಕೊಳ್ಳುವಂತೆ ಯೆಹೂದ್ಯರ ಹಿರಿಯರನ್ನು ಆತನ ಬಳಿಗೆ ಕಳುಹಿಸಿದನು. |
4. | ಅವರು ಯೇಸುವಿನ ಬಳಿಗೆ ಬಂದು ಆತನಿಗೆ ಒತ್ತಾಯ ಮಾಡಿ--ನೀನು (ಅವನ ಆಳನ್ನು) ಸ್ವಸ್ಥಮಾಡಬೇಕು; ಯಾಕಂದರೆ ಅವನು ಯೋಗ್ಯನಾಗಿದ್ದಾನೆ. |
5. | ಅವನು ನಮ್ಮ ಜನಾಂಗವನ್ನು ಪ್ರೀತಿಸುವದಲ್ಲದೆ ನಮಗಾಗಿ ಒಂದು ಸಭಾಮಂದಿರವನ್ನು ಕಟ್ಟಿಸಿದ್ದಾನೆ ಎಂದು ಬೇಡಿಕೊಂಡರು. |
6. | ಆಗ ಯೇಸು ಅವರೊಂದಿಗೆ ಹೋದನು. ಆತನು ಮನೆಗೆ ಇನ್ನೂ ಸ್ವಲ್ಪ ದೂರ ಇರುವಾಗ ಶತಾಧಿಪತಿಯು ಸ್ನೇಹಿತರನ್ನು ಆತನ ಬಳಿಗೆ ಕಳುಹಿಸಿ ಆತನಿಗೆ--ಕರ್ತನೇ, ನಿನ್ನನ್ನು ತೊಂದರೆಪಡಿಸಿ ಕೊಳ್ಳಬೇಡ; ಯಾಕಂದರೆ ನೀನು ನನ್ನ ಮನೆಯಲ್ಲಿ ಪ್ರವೇಶಿಸುವದಕ್ಕೆ ನಾನು ಯೋಗ್ಯನಲ್ಲ. |
7. | ಇಲ್ಲವೆ ನಾನೂ ನಿನ್ನ ಬಳಿಗೆ ಬರುವದಕ್ಕೆ ಯೋಗ್ಯನಲ್ಲವೆಂದು ಎಣಿಸಿಕೊಂಡಿದ್ದೇನೆ; ಆದರೆ ನೀನು ಒಂದು ಮಾತು ಹೇಳು, ಆಗ ನನ್ನ ಆಳು ಗುಣಹೊಂದುವನು; |
8. | ನಾನು ಸಹ ಅಧಿಕಾರದ ಕೆಳಗಿರುವವನು; ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ--ಹೋಗು ಅಂದರೆ ಅವನು ಹೋಗುತ್ತಾನೆ; ಮತ್ತೊಬ್ಬನಿಗೆ--ಬಾ ಅಂದರೆ ಅವನು ಬರುತ್ತಾನೆ; ನನ್ನ ಸೇವಕನಿಗೆ--ಇದನ್ನು ಮಾಡು ಅಂದರೆ ಅವನು ಅದನ್ನು ಮಾಡುತ್ತಾನೆ ಎಂದು ಹೇಳಿ ಕಳುಹಿಸಿ |
9. | ಯೇಸು ಇವುಗಳನ್ನು ಕೇಳಿದಾಗ ಅವನ ವಿಷಯದಲ್ಲಿ ಆಶ್ಚರ್ಯಪಟ್ಟು ತಿರುಗಿಕೊಂಡು ತನ್ನನ್ನು ಹಿಂಬಾಲಿಸು ತ್ತಿದ್ದವರಿಗೆ--ಇಂಥ ದೊಡ್ಡ ನಂಬಿಕೆಯನ್ನು ನಾನು ಇಸ್ರಾಯೇಲಿನಲ್ಲಿ ಸಹ ಕಾಣಲಿಲ್ಲವೆಂದು ನಿಮಗೆ ಹೇಳುತ್ತೇನೆ ಅಂದನು. |
10. | ಕಳುಹಿಸಲ್ಪಟ್ಟವರು ಮನೆಗೆ ಹಿಂದಿರುಗಿದಾಗ ಅಸ್ವಸ್ಥನಾಗಿದ್ದ ಆ ಆಳು ಸ್ವಸ್ಥನಾಗಿರುವದನ್ನು ಕಂಡರು. |
11. | ಇದಾದ ಮೇಲೆ ಮಾರಣೆಯ ದಿನ ಆತನು ನಾಯಿನೆಂಬ ಪಟ್ಟಣಕ್ಕೆ ಹೋದನು. ಆಗ ಆತನ ಶಿಷ್ಯರಲ್ಲಿ ಅನೇಕರೂ ಬಹು ಜನರೂ ಆತನ ಸಂಗಡ ಹೋದರು. |
12. | ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು. |
13. | ಕರ್ತನು ಆಕೆಯನ್ನು ನೋಡಿ ಆಕೆಯ ಮೇಲೆ ಕನಿಕರಪಟ್ಟು ಆಕೆಗೆ--ಅಳಬೇಡ ಅಂದನು. |
14. | ಆತನು ಬಂದು ಪೆಟ್ಟಿಗೆಯನ್ನು ಮುಟ್ಟಿದಾಗ ಅದನ್ನು ಹೊತ್ತುಕೊಂಡಿದ್ದವರು ಕದಲದೆ ನಿಂತರು; ಆಗ ಆತನು--ಯೌವನಸ್ಥನೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಅಂದನು. |
15. | ಆಗ ಸತ್ತವನು ಕೂತುಕೊಂಡು ಮಾತನಾಡಲಾರಂಭಿಸಿದನು. ಆತನು ಅವನನ್ನು ಅವನ ತಾಯಿಗೆ ಒಪ್ಪಿಸಿದನು. |
16. | ಆಗ ಅವರೆಲ್ಲರೂ ಭಯಹಿಡಿದವರಾಗಿ--ನಮ್ಮ ಮಧ್ಯ ದಲ್ಲಿ ಒಬ್ಬ ದೊಡ್ಡ ಪ್ರವಾದಿಯು ಎದ್ದಿದ್ದಾನೆ; --ದೇವರು ತನ್ನ ಜನರನ್ನು ದರ್ಶಿಸಿದ್ದಾನೆ ಎಂದು ದೇವ ರನ್ನು ಮಹಿಮೆಪಡಿಸುತ್ತಾ ಹೇಳಿದರು. |
17. | ಆತನ ವಿಷಯವಾದ ಈ ಸುದ್ದಿಯು ಎಲ್ಲಾ ಯೂದಾಯಕ್ಕೂ ಸುತ್ತಲಿರುವ ಎಲ್ಲಾ ಪ್ರಾಂತ್ಯಕ್ಕೂ ಹೊರಟು ಹೋಯಿತು. |
18. | ಯೋಹಾನನ ಶಿಷ್ಯರು ಈ ಎಲ್ಲಾ ವಿಷಯಗಳನ್ನು ಅವನಿಗೆ ತಿಳಿಯಪಡಿಸಿದರು. |
19. | ಆಗ ಯೋಹಾನನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು ಯೇಸುವಿನ ಬಳಿಗೆ ಕಳುಹಿಸಿ--ಬರಬೇಕಾದವನು ನೀನೋ? ಇಲ್ಲವೆ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ ಎಂದು ಕೇಳಿರಿ ಅಂದನು. |
20. | ಅವರು ಆತನ ಬಳಿಗೆ ಬಂದಾಗ ಆತನಿಗೆ--ಬರಬೇಕಾದವನು ನೀನೋ? ಇಲ್ಲವೆ ನಾವು ಬೇರೊಬ್ಬನಿಗಾಗಿ ಎದುರು ನೋಡ ಬೇಕೋ? ಎಂದು ಕೇಳುವದಕ್ಕಾಗಿ ಬಾಪ್ತಿಸ್ಮ ಮಾಡಿಸುವ ಯೋಹಾನನು ನಮ್ಮನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ ಎಂದು ಹೇಳಿದರು. |
21. | ಅದೇಗಳಿಗೆಯಲ್ಲಿ ರೋಗ ಗಳಿಂದಲೂ ವ್ಯಾಧಿಗಳಿಂದಲೂ ದುರಾತ್ಮಗಳಿಂದಲೂ ಪೀಡಿತರಾದ ಅನೇಕರನ್ನು ಆತನು ಗುಣಪಡಿಸಿದನು; ಕುರುಡರಾದ ಅನೇಕರಿಗೆ ದೃಷ್ಟಿಕೊಟ್ಟನು. |
22. | ತರು ವಾಯ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಕುರು ಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠ ರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಸತ್ತವರು ಎಬ್ಬಿಸಲ್ಪಡುತ್ತಾರೆ, ಬಡವರಿಗೆ ಸುವಾರ್ತೆಯು ಸಾರಲ್ಪಡುತ್ತದೆ ಎಂದು ನೀವು ಕಂಡು ಕೇಳಿದ ಇವು ಗಳನ್ನು |
23. | ನನ್ನ ವಿಷಯದಲ್ಲಿ ಸಂದೇಹಪಡದವನೇ ಧನ್ಯನು ಅಂದನು. |
24. | ಯೋಹಾನನ ದೂತರು ಹೊರಟು ಹೋದ ಮೇಲೆ ಆತನು ಯೋಹಾನನ ವಿಷಯವಾಗಿ ಮಾತನಾಡಲಾರಂಭಿಸಿ ಜನರಿಗೆ--ನೀವು ಯಾವದನ್ನು ನೋಡುವದಕ್ಕಾಗಿ ಅಡವಿಗೆ ಹೋದಿರಿ? ಗಾಳಿಯಿಂದ ಅಲ್ಲಾಡುವದಂಟನ್ನೋ? |
25. | ಆದರೆ ನೀವು ಏನು ನೋಡುವದಕ್ಕಾಗಿ ಹೋದಿರಿ? ಇಗೋ, ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ಶೋಭಾಯ ಮಾನವಾದ ಉಡುಪುಗಳನ್ನು ಧರಿಸಿಕೊಂಡು ಸುಖ ವಾಗಿ ಜೀವಿಸುವವರು ರಾಜರ ಓಲಗಗಳಲ್ಲಿ ಇರುತ್ತಾರೆ. |
26. | ಆದರೆ ಏನು ನೋಡುವದಕ್ಕಾಗಿ ಹೋದಿರಿ? ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ಎಂದು ನಾನು ನಿಮಗೆ ಹೇಳುತ್ತೇನೆ. |
27. | ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧ ಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ ಎಂದು ಯಾವನ ವಿಷಯದಲ್ಲಿ ಬರೆದಿತ್ತೋ ಅವನೇ ಇವನು. |
28. | ಯಾಕಂದರೆ-- ಸ್ತ್ರೀಯರಲ್ಲಿ ಹುಟ್ಟಿದವರೊಳಗೆ ಬಾಪ್ತಿಸ್ಮ ಮಾಡಿಸುವ ಯೋಹಾನನಿಗಿಂತ ದೊಡ್ಡ ಪ್ರವಾದಿಯು ಯಾವನೂ ಇಲ್ಲ; ಆದರೆ ದೇವರ ರಾಜ್ಯದಲ್ಲಿ ಅತ್ಯಲ್ಪನಾದವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ ಅಂದನು. |
29. | ಅವನಿಂದ ಉಪ ದೇಶ ಕೇಳಿದ ಎಲ್ಲಾ ಜನರೂ ಸುಂಕದವರೂ ಯೋಹಾನನ ಬಾಪ್ತಿಸ್ಮ ಮಾಡಿಸಿಕೊಂಡವರಾಗಿ ದೇವರು ನೀತಿವಂತನೆಂದು ಒಪ್ಪಿಕೊಂಡರು. |
30. | ಆದರೆ ಫರಿಸಾಯರೂ ನ್ಯಾಯಶಾಸ್ತ್ರಿಗಳೂ ಅವನಿಂದ ಬಾಪ್ತಿಸ್ಮಮಾಡಿಸಿಕೊಳ್ಳದೆ ಹೋದದರಿಂದ ತಮ್ಮ ವಿಷಯದಲ್ಲಿರುವ ದೇವರ ಸಂಕಲ್ಪವನ್ನು ತಿರಸ್ಕಾರ ಮಾಡಿದರು. |
31. | ಕರ್ತನು--ಈ ಸಂತತಿಯವರನ್ನು ನಾನು ಯಾವದಕ್ಕೆ ಹೋಲಿಸಲಿ? ಮತ್ತು ಅವರು ಯಾವದಕ್ಕೆ ಹೋಲಿಕೆಯಾಗಿದ್ದಾರೆ? |
32. | ಅವರು ಸಂತೆ ಯಲ್ಲಿ ಕೂತುಕೊಂಡು ಒಬ್ಬರನ್ನೊಬ್ಬರು ಕರೆ ಯುತ್ತಾ--ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ನಿಮಗಾಗಿ ಶೋಕಿಸಿದೆವು, ನೀವು ಅಳಲಿಲ್ಲ ಎಂದು ಹೇಳುವ ಮಕ್ಕಳಿಗೆ ಹೋಲಿಕೆ ಯಾಗಿದ್ದಾರೆ. |
33. | ಬಾಪ್ತಿಸ್ಮ ಮಾಡಿಸುವ ಯೋಹಾನನು ರೊಟ್ಟಿಯನ್ನು ತಿನ್ನದೆಯೂ ಇಲ್ಲವೆ ದ್ರಾಕ್ಷಾರಸವನ್ನು ಕುಡಿಯದೆಯೂ ಬಂದನು; ಅದಕ್ಕೆ ನೀವು--ಅವನಲ್ಲಿ ದೆವ್ವವಿದೆ ಅನ್ನುತ್ತೀರಿ. |
34. | ಮನುಷ್ಯಕುಮಾರನು ತಿನ್ನು ವವನಾಗಿಯೂ ಕುಡಿಯುವವನಾಗಿಯೂ ಬಂದನು; ಆದರೆ ನೀವು--ಇಗೋ, ಹೊಟ್ಟೇಬಾಕನು, ಕುಡು ಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು ಅನ್ನುತ್ತೀರಿ. |
35. | ಆದರೆ ಜ್ಞಾನವು ತನ್ನ ಎಲ್ಲಾ ಮಕ್ಕಳಿಂದ ನೀತಿ ನಿರ್ಣಯಪಡೆಯುವದು ಅಂದನು. |
36. | ಆಗ ಫರಿಸಾಯರಲ್ಲಿ ಒಬ್ಬನು ತನ್ನೊಂದಿಗೆ ಊಟ ಮಾಡ ಬೇಕೆಂದು ಅಪೇಕ್ಷಿಸಿದನು;ಆಗ ಆತನು ಆ ಫರಿಸಾ ಯನ ಮನೆಯೊಳಕ್ಕೆ ಹೋಗಿ ಊಟಕ್ಕೆ ಕೂತು ಕೊಂಡನು. |
37. | ಆಗ ಇಗೋ, ಆ ಪಟ್ಟಣದಲ್ಲಿದ್ದ ಫರಿಸಾಯನ ಮನೆಯಲ್ಲಿ ಯೇಸು ಊಟಕ್ಕೆ ಕೂತು ಕೊಂಡಿದ್ದಾನೆಂದು ಒಬ್ಬ ಪಾಪಿಯಾದ ಸ್ತ್ರೀಯು ತಿಳಿದು ಸುಗಂಧತೈಲದ ಭರಣಿಯನ್ನು ತಂದು |
38. | ಆತನ ಹಿಂದೆ ಪಾದಗಳ ಬಳಿಯಲ್ಲಿ ನಿಂತು ಅಳುತ್ತಾ ಆತನ ಪಾದ ಗಳನ್ನು ಕಣ್ಣೀರಿನಿಂದ ತೊಳೆಯಲಾರಂಭಿಸಿ ಅವುಗಳನ್ನು ತನ್ನ ತಲೇಕೂದಲಿನಿಂದ ಒರಸಿ ಆತನ ಪಾದಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು. |
39. | ಆಗ ಆತನನ್ನು ಕರೆದ ಫರಿಸಾಯನು ಅದನ್ನು ನೋಡಿ ತನ್ನೊಳಗೆ--ಈ ಮನುಷ್ಯನು ಒಬ್ಬ ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟುತ್ತಿದ್ದವಳು ಯಾರು ಎಂದೂ ಎಂಥತರವಾದ ಹೆಂಗಸು ಎಂದೂ ತಿಳಿದುಕೊಳ್ಳುತ್ತಿದ್ದನು; ಯಾಕಂದರೆ ಅವಳು ಒಬ್ಬ ಪಾಪಿ ಎಂದು ತನ್ನೊಳಗೆ ಅಂದು ಕೊಂಡನು. |
40. | ಆಗ ಯೇಸು ಅವನಿಗೆ--ಸೀಮೋ ನನೇ, ನಾನು ನಿನಗೆ ಹೇಳುವದಕ್ಕೆ ಒಂದು ಮಾತು ಇದೆ ಅನ್ನಲು ಅವನು ಆತನಿಗೆ--ಗುರುವೇ, ಹೇಳು ಅಂದಾಗ, ಆತನು-- |
41. | ಸಾಲಕೊಡುವ ಒಬ್ಬನಿಗೆ ಇಬ್ಬರು ಸಾಲಗಾರರಿದ್ದರು; ಒಬ್ಬನು ಐದುನೂರು ನಾಣ್ಯಗಳನ್ನೂ ಮತ್ತೊಬ್ಬನು ಐವತ್ತು ನಾಣ್ಯಗಳನ್ನೂ ಕೊಡಬೇಕಾಗಿತ್ತು. |
42. | ಅವರಿಗೆ ಕೊಡುವದಕ್ಕೆ ಏನೂ ಇಲ್ಲದ್ದರಿಂದ ಅವನು ಅವರಿಬ್ಬರನ್ನೂ ಯಥಾರ್ಥ ವಾಗಿ ಕ್ಷಮಿಸಿಬಿಟ್ಟನು. ಆದದರಿಂದ ಅವರಲ್ಲಿ ಯಾರು ಬಹಳವಾಗಿ ಅವನನ್ನು ಪ್ರೀತಿಸುವರು ಎಂಬದನ್ನು ನನಗೆ ಹೇಳು ಅಂದನು. |
43. | ಅದಕ್ಕೆ ಸೀಮೋನನು ಪ್ರತ್ಯುತ್ತರವಾಗಿ--ಯಾರಿಗೆ ಅವನು ಬಹಳವಾಗಿ ಕ್ಷಮಿಸಿದನೋ ಅವನೇ ಎಂದು ನಾನು ನೆನಸುತ್ತೇನೆ ಅಂದನು. ಆಗ ಆತನು ಅವನಿಗೆ--ನೀನು ಸರಿಯಾಗಿ ತೀರ್ಪು ಮಾಡಿದಿ ಅಂದನು. |
44. | ತರುವಾಯ ಆತನು ಆ ಸ್ತ್ರೀಯ ಕಡೆಗೆ ತಿರುಗಿಕೊಂಡು ಸೀಮೋನ ನಿಗೆ--ಈ ಸ್ತ್ರೀಯನ್ನು ನೋಡಿದೆಯಾ? ನಾನು ನಿನ್ನ ಮನೆಯೊಳಗೆ ಪ್ರವೇಶಿಸಿದಾಗ ನನ್ನ ಪಾದಗಳಿಗೆ ನೀನು ನೀರು ಕೊಡಲಿಲ್ಲ; ಇವಳಾದರೋ ನನ್ನ ಪಾದ ಗಳನು ಕಣ್ಣೀರಿನಿಂದ ತೊಳೆದು ತನ್ನ ತಲೇಕೂದಲಿನಿಂದ ಅವುಗಳನ್ನು ಒರೆ |
45. | ನೀನು ನನಗೆ ಮುದ್ದು ಕೊಡಲಿಲ್ಲ; ಆದರೆ ನಾನು ಒಳಗೆ ಬಂದಾಗಿನಿಂದ ಈ ಸ್ತ್ರೀಯು ನನ್ನ ಪಾದಗಳಿಗೆ ಮುದ್ದಿಡುವದನ್ನು ಬಿಡಲಿಲ್ಲ. |
46. | ನನ್ನ ತಲೆಗೆ ನೀನು ಎಣ್ಣೆ ಹಚ್ಚಲಿಲ್ಲ; ಆದರೆ ಈ ಸ್ತ್ರೀಯು ನನ್ನ ಪಾದಗಳಿಗೆ ತೈಲವನ್ನು ಹಚ್ಚಿದ್ದಾಳೆ. |
47. | ಆದದರಿಂದ ನಾನು ಹೇಳುವದೇ ನಂದರೆ--ಬಹಳವಾಗಿರುವ ಅವಳ ಪಾಪಗಳು ಕ್ಷಮಿಸ ಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿ ದಳು; ಆದರೆ ಯಾವನಿಗೆ ಸ್ವಲ್ಪವಾಗಿ ಕ್ಷಮಿಸಲ್ಪಡು ವದೋ ಅವನು ಸ್ವಲ್ಪವಾಗಿ ಪ್ರೀತಿಸುವನು. |
48. | ಆತನು ಆಕೆಗೆ--ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಅಂದನು. |
49. | ಆತನ ಸಂಗಡ ಊಟಕ್ಕೆ ಕೂತವರು ತಮ್ಮೊಳಗೆ--ಪಾಪಗಳನ್ನು ಸಹ ಕ್ಷಮಿಸುವದಕ್ಕೆ ಈತನು ಯಾರು ಎಂದು ತಮ್ಮಲ್ಲಿ ಅಂದುಕೊಳ್ಳಲಾರಂಭಿಸಿದರು. |
50. | ಆಗ ಆತನು ಆ ಸ್ತ್ರೀಗೆ--ನಿನ್ನ ನಂಬಿಕೆಯು ನಿನ್ನನ್ನು ರಕ್ಷಿಸಿಯದೆ, ಸಮಾಧಾನದಿಂದ ಹೋಗು ಅಂದನು. |
← Luke (7/24) → |