← Luke (3/24) → |
1. | ಕೈಸರನಾದ ತಿಬೇರಿಯನ ಆಳಿಕೆಯ ಕಾಲದ ಹದಿನೈದನೇ ವರುಷದಲ್ಲಿ ಪೊಂತ್ಯ ಪಿಲಾತನು ಯೂದಾಯಕ್ಕೆ ಅಧಿಪತಿಯೂ ಹೆರೋದನು ಗಲಿಲಾ ಯಕ್ಕೆ ಚತುರಾಧಿಪತಿಯೂ ಅವನ ಸಹೋದರನಾದ ಫಿಲಿಪ್ಪನು ಇತುರಾಯ ಮತ್ತು ತ್ರಕೋನೀತಿ ಸೀಮೆಗೆ ಚತುರಾಧಿಪತಿಯೂ ಲುಸನ್ಯನು ಅಬಿಲೇನೆಗೆ ಚತುರಾ ಧಿಪತಿಯೂ |
2. | ಅನ್ನನು ಮತ್ತು ಕಾಯಫನು ಮಹಾ ಯಾಜಕರೂ ಆಗಿದ್ದಾಗ ಅಡವಿಯಲ್ಲಿದ್ದ ಜಕರೀಯನ ಮಗನಾದ ಯೋಹಾನನ ಬಳಿಗೆ ದೇವರ ವಾಕ್ಯವು ಬಂತು. |
3. | ಅವನು ಯೊರ್ದನಿನ ಸುತ್ತಲಿರುವ ಎಲ್ಲಾ ಸೀಮೆಗಳಿಗೆ ಬಂದು ಪಾಪಗಳ ಪರಿಹಾರಕ್ಕಾಗಿ ಮಾನ ಸಾಂತರದ ಬಾಪ್ತಿಸ್ಮವನ್ನು ಸಾರಿ ಹೇಳುವವನಾದನು. |
4. | ಪ್ರವಾದಿಯಾದ ಯೆಶಾಯನ ವಾಕ್ಯಗಳ ಪುಸ್ತಕ ದಲ್ಲಿ--ಕರ್ತನ ಮಾರ್ಗವನ್ನು ಸಿದ್ಧ ಮಾಡಿರಿ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವದೆ ಎಂದೂ |
5. | ಪ್ರತಿಯೊಂದು ತಗ್ಗು ಮುಚ್ಚಿಸಲ್ಪಡುವದು, ಪ್ರತಿಯೊಂದು ಬೆಟ್ಟವು ತಗ್ಗಿಸಲ್ಪಡುವದು, ಡೊಂಕಾದವುಗಳು ನೆಟ್ಟಗಾಗುವವು ಮತ್ತು ಕೊರಕಲಾದ ದಾರಿಗಳು ಸಮವಾಗುವವು; |
6. | ಮಾನವರೆಲ್ಲರು ದೇವರ ರಕ್ಷಣೆಯನ್ನು ಕಾಣುವರು ಎಂದೂ ಬರೆದಿರುವಂತೆ ಹೀಗಾಯಿತು. |
7. | ಆಗ ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಹೊರಟು ಬಂದ ಜನಸಮೂಹಕ್ಕೆ--ಓ ಸರ್ಪಗಳ ಸಂತತಿಯವರೇ, ಬರುವದಕ್ಕಿರುವ ಕೋಪದಿಂದ ತಪ್ಪಿಸಿಕೊಳ್ಳುವಂತೆ ನಿಮ್ಮನ್ನು ಎಚ್ಚರಿಸಿದವರಾರು? |
8. | ಹಾಗಾದರೆ ಮಾನಸಾ ಂತರಕ್ಕೆ ಯೋಗ್ಯವಾದ ಫಲಗಳನ್ನು ಫಲಿಸಿರಿ,--ಅಬ್ರಹಾಮನು ನಮಗೆ ತಂದೆಯಾಗಿದ್ದಾನೆಂದು ನಿಮ್ಮೊಳಗೆ ಅಂದುಕೊಳ್ಳುವದಕ್ಕೆ ಆರಂಭಿಸಬೇ ಡಿರಿ; ಯಾಕಂದರೆ--ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸಶಕ್ತನೆಂದು ನಾನು ನಿಮಗೆ ಹೇಳುತ್ತೇನೆ. |
9. | ಈಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ; ಆದದರಿಂದ ಒಳ್ಳೇಫಲ ಫಲಿ ಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿಯಲ್ಲಿ ಹಾಕಲ್ಪಡುವದು ಎಂದು ಹೇಳಿದನು. |
10. | ಆಗ ಜನರು ಅವನಿಗೆ--ಹಾಗಾದರೆ ನಾವೇನು ಮಾಡಬೇಕು ಎಂದು ಕೇಳಿದರು. |
11. | ಅವನು ಪ್ರತ್ಯುತ್ತರವಾಗಿ ಅವರಿಗೆ--ಎರಡು ಅಂಗಿಗಳುಳ್ಳವನು ಏನೂ ಇಲ್ಲದವ ನಿಗೆ ಕೊಡಲಿ; ಆಹಾರವುಳ್ಳವನು ಹಾಗೆಯೇ ಮಾಡಲಿ ಎಂದು ಹೇಳಿದನು. |
12. | ತರುವಾಯ ಸುಂಕದವರು ಸಹ ಬಾಪ್ತಿಸ್ಮ ಮಾಡಿಸಿಕೊಳ್ಳುವದಕ್ಕಾಗಿ ಬಂದು ಅವನಿಗೆ--ಬೋಧಕನೇ, ನಾವೇನು ಮಾಡಬೇಕು ಎಂದು ಕೇಳಿದರು. |
13. | ಅದಕ್ಕವನು ಅವರಿಗೆ-- ನಿಮಗೆ ನೇಮಿಸಲ್ಪಟ್ಟದ್ದಕ್ಕಿಂತ ಹೆಚ್ಚೇನೂ ತೆಗೆದು ಕೊಳ್ಳಬೇಡಿರಿ ಅಂದನು. |
14. | ಅದರಂತೆಯೇ ಸೈನಿ ಕರು--ನಾವೇನು ಮಾಡತಕ್ಕದ್ದು ಎಂದು ಕೇಳಿದ್ದಕ್ಕೆ ಅವನು ಅವರಿಗೆ--ಯಾರನ್ನೂ ಹಿಂಸಿಸಬೇಡಿರಿ; ಇಲ್ಲವೆ ಯಾರ ಮೇಲೆಯೂ ಸುಳ್ಳಾಗಿ ದೂರು ಹೇಳಬೇಡಿರಿ; ನಿಮ್ಮ ಸಂಬಳದಲ್ಲಿ ತೃಪ್ತರಾಗಿರ್ರಿ ಎಂದು ಹೇಳಿದನು. |
15. | ಆಗ ಜನರು ಕ್ರಿಸ್ತನನ್ನು ಎದುರು ನೋಡುವವರಾಗಿದ್ದರಿಂದ ಯೋಹಾನನು ಆ ಕ್ರಿಸ್ತನಾ ಗಿರಬಹುದೋ ಇಲ್ಲವೋ ಎಂದು ಎಲ್ಲರೂ ತಮ್ಮ ಹೃದಯಗಳಲ್ಲಿ ಆಲೋಚಿಸುತ್ತಿದ್ದರು. |
16. | ಆಗ ಯೋಹಾನನು ಪ್ರತ್ಯುತ್ತರವಾಗಿ ಅವರೆಲ್ಲ ರಿಗೆ--ನಾನಂತೂ ನಿಮಗೆ ನೀರಿನ ಬಾಪ್ತಿಸ್ಮ ಮಾಡಿಸು ವದು ನಿಜವೇ; ಆದರೆ ನನಗಿಂತ ಶಕ್ತನೊಬ್ಬನು ಬರು ತ್ತಾನೆ; ಆತನ ಕೆರಗಳ ಬಾರನ್ನು ಬಿಚ್ಚುವದಕ್ಕೂ ನಾನು ಯೋಗ್ಯನಲ್ಲ; ಆತನು ಪವಿತ್ರಾತ್ಮನಿಂದಲೂ ಬೆಂಕಿಯಿಂ ದಲೂ ನಿಮಗೆ ಬಾಪ್ತಿಸ್ಮ ಮಾಡಿಸುವನು |
17. | ಆತನ ಮೊರವು ಆತನ ಕೈಯಲ್ಲಿದೆ. ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ಗೋದಿಯನ್ನು ತನ್ನ ಕಣಜದಲ್ಲಿ ಕೂಡಿಸುವನು; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಡುವನು ಎಂದು ಹೇಳಿದನು. |
18. | ಅವನು ಇನ್ನೂ ಅನೇಕ ವಿಷಯಗಳಿಂದ ಎಚ್ಚರಿಸಿ ಜನರಿಗೆ ಸಾರಿದನು. |
19. | ಆದರೆ ಚತುರಾಧಿಪತಿಯಾದ ಹೆರೋದನು ತನ್ನ ಸಹೋದರನಾದ ಫಿಲಿಪ್ಪನ ಹೆಂಡ ತಿಯಾದ ಹೆರೋದ್ಯಳಿಗಾಗಿಯೂ ಹೆರೋದನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳಿಗಾಗಿಯೂ ಯೋಹಾ ನನು ಅವನನ್ನು ಗದರಿಸಿದ್ದರಿಂದ |
20. | ಅವನು ಯೋಹಾ ನನನ್ನು ಸೆರೆಯಲ್ಲಿ ಹಾಕಿ ತಾನು ಮಾಡಿದ್ದ ಎಲ್ಲಾ ದುಷ್ಕೃತ್ಯಗಳ ಮೇಲೆ ಇದನ್ನು ಕೂಡಿಸಿದನು. |
21. | ಜನರೆಲ್ಲಾ ಬಾಪ್ತಿಸ್ಮ ಮಾಡಿಸಿಕೊಂಡ ಮೇಲೆ ಆದದ್ದೇನಂದರೆ ಯೇಸು ಸಹ ಬಾಪ್ತಿಸ್ಮ ಮಾಡಿಸಿಕೊಂಡು ಪ್ರಾರ್ಥಿಸುತ್ತಿದ್ದಾಗ ಆಕಾಶವು ತೆರೆಯಲ್ಪಟ್ಟಿತು. |
22. | ಆಗ ಪರಿಶುದ್ಧಾತ್ಮನು ಪಾರಿವಾಳದ ದೇಹಾಕಾರದಲ್ಲಿ ಇಳಿ ದನು; --ನೀನು ಪ್ರಿಯನಾಗಿರುವ ನನ್ನ ಮಗನು; ನಿನ್ನಲ್ಲಿ ನಾನು ಆನಂದಿಸುತ್ತೇನೆ ಎಂಬ ಧ್ವನಿಯು ಪರ ಲೋಕದೊಳಗಿಂದ ಬಂತು. |
23. | ಯೇಸು ಹೆಚ್ಚು ಕಡಿಮೆ ಮೂವತ್ತು ವರುಷದ ವನಾದನು; ಆತನು ಯೋಸೇಫನ ಮಗನೆಂದು (ಎಣಿಸಲ್ಪಟ್ಟನು); ಯೋಸೇಫನು ಹೇಲೀಯ ಮಗನು; |
24. | ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; ಇವನು ಮೆಲ್ಖಿಯ ಮಗನು; ಇವನು ಯನ್ನಾಯನ ಮಗನು; ಇವನು ಯೋಸೇಫನ ಮಗನು; |
25. | ಇವನು ಮತ್ತಥೀಯನ ಮಗನು; ಇವನು ಆಮೋಸನ ಮಗನು; ಇವನು ನಹೂಮನ ಮಗನು; ಇವನು ಎಸ್ಲಿಯ ಮಗನು; |
26. | ಇವನು ನಗ್ಗಾಯನ ಮಗನು; ಇವನು ಮಹಾಥನ ಮಗನು; ಇವನು ಮತ್ತಥೀಯನ ಮಗನು; ಇವನು ಶಿಮೀಯ ಮಗನು; ಇವನು ಯೋಸೇಫನ ಮಗನು; ಇವನು ಯೂದನ ಮಗನು; |
27. | ಇವನು ಯೋಹಾನನ ಮಗನು; ಇವನು ರೇಸನ ಮಗನು; ಇವನು ಜೆರುಬಾ ಬೆಲನ ಮಗನು; ಇವನು ಸಲಥಿಯೇಲನ ಮಗನು; ಇವನು ನೇರಿಯ ಮಗನು; |
28. | ಇವನು ಮೆಲ್ಖಿಯ ಮಗನು; ಇವನು ಅದ್ದಿಯ ಮಗನು; ಇವನು ಕೊಸಾಮನ ಮಗನು; ಇವನು ಎಲ್ಮದಾಮನ ಮಗನು; ಇವನು ಏರನ ಮಗನು; |
29. | ಇವನು ಯೋಸೇಯನ ಮಗನು; ಇವನು ಎಲಿಯೇಜರನ ಮಗನು; ಇವನು ಯೋರೈಮನ ಮಗನು; ಇವನು ಮತ್ಥಾತನ ಮಗನು; ಇವನು ಲೇವಿಯ ಮಗನು; |
30. | ಇವನು ಸಿಮಿ ಯೋನನ ಮಗನು; ಇವನು ಯೂದನ ಮಗನು; ಇವನು ಯೋಸೇಫನ ಮಗನು; ಇವನು ಯೋನಾಮನ ಮಗನು; ಇವನು ಎಲಿಯಕೀಮನ ಮಗನು; |
31. | ಇವನು ಮೆಲೆಯಾನ ಮಗನು; ಇವನು ಮೆನ್ನನ ಮಗನು; ಇವನು ಮತ್ತಾಥನ ಮಗನು; ಇವನು ನಾತಾನನ ಮಗನು; ಇವನು ದಾವೀದನ ಮಗನು; |
32. | ಇವನು ಇಷಯನ ಮಗನು; ಇವನು ಓಬೇದನ ಮಗನು; ಇವನು ಬೋವಜನ ಮಗನು; ಇವನು ಸಲ್ಮೋನನ ಮಗನು; ಇವನು ನಹಸ್ಸೋನನ ಮಗನು; |
33. | ಇವನು ಅಮ್ಮಿನಾದಾಬನ ಮಗನು; ಇವನು ಅರಾಮನ ಮಗನು; ಇವನು ಎಸ್ರೋಮನ ಮಗನು; ಇವನು ಪೆರೆಸನ ಮಗನು; ಇವನು ಯೂದನ ಮಗನು; |
34. | ಇವನು ಯಾಕೋಬನ ಮಗನು; ಇವನು ಇಸಾಕನ ಮಗನು; ಇವನು ಅಬ್ರಹಾಮನ ಮಗನು; ಇವನು ತೇರನ ಮಗನು; ಇವನು ನಹೋರನ ಮಗನು; |
35. | ಇವನು ಸೆರೂಗನ ಮಗನು; ಇವನು ರೆಗೂವನ ಮಗನು; ಇವನು ಪೆಲೆಗನ ಮಗನು; ಇವನು ಹೇಬೆರನ ಮಗನು; ಇವನು ಸಾಲನ ಮಗನು; |
36. | ಇವನು ಕಯಿನಾನನ ಮಗನು; ಇವನು ಅರ್ಫಕ್ಷಾದನ ಮಗನು; ಇವನು ಶೇಮನ ಮಗನು; ಇವನು ನೋಹನ ಮಗನು; ಇವನು ಲಾಮೆಕನ ಮಗನು; |
37. | ಇವನು ಮೆತೂಷಲನ ಮಗನು; ಇವನು ಹನೋಕನ ಮಗನು; ಇವನು ಯೆರೆದನ ಮಗನು; ಇವನು ಮಹಲಲೇಲನ ಮಗನು; ಇವನು ಕಾಯಿನನ ಮಗನು; |
38. | ಇವನು ಎನೋಷನ ಮಗನು; ಇವನು ಸೇಥನ ಮಗನು; ಇವನು ಆದಾಮನ ಮಗನು; ಇವನು ದೇವರ ಮಗನು. |
← Luke (3/24) → |