← Luke (24/24) |
1. | ವಾರದ ಮೊದಲನೆಯ ದಿನದ ಬೆಳಗಿನ ಜಾವದಲ್ಲಿ ಅವರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತಕ್ಕೊಂಡು ಬಂದರು. ಬೇರೆ ಕೆಲವರು ಅವರೊಂದಿಗಿದ್ದರು. |
2. | ಆಗ ಸಮಾಧಿಯಿಂದ ಕಲ್ಲು ಉರುಳಿಸಲ್ಪಟ್ಟದ್ದನ್ನು ಅವರು ಕಂಡರು. |
3. | ಅವರು ಒಳಗೆ ಪ್ರವೇಶಿಸಿದಾಗ ಅಲ್ಲಿ ಕರ್ತನಾದ ಯೇಸುವಿನ ದೇಹ ವನ್ನು ಕಾಣಲಿಲ್ಲ. |
4. | ಅವರು ಇದಕ್ಕಾಗಿ ಬಹಳವಾಗಿ ಕಳವಳಗೊಂಡರು; ಆಗ ಇಗೋ, ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತಿದ್ದರು. |
5. | ಆ ಸ್ತ್ರೀಯರು ಭಯದಿಂದ ತಮ್ಮ ಮುಖಗಳನ್ನು ನೆಲದ ಕಡೆಗೆ ಬೊಗ್ಗಿಸಿದಾಗ ಆ ಪುರುಷರು ಅವರಿಗೆ--ಜೀವಿಸುವಾತನನ್ನು ಸತ್ತವ ರೊಳಗೆ ನೀವು ಯಾಕೆ ಹುಡುಕುತ್ತೀರಿ? |
6. | ಆತನು ಇಲ್ಲಿಲ್ಲ, ಎದ್ದಿದ್ದಾನೆ; ಆತನು ಇನ್ನೂ ಗಲಿಲಾಯ ದಲ್ಲಿದ್ದಾಗಲೇ-- |
7. | ಮನುಷ್ಯಕುಮಾರನು ಪಾಪಿಷ್ಠರ ಕೈಗಳಿಗೆ ಹೇಗೆ ಒಪ್ಪಿಸಲ್ಪಟ್ಟವನಾಗಿ ಶಿಲುಬೆಗೆ ಹಾಕಲ್ಪಟ್ಟು ಮೂರನೆಯ ದಿನದಲ್ಲಿ ತಿರಿಗಿ ಏಳುವನು ಎಂದು ನಿಮಗೆ ಹೇಳಿದ್ದನ್ನು ನೀವು ನೆನಪು ಮಾಡಿಕೊಳ್ಳಿರಿ ಅಂದರು. |
8. | ಆಗ ಅವರು ಆತನ ಮಾತುಗಳನ್ನು ನೆನಪು ಮಾಡಿಕೊಂಡು |
9. | ಸಮಾಧಿಯಿಂದ ಹಿಂತಿರುಗಿ ಹೋಗಿ ಆ ಹನ್ನೊಂದು ಮಂದಿಗೂ ಉಳಿದವರೆಲ್ಲ ರಿಗೂ ಈ ಎಲ್ಲಾ ವಿಷಯಗಳನ್ನು ತಿಳಿಸಿದರು. |
10. | ಅಪೊ ಸ್ತಲರಿಗೆ ಈ ವಿಷಯಗಳನ್ನು ಹೇಳಿದವರು ಯಾರಂದರೆ ಮಗ್ದಲದುರಿಯಳು, ಯೋಹಾನಳು, ಯಾಕೋಬನ ತಾಯಿಯಾದ ಮರಿಯಳು ಮತ್ತು ಅವರೊಂದಿಗಿದ್ದ ಬೇರೆ ಸ್ತ್ರೀಯರು. |
11. | ಅವರ ಮಾತುಗಳು ಇವರಿಗೆ ಹರಟೆಯ ಕಥೆಗಳಂತೆ ಕಂಡವು, ಅವರು ಅವುಗಳನ್ನು ನಂಬಲಿಲ್ಲ. |
12. | ಆಗ ಪೇತ್ರನು ಎದ್ದು ಸಮಾಧಿಗೆ ಓಡಿಹೋಗಿ ಕೆಳಗೆ ಬೊಗ್ಗಿ ನಾರುಬಟ್ಟೆಗಳು ಮಾತ್ರ ಬಿದ್ದಿರುವದನ್ನು ನೋಡಿ ನಡೆದ ವಿಷಯಕ್ಕಾಗಿ ತನ್ನೊಳಗೆ ಆಶ್ಚರ್ಯಪಡುತ್ತಾ ಹೊರಟುಹೋದನು. |
13. | ಆಗ ಇಗೋ, ಅದೇ ದಿನ ಅವರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಏಳುವರೆ ಮೈಲು ದೂರದಲ್ಲಿದ್ದ ಎಮ್ಮಾಹು ಎಂದು ಕರೆಯಲ್ಪಟ್ಟ ಹಳ್ಳಿಗೆ ಹೋಗುತ್ತಿದ್ದರು. |
14. | ಅವರು ನಡೆದ ಈ ಎಲ್ಲಾ ವಿಷಯಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿದ್ದರು. |
15. | ಇದಾದ ಮೇಲೆ ಅವರು ಜೊತೆ ಯಾಗಿ ಮಾತನಾಡುತ್ತಾ ತರ್ಕಿಸುತ್ತಾ ಇರಲು ಯೇಸು ತಾನೇ ಅವರನ್ನು ಸವಿಾಪಿಸಿ ಅವರೊಂದಿಗೆ ಹೋದನು. |
16. | ಆದರೆ ಅವರ ಕಣ್ಣುಗಳು ಮುಚ್ಚಿದ್ದರಿಂದ ಅವರು ಆತನ ಗುರುತನ್ನು ತಿಳಿಯಲಿಲ್ಲ. |
17. | ಆಗ ಆತನು ಅವರಿಗೆ--ನೀವು ಮಾರ್ಗದಲ್ಲಿ ನಡೆಯುತ್ತಾ ವ್ಯಸನವುಳ್ಳವರಾಗಿ ಒಬ್ಬರಿಗೊಬ್ಬರು ಮಾತನಾಡಿ ಕೊಳ್ಳುತ್ತಿರುವ ಈ ವಿಷಯಗಳು ಯಾವ ತರದವುಗಳು ಎಂದು ಕೇಳಿದನು. |
18. | ಆಗ ಅವರಲ್ಲಿ ಕ್ಲಿಯೊಫಾಸ್ ಎಂಬ ಹೆಸರಿದ್ದವನು ಪ್ರತ್ಯುತ್ತರವಾಗಿ ಆತನಿಗೆ--ಈ ದಿವಸಗಳಲ್ಲಿ ಯೆರೂಸಲೇಮಿನೊಳಗೆ ನಡೆದಿರುವ ಸಂಗತಿಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನು ಮಾತ್ರವೋ ಎಂದು ಕೇಳಿದನು. |
19. | ಅದಕ್ಕೆ ಆತನು ಅವರಿಗೆ--ಯಾವ ವಿಷಯಗಳು ಎಂದು ಕೇಳಲು ಅವರು ಆತನಿಗೆ--ದೇವರ ಸನ್ನಿಧಿಯಲ್ಲಿಯೂ ಎಲ್ಲಾ ಜನರ ಮುಂದೆಯೂ ಪ್ರವಾದಿಯಾಗಿದ್ದು ಕೃತ್ಯಗಳ ಲ್ಲಿಯೂ ಮಾತುಗಳಲ್ಲಿಯೂ ಸಮರ್ಥನಾಗಿದ್ದ ನಜ ರೇತಿನ ಯೇಸುವಿನ ವಿಷಯಗಳೇ; |
20. | ಪ್ರಧಾನ ಯಾಜಕರೂ ನಮ್ಮ ಅಧಿಕಾರಿಗಳೂ ಆತನನ್ನು ಮರಣ ದಂಡನೆಗೆ ಒಪ್ಪಿಸಿಕೊಟ್ಟು ಶಿಲುಬೆಗೆ ಹಾಕಿದರು. |
21. | ಆದರೆ ಇಸ್ರಾಯೇಲ್ಯರನ್ನು ವಿಮೋಚಿಸುವಾತನು ಆತನೇ ಎಂದು ನಾವು ನಂಬಿದ್ದೆವು; ಇದಲ್ಲದೆ ಈ ವಿಷಯಗಳು ನಡೆದು ಇದು ಮೂರನೆಯ ದಿನವಾಗಿದೆ; |
22. | ಹೌದು, ನಮ್ಮವರಲ್ಲಿ ಕೆಲವು ಸ್ತ್ರೀಯರು ಬೆಳಗಿನ ಜಾವದಲ್ಲಿ ಸಮಾಧಿಯ ಬಳಿಯಲ್ಲಿದ್ದು |
23. | ಆತನ ದೇಹವನ್ನು ಕಾಣದೆ ಬಂದು ಆತನು ಜೀವದಿಂದೆ ದ್ದಿದ್ದಾನೆ ಎಂದು ದೇವದೂತರು ಹೇಳಿದ್ದನ್ನೂ ಆ ದೂತರ ದೃಶ್ಯವನ್ನು ಕಂಡದ್ದನ್ನೂ ನಮಗೆ ಹೇಳಿ ಆಶ್ಚರ್ಯವನ್ನುಂಟು ಮಾಡಿದರು. |
24. | ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ ಆ ಸ್ತ್ರೀಯರು ಹೇಳಿದಂತೆಯೇ ಕಂಡರು; ಆದರೆ ಅವರು ಆತನನ್ನು ನೋಡಲಿಲ್ಲ ಅಂದರು. |
25. | ಆಗ ಆತನು ಅವರಿಗೆ--ಓ ಬುದ್ದಿಹೀನರೇ, ಪ್ರವಾದಿಗಳು ಹೇಳಿ ದ್ದೆಲ್ಲವನ್ನು ನಂಬುವದರಲ್ಲಿ ಮಂದ ಹೃದಯದವರೇ, |
26. | ಕ್ರಿಸ್ತನು ಇವೆಲ್ಲಾ ಶ್ರಮೆಗಳನ್ನು ಅನುಭವಿಸಿ ತನ ಮಹಿಮೆಯಲ್ಲಿ ಪ್ರವೇಶಿಸುವದು ಅಗತ್ಯವಾಗಿತ್ತಲ್ಲವೇ ಎಂದು ಹೇಳಿ |
27. | ಮೋಶೆಯ ಮತ್ತು ಎಲ್ಲಾ ಪ್ರವಾದಿ ಗಳಿಂದ ಆರಂಭಿಸಿ ಸಮಸ್ತ ಬರಹಗಳಲ್ಲಿ ತನ್ನ ವಿಷಯವಾದವುಗಳನ್ನು ಅವರಿಗೆ ವಿವರಿಸಿದನು. |
28. | ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸವಿಾಪಿಸು ತ್ತಿರುವಾಗ ಆತನು ಮುಂದೆ ಹೋಗುವವನಂತೆ ತೋರಿಸಿಕೊಂಡನು. |
29. | ಆದರೆ ಅವರು ಆತನಿಗೆ--ನಮ್ಮೊಂದಿಗೆ ಇರು; ಯಾಕಂದರೆ ಈಗ ಸಾಯಂಕಾಲ ವಾಗುತ್ತಾ ಇದೆ ಮತ್ತು ಹಗಲು ಬಹಳ ಮಟ್ಟಿಗೆ ಕಳೆಯಿತು ಎಂದು ಹೇಳಿ ಆತನನ್ನು ಬಲವಂತ ಮಾಡಿ ದರು. ಆಗ ಆತನು ಅವರೊಂದಿಗೆ ಇರುವದಕ್ಕಾಗಿ ಹೋದನು. |
30. | ಇದಾದ ಮೇಲೆ ಆತನು ಅವರೊಂದಿಗೆ ಊಟಕ್ಕೆ ಕೂತುಕೊಂಡಿರಲು ರೊಟ್ಟಿಯನ್ನು ತೆಗೆದು ಕೊಂಡು ಆಶೀರ್ವದಿಸಿ ಮುರಿದು ಅವರಿಗೆ ಕೊಟ್ಟನು. |
31. | ಆಗ ಅವರ ಕಣ್ಣುಗಳು ತೆರೆಯಲ್ಪಟ್ಟದ್ದರಿಂದ ಅವರು ಆತನ ಗುರುತು ಹಿಡಿದರು; ಆತನು ಅವರ ದೃಷ್ಟಿಗೆ ಅದೃಶ್ಯನಾದನು. |
32. | ಆಗ ಅವರು ಒಬ್ಬರಿಗೊಬ್ಬರು--ಆತನು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ ಬರಹಗಳನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ನಮ್ಮೊಳಗೆ ಕುದಿಯಿತಲ್ಲವೇ ಎಂದು ಅಂದುಕೊಂಡರು. |
33. | ಅವರು ಅದೇ ಗಳಿಗೆಯಲ್ಲಿ ಯೆರೂಸಲೇಮಿಗೆ ಹಿಂದಿರುಗಿಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರೊಂದಿಗಿದ್ದವರೂ ಒಟ್ಟಾಗಿ ಕೂಡಿ ಕೊಂಡಿರುವದನ್ನು ಅವರು ಕಂಡರು. |
34. | ಅವರು--ಕರ್ತನು ನಿಜವಾಗಿಯೂ ಎದ್ದಿದ್ದಾನೆ ಮತ್ತು ಆತನು ಸೀಮೋನನಿಗೆ ಕಾಣಿಸಿಕೊಂಡಿದ್ದಾನೆ ಎಂದು ಹೇಳಿ ದರು. |
35. | ಆಗ ಅವರು ದಾರಿಯಲ್ಲಿ ನಡೆದವುಗಳನ್ನೂ ರೊಟ್ಟಿ ಮುರಿಯುವದರಲ್ಲಿ ಅವರು ಹೇಗೆ ಆತನ ಗುರುತು ಹಿಡಿದರೆಂದೂ ಹೇಳಿದರು. |
36. | ಅವರು ಹೀಗೆ ಮಾತನಾಡುತ್ತಿರುವಾಗ ಯೇಸು ತಾನೇ ಅವರ ಮಧ್ಯದಲ್ಲಿ ನಿಂತು ಅವರಿಗೆ--ನಿಮಗೆ ಸಮಾಧಾನವಾಗಲಿ ಅಂದನು. |
37. | ಆದರೆ ಅವರು ದಿಗಿಲುಬಿದ್ದು ಭಯಹಿಡಿದವರಾಗಿ ತಾವು ಕಂಡದ್ದು ಭೂತವೆಂದು ಭಾವಿಸಿದರು. |
38. | ಆದರೆ ಆತನು ಅವರಿಗೆ--ಯಾಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಆಲೋಚನೆಗಳು ಹುಟ್ಟುವದು ಯಾಕೆ? |
39. | ನನ್ನ ಕೈಗಳನ್ನು ಮತ್ತು ನನ್ನ ಕಾಲುಗಳನ್ನು ನೋಡಿರಿ; ನಾನೇ ಅಲ್ಲವೇ; ನನ್ನನ್ನು ಮುಟ್ಟಿ ನೋಡಿರಿ, ಯಾಕಂದರೆ ನೀವು ನೋಡುವಂತೆ ನನಗಿರುವ ಮಾಂಸ ಮತ್ತು ಎಲುಬುಗಳು ಭೂತಕ್ಕೆ ಇಲ್ಲ ಅಂದನು. |
40. | ಹೀಗೆ ಆತನು ಮಾತನಾಡಿದಾಗ ತನ್ನ ಕೈಗಳನ್ನು ಮತ್ತು ತನ್ನ ಕಾಲುಗಳನ್ನು ಅವರಿಗೆ ತೋರಿಸಿದನು. |
41. | ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರು ವಾಗ ಆತನು ಅವರಿಗೆ--ನಿಮ್ಮಲ್ಲಿ ಆಹಾರವೇನಾದರೂ ಇದೆಯೋ ಎಂದು ಕೇಳಿದನು. |
42. | ಅವರು ಆತನಿಗೆ ಒಂದು ತುಂಡು ಸುಟ್ಟವಿಾನನ್ನು ಮತ್ತು ಒಂದು ಜೇನು ಹುಟ್ಟನ್ನು ಕೊಟ್ಟರು. |
43. | ಆತನು ತಕ್ಕೊಂಡು ಅವರ ಮುಂದೆ ತಿಂದನು. |
44. | ಆಗ ಆತನು ಅವರಿಗೆ--ಮೋಶೆಯ ನ್ಯಾಯ ಪ್ರಮಾಣದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆ ಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆಯಲ್ಪಟ್ಟವು ಗಳೆಲ್ಲವು ನೆರವೇರುವದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ಹೇಳಿದ್ದೆನು ಅಂದನು. |
45. | ತರುವಾಯ ಅವರು ಬರಹ ಗಳನ್ನು ಅರ್ಥ ಮಾಡಿಕೊಳ್ಳುವಂತೆ ಆತನು ಅವರ ಬುದ್ಧಿಯನ್ನು ತೆರೆದನು. |
46. | ಅವರಿಗೆ--ಕ್ರಿಸ್ತನು ಹೀಗೆ ಶ್ರಮೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವದು ಅಗತ್ಯವಾಗಿತ್ತೆಂತಲೂ |
47. | ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವ ರೊಳಗೆ ಆತನ ಹೆಸರಿನಲ್ಲಿ ಮಾನಸಾಂತರ ಮತ್ತು ಪಾಪಗಳ ಕ್ಷಮಾಪಣೆ ಸಾರಲ್ಪಡಬೇಕೆಂತಲೂ ಬರೆಯ ಲ್ಪಟ್ಟಿದೆ. |
48. | ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾ ಗಿದ್ದೀರಿ. |
49. | ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮ್ಮ ಮೇಲೆ ಕಳುಹಿಸುವೆನು; ಆದರೆ ನೀವು ಮೇಲಣ ಶಕ್ತಿಯನ್ನು ಹೊಂದುವ ವರೆಗೆ ಯೆರೂಸಲೇಮ್ ಪಟ್ಟಣದಲ್ಲಿಯೇ ಕಾದುಕೊಂಡಿರ್ರಿ ಅಂದನು. |
50. | ಆತನು ಅವರನ್ನು ಬೇಥಾನ್ಯದವರೆಗೆ ನಡಿಸಿ ಕೊಂಡು ಹೋಗಿ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದನು. |
51. | ಇದಾದ ಮೇಲೆ ಆತನು ಅವರನ್ನು ಆಶೀರ್ವದಿಸುತ್ತಿರುವಾಗ ಆತನು ಅವರಿಂದ ಪ್ರತ್ಯೇಕಿಸಲ್ಪಟ್ಟು ಮೇಲಕ್ಕೆ ಪರಲೋಕದೊಳಗೆ ಒಯ್ಯ ಲ್ಪಟ್ಟನು. |
52. | ಆಗ ಅವರು ಆತನನ್ನು ಆರಾಧಿಸಿ ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂತಿರುಗಿದರು. |
53. | ಅವರು ಯಾವಾಗಲೂ ದೇವಾಲಯದಲ್ಲಿ ದೇವ ರನ್ನು ಸ್ತುತಿಸುತ್ತಾ ಕೊಂಡಾಡುತ್ತಾ ಇದ್ದರು. ಆಮೆನ್. |
← Luke (24/24) |