← Luke (2/24) → |
1. | ಆ ದಿನಗಳಲ್ಲಿ ಆದದ್ದೇನಂದರೆ ಲೋಕವೆಲ್ಲಾ ಖಾನೇಷುಮಾರಿ ಬರೆಯಿಸಿಕೊಳ್ಳಬೇಕೆಂದು ಕೈಸರನಾದ ಔಗುಸ್ತನಿಂದ ಆಜ್ಞೆಯು ಹೊರಟಿತು. |
2. | ಕುರೇನ್ಯನು ಸಿರಿಯಾಕ್ಕೆ ಅಧಿಪತಿಯಾಗಿದ್ದಾಗ ಈ ಖಾನೇಷುಮಾರಿಯು ಮೊದಲನೆಯ ಸಾರಿ ನಡೆ ಯಿತು. |
3. | ಆಗ ಎಲ್ಲರೂ ಖಾನೇಷುಮಾರಿ ಬರೆಯಿಸಿ ಕೊಳ್ಳುವದಕ್ಕಾಗಿ ತಮ್ಮ ತಮ್ಮ ಸ್ವಂತ ಪಟ್ಟಣಕ್ಕೆ ಹೋದರು. |
4. | (ಯೋಸೇಫನು ದಾವೀದನ ಮನೆತನ ದವನೂ ವಂಶದವನೂ ಆಗಿದ್ದದರಿಂದ) ಅವನು ಸಹ ಗಲಿಲಾಯದ ನಜರೇತೆಂಬ ಪಟ್ಟಣದಿಂದ ಯೂದಾ ಯದಲ್ಲಿ ಬೇತ್ಲೆಹೇಮ್ ಎಂದು ಕರೆಯಲ್ಪಟ್ಟ ದಾವೀದನ ಪಟ್ಟಣಕ್ಕೆ |
5. | ತನಗೆ ನಿಶ್ಚಯಮಾಡಲ್ಪಟ್ಟಿದ್ದ ಮತ್ತು ಪೂರ್ಣ ಗರ್ಭಿಣಿಯಾಗಿದ್ದ ಮರಿಯಳೊಂದಿಗೆ ಖಾನೇಷುಮಾರಿ ಬರೆಸಿಕೊಳ್ಳುವದಕ್ಕಾಗಿ ಹೋದನು. |
6. | ಹೀಗೆ ಅವರು ಅಲ್ಲಿ ಇದ್ದಾಗ ಆಕೆಗೆ ಹೆರಿಗೆಯ ದಿವಸಗಳು ಪೂರ್ಣವಾದವು. |
7. | ಆಕೆಯು ತನ್ನ ಚೊಚ್ಚಲು ಮಗನನ್ನು ಹೆತ್ತು ಬಟ್ಟೆಗಳಿಂದ ಸುತ್ತಿ ಛತ್ರದಲ್ಲಿ ಅವರಿಗೆ ಸ್ಥಳವಿಲ್ಲವಾದ್ದರಿಂದ ಆತನನ್ನು ಗೋದ ಲಿಯಲ್ಲಿ ಮಲಗಿಸಿದಳು. |
8. | ಆಗ ಅದೇ ಸೀಮೆಯಲ್ಲಿ ಕುರುಬರು ಹೊಲದಲ್ಲಿದ್ದು ರಾತ್ರಿಯಲ್ಲಿ ತಮ್ಮ ಹಿಂಡನ್ನು ಕಾಯುತ್ತಿದ್ದರು. |
9. | ಇಗೋ, ಕರ್ತನ ದೂತನು ಅವರ ಬಳಿಗೆ ಬಂದನು. ಆಗ ಕರ್ತನ ಮಹಿಮೆಯು ಅವರ ಸುತ್ತಮುತ್ತಲೂ ಪ್ರಕಾಶಿ ಸಿತು; ಆದದರಿಂದ ಅವರು ಬಹಳವಾಗಿ ಹೆದರಿದರು. |
10. | ಆದರೆ ದೂತನು ಅವರಿಗೆ--ಹೆದರಬೇಡಿರಿ; ಯಾಕಂದರೆ ಇಗೋ, ಎಲ್ಲಾ ಜನರಿಗೆ ಮಹಾ ಸಂತೋಷವನ್ನುಂಟು ಮಾಡುವ ಒಳ್ಳೇಸಮಾಚಾರ ವನ್ನು ನಾನು ನಿಮಗೆ ತಿಳಿಯಪಡಿಸುತ್ತೇನೆ. |
11. | ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ. |
12. | ಆ ಶಿಶುವು ಬಟ್ಟೆಯಿಂದ ಸುತ್ತಲ್ಪಟ್ಟು ಗೋದಲಿಯಲ್ಲಿ ಮಲಗಿರುವದನ್ನು ನೀವು ಕಾಣುವಿರಿ; ಇದೇ ನಿಮಗೆ ಗುರುತು ಎಂದು ಹೇಳಿದನು. |
13. | ಫಕ್ಕನೆ ಪರಲೋಕ ಸೈನ್ಯದ ಸಮೂಹವು ಆ ದೂತನ ಸಂಗಡ ಇದ್ದು ದೇವರನ್ನು ಕೊಂಡಾಡುತ್ತಾ-- |
14. | ಮಹೋನ್ನತ ದಲ್ಲಿರುವ ದೇವರಿಗೆ ಮಹಿಮೆ, ಭೂಮಿಯ ಮೇಲೆ ಸಮಾಧಾನ, ಮನುಷ್ಯರ ಕಡೆಗೆ ದಯೆ ಎಂದು ಹೇಳಿದರು. |
15. | ದೂತನು ಅವರ ಬಳಿಯಿಂದ ಪರಲೋಕಕ್ಕೆ ಹೋದ ಮೇಲೆ ಕುರುಬರು--ಕರ್ತನು ನಮಗೆ ಪ್ರಕಟ ಮಾಡಿದ ಈ ಸಂಭವವನ್ನು ನಾವು ಈಗಲೇ ಬೇತ್ಲೆಹೇಮಿಗೆ ಹೋಗಿ ನೋಡೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. |
16. | ಅವರು ಅವಸರದಿಂದ ಬಂದು ಮರಿಯಳನ್ನೂ ಯೋಸೇಫ ನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡುಕೊಂಡರು. |
17. | ಅವರು ಆತನನ್ನು ನೋಡಿದ ಮೇಲೆ ಈ ಶಿಶುವಿನ ವಿಷಯವಾಗಿ ತಮಗೆ ತಿಳಿಯಪಡಿಸಿದ ಮಾತನ್ನು ಎಲ್ಲಾ ಕಡೆಯಲ್ಲಿಯೂ ಪ್ರಕಟಮಾಡಿದರು. |
18. | ಕುರುಬರು ಹೇಳಿದ ವಿಷಯ ಗಳನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. |
19. | ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಆಲೋಚಿಸುತ್ತಿದ್ದಳು. |
20. | ತಮಗೆ ತಿಳಿಸಲ್ಪಟ್ಟಂತೆ ಕುರುಬರು ತಾವು ಕೇಳಿದ್ದ ಮತ್ತು ನೋಡಿದ್ದ ಎಲ್ಲಾ ವಿಷಯಗಳಿಗಾಗಿ ದೇವರನ್ನು ಮಹಿಮೆಪಡಿಸುತ್ತಾ ಕೊಂಡಾಡುತ್ತಾ ಹಿಂದಿರುಗಿದರು. |
21. | ಶಿಶುವಿಗೆ ಸುನ್ನತಿ ಮಾಡಿಸುವದಕ್ಕಾಗಿ ಎಂಟು ದಿನಗಳು ಕಳೆದ ಮೇಲೆ ಆತನನ್ನು ಗರ್ಭಧರಿಸು ವದಕ್ಕಿಂತ ಮುಂಚಿತವಾಗಿ ದೂತನು ಹೆಸರಿಟ್ಟಂತೆಯೇ ಆತನು ಯೇಸು ಎಂದು ಕರೆಯಲ್ಪಟ್ಟನು. |
22. | ಮೋಶೆಯ ನ್ಯಾಯಪ್ರಮಾಣದ ಪ್ರಕಾರ ಆಕೆಯ ಶುದ್ಧೀಕರಣದ ದಿವಸಗಳು ಮುಗಿದ ಮೇಲೆ ಅವರು ಆತನನ್ನು ಕರ್ತನಿಗೆ ಸಮರ್ಪಿಸುವದಕ್ಕಾಗಿ ಯೆರೂಸಲೇಮಿಗೆ ತಂದರು. |
23. | (ಕರ್ತನ ನ್ಯಾಯ ಪ್ರಮಾಣದಲ್ಲಿ ಬರೆದಿರುವಂತೆ--ಪ್ರತಿಯೊಂದು ಚೊಚ್ಚಲು ಗಂಡುಮಗು ಕರ್ತನಿಗೆ ಪರಿಶುದ್ಧವೆಂದು ಕರೆಯಲ್ಪಡಬೇಕು). |
24. | ಕರ್ತನ ನ್ಯಾಯಪ್ರಮಾಣದಲ್ಲಿ ಹೇಳಿದಂತೆ ಒಂದು ಜೋಡಿ ಬೆಳವವನ್ನಾಗಲೀ ಎರಡು ಪಾರಿವಾಳದ ಮರಿಗಳನ್ನಾಗಲೀ ಯಜ್ಞಾರ್ಪಣೆ ಮಾಡಬೇಕಾಗಿತ್ತು. |
25. | ಇಗೋ, ಸಿಮೆಯೋನನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಯೆರೂಸಲೇಮಿನಲ್ಲಿದ್ದನು. ಇವನು ನೀತಿವಂತನೂ ಭಕ್ತನೂ ಆಗಿದ್ದು ಇಸ್ರಾ ಯೇಲ್ಯರ ಆದರಣೆಗಾಗಿ ಕಾಯುತ್ತಿದ್ದನು. ಇವನ ಮೇಲೆ ಪವಿತ್ರಾತ್ಮನು ಇದ್ದನು. |
26. | ಕರ್ತನಾಗಿರುವ ಕ್ರಿಸ್ತನನ್ನು ಅವನು ನೋಡುವದಕ್ಕಿಂತ ಮುಂಚೆ ಮರಣ ಹೊಂದುವದಿಲ್ಲವೆಂದು ಪರಿಶುದ್ಧಾತ್ಮನಿಂದ ಅವನಿಗೆ ಪ್ರಕಟವಾಗಿತ್ತು. |
27. | ಅವನು ಆತ್ಮನಿಂದ ದೇವಾಲಯದೊಳಗೆ ಬಂದನು; ಶಿಶುವಾದ ಯೇಸುವಿನ ತಂದೆತಾಯಿಗಳು ನ್ಯಾಯಪ್ರಮಾಣದ ಪದ್ಧತಿಯ ಪ್ರಕಾರ ಮಾಡುವದಕ್ಕಾಗಿ ಆತನನ್ನು ಒಳಗೆ ತಂದರು. |
28. | ಆಗ ಅವನು (ಸಿಮೆಯೋನನು) ಆತನನ್ನು ತನ್ನ ಕೈಗಳಲ್ಲಿ ತಕ್ಕೊಂಡು ದೇವರನ್ನು ಕೊಂಡಾಡುತ್ತಾ-- |
29. | ಕರ್ತನೇ, ಈಗ ನಿನ್ನ ಮಾತಿನ ಪ್ರಕಾರ ನಿನ್ನ ದಾಸನನ್ನು ಸಮಾಧಾನದಲ್ಲಿ ಹೋಗ ಮಾಡುತ್ತೀ; |
30. | ಯಾಕಂದರೆ ನನ್ನ ಕಣ್ಣುಗಳು ನಿನ್ನ ರಕ್ಷಣೆಯನ್ನು ನೋಡಿದವು. |
31. | ಅದನ್ನು (ಆ ರಕ್ಷಣೆಯನ್ನು) ನೀನು ಎಲ್ಲಾ ಜನರ ಮುಂದೆ ಸಿದ್ಧ ಪಡಿಸಿದ್ದೀ. |
32. | ಅದು ಅನ್ಯಜನರನ್ನು ಬೆಳಗಿಸುವ ಬೆಳಕೂ ನಿನ್ನ ಪ್ರಜೆಯಾದ ಇಸ್ರಾಯೇಲ್ಯರ ಮಹಿ ಮೆಯೂ ಆಗಿದೆ ಅಂದನು. |
33. | ಆಗ ಅವನು ಹೇಳಿದ ಮಾತುಗಳಿಗಾಗಿ ಯೋಸೇಫನೂ ಆತನ ತಾಯಿಯೂ ಆಶ್ಚರ್ಯಪಟ್ಟರು. |
34. | ಸಿಮೆಯೋನನು ಅವರನ್ನು ಆಶೀರ್ವದಿಸಿ ಆತನ ತಾಯಿಯಾದ ಮರಿಯಳಿಗೆ-- ಇಗೋ, ಇಸ್ರಾಯೇಲಿನಲ್ಲಿ ಅನೇಕರು ಬೀಳುವದಕ್ಕೂ ತಿರಿಗಿ ಏಳುವದಕ್ಕೂ ಎದುರು ಮಾತನಾಡುವದಕ್ಕೂ ಈ ಶಿಶುವು ಗುರುತಾಗಿರುವನು. |
35. | ಅನೇಕರ ಹೃದಯ ಗಳ ಅಲೋಚನೆಗಳು ಪ್ರಕಟವಾಗುವವು. (ಹೌದು, ನಿನ್ನ ಸ್ವಂತ ಪ್ರಾಣವನ್ನು ಸಹ ಕತ್ತಿಯು ತಿವಿಯುವದು) ಅಂದನು. |
36. | ಅಲ್ಲಿ ಅಸೇರನ ಗೋತ್ರದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿಯಿದ್ದಳು; ಅವಳು ಬಹು ಮುಪ್ಪಿನವಳು; ತನ್ನ ಕನ್ಯಾವಸ್ಥೆಯಿಂದ ಗಂಡನೊಂದಿಗೆ ಏಳು ವರುಷ ಜೀವಿಸಿದ್ದಳು. |
37. | ಅವಳು ಹೆಚ್ಚು ಕಡಿಮೆ ಎಂಭತ್ತುನಾಲ್ಕು ವರುಷದ ವಿಧವೆ ಯಾಗಿದ್ದು ದೇವಾಲಯವನ್ನು ಬಿಟ್ಟು ಹೋಗದೆ ರಾತ್ರಿ ಹಗಲು ಉಪವಾಸಗಳಿಂದಲೂ ಪ್ರಾರ್ಥನೆಗಳಿಂ ದಲೂ ದೇವರನ್ನು ಸೇವಿಸುತ್ತಿದ್ದಳು. |
38. | ಆ ಕ್ಷಣದಲ್ಲಿ ಅವಳು ಬಂದು ಕರ್ತನನ್ನು ಅದೇ ರೀತಿಯಾಗಿ ಕೊಂಡಾಡಿ ಯೆರೂಸಲೇಮಿನಲ್ಲಿ ವಿಮೋಚನೆಗಾಗಿ ಎದುರು ನೋಡುತ್ತಿದ್ದವರೆಲ್ಲರೊಂದಿಗೆ ಆತನ ವಿಷಯ ವಾಗಿ ಮಾತನಾಡಿದಳು. |
39. | ಅವರು ಕರ್ತನ ನ್ಯಾಯ ಪ್ರಮಾಣದ ಪ್ರಕಾರ ಎಲ್ಲವುಗಳನ್ನು ಮಾಡಿ ಮುಗಿ ಸಿದ ಮೇಲೆ ತಮ್ಮ ಸ್ವಂತ ಪಟ್ಟಣವಾದ ಗಲಿಲಾಯದ ನಜರೇತಿಗೆ ಹಿಂದಿರುಗಿದರು. |
40. | ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು. |
41. | ಆತನ ತಂದೆತಾಯಿಗಳು ಪ್ರತಿ ವರುಷವೂ ಪಸ್ಕ ಹಬ್ಬದಲ್ಲಿ ಯೆರೂಸಲೇಮಿಗೆ ಹೋಗುತ್ತಿದ್ದರು. |
42. | ಆತನು ಹನ್ನೆರಡು ವರುಷದವನಾಗಿದ್ದಾಗ ಅವರು ಹಬ್ಬದ ಪದ್ಧತಿಯ ಪ್ರಕಾರ ಯೆರೂಸಲೇಮಿಗೆ ಹೋದರು. |
43. | ಅವರು ಆ ದಿವಸಗಳನ್ನು ಮುಗಿಸಿ ಕೊಂಡು ಹಿಂದಿರುಗುವಾಗ ಬಾಲಕನಾದ ಯೇಸುವು ಹಿಂದೆ ಯೆರೂಸಲೇಮಿನಲ್ಲಿಯೇ ಉಳಿದನು; ಅದು ಯೋಸೇಫನಿಗೂ ಆತನ ತಾಯಿಗೂ ತಿಳಿದಿರಲಿಲ್ಲ. |
44. | ಆದರೆ ಆತನು ಗುಂಪಿನಲ್ಲಿ ಇದ್ದಿರಬಹುದೆಂದು ಅವರು ಭಾವಿಸಿ ಒಂದು ದಿನದ ಪ್ರಯಾಣವನ್ನು ಮಾಡಿದ ಮೇಲೆ ತಮ್ಮ ಬಳಗದವರಲ್ಲಿಯೂ ಪರಿ ಚಯವಾದವರಲ್ಲಿಯೂ ಆತನನ್ನು ಹುಡುಕಿದರು. |
45. | ಆದರೆ ಅವರು ಆತನನ್ನು ಕಂಡುಕೊಳ್ಳದೆ ಹೋದ ದರಿಂದ ಆತನನ್ನು ಹುಡುಕುತ್ತಾ ಮತ್ತೆ ಯೆರೂಸ ಲೇಮಿಗೆ ಹಿಂತಿರುಗಿ ಬಂದರು. |
46. | ಮೂರು ದಿವಸ ಗಳಾದ ಮೇಲೆ ಆತನು ದೇವಾಲಯದಲ್ಲಿ ಬೋಧಕರ ನಡುವೆ ಕೂತುಕೊಂಡು ಅವರ ಮಾತುಗಳನ್ನು ಕೇಳಿಸಿ ಕೊಳ್ಳುತ್ತಾ ಅವರನ್ನು ಪ್ರಶ್ನಿಸುತ್ತಾ ಇರುವದನ್ನು ಅವರು ಕಂಡರು. |
47. | ಆತನು ಆಡಿದ ಮಾತುಗಳನ್ನು ಕೇಳಿದ ವರೆಲ್ಲರು ಆತನ ಜ್ಞಾನಕ್ಕೂ ಉತ್ತರಗಳಿಗೂ ಬೆರಗಾ ದರು. |
48. | ಅವರು (ತಂದೆ ತಾಯಿಗಳು) ಆತನನ್ನು ನೋಡಿದಾಗ ಆಶ್ಚರ್ಯಪಟ್ಟರು; ಆಗ ಆತನ ತಾಯಿಯು ಆತನಿಗೆ--ಮಗನೇ, ನೀನು ನಮಗೆ ಹೀಗೇಕೆ ಮಾಡಿದಿ? ಇಗೋ, ನಿನ್ನ ತಂದೆಯೂ ನಾನೂ ವ್ಯಥೆಯಿಂದ ನಿನ್ನನ್ನು ಹುಡುಕಿದೆವು ಅಂದಳು. |
49. | ಆತನು ಅವರಿಗೆ--ನೀವು ನನ್ನನ್ನು ಹುಡುಕಿದ್ದೇನು? ನಾನು ನನ್ನ ತಂದೆಯ ಕೆಲಸದಲ್ಲಿ ಇರಬೇಕಾದದ್ದು ಅಗತ್ಯವಾಗಿತ್ತೆಂದು ನಿಮಗೆ ತಿಳಿಯಲಿಲ್ಲವೋ ಅಂದನು. |
50. | ಆದರೆ ಆತನು ಅವರಿಗೆ ಹೇಳಿದ ಮಾತನ್ನು ಅವರು ಗ್ರಹಿಸಲಿಲ್ಲ. |
51. | ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆದರೆ ಆತನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಇಟ್ಟುಕೊಂಡಳು. |
52. | ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು. |
← Luke (2/24) → |