← Leviticus (4/27) → |
1. | ಇದಲ್ಲದೆ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- |
2. | ಇಸ್ರಾ ಯೇಲನ ಮಕ್ಕಳಿಗೆ ಹೇಳಬೇಕಾದದ್ದೇನಂದರೆ--ಒಬ್ಬನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಮಾಡಬಾರದವುಗಳನ್ನು ಮಾಡಿ ಪಾಪಿಯಾದರೆ, |
3. | ಜನರು ಪಾಪಮಾಡುವ ಹಾಗೆ ಅಭಿಷಿಕ್ತನಾದ ಯಾಜಕನು ಪಾಪಮಾಡಿದರೆ ಅವನು ತನ್ನ ಪಾಪಕ್ಕಾಗಿ ದೋಷವಿಲ್ಲದ ಒಂದು ಎಳೇ ಹೋರಿಯನ್ನು ಪಾಪದ ಬಲಿಗಾಗಿ ಕರ್ತನಿಗೆ ತರಬೇಕು. |
4. | ಅವನು ಆ ಹೋರಿ ಯನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಕರ್ತನ ಎದುರಿಗೆ ತಂದು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಆ ಹೋರಿಯನ್ನು ಕರ್ತನ ಮುಂದೆ ವಧಿಸ ಬೇಕು. |
5. | ಆಗ ಅಭಿಷಿಕ್ತನಾದ ಯಾಜಕನು ಆ ಹೋರಿ ಯ ರಕ್ತವನ್ನು ತೆಗೆದುಕೊಂಡು ಸಭೆಯ ಗುಡಾರದ ಬಳಿಗೆ ತರಬೇಕು. |
6. | ಯಾಜಕನು ತನ್ನ ಬೆರಳನ್ನು ರಕ್ತದಲ್ಲಿ ಅದ್ದಿ ಕರ್ತನ ಮುಂದೆಯೂ ಪವಿತ್ರ ಸ್ಥಳದ ಪರದೆಯ ಮುಂದೆಯೂ ಆ ರಕ್ತವನ್ನು ಏಳು ಸಾರಿ ಚಿಮುಕಿಸಬೇಕು. |
7. | ಯಾಜಕನು ಸ್ವಲ್ಪ ರಕ್ತವನ್ನು ಸಭೆಯ ಗುಡಾರ ದೊಳಗಿರುವ ಸುವಾಸನೆಯುಳ್ಳ ಧೂಪ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಮುಂದೆ ಹಚ್ಚಬೇಕು; ಅಲ್ಲದೆ ಆ ಹೋರಿಯ ಎಲ್ಲಾ ರಕ್ತವನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿರುವ ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು. |
8. | ಅವನು ಪಾಪದ ಬಲಿಗಾಗಿರುವ ಹೋರಿಯ ಎಲ್ಲಾ ಕೊಬ್ಬನ್ನು ಅದರಿಂದ ತೆಗೆಯಬೇಕು; ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ |
9. | ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿಯಲ್ಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆಯಬೇಕು. |
10. | ಸಮಾಧಾನದ ಯಜ್ಞಸಮರ್ಪಣೆಯನ್ನು ಹೋರಿ ಯಿಂದ ತೆಗೆಯಲ್ಪಟ್ಟಂತೆಯೇ ತೆಗೆಯಬೇಕು; ಯಾಜಕನು ದಹನಬಲಿ ಯಜ್ಞವೇದಿಯ ಮೇಲೆ ಅವುಗಳನ್ನು ಸುಡಬೇಕು. |
11. | ಆ ಹೋರಿಯ ಚರ್ಮ ವನ್ನು, ಅದರ ಎಲ್ಲಾ ಮಾಂಸವನ್ನು, ತಲೆ, ಕಾಲುಗಳು, ಕರುಳುಗಳು, ಅದರ ಸಗಣಿಯೊಂದಿಗೆ |
12. | ಇಡೀ ಹೋರಿಯನ್ನು ಪಾಳೆಯದ ಆಚೆಗಿರುವ ಶುದ್ಧವಾದ ಸ್ಥಳಕ್ಕೆ ಅಂದರೆ ಬೂದಿ ಚೆಲ್ಲುವ ಸ್ಥಳಕ್ಕೆ ತಂದು ಅದನ್ನು ಕಟ್ಟಿಗೆಯ ಮೇಲೆ ಬೆಂಕಿಯಿಂದ ಸುಡ ಬೇಕು. ಅದನ್ನು ಬೂದಿ ಚೆಲ್ಲುವ ಸ್ಥಳದಲ್ಲಿ ಸುಡಬೇಕು. |
13. | ಮಾಡಬಾರದ ಕೆಲಸಗಳನ್ನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ಯಾವದನ್ನಾದರೂ ಇಸ್ರಾಯೇಲಿನ ಸಭೆಯವರು ಅರಿಯದೆ ಮಾಡಿ ಅಪರಾಧಿಗಳಾಗಿದ್ದರೆ ಅದು ಸಭೆಗೆ ಕಣ್ಮರೆಯಾಗಿದ್ದರೆ |
14. | ಅವರು ಮಾಡಿದ ಪಾಪವು ಗೊತ್ತಾದಾಗ ಆ ಪಾಪಕ್ಕಾಗಿ ಸಭೆಯು ಒಂದು ಎಳೇ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. |
15. | ಸಭೆಯ ಹಿರಿಯರು ಕರ್ತನ ಮುಂದೆ ಆ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟು ಅದನ್ನು ಕರ್ತನ ಮುಂದೆ ವಧಿಸಬೇಕು. |
16. | ಅಭಿಷಿಕ್ತ ನಾದ ನಿಮ್ಮ ಯಾಜಕನು ಆ ಹೋರಿಯ ರಕ್ತವನ್ನು ಸಭೆಯ ಗುಡಾರಕ್ಕೆ ತರಬೇಕು. |
17. | ಆ ಯಾಜಕನು ತನ್ನ ಬೆರಳನ್ನು ಸ್ವಲ್ಪ ರಕ್ತದಲ್ಲಿ ಅದ್ದಿ ಅದನ್ನು ಕರ್ತನ ಮುಂದೆ, ಅಂದರೆ ಪರದೆಯ ಮುಂದೆ ಏಳುಸಾರಿ ಚಿಮುಕಿಸಬೇಕು. |
18. | ಇದಲ್ಲದೆ ಅವನು ಸ್ವಲ್ಪ ರಕ್ತ ವನ್ನು ಸಭೆಯ ಗುಡಾರದೊಳಗಿರುವ ಯಜ್ಞವೇದಿಯ ಕೊಂಬುಗಳಿಗೆ ಕರ್ತನ ಎದುರಿನಲ್ಲಿ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಸಭೆಯ ಗುಡಾರದೊಳಗಿರುವ ದಹನ ಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು. |
19. | ಅವನು ಅದರ ಎಲ್ಲಾ ಕೊಬ್ಬನ್ನು ತೆಗೆದುಕೊಂಡು ಯಜ್ಞವೇದಿಯ ಮೇಲೆ ಸುಡಬೇಕು. |
20. | ಪಾಪದ ಬಲಿ ಗಾಗಿ ಇರುವ ಆ ಹೋರಿಗೆ ಮಾಡಿದಂತೆಯೇ ಈ ಹೋರಿಗೂ ಮಾಡಬೇಕು; ಇದಲ್ಲದೆ ಯಾಜಕನು ಅವರಿಗಾಗಿ ಪ್ರಾಯಶ್ಚಿತ್ತಮಾಡಬೇಕು. ಆಗ ಅದು ಅವರಿಗೆ ಕ್ಷಮಿಸಲ್ಪಡುವದು. |
21. | ಅವನು ಮೊದಲನೆಯ ಹೋರಿಯನ್ನು ಸುಟ್ಟಂತೆಯೇ ಈ ಹೋರಿಯನ್ನು ಪಾಳೆಯದ ಆಚೆಗೆ ತೆಗೆದುಕೊಂಡುಹೋಗಿ ಸುಡ ಬೇಕು. ಅದು ಸಭೆಗೆ ಪಾಪದ ಬಲಿಯಾಗಿ ಇರುವದು. |
22. | ಒಬ್ಬ ಅಧಿಪತಿಯು ಪಾಪಮಾಡಿ ತನ್ನ ದೇವ ರಾದ ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಮಾಡಬಾರದವುಗಳನ್ನು ಮಾಡಿ ಅಪರಾಧಿಯಾಗಿದ್ದರೆ, |
23. | ಇಲ್ಲವೆ ಅವನು ಮಾಡಿದ ಆ ಪಾಪವು ಅವನಿಗೆ ತಿಳಿದು ಬಂದರೆ, ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಗಂಡು ಮರಿಯನ್ನು ತರಬೇಕು. |
24. | ಅವನು ತನ್ನ ಕೈಯನ್ನು ಆ ಮೇಕೆ ತಲೆಯ ಮೇಲೆ ಇಟ್ಟು ಕರ್ತನ ಮುಂದೆ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ಅದನ್ನು ವಧಿಸಬೇಕು; ಅದು ಪಾಪದ ಬಲಿಯಾಗಿರುವದು. |
25. | ಯಾಜಕನು ಪಾಪದ ಬಲಿಯ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳ ಮೇಲೆ ಹಚ್ಚಿ ಅದರ ರಕ್ತವನ್ನು ದಹನಬಲಿ ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು. |
26. | ಅವರು ಸಮಾಧಾನದ ಯಜ್ಞ ಸಮರ್ಪಣೆಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನು ಯಜ್ಞವೇದಿಯ ಮೇಲೆ ಸುಡಬೇಕು. ಯಾಜ ಕನು ಅವನ ಪಾಪದ ವಿಷಯದಲ್ಲಿ ಅವನಿಗೆ ಪ್ರಾಯಶ್ಚಿತ್ತ ಮಾಡಬೇಕು; ಆಗ ಅದು ಅವನಿಗೆ ಕ್ಷಮಿಸಲ್ಪಡುವದು. |
27. | ಸಾಮಾನ್ಯ ಜನರಲ್ಲಿ ಯಾವನಾದರೂ ಮಾಡ ಬಾರದವುಗಳನ್ನು ಕರ್ತನ ಆಜ್ಞೆಗಳಿಗೆ ವಿರೋಧವಾಗಿ ತಿಳಿಯದೆ ಪಾಪಮಾಡಿ ಅಪರಾಧಿಯಾಗಿದ್ದರೆ |
28. | ಇಲ್ಲವೆ ಅವನು ಮಾಡಿದ ಪಾಪವು ಅವನಿಗೆ ತಿಳಿದುಬಂದರೆ ಅವನು ಬಲಿಗಾಗಿ ಮೇಕೆಗಳಲ್ಲಿ ದೋಷವಿಲ್ಲದ ಒಂದು ಹೆಣ್ಣು ಮರಿಯನ್ನು ತಾನು ಮಾಡಿದ ಪಾಪಕ್ಕಾಗಿ ತರಬೇಕು. |
29. | ಅವನು ತನ್ನ ಕೈಯನ್ನು ಪಾಪದ ಬಲಿಯ ಮೇಲಿಟ್ಟು ಆ ಪಾಪದ ಬಲಿಯನ್ನು ದಹನಬಲಿಯ ಸ್ಥಳದಲ್ಲಿ ವಧಿಸಬೇಕು. |
30. | ಆಗ ಯಾಜಕನು ತನ್ನ ಬೆರಳಿನಿಂದ ಅದರ ರಕ್ತವನ್ನು ತೆಗೆದುಕೊಂಡು ದಹನ ಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಉಳಿದ ಎಲ್ಲಾ ರಕ್ತವನ್ನು ಆ ಯಜ್ಞವೇದಿಯ ಅಡಿಯಲ್ಲಿ ಹೊಯ್ಯ ಬೇಕು. |
31. | ಅವನು ಸಮಾಧಾನ ಯಜ್ಞ ಸಮರ್ಪಣೆಯ ಕೊಬ್ಬನ್ನು ತೆಗೆದಂತೆ ಅದರ ಎಲ್ಲಾ ಕೊಬ್ಬನ್ನು ತೆಗೆಯ ಬೇಕು; ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯನ್ನಾಗಿ ಸುಡಬೇಕು; ಇದಲ್ಲದೆ ಯಾಜಕನು ಅವನಿಗಾಗಿ ಪ್ರಾಯಶ್ಚಿತ್ತಮಾಡ ಬೇಕು. ಆಗ ಅದು ಅವನಿಗೆ ಕ್ಷಮಿಸಲ್ಪಡುವದು. |
32. | ಅವನು ಪಾಪದ ಬಲಿಗಾಗಿ ಒಂದು ಕುರಿಮರಿ ಯನ್ನು ತರುವದಾದರೆ ದೋಷವಿಲ್ಲದ ಒಂದು ಹೆಣ್ಣನ್ನು ತರಬೇಕು; |
33. | ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಪಾಪದ ಬಲಿಗಾಗಿ ದಹನಬಲಿಯನ್ನು ವಧಿಸುವ ಸ್ಥಳದಲ್ಲಿ ವಧಿಸಬೇಕು. |
34. | ಯಾಜಕನು ಅದರ ರಕ್ತವನ್ನು ತನ್ನ ಬೆರಳಿನಿಂದ ತೆಗೆದುಕೊಂಡು ದಹನಬಲಿ ಯಜ್ಞವೇದಿಯ ಕೊಂಬುಗಳಿಗೆ ಹಚ್ಚ ಬೇಕು. ಉಳಿದ ಎಲ್ಲಾ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ಯಬೇಕು. |
35. | ಇದಲ್ಲದೆ ಸಮಾಧಾನ ಯಜ್ಞ ಸಮರ್ಪಣೆಗಳ ಕುರಿಮರಿಯ ಕೊಬ್ಬಿನಂತೆಯೇ ಅದರ ಎಲ್ಲಾ ಕೊಬ್ಬನ್ನೂ ತೆಗೆಯಬೇಕು; ಯಾಜಕನು ಬೆಂಕಿಯ ಸಮರ್ಪಣೆಗಳನ್ನು ಕರ್ತನಿಗೆ ಮಾಡಿ ದಂತೆಯೇ ಯಜ್ಞವೇದಿಯ ಮೇಲೆ ಅವುಗಳನ್ನು ಸುಡ ಬೇಕು; ಅವನು ಮಾಡಿದ ಪಾಪಕ್ಕೆ ಯಾಜಕನು ಪ್ರಾಯಶ್ಚಿತ್ತ ಮಾಡಬೇಕು, ಆಗ ಅದು ಅವನಿಗೆ ಕ್ಷಮಿಸಲ್ಪಡುವದು. |
← Leviticus (4/27) → |