← Leviticus (3/27) → |
1. | ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ. |
2. | ಅವನು ಸಮರ್ಪಿ ಸುವದರ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ವಧಿಸ ಬೇಕು; ಯಾಜಕರಾದ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸ ಬೇಕು. |
3. | ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ |
4. | ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿ ಯಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನ ಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಕರ್ತನಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು. |
5. | ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು. |
6. | ಅವನ ಕಾಣಿಕೆಯು ಸಮಾಧಾನದ ಸಮರ್ಪಣೆಯ ಯಜ್ಞವಾಗಿ ಅದು ತನ್ನ ಹಿಂಡಿನಿಂದಾದ ಕಾಣಿಕೆ ಯಾಗಿದ್ದರೆ ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ದೋಷ ವಿಲ್ಲದ್ದಾಗಿ ಅದನ್ನು ಅವನು ಕರ್ತನಿಗೆ ಸಮರ್ಪಿಸಬೇಕು. |
7. | ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವದಾದರೆ ಅದನ್ನು ಅವನು ಕರ್ತನ ಎದುರಿ ನಲ್ಲಿ ಸಮರ್ಪಿಸಬೇಕು. |
8. | ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು. |
9. | ಅದರ ಇಡೀ ಹಿಂಭಾಗವನ್ನೂ ಕೊಬ್ಬನ್ನೂ ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳು ಗಳ ಮೇಲಿರುವ ಎಲ್ಲಾ ಕೊಬ್ಬನ್ನೂ |
10. | ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ತೆಗೆದುಕೊಂಡು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಕರ್ತನಿಗೆ ಸಮರ್ಪಿಸಬೇಕು. |
11. | ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ. |
12. | ಅವನ ಸಮರ್ಪಣೆಯು ಮೇಕೆಯಾಗಿದ್ದರೆ ಅದನ್ನು ಅವನು ಕರ್ತನ ಎದುರಿನಲ್ಲಿ ಸಮರ್ಪಿಸಬೇಕು. |
13. | ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಸಭೆಯ ಗುಡಾರದ ಮುಂದೆ ಅದನ್ನು ವಧಿಸಬೇಕು; ಆಗ ಆರೋನನ ಕುಮಾರರು ಅದರ ರಕ್ತವನ್ನು ಯಜ್ಞ ವೇದಿಯ ಸುತ್ತಲೂ ಚಿಮುಕಿಸಬೇಕು. |
14. | ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ |
15. | ಎರಡು ಮೂತ್ರಜನಕಾಂಗ ಗಳನ್ನೂ ಪಕ್ಕೆಯ ಬದಿಗಳಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆದುಕೊಂಡು ಅರ್ಪಿಸುವ ಸಮರ್ಪಣೆಯನ್ನು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು. |
16. | ಯಾಜಕನು ಅವುಗಳನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಯಜ್ಞಾ ರ್ಪಣೆಯು ಸುವಾಸನೆಯ ಆಹಾರವಾಗಿರುವದು. ಎಲ್ಲಾ ಕೊಬ್ಬು ಕರ್ತನದೇ. |
17. | ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು. |
← Leviticus (3/27) → |