← Leviticus (26/27) → |
1. | ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ. |
2. | ನನ್ನ ಸಬ್ಬತ್ತುಗಳನ್ನು ನೀವು ಆಚರಿಸಬೇಕು; ನನ್ನ ಪರಿಶುದ್ಧ ಸ್ಥಳಕ್ಕೆ ಭಯಪಡ ಬೇಕು. ನಾನೇ ಕರ್ತನು. |
3. | ನೀವು ನನ್ನ ನಿಯಮಗಳ ಪ್ರಕಾರ ನಡೆದುಕೊಂಡು ನನ್ನ ಆಜ್ಞೆಗಳನ್ನು ಕೈಕೊಂಡು ಅವುಗಳಂತೆ ಮಾಡಿದರೆ |
4. | ನಿಮಗೆ ಮಳೆಯನ್ನು ತಕ್ಕಕಾಲದಲ್ಲಿ ಸುರಿಸುವೆನು. ಆಗ ಭೂಮಿಯು ಅದರ ಬೆಳೆಯನ್ನು ಕೊಡುವದು. ಹೊಲದ ಮರಗಳು ಅವುಗಳ ಫಲವನ್ನು ಕೊಡುವವು. |
5. | ಕಣ ತುಳಿಸುವ ಕೆಲಸವು ದ್ರಾಕ್ಷೇ ಬೆಳೆಯ ವರೆಗೂ ದ್ರಾಕ್ಷೇ ಬೆಳೆಯನ್ನು ಕೂಡಿಸುವ ಕೆಲಸವು ಬಿತ್ತನೆಯ ಕಾಲದ ವರೆಗೂ ನಡೆಯುವವು. ನೀವು ನಿಮ್ಮ ರೊಟ್ಟಿ ಯನ್ನು ತಿಂದು ತೃಪ್ತಿಹೊಂದಿ ಸುರಕ್ಷಿತವಾಗಿ ನಿಮ್ಮ ದೇಶದಲ್ಲಿ ವಾಸಮಾಡುವಿರಿ. |
6. | ನಾನು ದೇಶದಲ್ಲಿ ಸಮಾಧಾನವನ್ನು ಕೊಡುವೆನು. ಯಾರ ಭಯವೂ ಇಲ್ಲದೆ ನೀವು ಮಲಗಿಕೊಳ್ಳುವಿರಿ; ದೇಶದಲ್ಲಿ ದುಷ್ಟ ಮೃಗಗಳು ಇಲ್ಲದಂತೆ ಮಾಡುವೆನು. ಇಲ್ಲವೆ ಕತ್ತಿ ನಿಮ್ಮ ದೇಶದಲ್ಲಿ ಹಾದುಹೋಗುವದಿಲ್ಲ. |
7. | ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು. |
8. | ನಿಮ್ಮಲ್ಲಿ ಐದು ಮಂದಿ ನೂರು ಮಂದಿಯನ್ನು ಹಿಂದಟ್ಟುವರು. ನಿಮ್ಮಲ್ಲಿ ನೂರು ಮಂದಿ ಹತ್ತು ಸಾವಿರ ಮಂದಿಯನ್ನು ಅಟ್ಟಿಬಿಡುವರು. ನಿಮ್ಮ ಶತ್ರುಗಳು ನಿಮ್ಮ ಮುಂದೆ ಕತ್ತಿಯಿಂದ ಬೀಳುವರು. |
9. | ನಾನು ನಿಮ್ಮನ್ನು ಲಕ್ಷಿಸಿ ಅಭಿವೃದ್ಧಿಮಾಡಿ ಹೆಚ್ಚಿಸಿ ನಿಮ್ಮ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. |
10. | ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ. |
11. | ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು. |
12. | ನಾನು ನಿಮ್ಮ ಮಧ್ಯದಲ್ಲಿ ನಡೆದು ನಿಮ್ಮ ದೇವ ರಾಗಿರುವೆನು; ನೀವು ನನ್ನ ಜನರಾಗಿರುವಿರಿ. |
13. | ಐಗುಪ್ತ ದೇಶದವರಿಗೆ ನೀವು ದಾಸರಾಗಿರದ ಹಾಗೆ ಅವರ ದೇಶದೊಳಗಿಂದ ನಿಮ್ಮನ್ನು ಹೊರಗೆ ಬರಮಾಡಿ ನಿಮ್ಮ ನೊಗದ ಕಟ್ಟುಗಳನ್ನು ಮುರಿದು ನಿಮ್ಮನ್ನು ನೆಟ್ಟಗೆ ನಡೆಯಮಾಡಿದ ನಿಮ್ಮ ದೇವರಾದ ಕರ್ತನು ನಾನೇ. |
14. | ನೀವು ನನ್ನ ಮಾತನ್ನು ಕೇಳದೆ ಈ ಎಲ್ಲಾ ಆಜ್ಞೆಗಳ ಪ್ರಕಾರ ನಡೆಯದೆ ಹೋದರೆ |
15. | ನನ್ನ ನಿಯಮಗಳನ್ನು ನೀವು ಅಸಡ್ಡೆಮಾಡಿದರೆ ಇಲ್ಲವೆ ನನ್ನ ನಿರ್ಣಯಗಳಲ್ಲಿ ನಿಮ್ಮ ಪ್ರಾಣವು ಅಸಹ್ಯಪಟ್ಟರೆ ನೀವು ನನ್ನ ಒಡಂಬಡಿ ಕೆಯನ್ನು ವಿಾರಿ ನನ್ನ ಎಲ್ಲಾ ಆಜ್ಞೆಗಳ ಪ್ರಕಾರ ಮಾಡದೆ ಹೋದರೆ |
16. | ನಾನು ಸಹ ಇದನ್ನು ನಿಮಗೆ ಮಾಡು ವೆನು; ನಿಮ್ಮ ಮೇಲೆ ಭೀತಿಯನ್ನೂ ಕಣ್ಣುಗಳನ್ನು ಕ್ಷೀಣಿಸು ವಂತೆಯೂ ಹೃದಯವು ಕುಗ್ಗಿ ದುಃಖಕ್ಕೊಳಗಾಗು ವಂತೆಯೂ ಮಾಡುವ ಕ್ಷಯರೋಗವನ್ನು ಚಳಿಜ್ವರ ವನ್ನೂ ಬರಮಾಡುವೆನು. ನೀವು ವ್ಯರ್ಥವಾಗಿ ನಿಮ್ಮ ಬೀಜವನ್ನು ಬಿತ್ತುವಿರಿ; ನಿಮ್ಮ ಶತ್ರುಗಳು ಅದನ್ನು ತಿಂದುಬಿಡುವರು. |
17. | ನಾನು ನಿಮಗೆ ವಿಮುಖನಾಗಿರು ವೆನು. ನಿಮ್ಮ ಶತ್ರುಗಳ ಮುಂದೆ ನೀವು ಕೊಲ್ಲಲ್ಪಡುವಿರಿ. ನಿಮ್ಮ ವೈರಿಗಳು ನಿಮ್ಮ ಮೇಲೆ ದೊರೆತನ ಮಾಡುವರು. ಓಡಿಸುವವನು ಯಾರೂ ಇಲ್ಲದಿರುವಾಗ ಓಡಿ ಹೋಗುವಿರಿ. |
18. | ಇಷ್ಟಾದರು ನನ್ನ ಮಾತನ್ನು ಕೇಳದೆಹೋದರೆ ನಾನು ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ಹೆಚ್ಚಾಗಿ ನಿಮ್ಮನ್ನು ಶಿಕ್ಷಿಸುವೆನು. |
19. | ನಿಮ್ಮ ಬಲದ ಗರ್ವವನ್ನು ಮುರಿದು ಹಾಕಿ ನಿಮ್ಮ ಆಕಾಶವನ್ನು ಕಬ್ಬಿಣದ ಹಾಗೆಯೂ ನಿಮ್ಮ ಭೂಮಿಯನ್ನು ಹಿತ್ತಾಳೆಯಂತೆಯೂ ಮಾಡುವೆನು. |
20. | ಆಗ ನಿಮ್ಮ ಶಕ್ತಿಯು ವ್ಯರ್ಥವಾಗಿ ಮುಗಿದು ಹೋಗುವದು. ನಿಮ್ಮ ಭೂಮಿಯು ತನ್ನ ಬೆಳೆಯನ್ನೂ ಮರಗಳ ಫಲಗಳನ್ನೂ ಕೊಡದೆ ಇರುವದು. |
21. | ನನ್ನ ಮಾತನ್ನು ಕೇಳಲೊಲ್ಲದೆ ನನಗೆ ವಿರೋಧ ವಾಗಿ ನಡೆದರೆ ನಾನು ನಿಮ್ಮ ಪಾಪಗಳಿಗೆ ತಕ್ಕಂತೆ ನಿಮ್ಮನ್ನು ಏಳರಷ್ಟು ಹೆಚ್ಚಾಗಿ ನಿಮ್ಮ ಮೇಲೆ ವ್ಯಾಧಿಗಳನ್ನು ಬರಮಾಡುವೆನು. |
22. | ನಿಮ್ಮ ಮೇಲೆ ಕಾಡುಮೃಗಗಳು ಬರುವಂತೆ ಮಾಡುವೆನು. ಅವು ನಿಮ್ಮನ್ನು ಮಕ್ಕಳಿಲ್ಲದ ವರನ್ನಾಗಿ ಮಾಡಿ ನಿಮ್ಮ ದನಗಳನ್ನು ತಿಂದುಬಿಡುವವು ಮತ್ತು ನಿಮ್ಮನ್ನು ಸ್ವಲ್ಪ ಮಂದಿಯಾಗಿ ಮಾಡುವವು; ನಿಮ್ಮ ಮಾರ್ಗಗಳು ಹಾಳಾಗಿಹೋಗುವವು. |
23. | ನನ್ನಿಂದಾಗುವ ಇವುಗಳಿಂದ ನೀವು ಶಿಕ್ಷಿತರಾಗದೆ ನನಗೆ ವಿರೋಧವಾಗಿ ನಡೆದರೆ |
24. | ನಾನು ಸಹ ನಿಮಗೆ ವಿರೋಧವಾಗಿ ನಡೆದು ಇನ್ನೂ ಹೆಚ್ಚಾಗಿ ನಿಮ್ಮ ಪಾಪಗಳ ನಿಮಿತ್ತ ಏಳರಷ್ಟು ನಿಮ್ಮನ್ನು ಶಿಕ್ಷಿಸುವೆನು. |
25. | ಒಡಂಬಡಿ ಕೆಯ ನಿಮಿತ್ತ ಮುಯ್ಯಿಗೆ ಮುಯ್ಯಿ ತೀರಿಸುವ ಕತ್ತಿಯನ್ನು ನಾನು ನಿಮ್ಮ ಮೇಲೆ ಬರಮಾಡುವೆನು. ನೀವು ನಿಮ್ಮ ಪಟ್ಟಣಗಳಲ್ಲಿ ಕೂಡಿಬಂದಾಗ ವ್ಯಾಧಿಯನ್ನು ನಿಮ್ಮೊಳಗೆ ಬರಮಾಡುವೆನು. ನೀವು ಶತ್ರುವಿನ ಕೈಗೆ ಒಪ್ಪಿಸಲ್ಪಡು ವಿರಿ. |
26. | ನಾನು ನಿಮ್ಮ ಅನ್ನಾಧಾರವನ್ನು ಮುರಿದುಹಾಕಿ ದಾಗ ಹತ್ತು ಸ್ತ್ರೀಯರು ನಿಮ್ಮ ರೊಟ್ಟಿಯನ್ನು ಒಂದೇ ಒಲೆಯಲ್ಲಿ ಸುಟ್ಟು ತೂಕದ ಪ್ರಕಾರ ನಿಮಗೆ ರೊಟ್ಟಿಯನ್ನು ಕೊಡುವರು. ನೀವು ಅದನ್ನು ತಿನ್ನುವಿರಿ; ನಿಮಗೆ ತೃಪ್ತಿಯಾಗುವದಿಲ್ಲ. |
27. | ಇದೆಲ್ಲಾ ಆದಾಗ್ಯೂ ನೀವು ನನ್ನ ಮಾತನ್ನು ಕೇಳದೆ ನನಗೆ ವಿರೋಧವಾಗಿ ನಡೆದರೆ |
28. | ನಾನು ಕೋಪದಿಂದ ನಿಮಗೆ ವಿರೋಧವಾಗಿ ನಡೆದು ನಿಮ್ಮ ಪಾಪಗಳ ನಿಮಿತ್ತ ನಾನೇ ನಿಮ್ಮನ್ನು ಏಳರಷ್ಟಾಗಿ ಶಿಕ್ಷಿಸುವೆನು. |
29. | ನೀವು ನಿಮ್ಮ ಕುಮಾರ ಕುಮಾರ್ತೆಯರ ಮಾಂಸವನ್ನು ತಿನ್ನುವಿರಿ. |
30. | ಇದಲ್ಲದೆ ನಾನು ನಿಮ್ಮ ಉನ್ನತ ಸ್ಥಳಗಳನ್ನು ಹಾಳುಮಾಡಿ ನಿಮ್ಮ ಪ್ರತಿಮೆಗಳನ್ನು ಕಡಿದುಹಾಕಿ ವಿಗ್ರಹಗಳ ಮೇಲೆ ನಿಮ್ಮ ಹೆಣಗಳನ್ನು ಹಾಕುವೆನು; ನನ್ನ ಪ್ರಾಣವು ನಿಮ್ಮನ್ನು ಹೇಸಿಕೊಳ್ಳು ವದು. |
31. | ನಿಮ್ಮ ಪಟ್ಟಣಗಳನ್ನು ಕೆಡವಿಹಾಕಿ, ನಿಮ್ಮ ಪರಿಶುದ್ಧ ಸ್ಥಳಗಳನ್ನು ಹಾಳುಮಾಡಿ, ನಿಮ್ಮ ಸುವಾಸನೆ ಗಳನ್ನು ಮೂಸಿ ನೋಡದೆ ಇರುವೆನು. |
32. | ನಾನು ದೇಶವನ್ನು ಹಾಳುಮಾಡುವೆನು; ಅದರಲ್ಲಿ ವಾಸ ವಾಗುವ ನಿಮ್ಮ ಶತ್ರುಗಳು ಅದಕ್ಕೆ ಆಶ್ಚರ್ಯಪಡುವರು. |
33. | ನಿಮ್ಮನ್ನು ಜನಾಂಗಗಳಲ್ಲಿ ಚದರಿಸಿ ನಿಮ್ಮ ಹಿಂದೆ ಕತ್ತಿಯನ್ನು ಬೀಸುವೆನು; ನಿಮ್ಮ ಭೂಮಿ ಹಾಳಾಗಿ ರುವದು; ನಿಮ್ಮ ಪಟ್ಟಣಗಳು ನಾಶವಾಗಿರುವವು. |
34. | ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು. |
35. | ನೀವು ಅದರಲ್ಲಿ ವಾಸವಾಗಿದ್ದಾಗ ನಿಮ್ಮ ಸಬ್ಬತ್ತುಗಳಲ್ಲಿ ಅದಕ್ಕೆ ವಿಶ್ರಾಂತಿ ದೊರೆಯದ ಕಾರಣ ಅದು ಹಾಳುಬಿದ್ದಿರುವ ಕಾಲವೆಲ್ಲಾ ಅನುಭವಿಸುವದು. |
36. | ನಿಮ್ಮಲ್ಲಿ ಯಾರಾರು ಉಳಿದು ಶತ್ರುಗಳ ದೇಶದ ಲ್ಲಿರುವರೋ ಅವರ ಹೃದಯಗಳಲ್ಲಿ ಅಧೈರ್ಯವನ್ನು ಹುಟ್ಟಿಸುವೆನು; ಬಡಿದಾಡುವ ಎಲೆಯ ಶಬ್ದವು ಅವರನ್ನು ಓಡಿಸುವದು, ಕತ್ತಿಗೆ ಓಡಿಹೋದ ಹಾಗೆ ಓಡಿಹೋಗು ವರು; ಓಡಿಸುವವನಿಲ್ಲದೆ ಬೀಳುವರು. |
37. | ಓಡಿಸುವವ ನಿಲ್ಲದೆ ಒಬ್ಬರ ಮೇಲೊಬ್ಬರು ಕತ್ತಿಯ ಭಯದಿಂದಾದ ಹಾಗೆ ಬೀಳುವರು; ನಿಮ್ಮ ಶತ್ರುಗಳಿಗೆದುರಾಗಿ ನಿಂತುಕೊಳ್ಳುವದು ನಿಮ್ಮಿಂದಾಗದು. |
38. | ಜನಾಂಗಗ ಳೊಳಗೆ ನಾಶವಾಗುವಿರಿ; ನಿಮ್ಮ ಶತ್ರುಗಳ ದೇಶವು ನಿಮ್ಮನ್ನು ತಿಂದುಬಿಡುವದು. |
39. | ನಿಮ್ಮಲ್ಲಿ ಉಳಿದವರು ತಮ್ಮ ಅಕ್ರಮದಿಂದ ನಿಮ್ಮ ಶತ್ರುಗಳ ದೇಶದಲ್ಲಿ ಕ್ಷೀಣವಾಗುವರು; ತಮ್ಮ ಪಿತೃಗಳ ಅಕ್ರಮಗಳಿಂದ ಅವರ ಸಂಗಡ ಕ್ಷೀಣವಾಗುವರು. |
40. | ಆಗ ಅವರು ನನಗೆ ಮಾಡಿದ ತಮ್ಮ ಅಕ್ರಮವನ್ನೂ ತಮ್ಮ ಪಿತೃಗಳಅಕ್ರಮವನ್ನೂ ತಾವು ನನಗೆ ವಿರೋಧವಾಗಿ ನಡೆದು ಕೊಂಡದ್ದರಿಂದ |
41. | ನಾನೂ ಅವರಿಗೆ ವಿರೋಧವಾಗಿ ನಡೆದುಕೊಂಡು ತಮ್ಮ ಶತ್ರುಗಳ ದೇಶಕ್ಕೆ ಬರಮಾಡಿದ್ದನ್ನು ಅರಿಕೆಮಾಡಿ ಪರಿಛೇದನೆ ಇಲ್ಲದ ಅವರ ಹೃದಯವು ತಗ್ಗಿಸಲ್ಪಟ್ಟು ತಮ್ಮ ಅಕ್ರಮದಿಂದ ಉಂಟಾದ ಶಿಕ್ಷೆಗೆ ಅವರು ಒಪ್ಪಿಕೊಳ್ಳುವದಾದರೆ |
42. | ನಾನು ಯಾಕೋಬ್ ಇಸಾಕ್ ಅಬ್ರಹಾಮ್ ಇವ ರಿಗೆ ಮಾಡಿದ ನನ್ನ ಒಡಂಬಡಿಕೆಯನ್ನೂ ಅವರ ದೇಶವನ್ನೂ ಜ್ಞಾಪಕಮಾಡಿಕೊಳ್ಳುವೆನು. |
43. | ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ. |
44. | ಆದಾಗ್ಯೂ ಅವರು ತಮ್ಮ ಶತ್ರುಗಳ ದೇಶದಲ್ಲಿರುವಾಗ ಅವರನ್ನು ತಳ್ಳಿಬಿಡದೆಯೂ ಅಸಹ್ಯಿಸದೆಯೂ ಸಂಪೂರ್ಣವಾಗಿ ನಾಶಮಾಡದೆಯೂ ಅವರ ಸಂಗಡ ಇರುವ ನನ್ನ ಒಡಂಬಡಿಕೆಯನ್ನು ಮುರಿಯದೆಯೂ ಇರುವೆನು; ಅವರ ದೇವರಾಗಿರುವ ಕರ್ತನು ನಾನೇ. |
45. | ನಾನು ಅವರಿಗೆ ದೇವರಾಗಿರುವದರಿಂದ ಜನಾಂಗಗಳ ಮುಂದೆ ಐಗುಪ್ತದೇಶದಿಂದ ಹೊರಗೆ ಬರಮಾಡಿದ ಅವರ ಪಿತೃಗಳ ಒಡಂಬಡಿಕೆಯನ್ನು ಅವರಿಗೊಸ್ಕರ ಜ್ಞಾಪಕ ಮಾಡಿಕೊಳ್ಳುವೆನು; ನಾನೇ ಕರ್ತನು. |
46. | ಕರ್ತನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಮೂಲಕ ತನಗೂ ಇಸ್ರಾಯೇಲ್ ಮಕ್ಕಳಿಗೂ ಮಧ್ಯದಲ್ಲಿ ಕೊಟ್ಟ ನಿಯಮ ಗಳೂ ನ್ಯಾಯಗಳೂ ನ್ಯಾಯಪ್ರಮಾಣಗಳೂ ಇವೇ. |
← Leviticus (26/27) → |