← Leviticus (23/27) → |
1. | ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ -- |
2. | ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಪರಿಶುದ್ಧ ಸಭೆಗಳಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ, |
3. | ಆರು ದಿವಸ ಕೆಲಸಮಾಡಬೇಕು, ಆದರೆ ಏಳನೆಯ ದಿವಸವು ವಿಶ್ರಾಂತಿಯ ಸಬ್ಬತ್ ದಿವಸವಾಗಿ ಪರಿಶುದ್ಧ ಸಭಾಕೂಟವಾಗಿರುವದು; ನೀವು ಆ ದಿನ ದಲ್ಲಿ ಕೆಲಸಮಾಡಬಾರದು; ನಿಮ್ಮ ಎಲ್ಲಾ ನಿವಾಸಗಳಲ್ಲಿ ಅದು ಕರ್ತನ ಸಬ್ಬತ್ತಾಗಿರುವದು. |
4. | ನೀವು ಅವುಗಳ ಕಾಲಗಳಲ್ಲಿ ಪ್ರಕಟಿಸಬೇಕಾದ ಪವಿತ್ರ ಸಭಾಕೂಟ ಗಳೂ ಕರ್ತನ ಹಬ್ಬಗಳೂ ಇವೇ. |
5. | ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿವ ಸದ ಸಾಯಂಕಾಲದಲ್ಲಿ ಕರ್ತನ ಪಸ್ಕವು. |
6. | ಅದೇ ತಿಂಗಳಿನ ಹದಿನೈದನೆಯ ದಿನದಲ್ಲಿ ಕರ್ತನಿಗೆ ಹುಳಿ ಯಿಲ್ಲದ ರೊಟ್ಟಿಯ ಹಬ್ಬವಿರುವದು; ಏಳು ದಿವಸಗಳ ವರೆಗೆ ನೀವು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನತಕ್ಕದ್ದು. |
7. | ಮೊದಲನೆಯ ದಿನದಲ್ಲಿ ನಿಮಗೆ ಪವಿತ್ರ ಸಭಾಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. |
8. | ಆದರೆ ಏಳು ದಿವಸ ನೀವು ಕರ್ತನಿಗೆ ಬೆಂಕಿಯಿಂದ ಮಾಡಿದ ಬಲಿಯನ್ನು ಸಮರ್ಪಿಸಬೇಕು; ಏಳನೆಯ ದಿನದಲ್ಲಿ ಪರಿಶುದ್ಧ ಸಭಾ ಕೂಟವಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. |
9. | ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- |
10. | ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನಾನು ನಿಮಗೆ ಕೊಡುವ ದೇಶದೊಳಕ್ಕೆ ನೀವು ಬಂದಾಗ ಮತ್ತು ಅಲ್ಲಿಯ ಸುಗ್ಗಿ (ಬೆಳೆ)ಯನ್ನು ಕೊಯಿದರೆ ನಿಮ್ಮ ಸುಗ್ಗಿಯ ಮೊದಲನೆಯ ಫಲಗಳ ಸಿವುಡನ್ನು ಯಾಜಕನ ಬಳಿಗೆ ತರಬೇಕು. |
11. | ಅದು ನಿಮಗೋಸ್ಕರ ಅಂಗೀಕಾರವಾಗುವಂತೆ ಅದನ್ನು ಕರ್ತನ ಸನ್ನಿಧಿಯಲ್ಲಿ ಆಡಿಸಬೇಕು; ಸಬ್ಬತ್ತಿನ ಮಾರನೆಯ ದಿನ ಯಾಜಕನು ಅದನ್ನು ಆಡಿಸಬೇಕು. |
12. | ನೀವು ಸಿವುಡನ್ನು ಆಡಿಸುವ ದಿನದಲ್ಲಿ ಕರ್ತನಿಗೆ ದಹನಬಲಿಯಾಗಿ ಸಮರ್ಪಿಸು ವಂತೆ ಒಂದು ವರುಷದ ಮತ್ತು ದೋಷವಿಲ್ಲದ ಕುರಿ ಮರಿಯನ್ನು ಅರ್ಪಿಸಬೇಕು. |
13. | ಕರ್ತನಿಗೆ ಸುಗಂಧ ವಾಸನೆಯಾಗುವಂತೆ ಬೆಂಕಿಯಿಂದ ಮಾಡುವ ಆಹಾರ ಸಮರ್ಪಣೆಯು ಎಣ್ಣೇ ಮಿಶ್ರಿತವಾದ ನಯವಾದ ಹಿಟ್ಟಿನ ಹತ್ತರಲ್ಲಿ ಎರಡು ಪಾಲು ಇರಬೇಕು. ಪಾನ ಸಮರ್ಪಣೆಯು ಒಂದು ಹಿನ್ನಿನ ನಾಲ್ಕನೆಯ ಪಾಲು ದ್ರಾಕ್ಷಾರಸವಾಗಿರಬೇಕು. |
14. | ಅದೇ ದಿನದಲ್ಲಿ ನೀವು ನಿಮ್ಮ ದೇವರಿಗೆ ಸಮರ್ಪಣೆಯನ್ನು ತರುವ ವರೆಗೆ ರೊಟ್ಟಿಯನ್ನಾಗಲಿ ಹುರಿದ ಕಾಳನ್ನಾಗಲಿ ಇಲ್ಲವೆ ಹಸಿರಾದ ತೆನೆಗಳನ್ನಾಗಲಿ ತಿನ್ನಬಾರದು. ಇದು ನಿಮಗೆ ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. |
15. | ಸಬ್ಬತ್ತಿನ ಮಾರನೆಯ ದಿನ ನೀವು ಆಡಿಸುವ ಬಲಿಯಾದ ಸಿವುಡನ್ನು ತಂದ ದಿನದಿಂದ ಏಳು ಸಬ್ಬತ್ತು ಗಳು ಪೂರ್ಣವಾಗುವ ವರೆಗೆ ಲೆಕ್ಕಿಸಬೇಕು. |
16. | ಏಳ ನೆಯ ಸಬ್ಬತ್ತಿನ ಮಾರನೆಯ ದಿನದಿಂದ ನೀವು ಐವತ್ತು ದಿನಗಳನ್ನು ಲೆಕ್ಕಿಸಬೇಕು. ನೀವು ಕರ್ತನಿಗೆ ಹೊಸ ಆಹಾರ ಬಲಿಯನ್ನು ಅರ್ಪಿಸಬೇಕು. |
17. | ಇದಲ್ಲದೆ ನೀವು ನಿಮ್ಮ ನಿವಾಸಗಳಿಂದ ಹತ್ತನೆಯ ಎರಡು ಭಾಗ ಗಳ ಆಡಿಸುವ ಎರಡು ರೊಟ್ಟಿಗಳನ್ನು ಹೊರಗೆ ತರ ಬೇಕು. ಅವು ನಯವಾದ ಹಿಟ್ಟಿನಿಂದಾದವುಗಳಾಗಿರ ಬೇಕು. ಅವುಗಳು ಹುಳಿ ಕಲಸಿ ಸುಟ್ಟವುಗಳಾಗಿರಬೇಕು. ಅವು ಕರ್ತನಿಗೆ ಪ್ರಥಮ ಫಲಗಳು. |
18. | ಇದಲ್ಲದೆ ನೀವು ರೊಟ್ಟಿಯೊಂದಿಗೆ ದೋಷವಿಲ್ಲದ ಒಂದು ವರುಷದ ಏಳು ಕುರಿಮರಿಗಳನ್ನೂ ಒಂದು ಎಳೇ ಹೋರಿಯನ್ನೂ ಎರಡು ಟಗರುಗಳನ್ನೂ ಸಮರ್ಪಿಸ ಬೇಕು; ಅವು ಕರ್ತನಿಗೆ ದಹನಬಲಿಯಾಗಿರುವವು. ಅವುಗಳೊಂದಿಗೆ ಆಹಾರ ಬಲಿಯು ಪಾನಾರ್ಪಣೆಗಳು ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾಸನೆಯಾದ ಅರ್ಪಣೆಗಳಾಗಿರಬೇಕು. |
19. | ತರುವಾಯ ಆಡುಗಳೊ ಳಗೆ ಒಂದು ಮರಿಯನ್ನು ಪಾಪಬಲಿಯಾಗಿಯೂ ಮತ್ತು ಒಂದು ವರುಷದ ಎರಡು ಕುರಿಮರಿಗಳನ್ನು ಸಮಾಧಾನ ಯಜ್ಞಬಲಿಗಳಾಗಿಯೂ ಅರ್ಪಿಸಬೇಕು. |
20. | ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಪ್ರಥಮ ಫಲದ ರೊಟ್ಟಿಯೊಂದಿಗೂ ಎರಡು ಕುರಿಮರಿಗಳೊಂದಿಗೂ ಅವುಗಳನ್ನು ಆಡಿಸ ಬೇಕು. ಅವು ಕರ್ತನಿಗೆ ಪರಿಶುದ್ಧವಾಗಿದ್ದು ಯಾಜಕ ನಿಗೋಸ್ಕರ ಇರಬೇಕು. |
21. | ಅದೇ ದಿನದಲ್ಲಿ ನಿಮಗೆ ಪರಿಶುದ್ಧ ಸಭೆಯ ಕೂಟವೆಂದು ನೀವು ಪ್ರಕಟಿಸಬೇಕು. ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡ ಬಾರದು; ಇದು ನಿಮ್ಮ ಸಂತತಿಗಳ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು. |
22. | ನಿಮ್ಮ ಭೂಮಿಯ ಸುಗ್ಗಿಯನ್ನು ನೀವು ಕೊಯ್ಯು ವಾಗ ನಿಮ್ಮ ಹೊಲದ ಮೂಲೆಯನ್ನು ಸಂಪೂರ್ಣವಾಗಿ ಕೊಯ್ಯಬಾರದು ಇಲ್ಲವೆ ನಿಮ್ಮ ಸುಗ್ಗಿಯಲ್ಲಿ ಯಾವ ಹಕ್ಕಲನ್ನು ಕೂಡಿಸಿಕೊಳ್ಳಬಾರದು. ನೀವು ಅವುಗಳನ್ನು ಬಡವರಿಗಾಗಿ ಮತ್ತು ಪರಕೀಯರಿಗಾಗಿ ಬಿಟ್ಟುಬಿಡ ಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ. |
23. | ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- |
24. | ಇಸ್ರಾಯೇಲ್ ಮಕ್ಕಳೊಂದಿಗೆ ಮಾತ ನಾಡಿ--ಏಳನೆಯ ತಿಂಗಳಿನ ಮೊದಲನೆಯ ದಿವಸ ದಲ್ಲಿ ನಿಮಗೆ ತುತೂರಿಗಳನ್ನು ಊದುವ ಜ್ಞಾಪಕಾರ್ಥ ವಾದ ಸಬ್ಬತ್ತೂ ಪರಿಶುದ್ಧ ಸಭೆಯ ಕೂಟವೂ ಇರ ಬೇಕು. |
25. | ನೀವು ಅದರಲ್ಲಿ ಕಷ್ಟಕರವಾದ ಕೆಲಸವನ್ನು ಮಾಡಬಾರದು. ಆದರೆ ಬೆಂಕಿಯಿಂದ ಸಮರ್ಪಿಸುವ ಕಾಣಿಕೆಯನ್ನು ಕರ್ತನಿಗೆ ಅರ್ಪಿಸಬೇಕು ಎಂದು ಹೇಳಿದನು. |
26. | ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿ ದ್ದೇನಂದರೆ-- |
27. | ಇದಲ್ಲದೆ ಈ ಏಳನೆಯ ತಿಂಗಳಿನ ಹತ್ತನೆಯ ದಿವಸವು ಪ್ರಾಯಶ್ಚಿತ್ತದ ದಿವಸವಾಗಿ ರುವದು; ಅದು ನಿಮಗೆ ಒಂದು ಪರಿಶುದ್ಧ ಸಭೆಯ ಕೂಟವಾಗಿರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಿ ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು. |
28. | ಆ ದಿವಸದಲ್ಲಿ ನೀವು ಕೆಲಸವನ್ನು ಮಾಡಬಾರದು. ಅದು ನಿಮಗೋಸ್ಕರ ನಿಮ್ಮ ದೇವರಾಗಿರುವ ಕರ್ತನ ಸನ್ನಿಧಿಯಲ್ಲಿ ಪ್ರಾಯ ಶ್ಚಿತ್ತಮಾಡುವದಕ್ಕಾಗಿ ಪ್ರಾಯಶ್ಚಿತ್ತದ ದಿವಸವಾಗಿ ರುವದು. |
29. | ಆ ದಿವಸದಲ್ಲಿ ಯಾವನಾದರೂ ಕುಂದಿಸಿಕೊಳ್ಳದಿದ್ದರೆ ಅವನು ತನ್ನ ಜನರ ಮಧ್ಯ ದೊಳಗಿನಿಂದ ತೆಗೆದುಹಾಕಲ್ಪಡಬೇಕು. |
30. | ಆ ದಿವಸ ದಲ್ಲಿ ಯಾವನಾದರೂ ಯಾವದೇ ಕೆಲಸವನ್ನು ಮಾಡಿ ದರೆ ಅವನನ್ನು ನಾನು ಅವನ ಜನರ ಮಧ್ಯದಿಂದ ನಾಶಮಾಡುವೆನು. |
31. | ನೀವು ಯಾವ ತರದ ಕೆಲಸ ವನ್ನು ಮಾಡಬಾರದು; ಇದು ನಿಮ್ಮ ಸಂತತಿಯ ಎಲ್ಲಾ ನಿವಾಸಗಳಲ್ಲಿ ಶಾಶ್ವತವಾದ ನಿಯಮವಾಗಿರ ಬೇಕು. |
32. | ಇದು ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿ ರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಬೇಕು; ಆ ತಿಂಗಳಿನ ಒಂಭತ್ತನೆಯ ದಿವಸದ ಸಾಯಂಕಾಲ ದಿಂದ ಮರುದಿನದ ಸಾಯಂಕಾಲದ ವರೆಗೆ ನಿಮ್ಮ ಸಬ್ಬತ್ತನ್ನು ನೀವು ಆಚರಿಸಬೇಕು ಎಂಬದೇ. |
33. | ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- |
34. | ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿ ಅವರಿಗೆ ಹೀಗೆ ಹೇಳು--ಈ ಏಳನೆಯ ತಿಂಗಳಿನ ಹದಿನೈದನೆಯ ದಿವಸವು ಏಳು ದಿವಸಗಳ ವರೆಗೆ ಕರ್ತನಿಗೆ ಗುಡಾರಗಳ ಹಬ್ಬವಾಗಿರುವದು. |
35. | ಮೊದಲನೆಯ ದಿವಸದಲ್ಲಿ ಪರಿಶುದ್ಧ ಸಭೆಯ ಕೂಟವಿರುವದು; ನೀವು ಅದರಲ್ಲಿ ಕಷ್ಟಕರವಾದ ಕೆಲಸ ವನ್ನು ಮಾಡಬಾರದು. |
36. | ಏಳು ದಿವಸ ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಗಳನ್ನು ಕರ್ತನಿಗೆ ಅರ್ಪಿಸಬೇಕು. ಎಂಟನೆಯ ದಿವಸವು ನಿಮಗೆ ಪರಿ ಶುದ್ಧ ಕೂಟವಾಗಿರುವದು; ನೀವು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನು ಕರ್ತನಿಗೆ ಅರ್ಪಿಸಬೇಕು; ಅದೊಂದು ಗಂಭೀರ ಸಭೆಯಾಗಿರುವದು; ಅದರಲ್ಲಿ ನೀವು ಕಷ್ಟಕರವಾದ ಕೆಲಸವನ್ನು ಮಾಡಬಾರದು. |
37. | ನೀವು ಪರಿಶುದ್ಧ ಸಭೆಯಾಗಿ ಪ್ರಕಟಿಸಬೇಕಾದ ಕರ್ತನ ಹಬ್ಬಗಳು ಇವೇ: ಇವುಗಳ ಒಂದೊಂದು ದಿವಸದಲ್ಲಿ ಕರ್ತನಿಗೆ ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವನ್ನೂ ಪಾನಕ ಸಮರ್ಪಣೆ ಗಳನ್ನೂ ಅರ್ಪಿಸಬೇಕು. |
38. | ಕರ್ತನ ಸಬ್ಬತ್ತುಗಳ ಹೊರ ತಾಗಿಯೂ ನೀವು ಕರ್ತನಿಗೆ ಸಮರ್ಪಿಸುವ ನಿಮ್ಮ ದಾನ ಪ್ರಮಾಣಗಳ ನಿಮ್ಮ ಎಲ್ಲಾ ಸ್ವಇಷ್ಟವಾದ ಕಾಣಿಕೆಗಳ ಹೊರತಾಗಿಯೂ |
39. | ಏಳನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ನೀವು ಭೂಮಿಯ ಫಲವನ್ನು ಕೂಡಿಸಿದಾಗ ನೀವು ಕರ್ತನಿಗೆ ಏಳು ದಿವಸಗಳ ಹಬ್ಬ ವನ್ನು ಕೈಕೊಳ್ಳಬೇಕು. ಮೊದಲನೆಯ ದಿವಸವು ಸಬ್ಬತ್ತಾ ಗಿರಬೇಕು ಮತ್ತು ಎಂಟನೆಯ ದಿವಸವು ಸಬ್ಬತ್ತಾಗಿರ ಬೇಕು. |
40. | ಮೊದಲನೆಯ ದಿವಸದಲ್ಲಿ ನೀವು ಸುಂದರ ವಾದ ಮರಗಳ ಕೊಂಬೆಗಳನ್ನೂ ಖರ್ಜೂರ ಮರಗಳ ಕೊಂಬೆಗಳನ್ನೂ ದಟ್ಟವಾದ ಮರಗಳ ಕೊಂಬೆಗಳನ್ನೂ ಹಳ್ಳದ ನೀರವಂಜಿ ಮರಗಳನ್ನೂ ತೆಗೆದುಕೊಂಡು ಏಳು ದಿನಗಳ ವರೆಗೆ ನಿಮ್ಮ ದೇವರಾಗಿರುವ ಕರ್ತನ ಎದುರಿನಲ್ಲಿ ಸಂತೋಷಪಡಬೇಕು. |
41. | ಆ ವರುಷದಲ್ಲಿ ನೀವು ಏಳು ದಿವಸಗಳ ಹಬ್ಬವನ್ನು ಕರ್ತನಿಗಾಗಿ ಕೈಕೊಳ್ಳಬೇಕು. ಇದು ನಿಮ್ಮ ಸಂತತಿಗಳಲ್ಲಿ ಶಾಶ್ವತವಾದ ನಿಯಮವಾಗಿರಬೇಕು; ನೀವು ಇದನ್ನು ಏಳನೆಯ ತಿಂಗಳಿನಲ್ಲಿ ಆಚರಿಸಬೇಕು. |
42. | ಏಳು ದಿವಸಗಳ ವರೆಗೆ ನೀವು ಗುಡಾರಗಳಲ್ಲಿ ವಾಸಿಸಬೇಕು; ಇಸ್ರಾಯೇಲ್ಯ ರಾಗಿ ಹುಟ್ಟಿದವರೆಲ್ಲರೂ ಗುಡಾರಗಳಲ್ಲಿ ವಾಸಿಸ ಬೇಕು. |
43. | ನಾನು ಇಸ್ರಾಯೇಲ್ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಹೊರಗೆ ಬರಮಾಡಿದಾಗ ಅವರು ಗುಡಾರಗಳಲ್ಲಿ ವಾಸಿಸುವಂತೆ ಮಾಡಿದೆನೆಂದು ನಿಮ್ಮ ಸಂತತಿಯವರು ತಿಳಿದುಕೊಳ್ಳುವರು; ನಿಮ್ಮ ದೇವರಾ ಗಿರುವ ಕರ್ತನು ನಾನೇ ಎಂಬದು. |
44. | ಮೋಶೆಯು ಇಸ್ರಾಯೇಲ್ ಮಕ್ಕಳಿಗೆ ಕರ್ತನ ಹಬ್ಬಗಳನ್ನು ಪ್ರಕಟ ಮಾಡಿದನು. |
← Leviticus (23/27) → |