← Leviticus (2/27) → |
1. | ಯಾರಾದರೂ ಕರ್ತನಿಗೆ ಆಹಾರ ಸಮರ್ಪಣೆಯನ್ನು ಸಮರ್ಪಿಸುವದಾದರೆ ಅವನ ಸಮರ್ಪಣೆಯು ನಯವಾದ ಹಿಟ್ಟಿನದ್ದಾಗಿರ ಬೇಕು. ಅವನು ಅದರ ಮೇಲೆ ಎಣ್ಣೆಯನ್ನು ಸುರಿಯ ಬೇಕು; ಅದರ ಮೇಲೆ ಸಾಂಬ್ರಾಣಿಯನ್ನು ಹಾಕಬೇಕು. |
2. | ಇದಲ್ಲದೆ ಅವನು ಅದನ್ನು ಯಾಜಕರಾದ ಆರೋನನ ಕುಮಾರರ ಬಳಿಗೆ ತರಬೇಕು; ಅವನು ಹಿಟ್ಟಿನಲ್ಲಿಯೂ ಎಣ್ಣೆಯಲ್ಲಿಯೂ ಒಂದು ಹಿಡಿಯನ್ನು ಅದರ ಎಲ್ಲಾ ಸಾಂಬ್ರಾಣಿಯ ಸಂಗಡ ತೆಗೆದುಕೊಳ್ಳಬೇಕು. ಯಾಜ ಕನು ಅದನ್ನು ಜ್ಞಾಪಕಾರ್ಥವಾಗಿ ಯಜ್ಞವೇದಿಯ ಮೇಲೆ ಕರ್ತನಿಗೆ ಸುವಾಸನೆಯ ಸಮರ್ಪಣೆಯಾಗಿ ಬೆಂಕಿಯಿಂದ ಸುಡಬೇಕು. |
3. | ಆಹಾರದ ಸಮರ್ಪಣೆ ಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರ ರಿಗೂ ಆಗಬೇಕು; ಅದು ಬೆಂಕಿಯಿಂದ ಮಾಡಿದ ಕರ್ತನ ಸಮರ್ಪಣೆಗಳಲ್ಲಿ ಅತಿ ಪರಿಶುದ್ಧವಾದದ್ದು. |
4. | ನೀನು ಒಲೆಯಲ್ಲಿ ಸುಟ್ಟ ಆಹಾರ ಸಮರ್ಪಣೆ ಯನ್ನು ಕಾಣಿಕೆಯಾಗಿ ತರುವದಾದರೆ ಅದು ಹುಳಿ ಯಿಲ್ಲದ್ದಾಗಿ ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು. |
5. | ನಿನ್ನ ಕಾಣಿಕೆಯು ಬೋಗುಣಿ ಯಲ್ಲಿ ಬೇಯಿಸಿದ ಆಹಾರ ಸಮರ್ಪಣೆಯಾಗಿದ್ದರೆ ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು. |
6. | ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ ಅದರ ಮೇಲೆ ಎಣ್ಣೆ ಸುರಿಯಬೇಕು; ಅದು ಆಹಾರ ಸಮರ್ಪಣೆಯಾಗಿದೆ. |
7. | ನಿನ್ನ ಕಾಣಿಕೆಯು ಬಾಂಡ್ಲೆಯಲ್ಲಿ ಬೇಯಿಸಿದ ಆಹಾರ ವಾಗಿದ್ದರೆ ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು. |
8. | ನೀನು ಇವುಗಳಿಂದ ಮಾಡಿದ ಆಹಾರ ಸಮರ್ಪಣೆಯನ್ನು ಕರ್ತನಿಗೆ ತರಬೇಕು; ಅದು ಯಾಜಕನಿಗೆ ಒಪ್ಪಿಸಿದಾಗ ಅವನು ಅದನ್ನು ಯಜ್ಞವೇದಿಗೆ ತರುವನು. |
9. | ಆಗ ಯಾಜಕನು ಅದರಿಂದ ಜ್ಞಾಪಕಾರ್ಥವಾದ ಆಹಾರ ಸಮರ್ಪಣೆ ಯನ್ನಾಗಿ ತೆಗೆದುಕೊಂಡು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು: ಅದು ಬೆಂಕಿಯಿಂದ ಮಾಡಿ ದ್ದಾಗಿದ್ದು ಕರ್ತನಿಗೆ ಸುವಾಸನೆಯ ಸಮರ್ಪಣೆಯಾಗಿ ರುವದು. |
10. | ಆಹಾರ ಸಮರ್ಪಣೆಯಲ್ಲಿ ಉಳಿದದ್ದು ಆರೋನನಿಗೂ ಅವನ ಕುಮಾರರಿಗೂ ಆಗಬೇಕು. ಅದು ಬೆಂಕಿಯಿಂದ ಮಾಡಿದ್ದಾಗಿದ್ದು ಕರ್ತನ ಸಮ ರ್ಪಣೆಗಳಲ್ಲಿ ಅತಿ ಪರಿಶುದ್ಧವಾಗಿರುವದು. |
11. | ಕರ್ತನಿಗೆ ನೀನು ತರುವ ಆಹಾರ ಸಮರ್ಪಣೆಯು ಯಾವದೂ ಹುಳಿಯಿಂದ ಮಾಡಿದ್ದಾಗಿರಬಾರದು; ಕರ್ತನಿಗೆ ನೀವು ಬೆಂಕಿಯಿಂದ ಮಾಡುವ ಎಲ್ಲಾ ಸಮರ್ಪಣೆಗಳಲ್ಲಿ ಹುಳಿಯನ್ನಾಗಲಿ ಜೇನನ್ನಾಗಲಿ ಸುಡಬಾರದು. |
12. | ಪ್ರಥಮ ಫಲದ ಕಾಣಿಕೆಯ ವಿಷಯ ದಲ್ಲಿಯಾದರೋ ನೀವು ಅವುಗಳನ್ನು ಕರ್ತನಿಗೆ ಸಮ ರ್ಪಿಸಬೇಕು; ಆದರೆ ಅವುಗಳನ್ನು ಯಜ್ಞವೇದಿಯ ಮೇಲೆ ಸುವಾಸನೆಗಾಗಿ ಸುಡಬಾರದು. |
13. | ನಿನ್ನ ಪ್ರತಿ ಯೊಂದು ಆಹಾರ ಸಮರ್ಪಣೆಯೂ ಉಪ್ಪಿನಲ್ಲಿ ಬೆರಿಕೆ ಯಾಗಿರಬೇಕು; ನಿನ್ನ ದೇವರ ಒಡಂಬಡಿಕೆಯನ್ನು ಸೂಚಿಸುವ ಉಪ್ಪು ನಿನ್ನ ಸಮರ್ಪಣೆಯಲ್ಲಿ ಇಲ್ಲದೆ ಇರಬಾರದು; ನಿನ್ನ ಎಲ್ಲಾ ಸಮರ್ಪಣೆಗಳಲ್ಲಿ ನೀನು ಉಪ್ಪನ್ನು ಸಮರ್ಪಿಸಬೇಕು. |
14. | ನೀನು ನಿನ್ನ ಪ್ರಥಮ ಫಲಗಳ ಆಹಾರ ಸಮ ರ್ಪಣೆಯನ್ನು ಕರ್ತನಿಗೆ ಮಾಡಿದರೆ ನಿನ್ನ ಪ್ರಥಮ ಫಲದ ಆಹಾರ ಕಾಣಿಕೆಯನ್ನು ಬೆಂಕಿಯಿಂದ ಸುಟ್ಟ ಕಾಳಿನ ಹಸಿರು ತೆನೆಗಳನ್ನೂ ಅಲ್ಲದೆ ತುಂಬಿದ ತೆನೆ ಗಳಿಂದ ಬಡಿದ ಒಣಗಿದ ಕಾಳುಗಳನ್ನೂ ಸಮರ್ಪಿಸ ಬೇಕು. |
15. | ನೀನು ಅದರ ಮೇಲೆ ಎಣ್ಣೆಯನ್ನು ಹಾಕಿ ಅದರ ಮೇಲೆ ಸಾಂಬ್ರಾಣಿಯನ್ನು ಇಡಬೇಕು; ಅದು ಆಹಾರ ಸಮರ್ಪಣೆಯಾಗಿದೆ. |
16. | ಯಾಜಕನು ಬಡಿದ ಕಾಳುಗಳಲ್ಲಿ ಸ್ವಲ್ಪ ಭಾಗವನ್ನು ಮತ್ತು ಎಣ್ಣೆಯ ಸ್ವಲ್ಪ ಭಾಗವನ್ನು ಅದರ ಜೊತೆಯಲ್ಲಿ ಎಲ್ಲಾ ಸಾಂಬ್ರಾಣಿ ಯನ್ನು ಜ್ಞಾಪಕಾರ್ಥವಾಗಿ ಸುಡಬೇಕು: ಇದು ಕರ್ತ ನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯಾಗಿದೆ. |
← Leviticus (2/27) → |