← Leviticus (16/27) → |
1. | ಆರೋನನ ಇಬ್ಬರು ಗಂಡುಮಕ್ಕಳು ಕರ್ತನ ಸನ್ನಿಧಿಯಲ್ಲಿ ಅರ್ಪಣೆಮಾಡಿ ಸತ್ತ ನಂತರ ಕರ್ತನು ಮೋಶೆಯೊಂದಿಗೆ ಮಾತನಾಡಿದನು. |
2. | ಆಗ ಕರ್ತನು ಮೋಶೆಗೆ--ಅವನು ಸಾಯದಂತೆ ಮಂಜೂಷದ ಮೇಲಿರುವ ಕರುಣಾಸನದ ಮುಂದಿ ರುವ ಪರದೆಯ ಒಳಗೆ ಪರಿಶುದ್ಧವಾದ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ; ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು. |
3. | ಆರೋನನು ಪಾಪಬಲಿಗಾಗಿ ಒಂದು ಹೋರಿಯನ್ನು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಪರಿಶುದ್ಧವಾದ ಸ್ಥಳಕ್ಕೆ ಬರಬೇಕು. |
4. | ಅವನು ಪರಿ ಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟು ಕೊಂಡು ತನ್ನ ಶರೀರದ ಮೇಲೆ ನಾರುಬಟ್ಟೆಯ ಇಜಾರುಗಳನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು; ಆದಕಾರಣ ಅವನು ತನ್ನ ಶರೀರವನ್ನು ನೀರಿನಿಂದ ತೊಳೆದುಕೊಂಡು ಅವುಗಳನ್ನು ಧರಿಸಿಕೊಳ್ಳಬೇಕು. |
5. | ಅವನು ಪರಿ ಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟು ಕೊಂಡು ತನ್ನ ಶರೀರದ ಮೇಲೆ ನಾರುಬಟ್ಟೆಯ ಇಜಾರುಗಳನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು; ಆದಕಾರಣ ಅವನು ತನ್ನ ಶರೀರವನ್ನು ನೀರಿನಿಂದ ತೊಳೆದುಕೊಂಡು ಅವುಗಳನ್ನು ಧರಿಸಿಕೊಳ್ಳಬೇಕು. |
6. | ಇದಲ್ಲದೆ ಆರೋನನು ತನಗೋಸ್ಕರ ಪಾಪಬಲಿ ಗಾಗಿ ತನ್ನ ಹೋರಿಯನ್ನು ಸಮರ್ಪಿಸಿ ತನ್ನ ಮನೆಯ ವರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು. |
7. | ಅವನು ಎರಡು ಮೇಕೆಗಳನ್ನು ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿಗೆ ತಂದು ಅವುಗಳನ್ನು ಕರ್ತನ ಎದುರಿನಲ್ಲಿ ನಿಲ್ಲಿಸಬೇಕು. |
8. | ಆರೋನನು ಆ ಎರಡು ಆಡುಗಳಿಗಾಗಿ ಚೀಟು ಹಾಕಬೇಕು; ಒಂದು ಚೀಟು ಕರ್ತನಿಗೋಸ್ಕರ ಮತ್ತೊಂದು ಚೀಟು ಪಾಪ ಪಶುವಿ ಗೋಸ್ಕರ. |
9. | ಆರೋನನು ಕರ್ತನ ಚೀಟು ಬಿದ್ದ ಆಡನ್ನು ತಂದು ಅದನ್ನು ಪಾಪಬಲಿಗಾಗಿ ಸಮರ್ಪಿಸ ಬೇಕು. |
10. | ಆದರೆ ಪಾಪ ಪಶುವಿಗಾಗಿ ಚೀಟು ಬಿದ್ದ ಆ ಆಡನ್ನು ತನ್ನೊಂದಿಗೆ ಪ್ರಾಯಶ್ಚಿತ್ತಮಾಡುವದ ಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ ಅದನ್ನು ಪಾಪ ಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು. |
11. | ಇದಲ್ಲದೆ ಆರೋನನು ಪಾಪಬಲಿಗಾಗಿರುವ ಹೋರಿಯನ್ನು ತನಗೋಸ್ಕರವೂ ತನ್ನ ಮನೆತನದವರಿ ಗೋಸ್ಕರವೂ ಪ್ರಾಯಶ್ಚಿತ್ತಮಾಡಿ, ಪಾಪಬಲಿಗಾಗಿ ಆ ಹೋರಿಯನ್ನು ವಧಿಸಬೇಕು. |
12. | ಅವನು ಕರ್ತನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಧೂಪ ಸುಡುವ ಪಾತ್ರೆಯ ತುಂಬ ಬೆಂಕಿಯಿಂದ ಉರಿಯುವ ಕೆಂಡ ಗಳನ್ನು ಮತ್ತು ತನ್ನ ಕೈಗಳ ತುಂಬ ಸಣ್ಣದಾಗುವಂತೆ ಕಟ್ಟಿದ ಧೂಪವನ್ನು ತೆಗೆದುಕೊಂಡು ಅದನ್ನು ತೆರೆಯ ಒಳಗಡೆ ತರಬೇಕು. |
13. | ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕೃಪಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಕರ್ತನ ಎದುರಿನಲ್ಲಿ ಉರಿಯುವ ಕೆಂಡಗಳ ಮೇಲೆ ಹಾಕಬೇಕು. |
14. | ಆ ಹೋರಿಯ ರಕ್ತದಿಂದ ತೆಗೆದು ಕೊಂಡು ಕೃಪಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು; ಕೃಪಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೆಕು. |
15. | ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು. |
16. | ಇಸ್ರಾಯೇಲಿನ ಮಕ್ಕಳ ಅಶುದ್ಧ ತ್ವದ ನಿಮಿತ್ತವಾಗಿಯೂ ಅವರ ಪಾಪಗಳಲ್ಲಿರುವ ಎಲ್ಲಾ ಅಪರಾಧಗಳಿಗಾಗಿಯೂ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಅವರ ಅಶುದ್ಧ ತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ಸಭೆಯಗುಡಾರಕ್ಕೂ ಅದರಂತೆಯೇ ಮಾಡಬೇಕು. |
17. | ಅವನು ಪ್ರಾಯಶ್ಚಿತ್ತಮಾಡುವದಕ್ಕಾಗಿ ಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ ತನ್ನ ಮನೆಯ ವರೆಲ್ಲರಿಗೋಸ್ಕರವೂ ಇಸ್ರಾಯೇಲ್ಯರ ಸಭೆ ಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತಮಾಡಿ ಹೊರಗೆ ಬರುವ ತನಕ ಸಭೆಯ ಗುಡಾರದಲ್ಲಿ ಒಬ್ಬ ಮನುಷ್ಯನಾದರೂ ಇರಬಾರದು. |
18. | ಇದಲ್ಲದೆ ಅವನು ಕರ್ತನ ಎದುರಿನಲ್ಲಿರುವ ಯಜ್ಞವೇದಿಯ ಬಳಿಗೆ ಬಂದು ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನುಮಾಡಬೇಕು; ಹೋರಿಯ ರಕ್ತವನ್ನೂ ಆಡಿನ ರಕ್ತವನ್ನೂ ತೆಗೆದು ಕೊಂಡು ಯಜ್ಞವೇದಿಯ ಸುತ್ತಲೂ ಇರುವ ಕೊಂಬು ಗಳಿಗೆ ಹಚ್ಚಬೇಕು. |
19. | ಇದಲ್ಲದೆ ಅವನು ಏಳು ಸಾರಿ ಅದರ ಮೇಲೆ ಬೆರಳಿನಿಂದ ರಕ್ತವನ್ನು ಚಿಮುಕಿಸಿ ಅದನ್ನು ಶುದ್ಧಮಾಡಬೇಕು ಇಸ್ರಾಯೇಲ್ ಮಕ್ಕಳ ಅಶುದ್ಧತೆಯಿಂದ ಅದನ್ನು ಶುದ್ಧಮಾಡಬೇಕು. |
20. | ಹೀಗೆ ಪರಿಶುದ್ಧ ಸ್ಥಳದಲ್ಲಿಯೂ ಸಭೆಯ ಗುಡಾರದಲ್ಲಿಯೂ ಯಜ್ಞವೇದಿಗೂ ಪ್ರಾಯಶ್ಚಿತ್ತವನ್ನು ಮಾಡಿ ಮುಗಿಸಿದ ಮೇಲೆ ಅವನು ಒಂದು ಜೀವವುಳ್ಳ ಆಡನ್ನು ತರಬೇಕು. |
21. | ಆರೋನನು ಆ ಜೀವವುಳ್ಳ ಆಡಿನ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಇಸ್ರಾಯೇಲ್ ಮಕ್ಕಳ ಎಲ್ಲಾ ಅಕ್ರಮಗಳನ್ನೂ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆ ಮಾಡಿ ಅವುಗಳನ್ನು ಆಡಿನ ತಲೆಯ ಮೇಲೆ ಇರಿಸಿ ಯೋಗ್ಯನಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು. |
22. | ಆ ಆಡು ಅವರ ಎಲ್ಲಾ ಅಕ್ರಮಗಳನ್ನು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಆಡನ್ನು ಅಡವಿಗೆ ಬಿಟ್ಟುಬಿಡಬೇಕು. |
23. | ಆರೋನನು ಸಭೆಯ ಗುಡಾರದೊಳಗೆ ಬಂದು ತಾನು ಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟು ಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗ ಳನ್ನು ಅಲ್ಲಿಯೇ ಬಿಡಬೇಕು. |
24. | ಅವನು ಪರಿಶುದ್ಧ ಸ್ಥಳದಲ್ಲಿ ತನ್ನ ಶರೀರವನ್ನು ನೀರಿನಿಂದ ತೊಳೆದು ತನ್ನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಬಂದು ತನ್ನ ದಹನಬಲಿಯನ್ನೂ ಜನರ ದಹನಬಲಿಯನ್ನೂ ಸಮ ರ್ಪಿಸಿ ತನಗೋಸ್ಕರವೂ ಜನರಿಗೋಸ್ಕರವೂ ಪ್ರಾಯ ಶ್ಚಿತ್ತಮಾಡಬೇಕು. |
25. | ಪಾಪಬಲಿಯ ಕೊಬ್ಬು ಯಜ್ಞ ವೇದಿಯ ಮೇಲೆ ಸುಡಲ್ಪಡಬೇಕು. |
26. | ಪಾಪ ಪಶುವಿಗಾಗಿ ಆಡನ್ನು ಹೋಗಲು ಬಿಟ್ಟ ವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ತನ್ನ ಶರೀರ ವನ್ನು ನೀರಿನಲ್ಲಿ ತೊಳೆದುಕೊಂಡ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು. |
27. | ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು. |
28. | ಅವು ಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಕ್ಕೆ ಬರಬೇಕು. |
29. | ನೀವು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮಲ್ಲಿ ಒಬ್ಬ ಸ್ವದೇಶದವನಾಗಲಿ ಪ್ರವಾಸಿಯಾಗಿರುವ ಪರಕೀಯನಾಗಲಿ ನಿಮ್ಮ ಆತ್ಮಗಳನ್ನು ಕುಂದಿಸಿ ಯಾವ ಕೆಲಸವನ್ನೂ ಮಾಡದಂತೆ ಇದು ನಿಮಗೆ ಶಾಶ್ವತವಾದ ಒಂದು ನಿಯಮವಾಗಿರುವದು. |
30. | ಯಾಕಂದರೆ ನೀವು ಕರ್ತನ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತ ವನ್ನು ಮಾಡುವನು. |
31. | ಇದೇ ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿರುವದು. ನಿಮಗೆ ನಿತ್ಯವಾದ ನಿಯಮ ವಿರುವಂತೆ ನಿಮ್ಮ ಪ್ರಾಣಗಳನ್ನು ಕುಂದಿಸಬೇಕು. |
32. | ಯಾವನು ತನ್ನ ತಂದೆಯ ಬದಲಾಗಿ ಯಾಜಕ ಉದ್ಯೋಗಕ್ಕೋಸ್ಕರ ಅಭಿಷೇಕಿಸಲ್ಪಟ್ಟವನಾಗಿ ಪ್ರತಿಷ್ಠಿಸ ಲ್ಪಟ್ಟಿದ್ದಾನೋ ಆ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು. |
33. | ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು. ಹೀಗೆ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಇದ ಲ್ಲದೆ ಸಭೆಯ ಗುಡಾರಕ್ಕಾಗಿಯೂ ಯಜ್ಞವೇದಿ ಗಾಗಿಯೂ ಪ್ರಾಯಶ್ಚಿತ್ತಮಾಡಬೇಕು. ಯಾಜಕರಿ ಗಾಗಿಯೂ ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು. |
34. | ಹೀಗೆ ಇಸ್ರಾಯೇಲಿನ ಮಕ್ಕಳ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತಮಾಡುವಂತೆ ಇದು ನಿಮಗೆ ನಿರಂತರ ವಾದ ನಿಯಮವಾಗಿರುವದು ಎಂದು ಹೇಳಿದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು. |
← Leviticus (16/27) → |