← Leviticus (12/27) → |
1. | ಕರ್ತನು ಮೋಶೆಯೊಂದಿಗೆ ಮಾತನಾಡಿ -- |
2. | ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು. |
3. | ಎಂಟನೆಯ ದಿನದಲ್ಲಿ ಅವನಿಗೆ ಸುನ್ನತಿಮಾಡಿಸ ಬೇಕು. |
4. | ಅವಳು ಮೂವತ್ತಮೂರು ದಿನಗಳು ಶುದ್ಧೀ ಕರಣದಲ್ಲಿ ಮುಂದುವರಿಯಬೇಕು, ಅವಳು ಶುದ್ಧೀ ಕರಣದ ದಿನಗಳು ಪೂರೈಸುವ ತನಕ ಪರಿಶುದ್ಧ ವಾದದ್ದನ್ನು ಮುಟ್ಟಬಾರದು ಪರಿಶುದ್ಧ ಸ್ಥಳಕ್ಕೆ ಬರ ಬಾರದು. |
5. | ಅವಳು ಹೆಣ್ಣುಮಗುವನ್ನು ಹೆತ್ತರೆ ಮುಟ್ಟಿನಲ್ಲಿರುವಂತೆ ಎರಡು ವಾರಗಳು ಅಶುದ್ಧಳಾಗಿರ ಬೇಕು. ಅವಳು ಅರವತ್ತಾರು ದಿನಗಳು ಶುದ್ಧೀಕರಣದಲ್ಲಿ ಮುಂದುವರಿಸಬೇಕು. |
6. | ಮಗನಿಗಾಗಿ ಮಗಳಿಗಾಗಿ ಅವಳ ಶುದ್ಧೀಕರಣದ ದಿನಗಳು ಪೂರ್ತಿಯಾದರೆ ಅವಳು ದಹನಬಲಿಗಾಗಿ ಮೊದಲನೇ ವರುಷದ ಕುರಿಮರಿಯನ್ನೂ ಪಾಪದ ಬಲಿಗಾಗಿ ಪಾರಿವಾಳದ ಮರಿಯನ್ನೂ ಒಂದು ಬೆಳವ ವನ್ನೂ ಸಭೆಯ ಗುಡಾರದ ಬಾಗಲಲ್ಲಿ ಯಾಜಕನ ಬಳಿಗೆ ತರಬೇಕು. |
7. | ಅವನು ಕರ್ತನ ಮುಂದೆ ಅದನ್ನು ಅರ್ಪಿಸಿ ಅವಳಿಗಾಗಿ ಪ್ರಾಯಶ್ಚಿತ್ತಮಾಡುವನು. ಆಗ ಅವಳು ತನ್ನ ರಕ್ತಸ್ರಾವದಿಂದ ಶುದ್ಧಳಾಗುವಳು. ಗಂಡು ಮಗುವನ್ನಾಗಲಿ ಹೆಣ್ಣು ಮಗುವನ್ನಾಗಲಿ ಹೆತ್ತವಳ ನಿಯಮವು ಇದೇ. |
8. | ಅವಳು ಕುರಿಮರಿಯನ್ನು ತರಲು ಅಶಕ್ತಳಾಗಿದ್ದರೆ ದಹನಬಲಿಗಾಗಿ ಒಂದು ಪಾಪದ ಬಲಿಗಾಗಿ ಇನ್ನೊಂದು ಎಂಬಂತೆ ಎರಡು ಬೆಳವಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತರಬೇಕು ಮತ್ತು ಯಾಜಕನು ಅವಳಿಗಾಗಿ ಪ್ರಾಯಶ್ಚಿತ್ತಮಾಡಬೇಕು, ಆಗ ಅವಳು ಶುದ್ಧಳಾಗುವಳು. |
← Leviticus (12/27) → |