← Leviticus (10/27) → |
1. | ಇದಲ್ಲದೆ ಆರೋನನ ಕುಮಾರರಾದ ನಾದಾಬ್ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು. |
2. | ಆಗ ಕರ್ತನ ಬಳಿಯಿಂದ ಬೆಂಕಿಯು ಹೊರಟು ಅವರನ್ನು ದಹಿಸಿ ಬಿಟ್ಟಿತು; ಅವರು ಕರ್ತನ ಮುಂದೆ ಸತ್ತುಹೋದರು. |
3. | ತರುವಾಯ ಮೋಶೆಯು ಆರೋನನಿಗೆ--ಕರ್ತನು ಹೇಳಿದ್ದು ಇದೇ, ಅದೇನಂದರೆ--ನನ್ನನ್ನು ಸವಿಾಪಿಸು ವವರನ್ನು ನಾನು ಪರಿಶುದ್ಧಪಡಿಸುವೆನು, ಜನರೆಲ್ಲರ ಮುಂದೆ ನಾನು ಘನ ಹೊಂದುವೆನು ಅಂದನು. ಆಗ ಆರೋನನು ಸುಮ್ಮನಿದ್ದನು. |
4. | ಮೋಶೆಯು ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ವಿಾಶಾಯೇಲನನ್ನೂ ಎಲ್ಸಾಫಾನನನ್ನೂ ಕರೆದು ಅವರಿಗೆ--ಹತ್ತಿರಕ್ಕೆ ಬಂದು ನಿಮ್ಮ ಸಹೋದರರನ್ನು ಪರಿಶುದ್ಧ ಸ್ಥಳದಿಂದ ಪಾಳೆಯದ ಹೊರಗೆ ಹೊತ್ತು ಕೊಂಡು ಹೋಗಿರಿ ಅಂದನು. |
5. | ಮೋಶೆಯು ಹೇಳಿದ ಹಾಗೆಯೇ ಅವರು ಹತ್ತಿರಕ್ಕೆ ಹೋಗಿ ಅವರನ್ನು ಅವರ ಮೇಲಂಗಿಗಳೊಂದಿಗೆ ಹೊತ್ತುಕೊಂಡು ಪಾಳೆಯದ ಹೊರಗೆ ಹೋದರು. |
6. | ಮೋಶೆಯು ಆರೋನನಿಗೂ ಅವನ ಕುಮಾರ ರಾದ ಎಲ್ಲಾಜಾರ್‌ನಿಗೂ ಈತಾಮಾರ್‌ನಿಗೂ ಹೇಳಿದ್ದೇ ನಂದರೆ--ನೀವು ಸಾಯದಂತೆಯೂ ಕೋಪವು ಜನ ರೆಲ್ಲರ ಮೇಲೆ ಬಾರದಂತೆಯೂ ನಿಮ್ಮ ತಲೆಗಳನ್ನು ಮುಚ್ಚಿಕೊಳ್ಳಿರಿ, ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದು ಕೊಳ್ಳಬೇಡಿರಿ; ಆದರೆ ಕರ್ತನು ಉರಿಸಿದ ನಿಮ್ಮ ಉರಿಯ ನಿಮಿತ್ತ ಸಹೋದರರಾಗಿರುವ ಇಸ್ರಾಯೇಲಿನ ಮನೆ ತನದವರೆಲ್ಲರೂ ಗೋಳಾಡಲಿ. |
7. | ಕರ್ತನ ಅಭಿಷೇಕ ತೈಲವು ನಿಮ್ಮ ಮೇಲಿರುವದರಿಂದ ನೀವು ಸಾಯದಂತೆ ಸಭೆಯ ಗುಡಾರದ ಬಾಗಿಲಿನಿಂದ ಹೊರಗೆ ಹೋಗ ಬಾರದು; ಆಗ ಅವರು ಮೋಶೆಯ ಮಾತಿನ ಪ್ರಕಾರವೇ ಮಾಡಿದರು. |
8. | ಕರ್ತನು ಮಾತನಾಡಿ ಆರೋನನಿಗೆ ಹೇಳಿದ್ದೇ ನಂದರೆ-- |
9. | ನೀನೂ ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾ ಗಲಿ ಮದ್ಯಪಾನವನ್ನಾಗಲಿ ಕುಡಿದು ಸಭೆಯ ಗುಡಾರ ದೊಳಗೆ ಬರಬಾರದು; ಹಾಗೆ ಬಂದರೆ ಸತ್ತೀರಿ. ನಿಮ್ಮ ವಂಶಾವಳಿಯು ಇರುವ ವರೆಗೂ ಇದು ಶಾಶ್ವತವಾಗಿ ರುವ ಕಟ್ಟಳೆಯಾಗಿದೆ. |
10. | ನೀವು ಶುದ್ಧವಾದದ್ದಕ್ಕೂ ಅಶುದ್ಧವಾದದ್ದಕ್ಕೂ ಪವಿತ್ರವಾದದ್ದಕ್ಕೂ ಅಪವಿತ್ರ ವಾದದ್ದಕ್ಕೂ ವ್ಯತ್ಯಾಸವನ್ನು ತೋರಿಸುವದಕ್ಕಾಗಿಯೂ |
11. | ನೀವು ಇಸ್ರಾಯೇಲ್ ಮಕ್ಕಳಿಗೆ ಕರ್ತನು ಮೋಶೆಯ ಕೈಗೆ ಒಪ್ಪಿಸಿ ಹೇಳಿದ ಹಾಗೆ ಎಲ್ಲಾ ಕಟ್ಟಳೆಗಳನ್ನು ಬೋಧಿಸುವದಕ್ಕಾಗಿಯೂ ಇರುವದು. |
12. | ಮೋಶೆಯು ಆರೋನನೊಂದಿಗೂ ಉಳಿದ ಅವನ ಕುಮಾರರಾದ ಎಲ್ಲಾಜಾರನೊಂದಿಗೂ ಈತಾ ಮಾರನೊಂದಿಗೂ ಮಾತನಾಡಿ ಹೇಳಿದ್ದೇನಂದರೆಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಗಳಲ್ಲಿ ಉಳಿದಿರುವ ಆಹಾರ ಸಮರ್ಪಣೆಯನ್ನು ತೆಗೆದು ಕೊಂಡು ಅದನ್ನು ಯಜ್ಞವೇದಿಯ ಬಳಿಯಲ್ಲಿ ಹುಳಿ ಯಿಲ್ಲದೆ ತಿನ್ನಿರಿ; ಅದು ಅತಿ ಪರಿಶುದ್ಧವಾದದ್ದು. |
13. | ನೀವು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು. ಬೆಂಕಿಯಿಂದ ಮಾಡಿದ ಕರ್ತನ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಇವು ಸಲ್ಲತಕ್ಕವುಗಳು. ಹೀಗೆ ನಾನು ಆಜ್ಞೆ ಹೊಂದಿದ್ದೇನೆ. |
14. | ನೀನೂ ನಿನ್ನೊಂದಿಗೆ ನಿನ್ನ ಕುಮಾರರೂ ಕುಮಾರ್ತೆಯರೂ ಆಡಿಸುವ ಎದೆಯ ಭಾಗವನ್ನೂ ಪ್ರತ್ಯೇಕಿಸಿದ ಭುಜವನ್ನೂ ಶುದ್ಧ ಸ್ಥಳದಲ್ಲಿ ತಿನ್ನಬೇಕು; ಅವು ಇಸ್ರಾಯೇಲ್ ಮಕ್ಕಳ ಸಮಾಧಾನದ ಬಲಿಯ ಯಜ್ಞಗಳಲ್ಲಿ ನಿನಗೂ ನಿನ್ನ ಕುಮಾರರಿಗೂ ಸಲ್ಲುವವುಗಳಾಗಿವೆ. |
15. | ಅವರು ಪ್ರತ್ಯೇ ಕಿಸಿದ ಭುಜವನ್ನೂ ಆಡಿಸುವ ಎದೆಯ ಭಾಗವನ್ನೂ ಬೆಂಕಿಯಿಂದ ಮಾಡಿದ ಕೊಬ್ಬಿನ ಸಮರ್ಪಣೆಗಳನ್ನೂ ಆಡಿಸುವದಕ್ಕೆ ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಯಾಗಿ ತರಬೇಕು; ಕರ್ತನು ಆಜ್ಞಾಪಿಸಿದ ಹಾಗೆ ಅದು ನಿನಗೂ ನಿನ್ನೊಂದಿಗೆ ನಿನ್ನ ಕುಮಾರರಿಗೂ ಸಲ್ಲತಕ್ಕದ್ದು; ಇದು ನಿತ್ಯ ಕಟ್ಟಳೆಯಾಗಿದೆ. |
16. | ಆಗ ಮೋಶೆಯು ಶ್ರದ್ಧೆಯಿಂದ ಪಾಪದ ಬಲಿಯ ಮೇಕೆಯನ್ನು ಹುಡುಕಿದಾಗ ಅಗೋ, ಅದು ಸುಟ್ಟು ಹೋಗಿತ್ತು. ಅವನು ಆರೋನನ ಉಳಿದ ಕುಮಾರರಾದ ಎಲ್ಲಾಜಾರನ ಮೇಲೆಯೂ ಈತಾಮಾರನ ಮೇಲೆಯೂ ಕೋಪಗೊಂಡು ಹೇಳಿದ್ದೇನಂದರೆ-- |
17. | ಅದು ಅತಿ ಪರಿಶುದ್ಧವಾದದರಿಂದಲೂ ಕರ್ತನ ಸನ್ನಿಧಿಯಲ್ಲಿ ಅವ ರಿಗಾಗಿ ಪ್ರಾಯಶ್ಚಿತ್ತಮಾಡುವದಕ್ಕಾಗಿಯೂ ಸಭೆಯ ಅಪರಾಧವನ್ನು ಹೊರುವದಕ್ಕಾಗಿ ದೇವರು ಅದನ್ನು ಕೊಟ್ಟದ್ದೆಂದೂ ನೀವು ತಿಳಿದು ಪಾಪಬಲಿಯನ್ನು ಪರಿ ಶುದ್ಧವಾದ ಸ್ಥಳದಲ್ಲಿ ಯಾಕೆ ತಿನ್ನಲಿಲ್ಲ? |
18. | ಇಗೋ, ಅದರ ರಕ್ತವು ಪರಿಶುದ್ಧ ಸ್ಥಳದ ಒಳಗೆ ತರಲ್ಪಡಲಿಲ್ಲ. ನಾನು ಆಜ್ಞಾಪಿಸಿದಂತೆ ನಿಶ್ಚಯವಾಗಿ ನೀವು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕಾಗಿತ್ತು. |
19. | ಆಗ ಆರೋನನು ಮೋಶೆಗೆ--ಇಗೋ, ಈ ದಿನ ಅವರು ಅಪರಾಧದ ಬಲಿಯನ್ನೂ ಅದರ ದಹನಬಲಿಯನ್ನೂ ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದ್ದಾಗ್ಯೂ ಇಂಥವುಗಳು ನನಗೆ ಸಂಭವಿಸಿದವು. ಇಂದು ನಾನು ಆ ಪಾಪದ ಬಲಿಯನ್ನು ತಿಂದರೆ ಅದು ಕರ್ತನ ದೃಷ್ಟಿಯಲ್ಲಿ ಅಂಗೀಕಾರ ವಾಗುವದೋ ಅಂದನು. |
20. | ಮೋಶೆಯು ಅದನ್ನು ಕೇಳಿ ಒಪ್ಪಿಕೊಂಡನು. |
← Leviticus (10/27) → |