← Judges (13/21) → |
1. | ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದ ಕರ್ತನು ಅವರನ್ನು ನಾಲ್ವತ್ತು ವರುಷದ ವರೆಗೆ ಫಿಲಿಷ್ಟಿಯರ ಕೈಯಲ್ಲಿ ಒಪ್ಪಿಸಿಕೊಟ್ಟನು. |
2. | ಚೊರ್ಗಾದ ವನಾದ ದಾನ್ ಗೋತ್ರದ ಮಾನೋಹ ಎಂಬ ಒಬ್ಬ ಮನುಷ್ಯನಿದ್ದನು. |
3. | ಅವನ ಹೆಂಡತಿಯು ಹೆರದೆ ಬಂಜೆಯಾಗಿದ್ದಳು. ಕರ್ತನ ದೂತನು ಆ ಸ್ತ್ರೀಗೆ ಪ್ರತ್ಯಕ್ಷ ವಾಗಿ ಅವಳಿಗೆ--ಇಗೋ, ನೀನು ಹೆರದೆ ಬಂಜೆಯಾ ಗಿದ್ದೀ. ಆದರೆ ನೀನು ಗರ್ಭ ಧರಿಸಿ ಒಬ್ಬ ಮಗನನ್ನು ಹೆರುವಿ. |
4. | ಆದದರಿಂದ ನೀನು ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ ಅಶುಚಿಯಾದ ಒಂದನ್ನಾದರೂ ತಿನ್ನದೆ ಎಚ್ಚರಿಕೆಯಾಗಿರಬೇಕು. |
5. | ಇಗೋ, ನೀನು ಗರ್ಭವನ್ನು ಧರಿಸಿ, ಒಬ್ಬ ಮಗನನ್ನು ಹೆರುವಿ; ಅವನ ತಲೆಯ ಮೇಲೆ ಕ್ಷೌರದ ಕತ್ತಿ ಬರುವದಿಲ್ಲ. ಗರ್ಭದಿಂದಲೇ ಆ ಹುಡುಗನು ದೇವರ ನಾಜೀರನಾಗಿ ರುವನು. ಅವನು ಇಸ್ರಾಯೇಲ್ಯರನ್ನು ಫಿಲಿಷ್ಟಿ ಯರ ಕೈಯಿಂದ ಬಿಡಿಸಿ ರಕ್ಷಿಸಲು ಪ್ರಾರಂಭಿಸುವನು ಅಂದನು. |
6. | ಆಗ ಆ ಸ್ತ್ರೀಯು ಬಂದು ತನ್ನ ಗಂಡನಿಗೆದೇವರ ಒಬ್ಬ ಮನುಷ್ಯನು ನನ್ನ ಬಳಿಗೆ ಬಂದನು. ಅವನ ರೂಪವು ದೇವದೂತನ ರೂಪದ ಹಾಗೆ ಮಹಾಭಯಂಕರವಾಗಿತ್ತು. ನಾನು ಅವನನ್ನು--ಎಲ್ಲಿಂದ ಬಂದಿ ಎಂದು ಕೇಳಲಿಲ್ಲ; ಅವನು ತನ್ನ ಹೆಸರನ್ನು ನನಗೆ ತಿಳಿಸಲಿಲ್ಲ. |
7. | ಅವನು ನನಗೆಇಗೋ, ನೀನು ಗರ್ಭವತಿಯಾಗಿ ಒಬ್ಬ ಮಗನನ್ನು ಹೆರುವಿ, ಈಗ ನೀನು ದ್ರಾಕ್ಷಾರಸವನ್ನೂ ಮದ್ಯಪಾನ ವನ್ನೂ ಕುಡಿಯದೆ ಅಶುಚಿಯಾದ ಒಂದನ್ನಾದರೂ ತಿನ್ನದೆ ಇರು. ಯಾಕಂದರೆ ಆ ಹುಡುಗನು ಗರ್ಭದಿಂದ ತನ್ನ ಮರಣದ ಪರಿಯಂತರವೂ ದೇವರ ನಾಜೀರ ನಾಗಿರುವನು ಎಂದು ಹೇಳಿದನು ಅಂದಳು. |
8. | ಆಗ ಮಾನೋಹನು ಕರ್ತನಿಗೆ ಬೇಡಿಕೊಂಡು--ಓ ನನ್ನ ಕರ್ತನೇ, ನೀನು ಕಳುಹಿಸಿದ ದೇವರ ಮನು ಷ್ಯನು ಇನ್ನೊಂದು ಸಾರಿ ನಮ್ಮ ಬಳಿಗೆ ಬಂದು ಹುಟ್ಟುವ ಮಗುವಿಗೋಸ್ಕರ ನಾವು ಮಾಡಬೇಕಾದದ್ದನ್ನು ನಮಗೆ ಕಲಿಸಲಿ ಎಂದು ಹೇಳಿದನು. |
9. | ದೇವರು ಮಾನೋಹನ ಮೊರೆಯನ್ನು ಕೇಳಿದನು. ಆ ಸ್ತ್ರೀಯು ಹೊಲದಲ್ಲಿ ಕುಳಿತಿರುವಾಗ ದೇವರ ದೂತನು ತಿರಿಗಿ ಅವಳ ಬಳಿಗೆ ಬಂದನು. ಆದರೆ ಅವಳ ಗಂಡನಾದ ಮಾನೋಹನು ಅವಳ ಸಂಗಡ ಇರಲಿಲ್ಲ. |
10. | ಆದದರಿಂದ ಅವಳು ಬೇಗ ಓಡಿಹೋಗಿ ತನ್ನ ಗಂಡನಿಗೆ--ಇಗೋ, ಆ ಹೊತ್ತು ನನ್ನ ಬಳಿಗೆ ಬಂದವನು ನನಗೆ ಪ್ರತ್ಯಕ್ಷನಾ ದನು ಎಂದು ತಿಳಿಸಿದಳು. |
11. | ಆಗ ಮಾನೋಹನು ಎದ್ದು ತನ್ನ ಹೆಂಡತಿಯ ಹಿಂದೆ ಹೋಗಿ ಅವನ ಬಳಿಗೆ ಬಂದು ಅವನಿಗೆ--ಈ ಸ್ತ್ರೀಯ ಸಂಗಡ ಮಾತ ನಾಡಿದವನು ನೀನೋ ಅಂದನು. ಅವನು--ನಾನೇ ಅಂದನು. |
12. | ಮಾನೋಹನು--ನೀನು ಹೇಳಿದ ಮಾತು ಗಳು ನೇರವೇರುವಾಗ ಆ ಮಗುವಿಗೋಸ್ಕರ ಮಾಡುವ ರೀತಿ ಏನು ಮತ್ತು ನಡಿಸತಕ್ಕದ್ದೇನು ಅಂದನು. |
13. | ಕರ್ತನ ದೂತನು ಮಾನೋಹನಿಗೆ--ನಾನು ಈ ಸ್ತ್ರೀಗೆ ಹೇಳಿದ್ದೆಲ್ಲಾದರಲ್ಲಿ ಅವಳು ಎಚ್ಚರಿಕೆಯಾಗಿದ್ದು, |
14. | ದ್ರಾಕ್ಷೇ ಗಿಡದಲ್ಲಿ ಹುಟ್ಟುವ ಒಂದನ್ನೂ ತಿನ್ನದೆ ದ್ರಾಕ್ಷಾರಸವನ್ನೂ ಮದ್ಯಪಾನವನ್ನೂ ಕುಡಿಯದೆ ಅಶು ಚಿಯಾದ ಒಂದನ್ನೂ ತಿನ್ನದೆ ಇದ್ದು ನಾನು ಅವಳಿಗೆ ಆಜ್ಞಾಪಿಸಿದ್ದೆಲ್ಲಾ ಕೈಕೊಳ್ಳಲಿ ಅಂದನು. |
15. | ಮಾನೋ ಹನು ಕರ್ತನ ದೂತನಿಗೆ--ನಾವು ನಿನಗೋಸ್ಕರ ಮೇಕೆಯ ಮರಿಯನ್ನು ಸಿದ್ಧಮಾಡುವ ವರೆಗೆ ನಿನ್ನನ್ನು ನಿಲ್ಲಿಸಿಕೊಳ್ಳುತ್ತೇವೆ ಎಂದು ಬೇಡುತ್ತೇನೆ ಅಂದನು. |
16. | ಕರ್ತನ ದೂತನು ಮಾನೋಹನಿಗೆ--ನೀನು ನನ್ನನ್ನು ನಿಲ್ಲಿಸಿಕೊಂಡರೂ ನಾನು ನಿನ್ನ ರೊಟ್ಟಿಯನ್ನು ತಿನ್ನುವ ದಿಲ್ಲ; ನೀನು ದಹನಬಲಿಯನ್ನು ಅರ್ಪಿಸಿದರೆ ಅದನ್ನು ಕರ್ತನಿಗೆ ಅರ್ಪಿಸಬೇಕು ಅಂದನು. |
17. | ಅವನು ಕರ್ತನ ದೂತನೆಂದು ಮಾನೋಹನು ಅರಿಯದೆ ಇದ್ದನು. ಮಾನೋಹನು ಕರ್ತನ ದೂತನಿಗೆ--ನೀನು ಹೇಳಿದ ಮಾತುಗಳು ನೆರವೇರುವಾಗ ನಾವು ನಿನ್ನನ್ನು ಘನ ಪಡಿಸುವ ಹಾಗೆ ನಿನ್ನ ಹೆಸರೇನು ಅಂದನು. |
18. | ಆದರೆ ಕರ್ತನ ದೂತನು ಅವನಿಗೆ--ನನ್ನ ಹೆಸರು ಏನೆಂದು ನೀನು ಕೇಳುವದೇನು? ಆ ಹೆಸರು ರಹಸ್ಯವಾದದ್ದು ಅಂದನು. |
19. | ಹೀಗೆ ಮಾನೋಹನು ಮೇಕೆಯ ಮರಿಯನ್ನೂ ಅರ್ಪಣೆಯನ್ನೂ ತಂದು ಅವುಗಳನ್ನು ಬಂಡೆಯ ಮೇಲೆ ಕರ್ತನಿಗೆ ಅರ್ಪಿಸಿದನು. ಮಾನೋ ಹನೂ ಅವನ ಹೆಂಡತಿಯೂ ನೋಡುವಾಗ ಕರ್ತನ ದೂತನು ಆಶ್ಚರ್ಯವಾದದ್ದನ್ನು ಮಾಡಿದನು. |
20. | ಅಗ್ನಿ ಜ್ವಾಲೆಯು ಬಲಿಪೀಠದಿಂದ ಆಕಾಶಕ್ಕೆ ಸರಿಯಾಗಿ ಏಳು ವಾಗ ಏನಾಯಿತಂದರೆ, ಕರ್ತನ ದೂತನು ಬಲಿಪೀಠದ ಜ್ವಾಲೆಯಲ್ಲಿ ಮೇಲಕ್ಕೆ ಹೋದನು. ಅದನ್ನು ಮಾನೋ ಹನೂ ಅವನ ಹೆಂಡತಿಯೂ ನೋಡಿ ನೆಲದ ಮೇಲೆ ಬೋರಲು ಬಿದ್ದರು. |
21. | ಆದರೆ ಕರ್ತನ ದೂತನು ಮಾನೋಹನಿಗೂ ಅವನ ಹೆಂಡತಿಗೂ ತಿರಿಗಿ ಕಾಣಿಸ ಲಿಲ್ಲ. ಆಗ ಇವನು ಕರ್ತನ ದೂತನೆಂದು ಮಾನೋಹನು ತಿಳುಕೊಂಡನು. ಮಾನೋಹನು ತನ್ನ ಹೆಂಡತಿಗೆ--ನಾವು ದೇವರನ್ನು ಕಂಡದ್ದರಿಂದ ನಿಶ್ಚಯ ವಾಗಿ ಸಾಯುವೆವು ಅಂದನು. |
22. | ಅವನ ಹೆಂಡತಿ ಅವನಿಗೆ--ಕರ್ತನು ನಮ್ಮನ್ನು ಕೊಂದುಹಾಕುವದಕ್ಕೆ ಮನಸ್ಸಾಗಿದ್ದರೆ ಆತನು ನಮ್ಮ ಕೈಯಿಂದ ದಹನಬಲಿ ಯನ್ನೂ ಅರ್ಪಣೆಯನ್ನೂ ಅಂಗೀಕರಿಸುತ್ತಿರಲಿಲ್ಲ; ಇವುಗಳನ್ನೆಲ್ಲಾ ನಮಗೆ ತೋರಿಸುತ್ತಿರಲಿಲ್ಲ. ಈಗ ಹೇಳಿದವುಗಳನ್ನು ನಮಗೆ ತಿಳಿಯ ಮಾಡುತ್ತಿರಲಿಲ್ಲ ಅಂದಳು. |
23. | ಆ ಸ್ತ್ರೀಯು ಮಗನನ್ನು ಹೆತ್ತು ಅವನಿಗೆ ಸಂಸೋನನು ಎಂದು ಹೆಸರಿಟ್ಟಳು. |
24. | ಆ ಹುಡುಗನು ಬೆಳೆದನು; ಕರ್ತನು ಅವನನ್ನು ಆಶೀರ್ವದಿಸಿದನು. |
25. | ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು. |
← Judges (13/21) → |