← Judges (10/21) → |
1. | ಅಬೀಮೆಲೆಕನ ತರುವಾಯ ಇಸ್ಸಾಕಾರನ ಕುಲದ ದೋದೋವಿನ ಮಗನಾದ ಪೂವನ ಮಗನಾದ ತೋಲನು ಇಸ್ರಾಯೇಲ್ಯರನ್ನು ರಕ್ಷಿಸುವದಕ್ಕೆ ಎದ್ದನು. ಅವನು ಎಫ್ರಾಯಾಮ್ ಬೆಟ್ಟದ ಸೀಮೆಯ ಶಾವಿಾರದಲ್ಲಿ ವಾಸಮಾಡಿದನು. |
2. | ಇಸ್ರಾಯೇಲಿಗೆ ಇಪ್ಪತ್ತುಮೂರು ವರುಷ ನ್ಯಾಯ ತೀರಿಸಿದ ತರುವಾಯ ಅವನು ಸತ್ತು ಶಾವಿಾರಲ್ಲಿ ಹೂಣಲ್ಪಟ್ಟನು. |
3. | ಅವನ ತರುವಾಯ ಗಿಲ್ಯಾದ್ಯನಾದ ಯಾಯಾರನು ಎದ್ದು ಇಸ್ರಾಯೇಲ್ಯರಿಗೆ ಇಪ್ಪತ್ತೆರಡು ವರುಷ ನ್ಯಾಯತೀರಿಸಿದನು. |
4. | ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ. |
5. | ಯಾಯಾ ರನು ಸತ್ತು ಕಾಮೋನಿನಲ್ಲಿ ಹೂಣಲ್ಪಟ್ಟನು. |
6. | ಆದರೆ ಇಸ್ರಾಯೇಲ್ ಮಕ್ಕಳು ತಿರಿಗಿ ಕರ್ತನ ಮುಂದೆ ಕೆಟ್ಟತನಮಾಡಿ ಬಾಳನನ್ನೂ ಅಷ್ಟೋರೆತನ್ನೂ ಸಿರಿಯಾ ದೇಶದ ದೇವರುಗಳನ್ನೂ ಚೀದೋನಿನ ದೇವರುಗಳನ್ನೂ ಮೋವಾಬಿನ ದೇವರುಗಳನ್ನೂ ಅಮ್ಮೋನನ ಮಕ್ಕಳ ದೇವರುಗಳನ್ನೂ ಫಿಲಿಷ್ಟಿಯರ ದೇವರುಗಳನ್ನೂ ಸೇವಿಸುವವರಾಗಿ ಕರ್ತನನ್ನು ಸೇವಿ ಸದೆ ಆತನನ್ನು ಬಿಟ್ಟು ಹೋದರು. |
7. | ಆಗ ಕರ್ತನು ಇಸ್ರಾಯೇಲಿಗೆ ವಿರೋಧವಾಗಿ ಕೋಪಗೊಂಡು ಅವ ರನ್ನು ಫಿಲಿಷ್ಟಿಯರ ಕೈಗೂ ಅಮ್ಮೋನನ ಮಕ್ಕಳ ಕೈಗೂ ಮಾರಿಬಿಟ್ಟನು. |
8. | ಆ ವರುಷ ಮೊದಲುಗೊಂಡ ಅವರು ಹದಿನೆಂಟು ವರುಷ ಯೊರ್ದನಿಗೆ ಆಚೆ ಗಿಲ್ಯಾದಿನಲ್ಲಿ ಅಮೋರಿಯರ ದೇಶದಲ್ಲಿರುವ ಇಸ್ರಾಯೇಲ್ ಮಕ್ಕಳ ನ್ನೆಲ್ಲಾ ಬಾಧಿಸಿ ಕುಂದಿಸಿದರು. |
9. | ಇದಲ್ಲದೆ ಅಮ್ಮೋನನ ಮಕ್ಕಳು ಯೆಹೂದನಿಗೆ ಬೆನ್ಯಾವಿಾನರಿಗೆ ವಿರೋಧವಾ ಗಿಯೂ ಎಫ್ರಾಯಾಮ್ ಮನೆಗೆ ವಿರೋಧವಾಗಿಯೂ ಯುದ್ಧಮಾಡುವದಕ್ಕೆ ಯೊರ್ದನನ್ನು ದಾಟಿ ಬಂದರು. ಹೀಗೆ ಇಸ್ರಾಯೇಲಿಗೆ ಬಹುಸಂಕಟವಾಯಿತು. |
10. | ಆಗ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಕೂಗಿ--ನಮ್ಮ ದೇವರನ್ನು ಬಿಟ್ಟು ಬಾಳನನ್ನು ಸೇವಿಸಿದ್ದರಿಂದ ನಾವು ನಿನಗೆ ವಿರೋಧವಾಗಿ ಪಾಪ ಮಾಡಿದೆವು ಅಂದರು. |
11. | ಕರ್ತನು ಇಸ್ರಾಯೇಲ್ ಮಕ್ಕಳಿಗೆ--ನಾನು ನಿಮ್ಮನ್ನು ಐಗುಪ್ತ್ಯರ ಕೈಯೊಳಗಿಂದಲೂ ಅಮೋರಿಯರ ಕೈಯೊ ಳಗಿಂದಲೂ ಅಮ್ಮೋನನ ಮಕ್ಕಳ ಕೈಯೊಳಗಿಂದಲೂ ಫಿಲಿಷ್ಟಿಯರ ಕೈಯೊಳಗಿಂದಲೂ ತಪ್ಪಿಸಿಬಿಡಲಿಲ್ಲವೋ? |
12. | ಇದಲ್ಲದೆ ಚೀದೋನ್ಯರೂ ಅಮಾಲೇಕ್ಯರೂ ಮಾವೋನ್ಯರೂ ನಿಮ್ಮನ್ನು ಬಾಧೆಪಡಿಸುವಾಗ ನೀವು ನನಗೆ ಕೂಗಿದ್ದರಿಂದ ನಾನು ನಿಮ್ಮನ್ನು ಅವರ ಕೈಗೆ ತಪ್ಪಿಸಿ ರಕ್ಷಿಸಿದೆನು. |
13. | ಆದರೂ ನೀವು ನನ್ನನ್ನು ಬಿಟ್ಟು ಅನ್ಯದೇವರುಗಳನ್ನು ಸೇವಿಸಿದಿರಿ; ಆದಕಾರಣ ನಾನು ನಿಮ್ಮನ್ನು ಇನ್ನು ಮುಂದೆ ಬಿಡಿಸುವದಿಲ್ಲ. |
14. | ನೀವು ಹೋಗಿ ನಿಮಗೆ ನೀವೇ ಆರಿಸಿಕೊಂಡ ದೇವರುಗಳಿಗೆ ಕೂಗಿರಿ; ಅವರು ನಿಮ್ಮ ಸಂಕಟದ ಕಾಲದಲ್ಲಿ ನಿಮ್ಮನ್ನು ರಕ್ಷಿಸಲಿ ಅಂದನು. |
15. | ಇಸ್ರಾಯೇಲ್ ಮಕ್ಕಳು ಕರ್ತ ನಿಗೆ--ನಾವು ಪಾಪಮಾಡಿದೆವು; ನೀನು ನಿನ್ನ ಕಣ್ಣು ಗಳಿಗೆ ಒಳ್ಳೇದಾಗಿ ತೋರುವದೆಲ್ಲಾ ನಮಗೆ ಮಾಡು. ಆದರೆ ಈಹೊತ್ತು ನಮ್ಮನ್ನು ರಕ್ಷಿಸು ಎಂದು ಬೇಡಿ ಕೊಂಡರು. |
16. | ಅವರು ಅನ್ಯದೇವರುಗಳನ್ನು ತಮ್ಮ ಮಧ್ಯದಲ್ಲಿಂದ ತೊರೆದುಬಿಟ್ಟು ಕರ್ತನನ್ನು ಸೇವಿಸಿ ದರು. ಆಗ ಆತನ ಮನಸ್ಸು ಇಸ್ರಾಯೇಲಿನ ಕಷ್ಟ ಕ್ಕೋಸ್ಕರ ನೊಂದುಕೊಂಡಿತು. |
17. | ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು. |
18. | ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು. |
← Judges (10/21) → |