← Joshua (3/24) → |
1. | ಯೆಹೋಶುವನು ಬೆಳಿಗ್ಗೆ ಎದ್ದು ಅವನೂ ಇಸ್ರಾಯೇಲ್ ಮಕ್ಕಳೆಲ್ಲರೂ ಶಿಟ್ಟೀಮಿ ನಿಂದ ಪ್ರಯಾಣಮಾಡಿ ಯೊರ್ದನಿನ ಬಳಿಗೆ ಬಂದು ಅದನ್ನು ದಾಟುವದಕ್ಕಿಂತ ಮುಂಚೆ ಅಲ್ಲಿ ಇಳು ಕೊಂಡರು. |
2. | ಮೂರು ದಿವಸಗಳಾದ ಮೇಲೆ ಅಧಿಕಾರಿ ಗಳು ದಂಡಿನೊಳಗೆ ಹಾದು ಹೋಗಿ |
3. | ಜನರಿಗೆ ಆಜ್ಞಾಪಿಸಿ--ಯಾಜಕರಾದ ಲೇವಿಯರು ನಿಮ್ಮ ದೇವ ರಾದ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವದನ್ನು ನೋಡುವಾಗ ನೀವು ನಿಮ್ಮ ಸ್ಥಳದಿಂದ ಹೊರಟು ಅದರ ಹಿಂದೆ ಹೋಗಬೇಕು. |
4. | ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ದೂರ ಇರಬೇಕು. ನೀವು ಹೋಗುವ ಮಾರ್ಗವನ್ನು ತಿಳಿಯುವ ಹಾಗೆ ಅದರ ಹತ್ತಿರ ಬರಬೇಡಿರಿ. ನೀವು ಎಂದಾದರೂ ಆ ಮಾರ್ಗದಲ್ಲಿ ದಾಟಿ ಹೋಗಿರು ವದಿಲ್ಲ ಅಂದರು. |
5. | ಯೆಹೋಶುವನು ಜನರಿಗೆ--ನಿಮ್ಮನ್ನು ಶುದ್ಧಮಾಡಿಕೊಳ್ಳಿರಿ. ನಾಳೆ ಕರ್ತನು ನಿಮ್ಮ ಮಧ್ಯದಲ್ಲಿ ಅದ್ಭುತಗಳನ್ನು ಮಾಡುವನು ಅಂದನು. |
6. | ಆಗ ಯೆಹೋಶುವನು ಯಾಜಕರಿಗೆ--ನೀವು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹಾದುಹೋಗಿರಿ ಅಂದನು. ಹಾಗೆಯೇ ಅವರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಹೋದರು. |
7. | ಕರ್ತನು ಯೆಹೋಶುವನಿಗೆ--ನಾನು ಮೋಶೆಯ ಸಂಗಡ ಇದ್ದ ಪ್ರಕಾರ ನಿನ್ನ ಸಂಗಡ ಇರುವದನ್ನು ಇಸ್ರಾಯೇಲ್ಯರೆಲ್ಲರು ತಿಳಿಯುವ ಹಾಗೆ ಈ ದಿನ ನಿನ್ನನ್ನು ಅವರ ಮುಂದೆ ಘನಪಡಿಸಲು ಪ್ರಾರಂಭಿಸು ವೆನು. |
8. | ನೀನು ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರಿಗೆ--ಯೊರ್ದನಿನ ನೀರಿನ ಅಂಚಿಗೆ ಬಂದಾಗ ಅಲ್ಲೇ ನಿಲ್ಲಬೇಕೆಂದು ಆಜ್ಞಾಪಿಸು ಅಂದನು. |
9. | ಆಗ ಯೆಹೋಶುವನು ಇಸ್ರಾಯೇಲ್ ಮಕ್ಕಳಿಗೆ--ನೀವು ಇಲ್ಲಿಗೆ ಬಂದು ನಿಮ್ಮ ದೇವರಾದ ಕರ್ತನ ವಾಕ್ಯಗಳನ್ನು ಕೇಳಿರಿ ಅಂದನು. |
10. | ಯೆಹೋಶು ವನು--ಜೀವವುಳ್ಳ ದೇವರು ನಿಮ್ಮ ಮಧ್ಯದಲ್ಲಿರು ವದನ್ನೂ ಆತನು ಕಾನಾನ್ಯರು ಹಿತ್ತಿಯರು ಹಿವ್ವಿಯರು ಪೆರಿಜೀಯರು ಗಿರ್ಗಾಷಿಯರು ಅಮೋರಿಯರು ಯೊಬೂಸಿಯರು ಇವರನ್ನು ನಿಮ್ಮ ಮುಂದೆ ನಿಶ್ಚಯ ವಾಗಿ ಓಡಿಸಿ ಬಿಡುವದನ್ನೂ ನೀವು ತಿಳಿಯುವ ಹಾಗೆ |
11. | ಇಗೋ, ಸಮಸ್ತ ಭೂಮಿಗೆ ಕರ್ತನ ಒಡಂಬಡಿಕೆಯ ಮಂಜೂಷವು ನಿಮ್ಮ ಮುಂದೆ ಯೊರ್ದನನ್ನು ದಾಟಿಹೋಗುವದು. |
12. | ಆದದರಿಂದ ಈಗ ಇಸ್ರಾಯೇಲ್ ಗೋತ್ರಗಳಲ್ಲಿ ಹನ್ನೆರಡು ಮಂದಿ ಯನ್ನು ಒಂದೊಂದು ಗೋತ್ರಕ್ಕೆ ಒಬ್ಬೊಬ್ಬನಂತೆ ನೀವು ತಕ್ಕೊಳ್ಳಿರಿ. |
13. | ಆಗ ಆಗುವದೇನಂದರೆ, ಸಮಸ್ತ ಭೂಮಿಗೂ ಕರ್ತನಾಗಿರುವ ಕರ್ತನ ಆ ಮಂಜೂಷ ವನ್ನು ಹೊರುವ ಯಾಜಕರ ಅಂಗಾಲುಗಳು ಯೊರ್ದ ನಿನ ನೀರಲ್ಲಿ ಇಟ್ಟಾಗಲೇ ನದಿಯ ನೀರು ಭೇದಿಸಲ್ಪಟ್ಟು ಮೇಲಿನಿಂದ ಹರಿದು ಬರುವ ನೀರು ಹರಿಯದೆ ರಾಶಿಯಾಗಿ ನಿಲ್ಲುವದು ಎಂದು ಹೇಳಿದನು. |
14. | ಜನರು ಯೊರ್ದನನ್ನು ದಾಟಲು ತಮ್ಮ ಗುಡಾರ ಗಳಿಂದ ಹೊರಟರು. ಯಾಜಕರು ಒಡಂಬಡಿಕೆಯ ಮಂಜೂಷವನ್ನು ಹೊತ್ತುಕೊಂಡು ಜನರಿಗೆ ಮುಂದಾಗಿ ಯೊರ್ದನಿನ ಬಳಿಗೆ ಬಂದರು. |
15. | ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡವಿಾರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತು ಹೋಯಿತು. |
16. | ಮೇಲಿನಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಹೊಂದಿದ ಆದಾಮ್ ಪಟ್ಟಣದ ಹತ್ತಿರ ಬಂದು ರಾಶಿಯಾಗಿ ನಿಂತಿತು. ಕೆಳಗಣ ನೀರು ಉಪ್ಪು ಸಮುದ್ರವೆಂಬ ಸಮುದ್ರಕ್ಕೆ ಹರಿದು ಹೋಯಿತು. |
17. | ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು. |
← Joshua (3/24) → |