← John (4/21) → |
1. | ಯೇಸು ಯೋಹಾನನಿಗಿಂತ ಹೆಚ್ಚು ಶಿಷ್ಯರನ್ನು ಮಾಡಿಕೊಂಡು ಬಾಪ್ತಿಸ್ಮ ಮಾಡಿಸುತ್ತಿದ್ದದ್ದು ಫರಿಸಾಯರು ಕೇಳಿದ್ದಾರೆಂದು ಕರ್ತ ನಿಗೆ ಗೊತ್ತಾಯಿತು. |
2. | (ಆದಾಗ್ಯೂ ಬಾಪ್ತಿಸ್ಮ ಮಾಡಿಸು ತ್ತಿದ್ದಾತನು ಯೇಸು ತಾನೇ ಅಲ್ಲ, ಆದರೆ ಆತನ ಶಿಷ್ಯರು ಮಾಡಿಸುತ್ತಿದ್ದರು). |
3. | ಆಗ ಆತನು ಯೂದಾಯ ವನ್ನು ಬಿಟ್ಟು ಗಲಿಲಾಯಕ್ಕೆ ತಿರಿಗಿ ಹೊರಟು ಹೋದನು. |
4. | ಆತನು ಸಮಾರ್ಯದ ಮಾರ್ಗವಾಗಿ ಹೋಗಬೇಕಾದದ್ದು ಅವಶ್ಯವಾಗಿತ್ತು. |
5. | ಆಗ ಯಾಕೋ ಬನು ತನ್ನ ಮಗನಾದ ಯೋಸೇಫನಿಗೆ ಕೊಟ್ಟ ಭೂಮಿಯ ಸವಿಾಪದಲ್ಲಿರುವ ಸುಖರ್ ಎಂಬ ಸಮಾರ್ಯದ ಪಟ್ಟಣಕ್ಕೆ ಆತನು ಬಂದನು. |
6. | ಅಲ್ಲಿ ಯಾಕೋಬನ ಬಾವಿ ಇತ್ತು; ಯೇಸು ಪ್ರಯಾಣದಿಂದ ಆಯಾಸಗೊಂಡಿರಲಾಗಿ ಆ ಬಾವಿಯ ಬಳಿಯಲ್ಲಿ ಹಾಗೆಯೇ ಕೂತುಕೊಂಡನು. ಆಗ ಸುಮಾರು ಆರನೇ ತಾಸಾಗಿತ್ತು. (ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯಾ ಗಿತ್ತು). |
7. | ಆಗ ಸಮಾರ್ಯದ ಒಬ್ಬ ಸ್ತ್ರೀಯು ನೀರು ಸೇದುವದಕ್ಕಾಗಿ ಬಂದಳು; ಯೇಸು ಆಕೆಗೆ--ನನಗೆ ಕುಡಿಯುವದಕ್ಕೆ ಕೊಡು ಅಂದನು. |
8. | (ಯಾಕಂದರೆ ಆತನ ಶಿಷ್ಯರು ಆಹಾರವನ್ನು ಕೊಂಡುಕೊಳ್ಳುವದಕ್ಕಾಗಿ ಪಟ್ಟಣದೊಳಕ್ಕೆ ಹೋಗಿದ್ದರು). |
9. | ಅದಕ್ಕೆ ಆ ಸಮಾ ರ್ಯದ ಸ್ತ್ರೀಯು ಆತನಿಗೆ--ನೀನು ಯೆಹೂದ್ಯನಾಗಿದ್ದು ಕುಡಿಯುವದಕ್ಕೆ ಕೊಡು ಎಂದು ಸಮಾರ್ಯದ ಸ್ತ್ರೀಯಾದ ನನ್ನಿಂದ ಕೇಳುವದು ಹೇಗೆ? ಯಾಕಂದರೆ ಯೆಹೂದ್ಯರು ಸಮಾರ್ಯದವರೊಂದಿಗೆ ಹೊಕ್ಕು ಬಳಿಕೆ ಮಾಡುವದಿಲ್ಲವಲ್ಲಾ ಅಂದಳು. |
10. | ಯೇಸು ಪ್ರತ್ಯುತ್ತರವಾಗಿ ಆಕೆಗೆ--ದೇವರ ದಾನವೇನೆಂಬದೂ ಮತ್ತು--ನನಗೆ ಕುಡಿಯುವದಕ್ಕೆ ಕೊಡು ಎಂದು ನಿನ್ನನ್ನು ಕೇಳಿದಾತನು ಯಾರೆಂಬದೂ ನಿನಗೆ ತಿಳಿದಿದ್ದರೆ ನೀನು ಆತನನ್ನು ಕೇಳುತ್ತಿದ್ದಿ, ಆತನು ನಿನಗೆ ಜೀವಕರವಾದ ನೀರನ್ನು ಕೊಡುತ್ತಿದ್ದನು ಎಂದು ಹೇಳಿದನು. |
11. | ಆ ಸ್ತ್ರೀಯು ಆತನಿಗೆ--ಅಯ್ಯಾ, ಸೇದುವದಕ್ಕೆ ನಿನಗೆ ಏನೂ ಇಲ್ಲ ಮತ್ತು ಬಾವಿ ಅಳವಾಗಿದೆ; ಹೀಗಿರುವಲ್ಲಿ ಆ ಜೀವಕರವಾದ ನೀರು ನಿನಗೆ ಎಲ್ಲಿಂದ ಬಂತು? |
12. | ತಾನೂ ತನ್ನ ಮಕ್ಕಳೂ ತನ್ನ ದನಗಳೂ ಈ ಬಾವಿ ಯಿಂದ ಕುಡಿದು ನಮಗೆ ಅದನ್ನು ಕೊಟ್ಟ ನಮ್ಮ ತಂದೆಯಾದ ಯಾಕೋಬನಿಗಿಂತ ನೀನು ದೊಡ್ಡ ವನೋ? ಅಂದಳು. |
13. | ಯೇಸು ಪ್ರತ್ಯುತ್ತರವಾಗಿ ಆಕೆಗೆ--ಈ ನೀರನ್ನು ಕುಡಿಯುವ ಪ್ರತಿಯೊಬ್ಬನಿಗೆ ತಿರಿಗಿ ನೀರಡಿಕೆಯಾಗುವದು; |
14. | ಆದರೆ ನಾನು ಕೊಡುವ ನೀರನ್ನು ಕುಡಿಯುವವನಿಗೆ ಎಂದಿಗೂ ನೀರ ಡಿಕೆಯಾಗುವದಿಲ್ಲ; ಯಾಕಂದರೆ ನಾನು ಅವನಿಗೆ ಕೊಡುವ ನೀರು ಅವನಲ್ಲಿ ನಿತ್ಯಜೀವಕ್ಕೆ ಉಕ್ಕುವ ನೀರಿನ ಬಾವಿಯಾಗಿರುವದು ಅಂದನು. |
15. | ಆ ಸ್ತ್ರೀಯು ಆತನಿಗೆ--ಅಯ್ಯಾ, ನನಗೆ ನೀರಡಿಕೆಯಾಗದಂತೆಯೂ ನೀರು ಸೇದುವದಕ್ಕೆ ನಾನು ಇಲ್ಲಿಗೆ ಬಾರದಂತೆಯೂ ನನಗೆ ಈ ನೀರನ್ನು ಕೊಡು ಅಂದಳು. |
16. | ಯೇಸು ಆಕೆಗೆ--ಹೋಗಿ ನಿನ್ನ ಗಂಡನನ್ನು ಕರಕೊಂಡು ಇಲ್ಲಿಗೆ ಬಾ ಅಂದನು. |
17. | ಆಗ ಆ ಸ್ತ್ರೀಯು ಪ್ರತ್ಯುತ್ತರ ವಾಗಿ--ನನಗೆ ಗಂಡನಿಲ್ಲ ಅಂದಳು, ಯೇಸು ಆಕೆಗೆ--ನನಗೆ ಗಂಡನಿಲ್ಲ ಎಂದು ನೀನು ಹೇಳಿದ್ದು ಸರಿಯೇ; |
18. | ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು. |
19. | ಆಗ ಆ ಸ್ತ್ರೀಯು ಆತನಿಗೆ--ಅಯ್ಯಾ, ನೀನು ಒಬ್ಬ ಪ್ರವಾದಿಯೆಂದು ನಾನು ಗ್ರಹಿಸುತ್ತೇನೆ; |
20. | ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು. |
21. | ಯೇಸು ಆಕೆಗೆ--ಸ್ತ್ರೀಯೇ, ನನ್ನನ್ನು ನಂಬು; ಈ ಬೆಟ್ಟದಲ್ಲಿಯಾಗಲೀ ಯೆರೂಸಲೇಮಿನಲ್ಲಿಯಾಗಲೀ ನೀವು ತಂದೆಯನ್ನು ಆರಾಧಿಸದೆ ಇರುವ ಗಳಿಗೆ ಬರುತ್ತದೆ. |
22. | ನೀವು ಅರಿಯದೆ ಇರುವದನ್ನು ಆರಾಧಿ ಸುತ್ತೀರಿ; ನಾವು ಅರಿತಿರುವದನ್ನೇ ಆರಾಧಿಸುತ್ತೇವೆ; ಯಾಕಂದರೆ ರಕ್ಷಣೆಯು ಯೆಹೂದ್ಯರಿಂದಲೇ. |
23. | ನಿಜ ವಾದ ಆರಾಧಕರು ತಂದೆಯನ್ನು ಆತ್ಮದಿಂದಲೂ ಸತ್ಯ ದಿಂದಲೂ ಆರಾಧಿಸುವ ಗಳಿಗೆಯು ಬರುತ್ತದೆ, ಅದು ಈಗಲೇ ಬಂದಿದೆ; ಯಾಕಂದರೆ ತನ್ನನ್ನು ಆರಾಧಿಸು ವದಕ್ಕೆ ತಂದೆಯು ಅಂಥವರನ್ನು ಹುಡುಕುತ್ತಾನೆ. |
24. | ದೇವರು ಆತ್ಮನಾಗಿದ್ದಾನೆ; ಆತನನ್ನು ಆರಾಧಿಸುವ ವರು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು ಅಂದನು. |
25. | ಆ ಸ್ತ್ರೀಯು ಆತನಿಗೆ--ಕ್ರಿಸ್ತನೆಂದು ಕರೆಯಲ್ಪಟ್ಟ ಮೆಸ್ಸೀಯನು ಬರುತ್ತಾನೆಂದು ನಾನು ಬಲ್ಲೆನು; ಆತನು ಬಂದಾಗ ನಮಗೆ ಎಲ್ಲವುಗಳನ್ನು ತಿಳಿಯಪಡಿಸುವನು ಅಂದಳು. |
26. | ಯೇಸು ಆಕೆಗೆ--ನಿನ್ನೊಂದಿಗೆ ಮಾತನಾಡುವ ನಾನೇ ಆತನು ಅಂದನು. |
27. | ಅಷ್ಟರೊಳಗೆ ಆತನ ಶಿಷ್ಯರು ಬಂದು ಆತನು ಆ ಸ್ತ್ರೀಯೊಂದಿಗೆ ಮಾತನಾಡುತ್ತಿದ್ದನೆಂದು ಆಶ್ಚರ್ಯ ಪಟ್ಟರು; ಆದಾಗ್ಯೂ--ನಿನಗೆ ಏನು ಬೇಕು? ಇಲ್ಲವೆ ಆಕೆಯೊಂದಿಗೆ ಯಾಕೆ ಮಾತನಾಡುತ್ತೀ ಎಂದು ಒಬ್ಬ ನಾದರೂ ಕೇಳಲಿಲ್ಲ. |
28. | ಆಗ ಆ ಸ್ತ್ರೀಯು ತನ್ನ ನೀರಿನ ಕೊಡವನ್ನು ಬಿಟ್ಟು ಪಟ್ಟಣದೊಳಕ್ಕೆ ಹೊರಟುಹೋಗಿ ಜನರಿಗೆ-- |
29. | ಬನ್ನಿರಿ, ನಾನು ಮಾಡಿದವುಗಳನ್ನೆಲ್ಲಾ ನನಗೆ ತಿಳಿಸಿದ ಮನುಷ್ಯನನ್ನು ನೋಡಿರಿ; ಈತನು ಆ ಕ್ರಿಸ್ತನಲ್ಲವೇ ಅಂದಳು. |
30. | ಆಗ ಅವರು ಪಟ್ಟಣದಿಂದ ಆತನ ಬಳಿಗೆ ಹೊರಟು ಬಂದರು. |
31. | ಆ ಸಮಯದಲ್ಲಿ ಆತನ ಶಿಷ್ಯರು ಆತನಿಗೆ--ಬೋಧಕನೇ, ಊಟ ಮಾಡು ಎಂದು ಬೇಡಿ ಕೊಂಡರು. |
32. | ಆದರೆ ಆತನು ಅವರಿಗೆ--ನಿಮಗೆ ತಿಳಯದಿರುವ ಆಹಾರವು ನನಗೆ ಊಟಕ್ಕೆ ಇದೆ ಅಂದನು. |
33. | ಆದದರಿಂದ ಶಿಷ್ಯರು--ಊಟ ಮಾಡು ವದಕ್ಕೆ ಯಾರಾದರೂ ಆತನಿಗೆ ಏನಾದರೂ ತಂದು ಕೊಟ್ಟರೋ ಎಂದು ಒಬ್ಬರಿಗೊಬ್ಬರು ಮಾತನಾಡಿ ಕೊಂಡರು. |
34. | ಆದರೆ ಯೇಸು ಅವರಿಗೆ--ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸಿ ಆತನ ಕೆಲಸ ವನ್ನು ಪೂರೈಸುವದೇ ನನ್ನ ಆಹಾರ ಅಂದನು. |
35. | ನೀವು--ಸುಗ್ಗಿಯು ಬರುವದಕ್ಕೆ ಇನ್ನೂ ನಾಲ್ಕು ತಿಂಗಳುಗಳು ಇವೆಯೆಂದು ಹೇಳುತ್ತೀರಲ್ಲವೋ? ಮತ್ತು--ಇಗೋ, ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಹೊಲಗಳನ್ನು ನೋಡಿರಿ, ಯಾಕಂದರೆ ಅವು ಈಗಾ ಗಲೇ ಬೆಳ್ಳಗಾಗಿ ಕೊಯ್ಲಿಗೆ ಬಂದವೆ ಎಂದು ನಾನು ನಿಮಗೆ ಹೇಳುತ್ತೇನೆ. |
36. | ಕೊಯ್ಯುವವನು ಕೂಲಿಯನ್ನು ಹೊಂದಿ ನಿತ್ಯಜೀವಕ್ಕಾಗಿ ಫಲವನ್ನು ಕೂಡಿಸಿಕೊಳ್ಳು ತ್ತಾನೆ; ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಾಗಿ ಸಂತೋಷಿಸುವರು. |
37. | ಬಿತ್ತುವವನೊಬ್ಬನು, ಕೊಯ್ಯು ವವನು ಮತ್ತೊಬ್ಬನು ಎಂದು ಹೇಳುವ ಮಾತು ಇದ ರಲ್ಲಿ ಸತ್ಯವಾಗಿದೆ. |
38. | ನೀವು ಕಷ್ಟಪಡದಂಥ ಬೆಳೆಯನ್ನು ಕೊಯ್ಯುವದಕ್ಕೆ ನಾನು ನಿಮ್ಮನ್ನು ಕಳುಹಿಸಿದೆನು. ಬೇರೊಬ್ಬರು ಕಷ್ಟ ಪಟ್ಟರು ನೀವು ಅವರ ಕಷ್ಟದಲ್ಲಿ ಸೇರಿಕೊಂಡಿದ್ದೀರಿ ಅಂದನು. |
39. | ಆಗ--ನಾನು ಮಾಡಿ ದೆಲ್ಲವನ್ನು ನನಗೆ ತಿಳಿಸಿದನೆಂದು ಸಾಕ್ಷಿಕೊಟ್ಟ ಆ ಸ್ತ್ರೀಯ ಮಾತಿಗೋಸ್ಕರ ಆ ಪಟ್ಟಣದ ಅನೇಕ ಸಮಾರ್ಯದವರು ಆತನ ಮೇಲೆ ನಂಬಿಕೆ ಇಟ್ಟರು. |
40. | ಹೀಗೆ ಆ ಸಮಾರ್ಯ ದವರು ಆತನ ಬಳಿಗೆ ಬಂದಾಗ ಆತನು ತಮ್ಮೊಂದಿಗೆ ಇರಬೇಕೆಂದು ಆತನನ್ನು ಬೇಡಿಕೊಳ್ಳಲು ಆತನು ಎರಡು ದಿವಸ ಅಲ್ಲಿ ಇಳುಕೊಂಡನು. |
41. | ಇನ್ನೂ ಹೆಚ್ಚು ಜನರು ಆತನ ಸ್ವಂತ ಮಾತಿಗೋಸ್ಕರ ಆತನನ್ನು ನಂಬಿದರು. |
42. | ಆ ಸ್ತ್ರೀಗೆ-- ನಾವು ಈಗ ನಂಬುವದು ನಿನ್ನ ಮಾತಿನಿಂದಲ್ಲ; ಯಾಕಂದರೆ ನಾವೇ ಸ್ವತಃ ಈತನ ಮಾತನ್ನು ಕೇಳಿದ್ದೇವೆ ಮತ್ತು ಈತನು ನಿಜವಾಗಿಯೂ ಲೋಕರಕ್ಷಕನಾದ ಕ್ರಿಸ್ತನೆಂದು ಬಲ್ಲೆವು ಅಂದರು. |
43. | ಎರಡು ದಿವಸಗಳಾದ ಮೇಲೆ ಆತನು ಅಲ್ಲಿಂದ ಹೊರಟು ಗಲಿಲಾಯಕ್ಕೆ ಹೋದನು. |
44. | ಯಾಕಂದರೆ ಪ್ರವಾದಿಗೆ ತನ್ನ ಸ್ವದೇಶದಲ್ಲಿ ಸನ್ಮಾನವಿಲ್ಲವೆಂದು ಯೇಸು ತಾನೇ ಸಾಕ್ಷಿ ಹೇಳಿದನು. |
45. | ಗಲಿಲಾಯ ದವರು ಯೆರೂಸಲೇಮಿನ ಹಬ್ಬಕ್ಕೆ ಹೋದಾಗ ಆತನು ಅಲ್ಲಿ ಮಾಡಿದವುಗಳನ್ನೆಲ್ಲಾ ಅವರು ನೋಡಿ ದ್ದರಿಂದ ಆತನು ಗಲಿಲಾಯಕ್ಕೆ ಬಂದಾಗ ಆತನನ್ನು ಸ್ವೀಕರಿಸಿದರು. |
46. | ಹೀಗೆ ಯೇಸು ತಾನು ನೀರನ್ನು ದ್ರಾಕ್ಷಾರಸ ವನ್ನಾಗಿ ಮಾಡಿದ ಗಲಿಲಾಯದ ಕಾನಾನಿಗೆ ತಿರಿಗಿ ಬಂದನು. ಆಗ ಕಪೆರ್ನೌಮಿನಲ್ಲಿದ್ದ ಒಬ್ಬ ಪ್ರಧಾನನ ಮಗನು ಅಸ್ವಸ್ಥನಾಗಿದ್ದನು. |
47. | ಯೇಸು ಯೂದಾಯ ದಿಂದ ಗಲಿಲಾಯಕ್ಕೆ ಬಂದನೆಂದು ಅವನು ಕೇಳಿದಾಗ ಆತನ ಬಳಿಗೆ ಹೋಗಿ ತಾನು ಬಂದು ತನ್ನ ಮಗನನ್ನು ಸ್ವಸ್ಥಪಡಿಸಬೇಕೆಂದು ಆತನನ್ನು ಬೇಡಿಕೊಂಡನು; ಯಾಕಂದರೆ ಅವನು ಸಾಯುವ ಹಾಗಿದ್ದನು. |
48. | ಯೇಸು ಅವನಿಗೆ--ನೀವು ಸೂಚಕ ಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನೋಡದ ಹೊರತು ನಂಬು ವದೇ ಇಲ್ಲ ಅಂದನು. |
49. | ಆಗ ಆ ಪ್ರಧಾನನು ಆತನಿಗೆ--ಅಯ್ಯಾ, ನನ್ನ ಮಗನು ಸಾಯುವದಕ್ಕೆ ಮೊದಲು ಬರಬೇಕು ಅಂದನು. |
50. | ಯೇಸು ಅವನಿಗೆ--ನೀನು ಹೋಗು, ನಿನ್ನ ಮಗನು ಬದುಕಿರುತ್ತಾನೆ ಅಂದನು. ಮತ್ತು ಆ ಮನುಷ್ಯನು ಯೇಸು ಹೇಳಿದ ಮಾತನ್ನು ನಂಬಿ ಹೊರಟುಹೋದನು. |
51. | ಹೀಗೆ ಅವನು ಹೋಗುತ್ತಿರುವಾಗ ಅವನ ಸೇವಕರು ಅವ ನನ್ನು ಸಂಧಿಸಿ--ನಿನ್ನ ಮಗನು ಬದುಕಿದನು ಎಂದು ಅವನಿಗೆ ಹೇಳಿದರು. |
52. | ಆಗ ಅವನು--ಯಾವ ಗಳಿಗೆಯಲ್ಲಿ ಅವನಿಗೆ ಗುಣವಾಗತೊಡಗಿತು ಎಂದು ಅವರನ್ನು ವಿಚಾರಿಸಿದಾಗ ಅವರು ನಿನ್ನೆ ಏಳನೇ ತಾಸಿನಲ್ಲಿ ಜ್ವರವು ಅವನನ್ನು ಬಿಟ್ಟಿತು ಎಂದು ಅವನಿಗೆ ಹೇಳಿದರು. |
53. | ಹೀಗೆ--ನಿನ್ನ ಮಗನು ಬದುಕುತ್ತಾನೆ ಎಂದು ಯೇಸು ತನಗೆ ಹೇಳಿದ ಗಳಿಗೆಯಲ್ಲಿಯೇ ಅದು ಆಯಿತೆಂದು ತಂದೆಯು ತಿಳಿದುಕೊಂಡು ತಾನೂ ತನ್ನ ಮನೆಯವರೆಲ್ಲರೂ ನಂಬಿದರು. |
54. | ಯೇಸು ಯೂದಾಯದಿಂದ ಗಲಿಲಾಯಕ್ಕೆ ಬಂದಮೇಲೆ ತಿರಿಗಿ ಮಾಡಿದ ಎರಡನೆಯ ಅದ್ಭುತಕಾರ್ಯವು ಇದಾಗಿದೆ. |
← John (4/21) → |