← Job (8/42) → |
1. | ಆಗ ಶೂಹ್ಯನಾದ ಬಿಲ್ದದನು ಈ ಪ್ರಕಾರಉತ್ತರಿಸಿದನು-- |
2. | ಎಷ್ಟರ ವರೆಗೆ ನೀನು ಇವುಗಳನ್ನು ನುಡಿಯುವಿ? ಎಷ್ಟರ ವರೆಗೆ ನಿನ್ನ ಬಾಯಿಯ ಮಾತುಗಳು ಬಿರುಗಾಳಿಯಂತಿರುವವು? |
3. | ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ? |
4. | ನಿನ್ನ ಮಕ್ಕಳು ಆತನಿಗೆ ವಿರೋಧವಾಗಿ ಪಾಪಮಾಡಿದ್ದರೆ, ಅವರ ದ್ರೋಹದ ದೆಸೆಯಿಂದ ಅವರನ್ನು ತಳ್ಳಿಬಿಡುವನು. |
5. | ನೀನೇ ದೇವರನ್ನು ಜಾಗ್ರ ತೆಯಾಗಿ ಹುಡುಕಿ ಸರ್ವಶಕ್ತನಿಗೆ ಬಿನ್ನಹ ಮಾಡಿದರೆ |
6. | ನೀನು ಶುದ್ಧನೂ ಯಥಾರ್ಥನೂ ಆಗಿದ್ದರೆ ನಿಶ್ಚಯ ವಾಗಿ ಈಗಲೇ ಆತನು ನಿನಗೋಸ್ಕರ ಎಚ್ಚತ್ತು ನಿನ್ನ ನೀತಿಯ ನಿವಾಸವನ್ನು ಅಭಿವೃದ್ಧಿಗೊಳಿಸುವನು. |
7. | ನಿನ್ನ ಆರಂಭವು ಅಲ್ಪವಾಗಿದ್ದರೂ ನಿನ್ನ ಅಂತ್ಯವು ಬಹಳವಾಗಿ ವೃದ್ಧಿಹೊಂದುವದು. |
8. | ದಯಮಾಡಿ ಪೂರ್ವಿಕರನ್ನು ವಿಚಾರಿಸು; ಅವರ ಪಿತೃಗಳು ಕಂಡುಕೊಂಡದನ್ನು ಗಮನಿಸು. |
9. | ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯವದವರೂ ಆಗಿ ದ್ದೇವೆ; ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿ ನಂತಿವೆ. |
10. | ಅವರು ನಿನಗೆ ಬೋಧಿಸುವದಿಲ್ಲವೋ? ನಿನ್ನೊಂದಿಗೆ ಮಾತನಾಡುವದಿಲ್ಲವೋ ? ತಮ್ಮ ಮಾತು ಗಳನ್ನು ಹೃದಯದೊಳಗಿಂದ ಹೊರತರುವದಿಲ್ಲವೋ? |
11. | ಕೆಸರಿಲ್ಲದೆ ಆಪು ಬೆಳೆಯುವದೋ? ನೀರಿಲ್ಲದೆ ಜಂಬು ಬೆಳೆಯುವದೋ? |
12. | ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಬಾಡುವದು. |
13. | ದೇವರನ್ನು ಮರೆಯುವ ವರೆಲ್ಲರ ಹಾದಿಗಳು ಹಾಗೆಯೇ; ಕಪಟಿಯ ನಿರೀಕ್ಷೆಯು ನಾಶವಾಗುವದು. |
14. | ಅವನ ನಿರೀಕ್ಷೆಯು ಕತ್ತರಿಸಲ್ಪಡುತ್ತದೆ; ಅವನ ಭರವಸವು ಜೇಡರ ಹುಳದ ಮನೆಯೇ. |
15. | ಅವನು ತನ್ನ ಮನೆಗೆ ಆತುಕೊಂಡರೆ ಅದು ನಿಲ್ಲದು; ಅದನ್ನು ಬಿಗಿ ಹಿಡಿದರೆ ಅದು ತಡೆಯಲಾರದು. |
16. | ಸೂರ್ಯನ ಮುಂದೆ ಅವನು ಹಸುರಾಗಿದ್ದಾನೆ; ಅವನ ಬಳ್ಳಿಯು ಅವನ ತೋಟದಲ್ಲಿ ಹಬ್ಬುವದು. |
17. | ಅವನ ಬೇರುಗಳು ರಾಶಿಯ ಮೇಲೆ ಸುತ್ತಿ ಕಲ್ಲಿನ ಸ್ಥಳವನ್ನು ಕಾಣುತ್ತವೆ. |
18. | ಅವನನ್ನು ಅವನ ಸ್ಥಳದಿಂದ ಕಿತ್ತಿದರೆ ಅದು--ನಾನು ನಿನ್ನನ್ನು ನೋಡಲಿಲ್ಲವೆಂದು ಅವನನ್ನು ಬೊಂಕುವದು; |
19. | ಇಗೋ, ಇದು ಅವನ ಮಾರ್ಗದ ಆನಂದವು. ಆದರೆ ಭೂಮಿಯೊಳಗಿನಿಂದ ಬೇರೆಯವರು ಮೊಳೆಯುವರು. |
20. | ಇಗೋ, ದೇವರು ಪರಿಶುದ್ಧನನ್ನು ತಿರಸ್ಕರಿಸು ವದಿಲ್ಲ; ಕೆಡುಕರಿಗೆ ಆತನು ಸಹಾಯ ಮಾಡುವದಿಲ್ಲ. |
21. | ಇನ್ನು ಆತನು ನಿನ್ನ ಬಾಯನ್ನು ನಗೆಯಿಂದ, ನಿನ್ನ ತುಟಿಗಳನ್ನು ಜಯಧ್ವನಿಯಿಂದ ತುಂಬಿಸುವನು. |
22. | ನಿನ್ನನ್ನು ಹಗೆ ಮಾಡುವವರು ನಾಚಿಕೆಯನ್ನು ಧರಿಸಿಕೊಳ್ಳುವರು; ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವದು. |
← Job (8/42) → |