← Job (7/42) → |
1. | ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ? |
2. | ಸೇವಕನು ನೆರಳನ್ನು ಅಪೇಕ್ಷಿಸುವ ಪ್ರಕಾರವೂ ಕೂಲಿಯವನು ತನ್ನ ಕೂಲಿಯನ್ನು ಕೋರುವ ಪ್ರಕಾ ರವೂ |
3. | ನಾನು ಸಹ ವ್ಯರ್ಥವಾದ ತಿಂಗಳುಗಳನ್ನು ಬಾಧ್ಯವಾಗಿ ತಕ್ಕೊಳ್ಳಬೇಕಾಯಿತು; ಬೇಸರಿಕೆಯ ರಾತ್ರಿ ಗಳು ನನಗೆ ನೇಮಿಸಲ್ಪಟ್ಟವು. |
4. | ಮಲಗುವ ವೇಳೆಯಲ್ಲಿ ಯಾವಾಗ ಏಳುವೆನೆಂದೂ ರಾತ್ರಿ ಬೆಳೆಯುತ್ತಾ ಹೋಗು ತ್ತದೆಂದೂ ಅಂದೆನು. ಉದಯದ ವರೆಗೆ ಹೊರಳಾ ಡುವದು ನನಗೆ ಸಾಕಾಗುತ್ತದೆ |
5. | ನನ್ನ ಮಾಂಸವು ಹುಳಗಳನ್ನೂ ಮಣ್ಣಿನ ಹೆಂಟೆಯನ್ನೂ ಧರಿಸಿಕೊಂಡಿದೆ. ನನ್ನ ಚರ್ಮವು ಒಡೆದು ಅಸಹ್ಯವಾಗಿದೆ. |
6. | ನನ್ನ ದಿನಗಳು ಮಗ್ಗದ ಲಾಳಿಗಿಂತ ತ್ವರೆಯಾಗಿವೆ; ನಿರೀಕ್ಷೆ ಇಲ್ಲದೆ ಅವು ಮುಗಿಯುತ್ತವೆ. |
7. | ನನ್ನ ಜೀವವು ಗಾಳಿ ಯಂತಿದೆ ಎಂದು ಜ್ಞಾಪಕಮಾಡಿಕೋ, ನನ್ನ ಕಣ್ಣು ತಿರುಗಿ ಒಳ್ಳೆಯದನ್ನು ನೋಡದು. |
8. | ನನ್ನನ್ನು ನೋಡು ವವನ ಕಣ್ಣು ನನ್ನನ್ನು ಇನ್ನು ಮೇಲೆ ನೋಡದು; ನಿನ್ನ ಕಣ್ಣುಗಳು ನನ್ನ ಮೇಲಿವೆ ನಾನು ಮಾತ್ರ ಇರು ವದಿಲ್ಲ. |
9. | ಮೋಡವು ಕರಗಿಹೋಗುವ ಹಾಗೆಯೇ, ಪಾತಾಳಕ್ಕೆ ಇಳಿದವನು ಹಿಂತಿರುಗಿ ಬರಲಾರನು. |
10. | ಇನ್ನು ಅವನು ತನ್ನ ಮನೆಗೆ ತಿರುಗಿಕೊಳ್ಳುವದಿಲ್ಲ; ಅವನ ಸ್ಥಳವು ಇನ್ನು ಅವನ ಗುರುತನ್ನು ಅರಿಯದು. |
11. | ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು. |
12. | ನೀನು ನನಗೆ ಕಾವಲಿಡುವದಕ್ಕೆ ನಾನೇನು ಸಮುದ್ರವೋ? ಇಲ್ಲವೆ ತಿಮಿಂಗಲವೋ? |
13. | ನನ್ನ ಮಂಚವು ನನ್ನನ್ನು ಆದರಿಸಲಿ, ನನ್ನ ಹಾಸಿಗೆಯು ನನ್ನ ಚಿಂತೆಯನ್ನು ಶಮನಮಾಡಲಿ ಅನ್ನಲಾಗಿ |
14. | ಸ್ವಪ್ನ ಗಳಿಂದ ನನ್ನನ್ನು ಹೆದರಿಸುತ್ತೀ; ದರ್ಶನಗಳಿಂದ ನನ್ನನ್ನು ನಡುಗಿಸುತ್ತೀ. |
15. | ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ. |
16. | ನಾನು ಬೇಸರಗೊಂಡಿದ್ದೇನೆ; ನಿತ್ಯವಾಗಿ ನಾನು ಬದುಕಲೊಲ್ಲೆನು; ನನ್ನನ್ನು ಬಿಟ್ಟು ಬಿಡು; ಯಾಕಂದರೆ ನನ್ನ ದಿವಸಗಳು ವ್ಯರ್ಥವಾಗಿವೆ. |
17. | ನೀನು ಅವನನ್ನು ಹೆಚ್ಚಿಸುವ ಹಾಗೆಯೂ ಅವನ ಮೇಲೆ ನಿನ್ನ ಹೃದಯ ಇಡುವ ಹಾಗೆಯೂ |
18. | ಅವನನ್ನು ಪ್ರತಿ ಉದಯದಲ್ಲಿ ದರ್ಶಿಸುವ ಹಾಗೆಯೂ ಕ್ಷಣ ಕ್ಷಣಕ್ಕೆ ಅವನನ್ನು ಪರೀಕ್ಷಿಸುವ ಹಾಗೆಯೂ ಮನುಷ್ಯನು ಎಷ್ಟರವನು? |
19. | ಎಷ್ಟರ ವರೆಗೆ ನನ್ನ ಕಡೆಯಿಂದ ದೃಷ್ಟಿ ತೊಲಗಿಸುವದಿಲ್ಲ? ನಾನು ಉಗುಳು ನುಂಗುವ ದಕ್ಕೂ ನನ್ನನ್ನು ಬಿಡುವದಿಲ್ಲವೋ? |
20. | ನಾನು ಪಾಪ ಮಾಡಿದ್ದೇನೆ; ಓ ಮನುಷ್ಯರನ್ನು ಕಾಯುವವನೇ, ನಾನು ನಿನಗೆ ಏನು ಮಾಡಲಿ? ನನಗೆ ನಾನೇ ಭಾರವಾಗುವ ಹಾಗೆ ನನ್ನನ್ನು ನಿನಗೆ ಗುರಿಯಾಗಿ ಇಟ್ಟು ಕೊಳ್ಳುವದು ಯಾಕೆ? |
21. | ಯಾಕೆ ನನ್ನ ದ್ರೋಹವನ್ನು ಮನ್ನಿಸುವದಿಲ್ಲ? ನನ್ನ ಅಕ್ರಮವನ್ನು ಪರಿಹರಿಸುವ ದಿಲ್ಲವೇಕೆ? ಈಗ ಧೂಳಿನಲ್ಲಿ ಮಲಗಿಕೊಳ್ಳುವೆನು; ನೀನು ಮುಂಜಾವಿನಲ್ಲಿ ನನ್ನನ್ನು ಹುಡುಕಿದರೆ ನಾನು ಇರುವದಿಲ್ಲ. |
← Job (7/42) → |