← Job (6/42) → |
1. | ಯೋಬನು ಪ್ರತ್ಯುತ್ತರವಾಗಿ ಹೀಗೆ ಹೇಳಿದನು. |
2. | ನನ್ನ ವ್ಯಥೆಯನ್ನೆಲ್ಲಾ ತೂಗಿದರೆ, ನನ್ನ ಶ್ರಮೆಯನ್ನು ತ್ರಾಸಿನಲ್ಲಿಟ್ಟರೆ ಲೇಸು. |
3. | ಈಗಲೇ ಸಮುದ್ರದ ಮರಳಿಗಿಂತ ಅದು ಭಾರವಾಗಿದೆ; ಆದ ದರಿಂದ ನನ್ನ ಮಾತುಗಳು ನುಂಗಲ್ಪಟ್ಟವು. |
4. | ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು. |
5. | ಹುಲ್ಲು ಇದ್ದಲ್ಲಿ ಕಾಡು ಕತ್ತೆಯು ಕೂಗುವದೋ? ಇಲ್ಲವೆ ಮೇವು ಇದ್ದಲ್ಲಿ ಎತ್ತು ಅರಚುತ್ತದೋ? |
6. | ರುಚಿ ಇಲ್ಲದ್ದನ್ನು ಉಪ್ಪಿಲ್ಲದೆ ತಿನ್ನುವದಕ್ಕಾಗುತ್ತದೋ? ಇಲ್ಲವೆ ಕೋಳಿ ಮೊಟ್ಟೆಯ ಲೋಳೆಯಲ್ಲಿ ರುಚಿ ಯುಂಟೋ? |
7. | ನನ್ನ ಪ್ರಾಣವು ಮುಟ್ಟಲೊಲ್ಲದೆ ಇರು ವಂಥವುಗಳೇ ನನ್ನ ದುಃಖದ ಆಹಾರದ ಹಾಗೆ ಇವೆ. |
8. | ನನ್ನ ವಿಜ್ಞಾಪನೆಯನ್ನು ದೇವರು ಲಾಲಿಸಿ, ನಾನು ನಿರೀಕ್ಷಿಸಿದ್ದನ್ನು ಆತನು ಕೊಟ್ಟರೆ ಲೇಸು. |
9. | ನಾನು ನಾಶವಾಗುವದು ದೇವರಿಗೆ ಮೆಚ್ಚಿಕೆಯಾಗುವದಾದರೆ ತನ್ನ ಕೈಚಾಚಿ ನನ್ನನ್ನು ಸಾಯಿಸಿದರೆ ಒಳ್ಳೆದು. |
10. | ಹೀಗಾ ದರೆ ನನಗೆ ಇನ್ನೂ ಆದರಣೆ ಇರುವುದು; ಹೌದು, ನಾನು ದುಃಖದಲ್ಲಿ ನನ್ನನ್ನು ಕಠಿಣಪಡಿಸಿಕೊಳ್ಳುವೆನು; ಯಾಕಂದರೆ ಪರಿಶುದ್ಧನ ನುಡಿಗಳನ್ನು ನಾನು ಮರೆ ಮಾಡಲಿಲ್ಲ. |
11. | ನಾನು ನಿರೀಕ್ಷಿಸುವ ಹಾಗೆ ನನ್ನ ಶಕ್ತಿ ಏನು? ನಾನು ನನ್ನ ಆಯುಷ್ಯವನ್ನು ಹೆಚ್ಚಿಸುವ ಹಾಗೆ ನನ್ನ ಅಂತ್ಯವೇನು? |
12. | ನನ್ನ ಶಕ್ತಿ ಕಲ್ಲುಗಳ ಶಕ್ತಿಯೋ? ನನ್ನ ಶರೀರವು ಹಿತ್ತಾಳೆಯದೋ? |
13. | ನನ್ನೊಳಗಿನ ಸಹಾಯವು ಇಲ್ಲದೆ ಹೋಯಿತಲ್ಲವೋ? ಜ್ಞಾನವು ಪೂರ್ಣವಾಗಿ ನನ್ನಿಂದ ನೂಕಲ್ಪಡಲಿಲ್ಲವೋ? |
14. | ಸಂಕಟಪಡುವವನಿಗೆ ಸ್ನೇಹಿತನಿಂದ ದಯೆ ದೊರೆ ಯತಕ್ಕದ್ದು; ಆದರೆ ಅವನು ಸರ್ವಶಕ್ತನ ಭಯವನ್ನು ಬಿಡುತ್ತಾನೆ. |
15. | ನನ್ನ ಸಹೋದರರು ಹಳ್ಳದ ಹಾಗೆ ಮೋಸ ಮಾಡಿದ್ದಾರೆ; ಹಳ್ಳಗಳ ಪ್ರವಾಹದಂತೆ ಹಾದು ಹೋಗುತ್ತಾರೆ. |
16. | ಅವು ಮಂಜುಗಡ್ಡೆಯಿಂದ ಕಪ್ಪಾ ಗಿವೆ, ಅವುಗಳಲ್ಲಿ ಹಿಮವು ಅಡಗಿಕೊಳ್ಳುತ್ತದೆ. |
17. | ಉಷ್ಣ ಸಮಯದಲ್ಲಿ ಅವು ಇಲ್ಲವಾಗುತ್ತವೆ; ಶೆಕೆಯಾದಾಗ ತಮ್ಮ ಸ್ಥಳ ಬಿಟ್ಟು ಆರಿ ಹೋಗುತ್ತವೆ. |
18. | ಹಾದಿಗಳು ಅವುಗಳ ಮಾರ್ಗವಾಗಿ ಓರೆಯಾಗಿ ಅವು ಹೋಗು ತ್ತವೆ; ಇಲ್ಲವಾಗಿ ನಾಶವಾಗುತ್ತವೆ. |
19. | ತೇಮದ ಗುಂಪಿ ನವರು ದೃಷ್ಟಿಸುತ್ತಾರೆ; ಶೆಬದ ಸಮೂಹದವರು ಅವು ಗಳನ್ನು ಎದುರುನೋಡುತ್ತಾರೆ. |
20. | ಅವರು ನಿರೀಕ್ಷಿ ಸಿದ್ದರಿಂದ ನಾಚುತ್ತಾರೆ; ಅವುಗಳ ಬಳಿಗೆ ಬಂದು ಲಜ್ಜೆಗೊಂಡರು |
21. | ಈಗ ನೀವು ಏನೂ ಅಲ್ಲದವರಾ ಗಿದ್ದೀರಿ; ನನ್ನ ವಿಪತ್ತನ್ನು ನೋಡಿ ಭಯಪಡುತ್ತೀರಿ. |
22. | ನನ್ನ ಬಳಿಗೆ ತನ್ನಿರಿ ಎಂದೂ ನಿಮ್ಮ ಸಂಪತ್ತಿನಿಂದ ಲಂಚಕೊಡಿರಿ ಎಂದೂ |
23. | ಶತ್ರುವಿನ ಕೈಯಿಂದ ನನ್ನನ್ನು ತಪ್ಪಿಸಿರಿ ಎಂದೂ ಬಲಾತ್ಕಾರಿಗಳ ಕೈಗಳಿಂದ ನನ್ನನ್ನು ವಿಮೋಚಿಸಿರೆಂದೂ ನಾನು ಹೇಳಿದೆನೋ? |
24. | ನನಗೆ ಬೋಧಿಸಿರಿ, ನಾನು ಮೌನವಾಗಿರುವೆನು; ನಾನು ಮಾಡಿದ ತಪ್ಪನ್ನು ನನಗೆ ತಿಳಿಸಿರಿ. |
25. | ಸರಿಯಾದ ಮಾತುಗಳು ಎಷ್ಟು ಬಲವಾಗಿವೆ! ಆದರೆ ನಿಮ್ಮ ತರ್ಕವು ಯಾವದನ್ನು ಗದರಿಸುತ್ತದೆ? |
26. | ಗಾಳಿಯ ಹಾಗಿರುವ ಮಾತುಗಳನ್ನೂ ದಿಕ್ಕಿಲ್ಲದವನ ನುಡಿಗಳನ್ನೂ ಗದರಿಸು ವದಕ್ಕೆ ನೀವು ಯೋಚಿಸುತ್ತೀರೋ? |
27. | ಹೌದು, ದಿಕ್ಕಿಲ್ಲದವನ ಮೇಲೆ ಬಲೆ ಹಾಕುತ್ತೀರಿ; ನಿಮ್ಮ ಸ್ನೇಹಿತನಿ ಗೋಸ್ಕರ ಕುಣಿಯನ್ನು ಅಗೆಯುತ್ತೀರಿ. |
28. | ಆದದರಿಂದ ಈಗ ಸಂತೃಪ್ತರಾಗಿ ನನ್ನನ್ನು ದೃಷ್ಟಿಸಿರಿ; ನಾನು ಸುಳ್ಳು ಹೇಳಿದರೆ ನಿಮ್ಮ ಕಣ್ಣಿಗೆ ಕಾಣುವದು. |
29. | ತಿರುಗಿಕೊಳ್ಳಿರಿ, ಅನ್ಯಾಯವಾಗದಿರಲಿ; ಹೌದು, ತಿರುಗಿಕೊಳ್ಳಿರಿ; ಇನ್ನು ನನ್ನ ನೀತಿಯು ಇವುಗಳಲ್ಲಿ ಇರುವದು. |
30. | ನನ್ನ ನಾಲಿಗೆಯಲ್ಲಿ ಅನ್ಯಾಯ ಉಂಟೋ? ನನ್ನ ಅಂಗಳವು ಕೇಡನ್ನು ರುಚಿ ನೋಡುವದಿಲ್ಲವೋ? |
← Job (6/42) → |