← Job (41/42) → |
1. | ಮೊಸಳೆಯನ್ನು ಗಾಳದಿಂದ ಎಳೆಯುವಿಯೋ? ಇಲ್ಲವೆ ಹಗ್ಗದಿಂದ ಅದರ ನಾಲಿಗೆಯನ್ನು ಅದುಮುತ್ತೀಯೋ? |
2. | ಅದರ ಮೂಗಿ ನಲ್ಲಿ ಗಾಳಿ ಇಡುವಿಯೋ? ಅದರ ದವಡೆಯನ್ನು ಮುಳ್ಳಿನಿಂದ ಚುಚ್ಚುವಿಯೋ? |
3. | ಅದು ನಿನಗೆ ಬಹಳ ಬಿನ್ನಹಗಳನ್ನು ಮಾಡುವದೋ? ನಿನ್ನ ಸಂಗಡ ಮೃದು ವಾದ ಮಾತು ಆಡುವದೋ? |
4. | ನಿನ್ನ ಸಂಗಡ ಒಡಂಬಡಿಕೆ ಮಾಡುವದೋ? ಅದನ್ನು ಎಂದೆಂದಿಗೂ ದಾಸನಾಗಿ ತಕ್ಕೊಳ್ಳುವಿಯೋ? |
5. | ಪಕ್ಷಿಯ ಹಾಗೆ ಅದರ ಸಂಗಡ ಆಡುವಿಯೋ ? ನಿನ್ನ ಹುಡುಗಿಯರಿಗೋಸ್ಕರ ಅದನ್ನು ಕಟ್ಟಿಹಾಕುವಿಯೋ? |
6. | ಜತೆಯವರು ಅದನ್ನು ಔತಣ ಮಾಡುವರೋ? ಅವರು ಅದನ್ನು ವರ್ತಕ ರಲ್ಲಿ ಪಾಲಿಡುವರೋ? |
7. | ಅದರ ತೊಗಲನ್ನು ಮುಳ್ಳು ಗಳಿಂದ, ಅದರ ತಲೆಯನ್ನು ವಿಾನುಗಾರರ ಬಲೆ ಯಿಂದ ತುಂಬುವಿಯೋ? |
8. | ಅದರ ಮೇಲೆ ನಿನ್ನ ಕೈಹಾಕು; ಯುದ್ಧವನ್ನು ನೆನಸಿಕೋ, ಹೆಚ್ಚಿನದೇನೂ ಮಾಡಬೇಡ. |
9. | ಇಗೋ, ಅದರ ವಿಷಯವಾದ ನಿರೀ ಕ್ಷೆಯು ವ್ಯರ್ಥವಾದದ್ದು. ಅದನ್ನು ನೋಡುತ್ತಲೇ ಕೆಡವಲ್ಪಡುತ್ತಾನಲ್ಲಾ. |
10. | ಅದನ್ನು ಕದಲಿಸುವ ಹಾಗೆ ಕಠಿಣನು ಇಲ್ಲ. ಹಾಗಾದರೆ ನನ್ನ ಮುಂದೆ ನಿಂತು ಕೊಳ್ಳುವ ಹಾಗೆ ಯಾರು ಶಕ್ತರು? |
11. | ನಾನು ತಿರುಗಿ ಕೊಡುವ ಹಾಗೆ ಮೊದಲು ನನಗೆ ಕೊಟ್ಟವನಾರು? ಆಕಾಶದ ಕೆಳಗೆ ಇರುವಂಥದೆಲ್ಲಾ ನನ್ನದೇ. |
12. | ನಾನು ಅದರ ಭಾಗಗಳನ್ನೂ ತ್ರಾಣವನ್ನೂ ಸನ್ನಾಹದ ಸೊಬಗನ್ನೂ ಮುಚ್ಚುವದಿಲ್ಲ. |
13. | ಅದರ ಮೇಲಿನ ವಸ್ತ್ರವನ್ನು ತೆರೆಯುವವನಾರು? ಅದರ ಎರಡರಷ್ಟು ಕಡಿವಾಣದೊಂದಿಗೆ ಅದರ ಬಳಿಗೆ ಬರು ವದಕ್ಕೆ ಯಾರು ಶಕ್ತರು? |
14. | ಅದರ ಮುಖದ ಕದ ಗಳನ್ನು ತೆಗೆಯುವವನಾರು? ಅದರ ಹಲ್ಲುಗಳು ಸುತ್ತಲೂ ಭಯಂಕರವಾಗಿವೆ. |
15. | ಬಲವಾದ ಅದರ ಗುರಾಣಿಗಳು ಅದರ ಗರ್ವವಾಗಿವೆ; ಬತ್ತಿದ ಮುದ್ರೆಯ ಹಾಗೆ ಬಿಗಿದವೆ. |
16. | ಅವು ಒಂದಕ್ಕೊಂದು ಹೊಂದಿ ಕೊಂಡಿವೆ; ಗಾಳಿಯಾದರೂ ಅವುಗಳ ಮಧ್ಯದಲ್ಲಿ ಸೇರುವದಿಲ್ಲ. |
17. | ಒಂದಕ್ಕೊಂದು ಅಂಟುತ್ತವೆ; ಹಿಡು ಕೊಂಡು ಪ್ರತ್ಯೇಕವಾಗುವದಿಲ್ಲ; |
18. | ಅದರ ಸೀನು ವಿಕೆಯಿಂದ ಬೆಳಕು ಹುಟ್ಟುವದು; ಅದರ ಕಣ್ಣುಗಳು ಉದಯದ ರೆಪ್ಪೆಗಳ ಹಾಗೆ ಇವೆ. |
19. | ಅದರ ಬಾಯಿಂದ ಉರಿಯುವ ದೀಪಗಳು ಹೊರಡುತ್ತವೆ; ಬೆಂಕಿಯ ಕಿಡಿಗಳು ಹಾರುತ್ತವೆ. |
20. | ಕುದಿಯುವ ಗಡಿಗೆಯೊಳ ಗಿಂದಲೂ ಕೊಪ್ಪರಿಗೆಯೊಳಗಿಂದಲೂ ಆದ ಹಾಗೆ ಅದರ ಮೂಗಿನೊಳಗಿಂದ ಹೊಗೆ ಹಾಯುವದು. |
21. | ಅದರ ಶ್ವಾಸವು ಕೆಂಡಗಳನ್ನು ಹೊತ್ತಿಸುವದು; ಜ್ವಾಲೆಯು ಅದರ ಬಾಯಿಯೊಳಗಿಂದ ಹೊರಡು ವದು. |
22. | ಅದರ ಕುತ್ತಿಗೆಯಲ್ಲಿ ಬಲವು ವಾಸಿಸುವದು; ಅದರ ಮುಂದೆ ದುಃಖವು ಸಂತೋಷಕ್ಕೆ ಮಾರ್ಪ ಡುವದು. |
23. | ಅದರ ಮಾಂಸದ ಖಂಡಗಳು ಒಟ್ಟಾಗಿ ಕೂಡಿಕೊಂಡಿವೆ; ಅವು ಸ್ಥಿರವಾಗಿದ್ದು ಕದಲಲಾರವು. |
24. | ಅದರ ಹೃದಯವು ಕಲ್ಲಿನ ಹಾಗೆಯೂ ಹೌದು, ಬೀಸುವ ಕಲ್ಲಿನ ಅಡಿಯ ಹಾಗೆಯೂ ಕಠಿಣವಾಗಿದೆ. |
25. | ಅದು ಏಳುವಾಗ ಹೆದರುತ್ತಾರೆ; ಮುರಿಯುವ ಕಾರಣದಿಂದ ಅವರು ತಮ್ಮನ್ನು ಶುದ್ಧಿಮಾಡಿಕೊಳ್ಳು ತ್ತಾರೆ. |
26. | ಅದರ ಬಳಿಯಲ್ಲಿ ಇಟ್ಟಿರುವ ಅದರ ಖಡ್ಗವು ಹಿಡಿಯಲಾರದು; ಈಟಿಯೂ ಬಾಣವೂ ಕವಚವೂ ನಿಲ್ಲವು, |
27. | ಕಬ್ಬಿಣವು ಹುಲ್ಲೆಂದೂ ಹಿತ್ತಾಳೆಯು ಕೊಳೆತ ಕಟ್ಟಿಗೆ ಎಂದೂ ಅದು ಎಣಿಸುವದು. |
28. | ಬಿಲ್ಲು ಅದನ್ನು ಓಡಿಸಲಾರದು, ಕವಣೆಯ ಕಲ್ಲುಗಳು ಹುಲ್ಲಿನ ಹಾಗೆ ಆಗುತ್ತವೆ. |
29. | ಬಾಣಗಳು ಹುಲ್ಲಿನ ಹಾಗೆ ಎಣಿಸಲ್ಪಟ್ಟಿವೆ; ಭರ್ಚಿ ಕದಲಿದರೆ ಅದು ನಗುವದು. |
30. | ಅದರ ಅಡಿ ಯಲ್ಲಿ ಹದವಾದ ಹರಳುಗಳು ಅವೆ; ಕೆಸರಿನ ಮೇಲೆ ಚೂಪಾದ ಮತ್ತು ಹದವಾದ ಕೋಲನ್ನು ಹರಡಿಸು ತ್ತದೆ. |
31. | ಆಳವಾದ ನೀರನ್ನು ಗಡಿಗೆಯ ಹಾಗೆ ಕುದಿಯ ಮಾಡುತ್ತದೆ, ಸಮುದ್ರವನ್ನು ತೈಲದ ಪಾತ್ರೆಯ ಹಾಗೆ ಮಾಡುತ್ತದೆ. |
32. | ತನ್ನ ಹಿಂದೆ ಹಾದಿ ಬೆಳಗುವಂತೆ ಅದು ಮಾಡುತ್ತದೆ. ಅಗಾಧವು ನರೆ ಕೂದಲಿನ ಹಾಗೆ ಇರುವದೆಂದು ಒಬ್ಬನು ಯೋಚಿಸುತ್ತಾನೆ. |
33. | ಭೂಮಿ ಯ ಮೇಲೆ ಅದಕ್ಕೆ ಸಮಾನವಾದದ್ದು ಇಲ್ಲ; ಅದು ಭಯವಿಲ್ಲದೆ ಇರುವದಕ್ಕಾಗಿ ಮಾಡಿದ್ದು. |
34. | ಉನ್ನತ ವಾದದ್ದನ್ನೆಲ್ಲಾ ಅದು ನೋಡುವದು; ಗರ್ವದ ಮಕ್ಕಳೆಲ್ಲರ ಮೇಲೆ ಅದು ಅರಸನಾಗಿದೆ ಅಂದನು. |
← Job (41/42) → |