← Job (40/42) → |
1. | ಕರ್ತನು ಯೋಬನಿಗೆ ಉತ್ತರ ಕೊಟ್ಟು-- |
2. | ಸರ್ವಶಕ್ತನ ಸಂಗಡ ವಾದಿಸುವವನು ಆತನಿಗೆ ಶಿಕ್ಷಣ ಕೊಡುವನೋ? ದೇವರನ್ನು ಗದರಿಸು ವವನು ಅದಕ್ಕೆ ಉತ್ತರಕೊಡಲಿ ಎಂದು ಹೇಳಿದನು. |
3. | ಆಗ ಯೋಬನು ಕರ್ತನಿಗೆ ಉತ್ತರಕೊಟ್ಟು-- |
4. | ಇಗೋ, ನೀಚನಾಗಿದ್ದೇನೆ; ನಿನಗೆ ಏನು ಪ್ರತ್ಯುತ್ತರ ಕೊಡಲಿ? ನನ್ನ ಕೈಯಿಂದ ಬಾಯಿ ಮುಚ್ಚಿಕೊಳ್ಳುತ್ತೇನೆ. |
5. | ಒಂದು ಸಾರಿ ಮಾತಾಡಿದೆನು, ಆದರೆ ಉತ್ತರ ಕೊಡೆನು; ಹೌದು, ಎರಡು ಸಾರಿ. ಆದರೆ ಹೆಚ್ಚು ಮಾತಾಡೆನು ಅಂದೆನು. |
6. | ಆಗ ಕರ್ತನು ಬಿರುಗಾಳಿಯೊಳಗಿಂದ ಯೋಬನಿಗೆ ಉತ್ತರ ಕೊಟ್ಟು-- |
7. | ಈಗ ಪುರುಷನ ಹಾಗೆ ನಿನ್ನ ನಡುವನ್ನು ಕಟ್ಟಿಕೋ; ನಿನ್ನನ್ನು ಕೇಳುವೆನು,ನನಗೆ ತಿಳಿಸು. |
8. | ನೀನು ನನ್ನ ನ್ಯಾಯತೀರ್ವಿಕೆಯನ್ನು ತೆಗೆದುಹಾಕುವಿಯೋ? ನೀನು ನೀತಿವಂತ ನಾಗುವ ಹಾಗೆ ನನ್ನನ್ನು ಖಂಡಿಸುವಿಯೋ? |
9. | ಇಲ್ಲವೆ ದೇವರ ಹಾಗೆ ತೋಳುಳ್ಳವನಾಗಿದ್ದೀಯೋ? ಇಲ್ಲವೆ ಆತನ ಹಾಗೆ ಗುಡುಗಿನಿಂದ ಆರ್ಭಟ ಮಾಡು ವಿಯೋ? |
10. | ಗಾಂಭೀರ್ಯದಿಂದಲೂ ಘನತೆಯಿಂದ ಲೂ ನಿನ್ನನ್ನು ಅಲಂಕರಿಸಿಕೋ; ಮಹಿಮೆಯನ್ನೂ ಪ್ರಭೆಯನ್ನೂ ಧರಿಸಿಕೋ. |
11. | ನಿನ್ನ ಕೋಪದ ಉರಿ ಯನ್ನು ದೂರಹಾಕು. ಗರ್ವಿಷ್ಟರನ್ನೆಲ್ಲಾ ನೋಡಿತಗ್ಗಿಸು. |
12. | ಗರ್ವಿಷ್ಟರನ್ನೆಲ್ಲಾ ನೋಡಿ ತಗ್ಗಿಸಿಬಿಡು; ದುಷ್ಟರನ್ನು ಅವರ ಸ್ಥಳದಲ್ಲಿ ತುಳಿದುಬಿಡು. |
13. | ಅವ ರನ್ನು ಒಟ್ಟಾಗಿ ಧೂಳಿಯಲ್ಲಿ ಅಡಗಿಸು; ಅವರ ಮುಖಗಳನ್ನು ಗುಪ್ತದಲ್ಲಿ ಕಟ್ಟಿಹಾಕು. |
14. | ಆಗ ನಾನೂ ನಿನ್ನ ಬಲಗೈ ನಿನ್ನನ್ನು ರಕ್ಷಿಸಿತೆಂದು ನಿನಗೆ ಅರಿಕೆ ಮಾಡುವೆನು. |
15. | ನಾನು ನಿನ್ನ ಕೂಡ ನಿರ್ಮಿಸಿದ ನೀರಾನೆಯನ್ನು ನೋಡು; ಅದು ಎತ್ತಿನ ಹಾಗೆ ಹುಲ್ಲನ್ನು ಮೇಯುತ್ತದೆ. |
16. | ಇಗೋ, ಅದರ ಸೊಂಟದಲ್ಲಿರುವ ಅದರ ಶಕ್ತಿ ಯನ್ನೂ ಅದರ ಹೊಟ್ಟೆಯ ನರಗಳಲ್ಲಿರುವ ಅದರ ತ್ರಾಣವನ್ನೂ ನೋಡು. |
17. | ತನ್ನ ಬಾಲವನ್ನು ದೇವ ದಾರಿನ ಹಾಗೆ ಬೊಗ್ಗಿಸುತ್ತದೆ; ಅದರ ಸೊಂಟದ ನರಗಳು ಸುತ್ತಿ ಹೆಣೆದು ಕೊಂಡಿವೆ. |
18. | ಅದರ ಎಲುಬುಗಳು ಹಿತ್ತಾಳೆಯ ಸಲಿಕೆಗಳಂತೆ ಬಲವಾಗಿವೆ; ಅಸ್ತಿವಾರಗಳು ಕಬ್ಬಿಣದ ಕಂಬಿಗಳ ಹಾಗೆ ಅವೆ. |
19. | ಅದೇ ದೇವರ ಮಾರ್ಗಗಳಲ್ಲಿ ಪ್ರಾಮುಖ್ಯವಾ ದ್ದದು; ಅದನ್ನು ನಿರ್ಮಿಸಿದವನು ಅದರ ಖಡ್ಗವು ಅವನನ್ನು ಸಂಧಿಸುವಂತೆ ಮಾಡಬಲ್ಲನು. |
20. | ನಿಶ್ಚಯ ವಾಗಿ ಪರ್ವತಗಳು ಅದಕ್ಕೆ ಮೇವು ಕೊಡುತ್ತವೆ; ಅಡವಿಯ ಎಲ್ಲಾ ಮೃಗಗಳು ಅಲ್ಲಿ ಆಡುತ್ತವೆ. |
21. | ನೆರಳಾದ ಗಿಡಗಳ ಕೆಳಗೆ ಆಪಿನ ಮರೆಯಲ್ಲಿಯೂ ಕೆಸರಿನಲ್ಲಿಯೂ ಮಲಗುತ್ತದೆ. |
22. | ನೆರಳಾದ ಗಿಡಗಳು ತಮ್ಮ ನೆರಳಾಗಿ ಅದನ್ನು ಮುಚ್ಚಿಕೊಳ್ಳುತ್ತವೆ; ನದಿಯ ನೀರವಂಜಿ ಮರಗಳು ಅದನ್ನು ಸುತ್ತಿಕೊಳ್ಳುತ್ತವೆ. |
23. | ಇಗೋ, ನದಿಯಲ್ಲಿ ಅವನು ಕುಡಿಯುತ್ತಾನೆ. ಅವಸರ ಮಾಡನು. ಯೊರ್ದನ್ ತನ್ನ ಬಾಯಿಯಲ್ಲಿ ಎಳೆಯುವಂತೆ ಅದು ಭರವಸೆ ಇಟ್ಟಿದೆ. |
24. | ಅದು ಅದನ್ನು ತನ್ನ ಕಣ್ಣುಗಳಿಂದ ತೆಗೆದುಬಿಡುತ್ತದೆ; ಅದರ ಮೂಗು ಉರ್ಲುಗಳಿಂದ ತಿವಿಯುತ್ತದೆ. |
← Job (40/42) → |