← Job (38/42) → |
1. | ಆಗ ಕರ್ತನು ಯೋಬನಿಗೆ ಬಿರುಗಾಳಿ ಯೊಳಗಿಂದ ಉತ್ತರ ಕೊಟ್ಟು-- |
2. | ತಿಳು ವಳಿಕೆ ಇಲ್ಲದ ಮಾತುಗಳಿಂದ ಆಲೋಚನೆಯನ್ನು ಕತ್ತಲಾಗಿ ಮಾಡುವ ಇವನಾರು? |
3. | ಪುರುಷನ ಹಾಗೆ ನಡುವನ್ನು ಕಟ್ಟಿಕೋ; ನಾನು ನಿನ್ನನ್ನು ಕೇಳುವೆನು; ನೀನು ನನಗೆ ಉತ್ತರ ಕೊಡು. |
4. | ನಾನು ಭೂಮಿಗೆ ಅಸ್ತಿವಾರ ಹಾಕಿದಾಗ ನೀನು ಎಲ್ಲಿ ಇದ್ದಿ? ನಿನಗೆ ಗ್ರಹಿಕೆ ಇದ್ದರೆ ತಿಳಿಯಪಡಿಸು. |
5. | ನಿನಗೆ ತಿಳಿದಿದ್ದರೆ ಅದರ ಅಳತೆಗಳನ್ನು ಹಾಕಿದ ವನಾರು? ಇಲ್ಲವೆ ಅದರ ಮೇಲೆ ಗೆರೆಯನ್ನೆಳೆದವರು ಯಾರು? |
6. | ಯಾವದರ ಮೇಲೆ ಅದರ ಅಸ್ತಿವಾರ ಸ್ಥಿರವಾಗಿದೆ? ಇಲ್ಲವೆ ಅದರ ಮೂಲೆಗಲ್ಲನ್ನು ಇಟ್ಟವರು ಯಾರು? |
7. | ಆಗ ಉದಯದ ನಕ್ಷತ್ರಗಳು ಕೂಡ ಹರ್ಷಧ್ವನಿ ಮಾಡುವಾಗ ದೇವರ ಪುತ್ರರೆಲ್ಲಾ ಉಲ್ಲಾ ಸದಿಂದ ಆರ್ಭಟಿಸಿದರು. |
8. | ಸಮುದ್ರವು ಗರ್ಭದೊಳಗಿಂದ ಹೊರಬಂದಂತೆ, ಅದು ಬೇಧಿಸಿಕೊಂಡು ಬಂದಾಗ ಸಮುದ್ರವನ್ನು ಬಾಗಲುಗಳಿಂದ ಮುಚ್ಚಿದವನಾರು? |
9. | ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ |
10. | ಅದಕ್ಕೆ ನನ್ನ ನೇಮವನ್ನು ನಿರ್ಣಯಿಸಿದೆನು; ಅದಕ್ಕೆ ಅಗುಳಿಗಳನ್ನೂ ಬಾಗಲು ಗಳನ್ನೂ ಇಟ್ಟೆನು. |
11. | ಇಲ್ಲಿಯ ವರೆಗೆ ಬಂದು ಮುಂದುವರಿಯ ಕೂಡದು; ಇಲ್ಲಿ ನಿನ್ನ ತೆರೆಗಳ ಅಹಂಕಾರ ನಿಲ್ಲಲಿ ಅಂದೆನು. |
12. | ನಿನ್ನ ದಿವಸಗಳಾರಭ್ಯ ಬೆಳಿಗ್ಗೆಗೆ ಅಪ್ಪಣೆ ಕೊಟ್ಟಿಯೋ? |
13. | ಅದು ಭೂಮಿಯ ಅಂಚುಗಳನ್ನು ಹಿಡಿಯುವ ಹಾಗೆಯೂ ದುಷ್ಟರು ಅದರೊಳಗಿಂದ ಝಾಡಿಸಲ್ಪಡುವ ಹಾಗೆಯೂ ಉದಯಕ್ಕೆ ಅದರ ಸ್ಥಳವನ್ನು ತಿಳಿಯಪಡಿಸಿದಿಯೋ? |
14. | ಮುದ್ರೆಯಿಂದ ಮಣ್ಣು ಆಗುವ ಹಾಗೆ ಅದು ಮಾರ್ಪಡುತ್ತದೆ; ವಸ್ತ್ರದ ಹಾಗೆ ಅದು ನಿಂತಿರುತ್ತದೆ. |
15. | ದುಷ್ಟರಿಂದ ಅವರ ಬೆಳಕು ಹಿಂತೆಗೆಯಲ್ಪಡುತ್ತದೆ. ಎತ್ತಿದ ತೋಳು ಮುರಿದು ಹೋಗುವದು. |
16. | ನೀನು ಸಮುದ್ರದ ಬುಗ್ಗೆಗಳಲ್ಲಿ ಪ್ರವೇಶಿಸಿ ಇಲ್ಲವೆ ಅಗಾಧವನ್ನು ಹುಡುಕುವದರಲ್ಲಿ ನೀನು ತಿರುಗಾಡಿ ದಿಯೋ? |
17. | ನಿನಗೆ ಮರಣದ ಬಾಗಲುಗಳು ತೆರೆಯ ಲ್ಪಟ್ಟವೋ? ಇಲ್ಲವೆ ಮರಣದ ನೆರಳಿನ ಬಾಗಲುಗಳನ್ನು ನೀನು ನೋಡಿದಿಯೋ? |
18. | ಭೂಮಿಯ ವಿಸ್ತಾರ ಗಳವರೆಗೆ ನೀನು ಗ್ರಹಿಸಿದಿಯೋ?ಇದನ್ನೆಲ್ಲಾ ತಿಳು ಕೊಂಡರೆ ತಿಳಿಯಪಡಿಸು. |
19. | ಬೆಳಕಿನ ನಿವಾಸಕ್ಕೆ ದಾರಿ ಯಾವದು? ಕತ್ತಲೆ ಯಾದರೋ ಅದರ ಸ್ಥಳವೆಲ್ಲಿದೆ? |
20. | ಅದರ ಗಡಿಯ ವರೆಗೆ ಅದನ್ನು ತೆಗೆದುಕೊಳ್ಳುವಿಯೋ? ಅದರ ಮನೆಗೆ ಹೋಗುವ ಹಾದಿಗಳನ್ನು ಗ್ರಹಿಸಿದಿಯೋ? |
21. | ಆಗ ಹುಟ್ಟಿದ್ದರಿಂದ ಅದು ನಿನಗೆ ತಿಳಿಯುವದೋ? ನಿನ್ನ ದಿವಸಗಳ ಲೆಕ್ಕವು ಬಹಳವಾಗಿವೆಯಲ್ಲಾ. |
22. | ನೀನು ಹಿಮದ ಉಗ್ರಾಣಗಳಲ್ಲಿ ಪ್ರವೇಶಿಸಿ ದಿಯೋ? ಇಲ್ಲವೆ ಆನೇಕಲ್ಲಿನ ಉಗ್ರಾಣಗಳನ್ನು ನೋಡಿದಿಯೋ? |
23. | ಅವುಗಳನ್ನು ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ ಸಮರ ಮತ್ತು ಯುದ್ಧಗಳ ದಿವಸಕ್ಕಾಗಿಯೂ ಇಟ್ಟುಕೊಂಡಿದ್ದೇನೆ. |
24. | ಬೆಳಕು ಭಾಗವಾ ಗುವಂಥ, ಮೂಡಣ ಗಾಳಿ ಭೂಮಿಯ ಮೇಲೆ ಚದುರುವಂಥ, ಮಾರ್ಗವು ಯಾವದು? |
25. | ತುಂಬಿ ಹರಿಯುವ ನೀರುಗಳನ್ನು ವಿಭಾಗ ಮಾಡಿದವರು ಯಾರು? ಜಲಕ್ಕೆ ಧಾರೆಗಳನ್ನೂ ಗುಡುಗುಗಳ ಮಿಂಚಿ ಗೆ ಮಾರ್ಗವನ್ನೂ ನೇಮಿಸಿದವನಾರು? |
26. | ಅದು ಮನುಷ್ಯನಿಲ್ಲದ ಭೂಮಿಯ ಮೇಲೆಯೂ ಜನರಿಲ್ಲದ ಅರಣ್ಯದಲ್ಲಿಯೂ ಸುರಿಯುವದು; |
27. | ಹಾಳು ಬೈಲು ಗಳಿಗೆ ತೃಪ್ತಿಯನ್ನು ಉಂಟು ಮಾಡುವದು; ಪಲ್ಯಗಳ ಮೊಳಿಕೆಯನ್ನು ಮೊಳಿಸುವದು. |
28. | ಮಳೆಗೆ ತಂದೆ ಇದ್ದಾನೋ? ಇಲ್ಲವೆ ಮಂಜಿನ ಹನಿಗಳನ್ನು ಹುಟ್ಟಿಸು ವವನಾರು? |
29. | ಯಾವನ ಹೊಟ್ಟೆಯೊಳಗಿಂದ ನೀರು ಗಡ್ಡೆ ಹೊರಡುತ್ತದೆ? ಆಕಾಶದ ಹಿಮವನ್ನು ಹುಟ್ಟಿಸಿ ದವನಾರು? |
30. | ಕಲ್ಲಿನ ಹಾಗೆ ನೀರುಗಳು ಅಡಗುತ್ತವೆ; ಅಗಾಧದ ಮೇಲ್ಭಾಗವು ಹೆಪ್ಪುಗಟ್ಟುವದು. |
31. | ನೀನು ವೃಷಭ ರಾಶಿಯ ಸಿಹಿ ಪರಿಣಾಮಗ ಳನ್ನು ಬಂಧಿಸುವಿಯೋ? ಇಲ್ಲವೆ ಮೃಗಶಿರದ ಸಂಕೋ ಲೆಗಳನ್ನು ಬಿಚ್ಚಬಲ್ಲಿಯೋ? |
32. | ನೀನು ರಾಶಿಗಳನ್ನು ಅವುಗಳ ಕಾಲದಲ್ಲಿ ಹೊರಗೆ ತರುತ್ತೀಯೋ? ಇಲ್ಲವೆ ಸಪ್ತತಾರೆಗಳನ್ನು ಅವುಗಳ ಪುತ್ರರ ಸಹಿತ ವಾಗಿ ನೀನು ನಡಿಸುತ್ತೀಯೋ? |
33. | ಆಕಾಶದ ಕಟ್ಟಳೆ ಗಳನ್ನು ನೀನು ತಿಳುಕೊಳ್ಳುತ್ತೀಯೋ? ಇಲ್ಲವೆ ಅದರ ಅಧಿಕಾರವನ್ನು ಭೂಮಿಯಲ್ಲಿ ನಿರ್ಣಯಿ ಸುತ್ತೀಯೋ? |
34. | ನೀರಿನ ಸಮೃದ್ಧಿಯು ನಿನ್ನನ್ನು ಮುಚ್ಚುವ ಹಾಗೆ ನಿನ್ನ ಶಬ್ದವನ್ನು ಮೋಡಗಳ ಕಡೆಗೆ ಎತ್ತುತ್ತೀಯೋ? |
35. | ಮಿಂಚುಗಳು ಹೋಗಿ ಇಗೋ, ಇದ್ದೇವೆಂದು ನಿನಗೆ ಹೇಳುವ ಹಾಗೆ ನೀನು ಅವುಗಳನ್ನು ಕಳುಹಿಸುತ್ತೀ ಯೋ? |
36. | ಯಾವನು ಅಂತರ್ಯದಲ್ಲಿ ಜ್ಞಾನ ಇಡು ತ್ತಾನೆ; ಇಲ್ಲವೆ ಯಾವನು ಹೃದಯಕ್ಕೆ ಗ್ರಹಿಕೆಯನ್ನು ಕೊಟ್ಟಿದ್ದಾನೆ? |
37. | ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ; |
38. | ದೂಳಿಯು ಗಟ್ಟಿಯಾಗುತ್ತಾ ಬರುವಾಗ ಮತ್ತು ಗಡ್ಡೆಗಳು ಒಟ್ಟಾಗಿ ಅಂಟುವಾಗ ಆಕಾಶದ ಬುದ್ಧಲಿಗಳನ್ನು ಹೊಯ್ಯುವವನಾರು? |
39. | ಸಿಂಹಕ್ಕೋಸ್ಕರ ನೀನು ಬೇಟೆಯಾಡುವಿಯೋ? |
40. | ಇಲ್ಲವೆ ಅವು ಗುಹೆಗಳಲ್ಲಿ ಕೂತುಕೊಳ್ಳುವಾಗ, ಗವಿಯಲ್ಲಿ ಹೊಂಚಿ ಮಲಗಿರುವಾಗ, ಪ್ರಾಯದ ಸಿಂಹಗಳ ಆಶೆಯನ್ನು ಪೂರೈಸುವಿಯೋ? |
41. | ಅದರ ಮರಿಗಳು ತಿನ್ನುವದಕ್ಕೆ ಇಲ್ಲದೆ ಅಲೆದು, ದೇವರಿಗೆ ಮೊರೆಯಿಡುವಾಗ ಕಾಗೆಗೆ ಅದರ ಆಹಾರವನ್ನು ಸಿದ್ಧಮಾಡುವವನಾರು? |
← Job (38/42) → |