← Job (37/42) → |
1. | ಇದಕ್ಕೋಸ್ಕರ ನನ್ನ ಹೃದಯವು ನಡುಗಿ ತನ್ನ ಸ್ಥಳದಿಂದ ಕದಲುತ್ತದೆ. |
2. | ಆತನ ಬಾಯಿಂದ ಹೊರಡುವ ಧ್ವನಿಯ ಶಬ್ದದ ಸ್ವರವನ್ನು ಲಕ್ಷ್ಯಕೊಟ್ಟು ಕೇಳಿರಿ. |
3. | ಎಲ್ಲಾ ಆಕಾಶದ ಕೆಳಗೆ ಆತನು ಅದನ್ನು ನಡಿಸುತ್ತಾನೆ. ತನ್ನ ಮಿಂಚನ್ನು ಭೂಮಿಯ ಅಂಚುಗಳ ವರೆಗೆ ನಡಿಸುತ್ತಾನೆ. |
4. | ಅದರ ತರುವಾಯ ಶಬ್ದವು ಗರ್ಜಿಸುತ್ತದೆ; ತನ್ನ ಮಹತ್ತಿನ ಶಬ್ದದಿಂದ ಗುಡುಗುತ್ತಾನೆ. ಆತನ ಶಬ್ದ ಕೇಳಲ್ಪಡುವಾಗ ಅವು ಗಳನ್ನು ಹಿಂದೆಗೆಯುವದಿಲ್ಲ. |
5. | ದೇವರು ಆಶ್ಚರ್ಯವಾಗಿ ತನ್ನ ಶಬ್ದದಿಂದ ಗುಡುಗುತ್ತಾನೆ; ನಾವು ಗ್ರಹಿಸದ ಮಹತ್ತುಗಳನ್ನು ಆತನು ಮಾಡುತ್ತಾನೆ. |
6. | ಆತನು ಹಿಮಕ್ಕೂ ಮಳೆಗರಿಯುವಿಕೆಗೂ ಮಳೆಯ ಬಲವಾದ ಹೊಯ್ಯುವಿಕೆಗೂ ಭೂಮಿಯ ಮೇಲೆ ಬೀಳು ಅನ್ನಲಾಗಿ |
7. | ಆತನ ಕೃತ್ಯವನ್ನು ಜನರೆಲ್ಲರು ತಿಳುಕೊಳ್ಳುವ ಹಾಗೆ ಎಲ್ಲಾ ಮನುಷ್ಯರ ಕೈಯನ್ನು ಮುದ್ರಿಸುತ್ತಾನೆ |
8. | ಆಗ ಮೃಗಗಳು ಗವಿಗಳಲ್ಲಿ ಸೇರಿ ತಮ್ಮ ಸ್ಥಳದಲ್ಲಿ ಉಳಿಯುತ್ತವೆ. |
9. | ದಕ್ಷಿಣದಿಂದ ಬಿರು ಗಾಳಿಯೂ ಉತ್ತರದಿಂದ ಚಳಿಯೂ ಬರುತ್ತದೆ. |
10. | ದೇವರ ಶ್ವಾಸದಿಂದ ನೀರು ಗಡ್ಡೆ ಆಗುವದು; ವಿಸ್ತಾರವಾದ ನೀರು ಮುದುರಿಕೊಳ್ಳುವದು. |
11. | ನೀರು ಹೊಯ್ಯುವಿಕೆಯಿಂದ ಮೋಡವನ್ನು ಭಾರಮಾಡುತ್ತಾನೆ; ಆತನು ತನ್ನ ಬೆಳಕಿನ ಮೇಘವನ್ನು ಚದರಿಸುತ್ತಾನೆ. |
12. | ಆತನು ಆಜ್ಞಾಪಿಸುವ ಪ್ರಕಾರ ಭೂಲೋಕದ ಮೇಲೆ ಆತನು ಅವುಗಳಿಗೆ ನೇಮಿಸಿದ ಎಲ್ಲಾ ಕೆಲಸ ಮಾಡುವದಕ್ಕೆ ಅದು ಸುತ್ತಲೂ ತಿರು ಗುತ್ತದೆ. |
13. | ಶಿಕ್ಷೆಗಾಗಲಿ ಅವನ ಭೂಮಿಗಾಗಲಿ ಕರು ಣೆಗಾಗಲಿ ಆತನು ಅದನ್ನು ಬರಮಾಡುತ್ತಾನೆ. |
14. | ಓ ಯೋಬನೇ, ಇದಕ್ಕೆ ಕಿವಿಗೊಡು, ಮೌನ ವಾಗಿ ನಿಂತು ದೇವರ ಅದ್ಭುತಗಳನ್ನು ಗ್ರಹಿಸಿಕೋ. |
15. | ದೇವರು ಅವುಗಳಿಗೆ ಅಪ್ಪಣೆ ಕೊಡುವದನ್ನೂ ಆತನ ಮೇಘದ ಬೆಳಕು ಹೊಳೆಯುವದನ್ನೂ ನೀನು ತಿಳು ಕೊಳ್ಳುತ್ತೀಯೋ? |
16. | ಮೋಡಗಳ ತೂಗಾಟವನ್ನೂ ತಿಳುವಳಿಕೆಯಲ್ಲಿ ಸಂಪೂರ್ಣನ ಅದ್ಭುತಗಳನ್ನೂ ತಿಳು ಕೊಳ್ಳುತ್ತೀಯೋ? |
17. | ದಕ್ಷಿಣ ಗಾಳಿಯಿಂದ ಭೂಮಿಯು ಕಾಯುವಾಗ ನಿನ್ನ ವಸ್ತ್ರಗಳು ಹೇಗೆ ಬಿಸಿಯಾಗುತ್ತವೆ? |
18. | ಎರಕ ಹೊಯ್ದ ಕನ್ನಡಿಯ ಹಾಗೆ ಬಲವಾಗಿರುವ ಆಕಾಶವನ್ನು ಆತನ ಸಂಗಡ ಮಂಡಲವಾಗಿ ನೀನು ವಿಸ್ತರಿಸಿದ್ದೀಯೋ? |
19. | ಆತನಿಗೆ ಏನು ಹೇಳಬೇಕೆಂದು ನಮಗೆ ತಿಳಿಸು. ಕತ್ತಲೆಗೋಸ್ಕರ ನಾವು ಸಿದ್ಧವಾಗಿ ರುವದಿಲ್ಲ. |
20. | ನಾನು ಮಾತಾಡುತ್ತೇನೆಂದು ಆತನಿಗೆ ತಿಳಿಸಲ್ಪಡಬೇಕೋ? ಮನುಷ್ಯನು ಮಾತಾಡಿದರೆ ನಿಜ ವಾಗಿ ನುಂಗಲ್ಪಡುವನು. |
21. | ಆದರೆ ಈಗ ಅವರು ಮೋಡಗಳಲ್ಲಿ ಹೊಳೆಯುವ ಬೆಳಕನ್ನು ನೋಡುವದಿಲ್ಲ; ಗಾಳಿಯು ಹಾದು ಅವು ಗಳನ್ನು ನಿರ್ಮಲ ಮಾಡುವದು. |
22. | ಉತ್ತರದಿಂದ ಉತ್ತಮ ಹವಾಮಾನ ಬರುತ್ತದೆ; ದೇವರ ಬಳಿಯಲ್ಲಿ ಭಯಂಕರವಾದ ಘನ ಉಂಟು. |
23. | ಸರ್ವ ಶಕ್ತನನ್ನು ನಾವು ಕಂಡುಕೊಳ್ಳುವದಿಲ್ಲ; ಆತನು ಶಕ್ತಿಯಲ್ಲಿಯೂ ನ್ಯಾಯತೀರ್ಪಿನಲ್ಲಿಯೂ ಬಹುನೀತಿಯಲ್ಲಿಯೂ ಉನ್ನ ತನಾಗಿದ್ದಾನೆ; ಆತನು ಶ್ರಮೆಪಡಿಸುವದಿಲ್ಲ. |
24. | ಆದ ದರಿಂದ ಮನುಷ್ಯರು ಆತನಿಗೆ ಭಯಪಡುತ್ತಾರೆ; ಹೃದಯದಲ್ಲಿ ಜ್ಞಾನಿಗಳಾದವರೆಲ್ಲರನ್ನು ಆತನು ಲಕ್ಷಿಸುವದಿಲ್ಲ. |
← Job (37/42) → |