← Job (31/42) → |
1. | ನನ್ನ ಕಣ್ಣುಗಳೊಡನೆ ಒಡಂಬಡಿಕೆ ಮಾಡಿದೆನು; ಕನ್ನಿಕೆಯ ಮೇಲೆ ಲಕ್ಷ್ಯವಿಡುವದು ಹೇಗೆ? |
2. | ಮೇಲಿನಿಂದ ದೇವರ ಭಾಗವೂ ಉನ್ನತ ವಾದ ಸ್ಥಳಗಳಿಂದ ಸರ್ವಶಕ್ತನ ಬಾಧ್ಯತೆಯೂ ಯಾವದು? |
3. | ದುಷ್ಟನಿಗೆ ನಾಶವಿಲ್ಲವೋ? ಅಪಕಾರ ಮಾಡುವವರಿಗೆ ಕಠಿಣ ಶಿಕ್ಷೆಯಿಲ್ಲವೋ? |
4. | ಆತನು ನನ್ನ ಮಾರ್ಗಗಳನ್ನು ನೋಡಿ, ನನ್ನ ಹೆಜ್ಜೆಗಳನ್ನೆಲ್ಲಾ ಎಣಿಸುವಾತನಲ್ಲವೋ? |
5. | ನಾನು ವ್ಯರ್ಥವಾಗಿ ನಡೆದುಕೊಂಡಿದ್ದರೆ ಮೋಸಕ್ಕೆ ನನ್ನ ಕಾಲು ತ್ವರೆಪಟ್ಟರೆ |
6. | ಆತನು ನೀತಿಯ ತ್ರಾಸಿನಲ್ಲಿ ನನ್ನನ್ನು ತೂಗಲಿ; ದೇವರು ನನ್ನ ಸಂಪೂರ್ಣತೆಯನ್ನು ತಿಳಿದುಕೊಳ್ಳಲಿ. |
7. | ನನ್ನ ಹೆಜ್ಜೆಯು ದಾರಿಯಿಂದ ತೊಲಗಿದ್ದರೆ, ನನ್ನ ಕಣ್ಣುಗಳ ಹಿಂದೆ ನನ್ನ ಹೃದಯವು ಹೋಗಿದ್ದರೆ, ನನ್ನ ಅಂಗೈಗಳಲ್ಲಿ ದೋಷ ಹತ್ತಿದ್ದರೆ, |
8. | ನಾನು ಬಿತ್ತುವದನ್ನು ಬೇರೊಬ್ಬನು ತಿನ್ನಲಿ; ಹೌದು, ನನ್ನ ಸಂತತಿಯು ನಿರ್ಮೂಲವಾಗಲಿ. |
9. | ನನ್ನ ಹೃದಯವು ಸ್ತ್ರೀಗೋಸ್ಕರ ಮರುಳು ಗೊಂಡಿದ್ದರೆ, ನನ್ನ ನೆರೆಯವನ ಬಾಗಲ ಹತ್ತಿರ ನಾನು ಹೊಂಚಿಕೊಂಡಿದ್ದರೆ, |
10. | ನನ್ನ ಹೆಂಡತಿ ಮತ್ತೊಬ್ಬನಿ ಗೊಸ್ಕರ ಬೀಸಲಿ; ಮತ್ತೊಬ್ಬರು ಅವಳ ಮೇಲೆ ಒರಗಲಿ. |
11. | ಯಾಕಂದರೆ ಅದು ಮಹಾ ಪಾಪವೂ ಹೌದು, ನ್ಯಾಯಾಧಿಪತಿಗಳಿಗೆ ಬರುವ ಅಕ್ರಮವೂ ಆಗಿರುವದು. |
12. | ಅದು ನಾಶವಾಗುವ ವರೆಗೆ ದಹಿ ಸುವಂಥ, ಆದಾಯವನ್ನೆಲ್ಲಾ ನಿರ್ಮೂಲ ಮಾಡು ವಂಥ ಆಗ್ನಿಯಾಗಿರುವದು. |
13. | ಅವರು ನನ್ನ ಸಂಗಡ ವಾದಿಸುವಾಗ ನಾನು ನನ್ನ ದಾಸನ, ದಾಸಿಯ ನ್ಯಾಯವನ್ನು ತಿರಸ್ಕರಿಸಿದ್ದರೆ, |
14. | ದೇವರು ಏಳುವಾಗ ನಾನು ಏನು ಮಾಡುವೆನು? ಆತನು ವಿಚಾರಿಸುವಾಗ, ಆತನಿಗೆ ಏನು ಉತ್ತರ ಕೊಡುವೆನು? |
15. | ಗರ್ಭದಲ್ಲಿ ನನ್ನನ್ನು ಉಂಟುಮಾಡಿ ದಾತನು ಅವನನ್ನೂ ಉಂಟು ಮಾಡಿದ್ದಾನಲ್ಲಾ? ನಮ್ಮನ್ನು ಗರ್ಭದಲ್ಲಿ ರೂಪಿಸಿದಾತನು ಒಬ್ಬನೇ ಅಲ್ಲವೋ? |
16. | ನಾನು ಬಡವರ ಇಷ್ಟವನ್ನು ಹಿಂತೆಗೆದಿದ್ದರೆ ವಿಧ ವೆಯ ಕಣ್ಣುಗಳನ್ನು ನಿರಾಶೆಪಡಿಸಿದ್ದರೆ, |
17. | ದಿಕ್ಕಿಲ್ಲದ ವನು ಅದರಲ್ಲಿ ಉಣ್ಣದ ಹಾಗೆ ನಾನು ಮಾತ್ರ ನನ್ನ ತುತ್ತು ಉಂಡಿದ್ದರೆ, |
18. | (ಯಾಕಂದರೆ ನನ್ನ ಯೌವನದಿಂದ ನನ್ನೊಂದಿಗೆ ನಾನು ಅವನನ್ನು ತಂದೆ ಯಂತೆ ಬೆಳೆಸಿದೆನಲ್ಲಾ. ನನ್ನ ತಾಯಿಯ ಗರ್ಭದಿಂದ ಅವಳನ್ನು ನಡಿಸಿದೆನಲ್ಲಾ). |
19. | ಬಟ್ಟೆ ಇಲ್ಲದೆ ನಾಶ ವಾಗುವವನನ್ನೂ ದರಿದ್ರನಿಗೆ ಹೊದಿಕೆ ಇಲ್ಲದಿರುವ ದನ್ನೂ ನಾನು ನೋಡಿದ್ದರೆ |
20. | ಅವನ ಸೊಂಟವು ನನ್ನನ್ನು ಆಶೀರ್ವದಿಸದಿದ್ದರೆ ನನ್ನ ಕುರಿ ಮಂದೆಯ ಉಣ್ಣೆಯಿಂದ ಅವನಿಗೆ ಬೆಚ್ಚಗೆ ಆಗದಿದ್ದರೆ |
21. | ದ್ವಾರ ದಲ್ಲಿ ನನ್ನ ಸಹಾಯವನ್ನು ಕಂಡು ನಾನು ದಿಕ್ಕಿಲ್ಲದ ವನ ಮೇಲೆ ನನ್ನ ಕೈಚಾಚಿದ್ದರೆ, |
22. | ನನ್ನ ಹೆಗಲು ಬೆನ್ನಿನ ಗುಬ್ಬೆಯಿಂದ ಬೀಳಲಿ. ನನ್ನ ತೋಳು ಎಲುಬಿ ನಿಂದ ಮುರಿದು ಹೋಗಲಿ. |
23. | ದೇವರಿಂದ ಬರುವ ನಾಶವು ನನಗೆ ಹೆದರಿಕೆಯಾಗಿತ್ತು; ಆತನ ಉನ್ನತ ಕ್ಕೋಸ್ಕರ ನಾನು ತಾಳಲಾರದೆ ಇದ್ದೆನು. |
24. | ನಾನು ಬಂಗಾರವನ್ನು ನನ್ನ ನಿರೀಕ್ಷೆಯನ್ನಾಗಿ ಇಟ್ಟಿದ್ದರೆ, ಅಪ ರಂಜಿಗೆ--ನೀನು ನನ್ನ ಭರವಸವು ಎಂದು ಹೇಳಿದ್ದರೆ, |
25. | ನನ್ನ ಐಶ್ವರ್ಯವು ಬಹಳವಾಗಿದೆ ಎಂದು ನನ್ನ ಕೈ ಬಹಳವಾಗಿ ಸಂಪಾದಿಸಿ ಕೊಂಡಿತೆಂದು ನಾನು ಸಂತೋಷಿಸಿದ್ದರೆ, |
26. | ಸೂರ್ಯನು ಹೊಳೆಯುವದನ್ನು ಚಂದ್ರನು ಪ್ರಭೆಯಲ್ಲಿ ನಡೆಯುವದನ್ನು ನಾನು ನೋಡಲಾಗಿ, |
27. | ನನ್ನ ಹೃದಯವು ಅಂತರಂಗದಲ್ಲಿ ಮರುಳುಗೊಂಡು, ನನ್ನ ಬಾಯಿಂದ ನನ್ನ ಕೈಯನ್ನು ಮುದ್ದಿಟ್ಟಿದ್ದರೆ; |
28. | ಇದು ಸಹ ನ್ಯಾಯಾಧಿಪತಿಯಿಂದ ಶಿಕ್ಷಿಸಲ್ಪಡುವ ಅಪರಾಧವಾಗಿದೆ; ಯಾಕಂದರೆ ಉನ್ನತ ದಲ್ಲಿರುವ ದೇವರನ್ನು ಬೊಂಕಿದವನಾಗಿರುವೆನು. |
29. | ನನ್ನನ್ನು ಹಗೆಮಾಡುವವನ ನಾಶಕ್ಕೆ ನಾನು ಸಂತೋಷಪಟ್ಟು, ಅವನನ್ನು ಕೇಡು ಕಂಡು ಹಿಡಿಯಿ ತೆಂದು ಗರ್ವಪಟ್ಟರೆ, |
30. | ಶಾಪದಿಂದ ಅವನ ಪ್ರಾಣ ವನ್ನು ಕೇಳುವುದರಿಂದ ನನ್ನ ಬಾಯಿಯು ಪಾಪ ಮಾಡಗೊಡಿಸಲಿಲ್ಲ. |
31. | ಅವನ ಮಾಂಸದಿಂದ ನಮಗೆ ತೃಪ್ತಿ ಕೊಡುವವನಾರು ಎಂದು, ನನ್ನ ಗುಡಾರದ ಮನುಷ್ಯರು ಹೇಳಲಿಲ್ಲವೋ? |
32. | ಪರದೇಶಸ್ಥನು ಬೀದಿ ಯಲ್ಲಿ ಇಳುಕೊಳ್ಳಲಿಲ್ಲ; ಆದರೆ ನನ್ನ ಬಾಗಲನ್ನು ಮಾರ್ಗಸ್ಥರಿಗೆ ತೆರೆಯುತ್ತಾ ಇದ್ದೆನು. |
33. | ನಾನು ಎದೆ ಯಲ್ಲಿ ನನ್ನ ಅನ್ಯಾಯವನ್ನು ಅಡಗಿಸಿ, ಆದಾಮನ ಪ್ರಕಾರ ನನ್ನ ದ್ರೋಹವನ್ನು ಮುಚ್ಚಿಕೊಳ್ಳಲಿಲ್ಲ. |
34. | ದೊಡ್ಡ ಸಮೂಹಕ್ಕೆ ಹೆದರಿದೆನೋ? ಕುಲಗಳ ಉದಾಸೀನದಿಂದ ಕಳವಳಗೊಂಡೆನೋ? ಹೊರಗೆ ಬಾರದೆ ಮೌನವಾಗಿದ್ದೆನೋ? |
35. | ಕೇಳುವವನು ನನಗೆ ಸಿಕ್ಕಿದರೆ ವಾಸಿ; ಇಗೋ, ಸರ್ವಶಕ್ತನು ನನಗೆ ಉತ್ತರಕೊಡಲಿ; ನನ್ನ ವಿರೋ ಧಿಯು ಪುಸ್ತಕವನ್ನು ಬರೆಯಲಿ, ಇದೇ ನನ್ನ ಆಶೆ. |
36. | ನನ್ನ ಹೆಗಲಲ್ಲಿ ಅದನ್ನು ನಿಶ್ಚಯವಾಗಿ ಹೊರುವೆನು; ಅದನ್ನು ಕಿರೀಟವಾಗಿ ಕಟ್ಟಿಕೊಳ್ಳುವೆನು. |
37. | ನನ್ನ ಹೆಜ್ಜೆ ಗಳ ಎಣಿಕೆಯನ್ನು ಆತನಿಗೆ ತೋರಿಸುವೆನು; ಅಧಿಪತಿ ಯಾಗಿ ಆತನ ಸವಿಾಪಕ್ಕೆ ಬರುವೆನು. |
38. | ನನ್ನ ಭೂಮಿಯು ನನಗೆ ವಿರೋಧವಾಗಿ ಕೂಗಿದರೆ, ಅದರ ಸಾಲುಗಳು ಕೂಡ ದೂರಿದರೆ, |
39. | ಅದರ ಫಲವನ್ನು ನಾನು ಹಣಕೊಡದೆ ತಿಂದಿದ್ದರೆ, ಅದರ ಯಾಜಮಾನರ ಪ್ರಾಣವನ್ನು ತೆಗೆದುಬಿಟ್ಟಿದ್ದರೆ, |
40. | ಗೋಧಿಗೆ ಬದಲಾಗಿ ಮುಳ್ಳೂ ಜವೆಗೋಧಿಗೆ ಬದಲಾಗಿ ಕಳೆಯೂ ಬೆಳೆಯಲಿ. ಯೋಬನ ನುಡಿಗಳು ಮುಗಿದವು. |
← Job (31/42) → |