← Job (30/42) → |
1. | ಆದರೆ ಈ ದಿವಸಗಳಲ್ಲಿ ನನಗಿಂತ ಚಿಕ್ಕವರು ನನ್ನನ್ನು ನೋಡಿ ಪರಿಹಾಸ್ಯಮಾಡುತ್ತಾರೆ; ಅವರ ತಂದೆಗಳನ್ನು ನನ್ನ ಕುರಿಮಂದೆಯ ನಾಯಿಗಳ ಸಂಗಡ ಸೇರಿಸುವದಕ್ಕೂ ಅಯೋಗ್ಯರೆಂದೆನು |
2. | ಹೌದು, ಅವರ ಕೈಗಳ ಶಕ್ತಿಯ ಲಾಭ ನನಗೆ ಯಾಕೆ? ಅವರಲ್ಲಿ ಮುದಿಪ್ರಾಯವು ನಾಶವಾಯಿತು. |
3. | ಕೊರತೆ ಯಿಂದಲೂ ಬರದಿಂದಲೂ ಒಂಟಿಗರಾಗಿ ಪೂರ್ವ ದಲ್ಲಿ ಹಾಳೂ ಬೈಲೂ ಆದ ಅರಣ್ಯಕ್ಕೆ ಓಡುತ್ತಾರೆ; |
4. | ಪೊದೆಯ ಹತ್ತಿರ ಉಪ್ಪಿನಸೊಪ್ಪು ಕೀಳುವವರಿಗೆ ಜಾಲಿಯ ಬೇರುಗಳೇ ಅವರ ರೊಟ್ಟಿ. |
5. | ಜನರಿಂದ ಅವರನ್ನು ಹೊರಗೆ ಹಾಕುತ್ತಾರೆ; (ಕಳ್ಳರ ಹಿಂಡಿನಂತೆ ಅವರ ಹಿಂದೆ ಕೂಗುತ್ತಾರೆ). |
6. | ಭಯಂಕರವಾದ ತಗ್ಗು ಗಳ ಸಂದುಗಳಲ್ಲಿಯೂ ಭೂಮಿಯ ಗುಹೆಗಳಲ್ಲಿಯೂ ಬಂಡೆಗಳಲ್ಲಿಯೂ ವಾಸವಾಗಿರಬೇಕು. |
7. | ಪೊದೆಗಳ ನಡುವೆ ಕೂಗುತ್ತಾರೆ; ತುರಿಚಿಗಳ ಕೆಳಗೆ ಕೂಡುತ್ತಾರೆ. |
8. | ಹುಚ್ಚರ ಮಕ್ಕಳಾಗಿಯೂ ಹೌದು, ಕೆಳಮಟ್ಟದವರ ಮಕ್ಕಳಾಗಿಯೂ ಇದ್ದರು. |
9. | ಆದರೆ ಈಗ ನಾನು ಅವರ ಹಾಸ್ಯದ ರಾಗವೂ ಹೌದು, ಅವರಿಗೆ ಗಾದೆಯೂ ಆದೆನು. |
10. | ನನ್ನನ್ನು ಅಸಹ್ಯಿಸುತ್ತಾರೆ; ನನಗೆ ದೂರ ವಾಗಿ ಓಡಿಹೋಗುತ್ತಾರೆ; ನನ್ನ ಮುಖದ ಮುಂದೆ ಉಗುಳಲು ಹಿಂದೆಗೆಯುವದಿಲ್ಲ. |
11. | ಆತನು ತನ್ನ ಹಗ್ಗವನ್ನು ಸಡಲಿಸಿ ನನ್ನನ್ನು ಶ್ರಮೆ ಪಡಿಸುತ್ತಾನೆ; ನನ್ನ ಮುಖದ ಮುಂದೆ ಕಡಿವಾಣಕಿತ್ತು ಬಿಡುತ್ತಾರೆ; |
12. | ಬಲಗಡೆಯಲ್ಲಿ ಯುವಕರು ಏಳುತ್ತಾರೆ; ಅವರು ನನ್ನ ಕಾಲುಗಳನ್ನು ದೂಡುತ್ತಾರೆ; ನಾಶಕರ ವಾದ ತಮ್ಮ ಹಾದಿಗಳನ್ನು ನನಗೆ ವಿರೋಧವಾಗಿ ಕಟ್ಟುತ್ತಾರೆ. |
13. | ನನ್ನ ದಾರಿಯನ್ನೂ ಕೆಡಿಸುತ್ತಾರೆ; ನನ್ನ ನಷ್ಟಕ್ಕಾಗಿ ಸಹಾಯಮಾಡುತ್ತಾರೆ; ಅವರಿಗೆ ಸಹಾಯ ಕನಿಲ್ಲ. |
14. | ಅವರು ಅಗಲವಾದ ಬಿರುಕಿನಲ್ಲಿ ನೀರು ಬರುವಂತೆ ಬಂದರು; ನಾಶದೊಂದಿಗೆ ಹೊರಳಿ ನನ್ನ ಮೇಲೆ ಅವರು ಬರುತ್ತಾರೆ. |
15. | ದಿಗಿಲುಗಳು ನನ್ನ ಮೇಲೆ ಬಂದವೆ; ಅವು ಗಾಳಿಯ ಹಾಗೆ ನನ್ನ ಪ್ರಾಣ ವನ್ನು ಹಿಂದಟ್ಟುತ್ತವೆ; ಮೇಘದ ಹಾಗೆ ನನ್ನ ಕ್ಷೇಮವು ದಾಟಿ ಹೋಗುತ್ತದೆ. |
16. | ಆದರೆ ಈಗ ನನ್ನ ಪ್ರಾಣವು ನನ್ನಲ್ಲಿ ಹೊಯ್ಯಲ್ಪಡುವದು; ದೀನತ್ವದ ದಿವಸಗಳು ನನ್ನನ್ನು ಹಿಡಿದವೆ. |
17. | ರಾತ್ರಿಯಲ್ಲಿ ನನ್ನ ಎಲುಬುಗಳು ನನ್ನಲ್ಲಿ ತಿವಿಯಲ್ಪಡುತ್ತವೆ; ನನ್ನ ನರಗಳು ವಿಶ್ರಾಂತಿ ತೆಗೆದು ಕೊಳ್ಳುವದಿಲ್ಲ. |
18. | ನನ್ನ ರೋಗದ ಮಹಾ ಶಕ್ತಿಯಿಂದ ನನ್ನ ವಸ್ತ್ರವು ಬದಲಾಗುತ್ತದೆ; ಅದು ನನ್ನ ಅಂಗಿಯ ಹಾಗೆ ನನ್ನನ್ನು ಬಂಧಿಸುತ್ತದೆ. |
19. | ಆತನು ನನ್ನನ್ನು ಕೆಸರಿನಲ್ಲಿ ದೊಬ್ಬಿದ್ದಾನೆ; ದೂಳಿಗೂ ಬೂದಿಗೂ ಸಮಾನನಾದೆನು. |
20. | ನಿನಗೆ ಮೊರೆಯಿಡುತ್ತೇನೆ, ಆದರೆ ನೀನು ಉತ್ತರ ಕೊಡುವದಿಲ್ಲ; ನಿಂತುಕೊಳ್ಳುತ್ತೇನೆ, ಆದರೆ ನೀನು ನನ್ನನ್ನು ಲಕ್ಷಿಸುವದಿಲ್ಲ. |
21. | ನೀನು ನನಗೆ ಕ್ರೂರವಾದಿ; ನಿನ್ನ ಕೈಯ ಶಕ್ತಿಯಿಂದ, ನನ್ನನ್ನು ಎದುರಿಸುತ್ತೀ. |
22. | ನನ್ನನ್ನು ಗಾಳಿಗೆ ಎತ್ತುತ್ತೀ; ಅದನ್ನು ಹತ್ತಿಹೋಗುವ ಹಾಗೆ ಮಾಡಿ, ನನ್ನನ್ನು ಪೂರ್ಣವಾಗಿ ಕ್ಷೀಣಮಾಡುತ್ತೀ. |
23. | ಮರಣಕ್ಕೂ ಎಲ್ಲಾ ಜೀವಿಗಳ ನೇಮಕವಾದ ಮನೆಗೂ ನನ್ನನ್ನು ತಿರುಗಿಸುವಿ ಎಂದು ತಿಳಿದಿದ್ದೇನೆ. |
24. | ಆದರೆ ಆತನ ನಾಶದಲ್ಲಿ ಅವರು ಮೊರೆಯಿಟ್ಟರೆ, ಸಮಾಧಿಗೆ ಆತನು ಕೈ ಚಾಚುವದಿಲ್ಲ. |
25. | ಕಷ್ಟದಲ್ಲಿ ಇದ್ದವನಿಗೋಸ್ಕರ ನಾನು ಅತ್ತೆನಲ್ಲವೋ? ದರಿದ್ರನಿ ಗೋಸ್ಕರ ನನ್ನ ಪ್ರಾಣವು ದುಃಖಪಡಲಿಲ್ಲವೋ? |
26. | ನಾನು ಒಳ್ಳೇದನ್ನು ನಿರೀಕ್ಷಿಸಲು ಕೇಡುಬಂತು; ಬೆಳಕನ್ನು ಎದುರು ನೋಡಲು, ಅಂಧಕಾರ ಬಂತು. |
27. | ನನ್ನ ಕರುಳುಗಳು ಸುಮ್ಮನಿರದೆ ಬೇಯುತ್ತವೆ. ಸಂಕಟಗಳ ದಿವಸಗಳು ನನಗೆ ಮುಂಗೊಂಡವು. |
28. | ಬಿಸಿಲು ಇಲ್ಲದೆ ದುಃಖಿಸುವವನಾಗಿ ನಾನು ಹೋದೆನು; ನಾನು ಸಭೆಯಲ್ಲಿ ಎದ್ದು ಕೂಗಿದೆನು. |
29. | ಘಟಸರ್ಪಗಳಿಗೆ ಸಹೋದರನಾದೆನು; ಗೂಬೆ ಗಳಿಗೆ ನಾನು ಜೊತೆಯವನಾದೆನು. |
30. | ನನ್ನ ಮೇಲಿನ ಚರ್ಮವು ಕಪ್ಪಗಾಯಿತು; ನನ್ನ ಎಲುಬುಗಳು ಉಷ್ಣ ದಿಂದ ಬೆಂದಿವೆ. |
31. | ನನ್ನ ಕಿನ್ನರಿ ಗೋಳಾಟವೂ ನನ್ನ ಕೊಳಲು ಅಳುವವರ ಶಬ್ಧವೂ ಆಯಿತು. |
← Job (30/42) → |