← Job (25/42) → |
1. | ಆ ಮೇಲೆ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೇಳಿದ್ದೇನಂದರೆ -- |
2. | ದೊರೆ ತನವೂ ಹೆದರಿಕೆಯೂ ಆತನೊಂದಿಗೆ ಇವೆ; ತನ್ನ ಉನ್ನತ ಸ್ಥಳಗಳಲ್ಲಿ ಆತನು ಸಮಾಧಾನ ಮಾಡುತ್ತಾನೆ. |
3. | ಆತನ ಸೈನ್ಯಗಳಿಗೆ ಲೆಕ್ಕ ಉಂಟೋ? ಆತನ ಬೆಳಕು ಯಾರ ಮೇಲೆ ಮೂಡುವದಿಲ್ಲ? |
4. | ಮನುಷ್ಯನು ದೇವರ ಬಳಿಯಲ್ಲಿ ನೀತಿವಂತನಾಗುವದು ಹೇಗೆ? ಸ್ತ್ರೀಯಿಂದ ಹುಟ್ಟಿದವನು ನಿರ್ಮಲನಾಗಿರುವದು ಹೇಗೆ? |
5. | ಇಗೋ, ಚಂದ್ರನಾದರೂ ಹೊಳೆಯು ವದಿಲ್ಲ. ನಕ್ಷತ್ರಗಳಾದರೂ ಆತನ ದೃಷ್ಟಿಗೆ ನಿರ್ಮಲವಾ ಗಿರುವದಿಲ್ಲ. |
6. | ಮನುಷ್ಯನೆಂಬ ಹುಳವೂ ಮನುಷ್ಯನ ಮಗನೆಂಬ ಕ್ರಿಮಿಯೂ ಎಷ್ಟು ಮಾತ್ರದವನು? |
← Job (25/42) → |