← Job (23/42) → |
1. | ಯೋಬನು ಉತ್ತರಕೊಟ್ಟು ಹೇಳಿದ್ದೇನಂದರೆ-- |
2. | ಈಹೊತ್ತೇ ನನ್ನ ದೂರು ಕಹಿಯಾಗಿದೆ; ನನ್ನ ಏಟು ನನ್ನ ನಿಟ್ಟುಸುರಿಗಿಂತ ಭಾರವಾಗಿದೆ. |
3. | ನಾನು ತಿಳಿದುಕೊಂಡು ಆತನನ್ನು ಕಂಡುಕೊಂಡರೆ ಎಷ್ಟೋ ಒಳ್ಳೇದು! ಆತನ ಪೀಠದ ತನಕ ಬರುವೆನು. |
4. | ನ್ಯಾಯವನ್ನು ಆತನ ಮುಂದೆ ಸಿದ್ಧಮಾಡುವೆನು; ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುವೆನು. |
5. | ಆತನು ನನಗೆ ಪ್ರತ್ಯುತ್ತರವಾಗಿ ಕೊಡುವ ಮಾತುಗಳನ್ನು ತಿಳಿದು ಆತನು ಹೇಳುವದನ್ನು ಗ್ರಹಿಸುವೆನು. |
6. | ಬಹು ಶಕ್ತಿಯಿಂದ ನನ್ನ ಸಂಗಡ ಆತನು ವಾದಿಸುವನೋ? ಇಲ್ಲ, ನನ್ನಲ್ಲಿ ಆತನು ಶಕ್ತಿ ಇಡುವನು. |
7. | ಅಲ್ಲಿ ನೀತಿವಂತನು ಅವನ ಸಂಗಡ ತರ್ಕ ಮಾಡುವನು; ನಾನು ನಿತ್ಯವಾಗಿ ನನ್ನ ನ್ಯಾಯಾಧಿಪತಿಗೆ ತಪ್ಪಿಸಿಕೊಳ್ಳುವೆನು. |
8. | ಇಗೋ, ನಾನು ಮುಂದೆ ನಡೆದರೆ ಆತನು ಅಲ್ಲಿ ಇರುವದಿಲ್ಲ; ಹಿಂತಿರುಗಿದರೆ ಆತನನ್ನು ಗ್ರಹಿಸುವದಿಲ್ಲ. |
9. | ಎಡಗಡೆಯಲ್ಲಿ, ಆತನು ಕೆಲಸ ಮಾಡು ವಲ್ಲಿ ಆತನನ್ನು ನೋಡುವದಿಲ್ಲ; ಬಲಗಡೆಯಲ್ಲಿ ಆತನು ಅಡಗಿಸಿಕೊಳ್ಳುತ್ತಾನೆ, ನಾನು ಕಾಣುವದಿಲ್ಲ. |
10. | ಆದರೆ ನಾನು ಹಿಡಿಯುವ ಮಾರ್ಗವನ್ನು ಆತನು ತಿಳಿದಿದ್ದಾನೆ, ನನ್ನನ್ನು ಶೋಧಿಸಿದಾಗ ನಾನು ಬಂಗಾರದ ಹಾಗೆ ಹೊರಗೆ ಬರುವೆನು. |
11. | ಆತನ ಹೆಜ್ಜೆಯನ್ನು ನನ್ನ ಕಾಲು ಹಿಡಿಯಿತು; ಆತನ ಮಾರ್ಗವನ್ನು ನಾನು ತೊಲಗದೆ ನೋಡಿಕೊಂಡೆನು. |
12. | ಆತನ ತುಟಿಗಳ ಆಜ್ಞೆಗೆ ನಾನು ಹಿಂಜರಿಯಲಿಲ್ಲ. ನನ್ನ ಅಗತ್ಯದ ಆಹಾರಕ್ಕಿಂತ ಆತನ ಬಾಯಿಯ ಮಾತುಗಳನ್ನು ಹೆಚ್ಚಾಗಿ ಲಕ್ಷಿಸಿದೆನು. |
13. | ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ. |
14. | ನನಗೆ ನೇಮಿಸಿ ದ್ದನ್ನು ಆತನು ಈಡೇರಿಸುತ್ತಾನೆ; ಇವುಗಳಂತೆ ಅನೇಕವು ಆತನಲ್ಲಿ ಅವೆ. |
15. | ಆದದರಿಂದ ಆತನ ಮುಂದೆ ತಲ್ಲಣಪಡುತ್ತೇನೆ; ಗ್ರಹಿಸಿಕೊಂಡು ಆತನಿಗೆ ಭಯ ಪಡುತ್ತೇನೆ. |
16. | ದೇವರು ನನ್ನ ಹೃದಯವನ್ನು ಮೆತ್ತಗೆ ಮಾಡಿದ್ದಾನಲ್ಲಾ; ಸರ್ವಶಕ್ತನು ನನ್ನನ್ನು ತಲ್ಲಣಪಡಿಸಿ ದ್ದಾನಲ್ಲಾ. |
17. | ಕತ್ತಲೆಯ ಮುಂದೆ ನಾನು ಕಡಿಯಲ್ಪಡ ಲಿಲ್ಲ; ಅಂಧಕಾರವನ್ನು ನನ್ನ ಮುಂದೆ ಅಡಗಿಸಿದ್ದಾನೆ. |
← Job (23/42) → |