← Job (20/42) → |
1. | ನಾಮಾಥ್ಯನಾದ ಚೋಫರನು ಉತ್ತರ ಕೊಟ್ಟು ಹೇಳಿದ್ದೇನಂದರೆ-- |
2. | ಆದದರಿಂದ ನನ್ನಲ್ಲಿರುವ ಆತುರಕ್ಕೋಸ್ಕರವೇ ನನ್ನ ಆಲೋಚನೆಗಳು ನನಗೆ ಉತ್ತರ ಕೊಡುತ್ತವೆ. |
3. | ನನ್ನನ್ನು ನಿಂದಿಸುವ ಶಿಕ್ಷೆಯನ್ನು ಕೇಳಿದ್ದೇನೆ; ಆದರೆ ನನ್ನ ಆತ್ಮವು ನನ್ನ ಗ್ರಹಿಕೆಯ ಪ್ರಕಾರ ನನಗೆ ಉತ್ತರ ಕೊಡುವದು. |
4. | ಇದನ್ನು ಆದಿಯಿಂದಲೂ ಅಂದರೆ ಮನುಷ್ಯನನ್ನು ಭೂಮಿಯ ಮೇಲೆ ಇಟ್ಟಂದಿನಿಂದಲೂ ನೀನು ತಿಳಿಯಲಿಲ್ಲವೋ? |
5. | ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ. |
6. | ಅವನ ಮಹತ್ತು ಆಕಾಶಕ್ಕೆ ಏರಿದರೂ ಅವನ ತಲೆ ಮೇಘಕ್ಕೆ ಮುಟ್ಟಿದರೂ |
7. | ತನ್ನ ಅಮೇಧ್ಯದ ಹಾಗೆ ನಿತ್ಯವಾಗಿ ನಾಶವಾಗುವನು; ಅವನನ್ನು ನೋಡಿದ ವರು-- ಅವನು ಎಲ್ಲಿ ಅನ್ನುವರು. |
8. | ಕನಸಿನ ಹಾಗೆ ಅವನು ಕಾಣದೆ ಹಾರಿಹೋಗುವನು; ರಾತ್ರಿಯ ದರ್ಶನದ ಹಾಗೆ ಓಡಿಸಲ್ಪಡುವನು. |
9. | ಅವನನ್ನು ನೋಡಿದ ಕಣ್ಣು ಇನ್ನು ನೋಡದು; ಅವನ ಸ್ಥಳವನ್ನು ಇನ್ನು ಅವನನ್ನು ಕಾಣದು. |
10. | ಅವನ ಮಕ್ಕಳು ಬಡವ ರನ್ನು ಮೆಚ್ಚಿಸುತ್ತಾರೆ; ಅವನ ಕೈಗಳು ಅವರ ವಸ್ತುಗ ಳನ್ನು ತಿರುಗಿ ಕೊಡುತ್ತವೆ. |
11. | ಅವನ ಎಲುಬುಗಳು ಯೌವನ ಪಾಪದಿಂದ ತುಂಬಿದ್ದರೂ ಅದು ಅವನ ಸಂಗಡ ಧೂಳಿನಲ್ಲಿ ಮಲಗುವದು. |
12. | ಅವನ ಬಾಯಿಗೆ ಕೆಟ್ಟತನವು ಸಿಹಿಯಾಗಿದ್ದಾಗ್ಯೂ ನಾಲಿಗೆಯ ಕೆಳಗೆ ಅದನ್ನು ಬಚ್ಚಿಟ್ಟರೂ |
13. | ಅದನ್ನು ಕನಿಕರಿಸಿ ಅದನ್ನು ಬಿಡದೆ ತನ್ನ ಬಾಯಿಯೊಳಗೆ ಇಟ್ಟುಕೊಂಡರೂ |
14. | ಅವನ ಆಹಾರವು ಅವನ ಕರು ಳುಗಳಲ್ಲಿ ಮಾರ್ಪಟ್ಟು ಅವನ ಉಡಿಲಲ್ಲಿ ಸರ್ಪದ ವಿಷವಾಗುವದು. |
15. | ಅವನು ನುಂಗಿದ ಐಶ್ವರ್ಯವನ್ನು ಕಾರಿಬಿಡುವನು; ಅವನ ಹೊಟ್ಟೆಯೊಳಗಿಂದ ದೇವರು ಅದನ್ನು ಹೊರಡ ಮಾಡುವನು. |
16. | ಸರ್ಪಗಳ ವಿಷ ವನ್ನು ಹೀರುವನು; ಹಾವಿನ ನಾಲಿಗೆ ಅವನನ್ನು ಕೊಲ್ಲು ವದು. |
17. | ಅವನು ಜೇನೂ ಬೆಣ್ಣೆ ಹರಿಯುವ ಹಳ್ಳ ಗಳನ್ನೂ ನದಿಯನ್ನೂ ಕಾಲಿವೆಗಳನ್ನೂ ನೋಡನು. |
18. | ದುಡಿದದ್ದನ್ನ್ನು ನುಂಗದೆ ತಿರುಗಿ ಕೊಡುವನು; ಆಸ್ತಿಯ ಮೇರೆಗೆ ಬದಲು ಕೊಡುವನು; ಅವನು ಉಲ್ಲಾಸ ಹೊಂದುವದಿಲ್ಲ. |
19. | ದೀನರನ್ನು ಜಜ್ಜಿ ತೊರೆ ದುಬಿಟ್ಟನು; ತಾನು ಕಟ್ಟದ ಮನೆಯನ್ನು ಕೆಡವಿ ಬಿಟ್ಟನು. |
20. | ನಿಶ್ಚಯವಾಗಿ ಅವನು ತನ್ನ ಹೊಟ್ಟೆಯಲ್ಲಿ ಸೌಖ್ಯ ತಿಳುಕೊಳ್ಳುವದಿಲ್ಲ; ತನಗೆ ಇಷ್ಟವಾದದರಲ್ಲಿ ಏನೂ ಉಳಿಸಿಕೊಳ್ಳುವದಿಲ್ಲ. |
21. | ಅವನ ಊಟದಲ್ಲಿ ಏನೂ ಉಳಿಯದು; ಆದದರಿಂದ ಅವನ ವಸ್ತುಗಳನ್ನು ಯಾರೂ ನೋಡುವದಿಲ್ಲ. |
22. | ಅವನ ಪೂರ್ಣತೆಯ ಹೆಚ್ಚಿಗೆಯಲ್ಲಿ ಅವನಿಗೆ ಇಕ್ಕಟ್ಟಾಗಿದೆ; ದುಷ್ಟರ ಕೈಗಳೆಲ್ಲಾ ಅವನ ಮೇಲೆ ಬರುವವು. |
23. | ಏನಾಗುವದಂದರೆ ಅವನ ಹೊಟ್ಟೆಯನ್ನು ತುಂಬು ವದಕ್ಕಿರುವಾಗ ದೇವರು ತನ್ನ ಕೋಪದ ಉರಿಯನ್ನು ಅವನ ಮೇಲೆ ಕಳುಹಿಸುವನು; ಅವನ ಆಹಾರಕ್ಕಾಗಿ ಅವನ ಮೇಲೆ ಸುರಿಸುವನು. |
24. | ಅವನು ಕಬ್ಬಿಣದ ಆಯುಧಕ್ಕೆ ಓಡಿಹೋದರೆ ಹಿತ್ತಾಳೆಯ ಬಿಲ್ಲು ಅವ ನನ್ನು ತಿವಿಯುವದು. |
25. | ಅವನು ಎಳೆದರೆ ಅದು ಬೆನ್ನಿನಿಂದ ಹೊರಡುವದು; ಅವನ ಪಿತ್ತದೊಳಗಿಂದ ಮಿಂಚುವ ಖಡ್ಗ ಬರುವದು; ಅವನ ಮೇಲೆ ಹೆದರಿಕೆ ಗಳು ಅವೆ. |
26. | ಎಲ್ಲಾ ಅಂಧಕಾರವು ಅವನ ಗುಪ್ತ ಸ್ಥಳಗಳಲ್ಲಿ ಇಡಲ್ಪಟ್ಟಿದೆ; ಯಾರೂ ಹೊತ್ತಿಸದ ಬೆಂಕಿ ಅವನನ್ನು ತಿನ್ನುವದು; ಅವನ ಗುಡಾರದಲ್ಲಿ ಉಳಿ ದವನು ನಾಶವಾಗುವನು. |
27. | ಆಕಾಶಗಳು ಅವನ ಅಕ್ರಮವನ್ನು ಪ್ರಕಟಮಾಡುವವು; ಭೂಮಿಯು ಅವನಿಗೆ ವಿರೋಧವಾಗಿ ಏಳುವದು. |
28. | ಅವನ ಮನೆಯ ಆದಾಯವು ತೊಲಗಿ ಹೋಗುವದು; ಅವನ ಕೋಪದ ದಿವಸದಲ್ಲಿ ಅದು ಕರಗಿ ಹೋಗುವದು. |
29. | ದುಷ್ಟಮನುಷ್ಯನಿಗೆ ದೇವರಿಂದ ಬರುವ ಪಾಲೂ ದೇವರಿಂದ ಅವನಿಗೆ ನೇಮಿಸಲ್ಪ ಟ್ಟಿರುವ ಬಾಧ್ಯತೆಯೂ ಇದೇ. |
← Job (20/42) → |