← Job (2/42) → |
1. | ತಿರಿಗಿ ಒಂದು ದಿನ ಕರ್ತನ ಬಳಿಯಲ್ಲಿ ನಿಂತುಕೊಳ್ಳುವದಕ್ಕೆ ದೇವರ ಪುತ್ರರು ಬಂದಾಗ ಸೈತಾನನು ಸಹ ಅವರ ಸಂಗಡ ಬಂದನು. |
2. | ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು. |
3. | ಆಗ ಕರ್ತನು ಸೈತಾನನಿಗೆ--ನೀನು ಎಲ್ಲಿಂದ ಬಂದೆ ಅಂದನು. ಸೈತಾನನು ಪ್ರತ್ಯುತ್ತರವಾಗಿ ಕರ್ತನಿಗೆಭೂಮಿಯಲ್ಲಿ ಅತ್ತಿಂದ ಇತ್ತ ಇತ್ತಿಂದ ಅತ್ತ, ಮೇಲೆಯೂ ಕೆಳಗೂ ಹೋಗುತ್ತಾ ಅದರಲ್ಲಿ ನಡೆ ದಾಡಿ ಬಂದೆನು ಅಂದನು. |
4. | ಸೈತಾನನು ಪ್ರತ್ಯುತ್ತರವಾಗಿ ಕರ್ತ ನಿಗೆ--ಹೌದು, ಚರ್ಮಕ್ಕೆ ಚರ್ಮ, ತನಗೆ ಉಂಟಾ ದದ್ದನ್ನೆಲ್ಲಾ ತನ್ನ ಪ್ರಾಣಕ್ಕೊಸ್ಕರ ಮನುಷ್ಯನು ಕೊಡು ವನು. |
5. | ಆದರೆ ನಿನ್ನ ಕೈಚಾಚಿ ಅವನ ಎಲುಬನ್ನೂ ಅವನ ಮಾಂಸವನ್ನೂ ಮುಟ್ಟಿದರೆ ಅವನು ನಿನ್ನ ಎದುರಿನಲ್ಲಿ ನಿನ್ನನ್ನು ಶಪಿಸುವನು ಅಂದನು. |
6. | ಆಗ ಕರ್ತನು ಸೈತಾನನಿಗೆ--ಇಗೋ, ಅವನು ನಿನ್ನ ಕೈಯಲ್ಲಿ ಇದ್ದಾನೆ; ಅವನ ಪ್ರಾಣವನ್ನಾದರೋ ಉಳಿಸಲೇ ಬೇಕು ಅಂದನು. |
7. | ಆಗ ಸೈತಾನನು ಕರ್ತನ ಸಮ್ಮುಖ ದಿಂದ ಹೊರಟು ಯೋಬನಿಗೆ ಅಂಗಾಲಿನಿಂದ ನೆತ್ತಿಯ ವರೆಗೆ ಕೆಟ್ಟ ಹುಣ್ಣುಗಳು ಬರುವ ಹಾಗೆ ಅವನನ್ನು ಹೊಡೆದನು. |
8. | ಅವನು ಬೋಕಿ ತಕ್ಕೊಂಡು ತನ್ನನ್ನು ತುರಿಸಿಕೊಂಡು ಬೂದಿಯ ನಡುವೆ ಕೂತನು. |
9. | ಆಗ ಅವನ ಹೆಂಡತಿಯು ಅವನಿಗೆ--ಇನ್ನೂ ಯಥಾರ್ಥ ತ್ವದಲ್ಲಿ ಉಳಿದಿದ್ದೀಯೋ? ದೇವರನ್ನು ಶಪಿಸಿ ಸಾಯಿ ಅಂದಳು. |
10. | ಆದರೆ ಅವನು ಅವಳಿಗೆ--ಮೂರ್ಖ ಹೆಂಗಸರಲ್ಲಿ ಒಬ್ಬಳು ಮಾತನಾಡುವ ಪ್ರಕಾರ ನೀನೂ ಮಾತನಾಡುವಿಯಾ? ದೇವರ ಕೈಯಿಂದ ಒಳ್ಳೇದನ್ನು ಹೊಂದುತ್ತೇವಲ್ಲಾ? ಕೆಟ್ಟದ್ದನ್ನು ಹೊಂದುವದು ಬೇಡವೋ ಅಂದನು. ಇವೆಲ್ಲವುಗಳಲ್ಲಿ ಯೋಬನು ತನ್ನ ತುಟಿಗಳಿಂದ ಪಾಪಮಾಡಲಿಲ್ಲ. |
11. | ಇದಲ್ಲದೆ ಯೋಬನ ಮೂವರು ಸ್ನೇಹಿತರು ಅವನ ಮೇಲೆ ಬಂದ ಈ ಎಲ್ಲಾ ಕೇಡನ್ನು ಕುರಿತು ಕೇಳಿ ತಮ್ಮ ತಮ್ಮ ಸ್ಥಳಗಳಿಂದ ಬಂದರು. ಅವರಾ ರಂದರೆ; ತೇಮಾನ್ಯನಾದ ಎಲೀಫಜನು, ಶೂಹ್ಯನಾದ ಬಿಲ್ದದನು, ನಾಮಾಥ್ಯನಾದ ಚೋಫರನು; ಇವರು ಅವನಿಗೋಸ್ಕರ ಗೋಳಾಡುವದಕ್ಕೂ ಅವನನ್ನು ಸಂತೈ ಸುವದಕ್ಕೂ ಹೋಗಬೇಕೆಂದು ತಮ್ಮಲ್ಲಿ ಆಲೋಚನೆ ಮಾಡಿಕೊಂಡರು. |
12. | ಅವರು ದೂರದಿಂದ ತಮ್ಮ ಕಣ್ಣುಗಳನ್ನು ಎತ್ತಿದಾಗ ಅವನ ಗುರುತು ತಿಳಿಯದೆ ತಮ್ಮ ಸ್ವರವನ್ನೆತ್ತಿ ಅತ್ತು, ತಮ್ಮ ತಮ್ಮ ನಿಲುವಂಗಿಗಳನ್ನು ಹರಿದು, ತಮ್ಮ ತಲೆಯ ಮೇಲೆ ಧೂಳನ್ನೂ ಆಕಾಶದ ಕಡೆಗೆ ತೂರಿದರು. |
13. | ಅವರು ಅವನ ಸಂಗಡ ಏಳು ಹಗಲು ಏಳು ರಾತ್ರಿ ನೆಲದ ಮೇಲೆ ಕೂತುಕೊಂಡರು. ಒಬ್ಬನಾದರೂ ಒಂದು ಮಾತನ್ನೂ ಅವನಿಗೆ ಹೇಳಲಿಲ್ಲ; ಯಾಕಂದರೆ ಅವನ ದುಃಖವು ಬಹಳ ಅಧಿಕವೆಂದು ನೋಡಿದರು. |
← Job (2/42) → |