← Job (18/42) → |
1. | ಆಗ ಶೂಹ್ಯನಾದ ಬಿಲ್ದದನು ಉತ್ತರ ಕೊಟ್ಟು ಹೇಳಿದ್ದೇನಂದರೆ-- |
2. | ಎಲ್ಲಿಯ ವರೆಗೆ ಮಾತುಗಳನ್ನು ಮುಂದುವರಿಸುವಿರಿ? ಗ್ರಹಿಸಿ ಕೊಳ್ಳಿರಿ, ಆಮೇಲೆ ಮಾತನಾಡೋಣ. |
3. | ಯಾಕೆ ನಾವು ಪಶುವಿನ ಹಾಗೆ ಎಣಿಸಲ್ಪಟ್ಟೆವು? ಯಾಕೆ ನಿಮ್ಮ ಕಣ್ಣುಗಳಿಗೆ ತುಚ್ಛವಾಗಿದ್ದೇವೆ? |
4. | ಕೋಪದಿಂದ ತನ್ನನ್ನು ತಾನೇ ಹರಿಯುವವನೇ, ನಿನ್ನ ನಿಮಿತ್ತ ಭೂಮಿ ಬಿಡಲ್ಪಡಬೇಕೋ? ಬಂಡೆ ತನ್ನ ಸ್ಥಳದಿಂದ ತೊಲಗ ಬೇಕೋ? |
5. | ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿ ಹೋಗುವದು; ಅವನ ಬೆಂಕಿಯ ಜ್ವಾಲೆಯು ಪ್ರಕಾಶಿ ಸದು. |
6. | ಬೆಳಕು ಅವನ ಗುಡಾರದಲ್ಲಿ ಕತ್ತಲಾಗುವದು; ಅವನ ದೀಪವು ಅವನ ಕೂಡ ಆರಿ ಹೋಗುವದು |
7. | ಅವನ ಬಲದ ಹೆಜ್ಜೆಗಳು ಇಕ್ಕಟ್ಟಾಗುವವು; ಅವನ ಆಲೋಚನೆಯು ಅವನನ್ನು ದೊಬ್ಬುವದು. |
8. | ತನ್ನ ಕಾಲುಗಳಿಂದ ಬಲೆಯಲ್ಲಿ ಸಿಕ್ಕಿಕೊಂಡನು; ಉರ್ಲಿನ ಮೇಲೆ ನಡೆದುಕೊಳ್ಳುತ್ತಾನೆ. |
9. | ನೇಣು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವದು; ಕಳ್ಳನು ಅವನ ಮೇಲೆ ಬಲಗೊಳ್ಳುವನು. |
10. | ಅವನ ಪಾಶವು ಭೂಮಿ ಯಲ್ಲಿಯೂ ಅವನ ಕೊಂಡಿಯು ಹಾದಿಯಲ್ಲಿಯೂ ಇಡಲ್ಪಟ್ಟಿದೆ. |
11. | ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ ಅವನ ಕಾಲುಗಳನ್ನು ಎಬ್ಬಿಸುತ್ತವೆ. |
12. | ಅವನ ಬಲವು ಕುಸಿಯುವುದು, ನಾಶನವು ಅವನ ಬಳಿಯಲ್ಲಿ ಸಿದ್ಧವಾಗಿರುವದು. |
13. | ಅವನ ಚರ್ಮದ ಬಲವನ್ನು ತಿನ್ನುವನು; ಮರಣದ ಚೊಚ್ಟಲ ಮಗನು ಅವನ ಬಲವನ್ನು ತಿನ್ನುವನು. |
14. | ಅವನ ಭರವಸವು ಅವನ ಗುಡಾರದೊಳಗಿಂದ ಕೀಳಲ್ಪಡುವುದು; ಅದು ಅವ ನನ್ನು ದಿಗಿಲುಗಳ ಅರಸನ ಬಳಿಗೆ ನಡಿಸುವದು. |
15. | ಅವನಿಗಿಲ್ಲದ ಅವನ ಗುಡಾರದಲ್ಲಿ ಅದು ವಾಸಿ ಸುವುದು; ಅವನ ನಿವಾಸದ ಮೇಲೆ ಗಂಧಕ ಚದುರಿ ಬರುವದು. |
16. | ಕೆಳಗಿನಿಂದ ಅವನ ಬೇರುಗಳು ಒಣ ಗುವವು; ಮೇಲಿನಿಂದ ಅವನ ಕೊಂಬೆಯು ಕೊಯ್ಯ ಲ್ಪಡುವದು; |
17. | ಅವನ ಜ್ಞಾಪಕವು ದೇಶದೊಳಗಿಂದ ನಾಶವಾಗುವದು; ಬೀದಿಗಳಲ್ಲಿ ಅವನಿಗೆ ಹೆಸರು ಇಲ್ಲದೆ ಇರುವದು. |
18. | ಬೆಳಕಿನಿಂದ ಅವನನ್ನು ಕತ್ತ ಲೆಗೆ ದೊಬ್ಬುವರು; ಲೋಕದಿಂದ ಓಡಿಸುವರು. |
19. | ಅವನ ಜನರಲ್ಲಿ ಅವನಿಗೆ ಮಗನೂ ಇಲ್ಲ, ಮೊಮ್ಮಗನೂ ಇಲ್ಲ; ಅವನ ನಿವಾಸಗಳಲ್ಲಿ ಉಳಿ ದವನೂ ಇಲ್ಲ. |
20. | ಅವನ ತರುವಾಯ ಬರುವವರು ಆಶ್ಚರ್ಯಪಡುವರು; ಮುಂದೆ ಹೋದವರನ್ನು ದಿಗಿಲು ಹಿಡಿಯುವದು. |
21. | ನಿಶ್ಚಯವಾಗಿ ದುಷ್ಟರ ಮನೆಗಳು ಇಂಥವುಗಳೇ; ದೇವರನ್ನು ತಿಳಿಯದವನ ಸ್ಥಳವು ಇದೇ. |
← Job (18/42) → |