← Job (15/42) → |
1. | ಆಗ ತೇಮಾನ್ಯನಾದ ಎಲೀಫಜನು ಉತ್ತರಕೊಟ್ಟು ಹೇಳಿದ್ದೇನಂದರೆ-- |
2. | ಜ್ಞಾನಿಯು ವ್ಯರ್ಥ ತಿಳುವಳಿಕೆಯನ್ನು ನುಡಿದು ಮೂಡಣದ ಗಾಳಿಯಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುವದು ಉಂಟೋ? |
3. | ನಿಷ್ಪ್ರಯೋಜನವಾದ ನುಡಿಗಳಿಂದಲೂ ಕೆಲಸಕ್ಕೆ ಬಾರದ ಮಾತುಗಳಿಂದಲೂ ವಾದಿಸುವನೋ? |
4. | ಹೌದು, ನೀನು ಭಯವನ್ನು ವಿಸರ್ಜಿಸಿ ದೇವರ ಮುಂದಿನ ಧ್ಯಾನವನ್ನು ಕಡಿಮೆಮಾಡುತ್ತೀ. |
5. | ನಿನ್ನ ಬಾಯಿ ನಿನ್ನ ಅಕ್ರಮವನ್ನು ಬೋಧಿಸುತ್ತದೆ; ನೀನು ಕುಯುಕ್ತಿಯುಳ್ಳವರ ನಾಲಿಗೆಯನ್ನು ಆದುಕೊಳ್ಳುತ್ತೀ. |
6. | ನಾನಲ್ಲ, ನಿನ್ನ ಬಾಯಿ ಖಂಡಿಸುತ್ತದೆ; ಹೌದು, ನಿನ್ನ ತುಟಿಗಳು ನಿನಗೆ ವಿರೋಧವಾಗಿ ಸಾಕ್ಷಿ ಕೊಡುತ್ತವೆ. |
7. | ನೀನು ಮೊದಲನೆಯ ಮನುಷ್ಯನಾಗಿ ಹುಟ್ಟಿ ದ್ದೀಯೋ? ಗುಡ್ಡಗಳಿಗಿಂತ ಮುಂಚೆ ಉಂಟಾದಿಯೋ? |
8. | ದೇವರ ಗುಟ್ಟನ್ನು ಕೇಳಿದ್ದೀಯೋ? ಜ್ಞಾನವನ್ನು ನಿನಗೆ ನೀನೇ ಇಟ್ಟುಕೊಂಡಿದ್ದೀಯೋ? |
9. | ನಮಗೆ ತಿಳಿಯದೆ ಇರುವದನ್ನು ನೀನು ಏನು ತಿಳುಕೊಂಡಿರುವಿ? ನಮ್ಮಲ್ಲಿ ಇಲ್ಲದ್ದೇನು ಗ್ರಹಿಸಿದಿ? |
10. | ನೆರೆಯವರೂ ಬಹಳ ಮುದುಕರೂ ನಿನ್ನ ತಂದೆಗಿಂತ ಬಹಳ ದೊಡ್ಡವರೂ ನಮ್ಮಲ್ಲಿದ್ದಾರೆ. |
11. | ದೇವರ ಆದರಣೆಗಳು ನಿನಗೆ ಅಲ್ಪವೋ? ಗುಪ್ತವಾದದ್ದು ನಿನಗೆ ಏನಾದರೂ ಇದೆಯೋ? |
12. | ನಿನ್ನ ಹೃದಯವು ನಿನ್ನನ್ನು ಒಯ್ಯುವದು ಯಾಕೆ? ಯಾಕೆ ನಿನ್ನ ಕಣ್ಣುಗಳು ಮಿಟಿಕಿಸುವದು? |
13. | ದೇವರಿಗೆ ವಿರೋಧವಾಗಿ ನಿನ್ನ ಆತ್ಮವನ್ನು ತಿರುಗಿಸಿ ನಿನ್ನ ಬಾಯೊಳಗಿಂದ ಮಾತುಗಳನ್ನು ಹೊರಡಿಸುತ್ತೀ ಯಲ್ಲಾ. |
14. | ನಿರ್ಮಲನಾಗುವ ಹಾಗೆ ಮನುಷ್ಯನು ಎಷ್ಟರವನು? ನೀತಿವಂತನಾಗಿರುವ ಹಾಗೆ ಸ್ತ್ರೀಯಿಂದ ಹುಟ್ಟಿದವನು ಯಾರು? |
15. | ಇಗೋ, ತನ್ನ ಪರಿಶುದ್ಧರಲ್ಲಿ ಆತನು ನಂಬಿಕೆ ಇಡುವದಿಲ್ಲ; ಹೌದು, ಆಕಾಶಗಳು ಆತನ ದೃಷ್ಟಿಯಲ್ಲಿ ನಿರ್ಮಲವಲ್ಲ. |
16. | ನೀರಿನಂತೆ ಅನ್ಯಾಯವನ್ನು ಕುಡಿಯುವ ಮನುಷ್ಯನು ಎಷ್ಟು ಹೆಚ್ಚಾಗಿ ಕೆಟ್ಟು ಅಸಹ್ಯವಾಗಿಯೂ ಮಲೀನನಾದವನಾಗಿಯೂ ಇದ್ದಾನಲ್ಲಾ! |
17. | ನಾನು ನಿನಗೆ ತೋರಿಸುತ್ತೇನೆ, ನನ್ನನ್ನು ಕೇಳು; ನಾನು ನೋಡಿದ್ದನ್ನು ನಿನಗೆ ವಿವರಿಸುತ್ತೇನೆ. |
18. | ಜ್ಞಾನಿಗಳು ತಮ್ಮ ಹಿರಿಯರ ಕಾಲದಿಂದ ಅದನ್ನು ಮರೆ ಮಾಡದೆ ತಿಳಿಸಿದರು. |
19. | ಅವರಿಗೆ ಮಾತ್ರ ಭೂಮಿಯು ಕೊಡಲ್ಪಟ್ಟಿತು; ಅವರ ಮಧ್ಯದಲ್ಲಿ ಪರನು ದಾಟಲಿಲ್ಲ. |
20. | ದುಷ್ಟನು ತನ್ನ ದಿವಸಗಳಲ್ಲೆಲ್ಲಾ ವೇದನೆ ಪಡು ತ್ತಾನೆ; ವರುಷಗಳ ಲೆಕ್ಕವು ಬಲಾತ್ಕಾರಿಗೆ ಮರೆಯಾಗಿದೆ. |
21. | ಭಯಂಕರವಾದ ಶಬ್ದ ಅವನ ಕಿವಿಗಳಲ್ಲಿ ಅದೆ; ವೃದ್ಧಿಯಲ್ಲಿರುವಾಗ ಹಾಳುಮಾಡುವವನು ಅವನ ಮೇಲೆ ಬರುತ್ತಾನೆ. |
22. | ಕತ್ತಲೆಯೊಳಗಿಂದ ಹಿಂದಿರುಗು ತ್ತೇನೆಂದು ಅವನು ನಂಬುವದಿಲ್ಲ; ಅವನ ಕತ್ತಿಯು ಅವನಿಗಾಗಿ ಕಾದಿದೆ. |
23. | ಅವನು ರೊಟ್ಟಿಗೊಸ್ಕರ ಅದು ಎಲ್ಲಿ ಎಂದು ಅಲೆಯುತ್ತಾನೆ; ಕತ್ತಲೆಯ ದಿನ ತನ್ನ ಕೈ ಹತ್ತಿರ ಸಿದ್ಧವಾಗಿದೆ ಎಂದು ತಿಳಿದಿದ್ದಾನೆ. |
24. | ಇಕ್ಕಟ್ಟೂ ಸಂಕಟವೂ ಅವನನ್ನು ಹೆದರಿಸಿ, ಯುದ್ದಕ್ಕೆ ಸಿದ್ಧವಾದ ಅರಸನಂತೆ ಅವನ ಮೇಲೆ ಬೀಳುತ್ತವೆ. |
25. | ದೇವ ರಿಗೆ ವಿರೋಧವಾಗಿ ತನ್ನ ಕೈಚಾಚಿ, ಸರ್ವಶಕ್ತನಿಗೆ ವಿರೋಧವಾಗಿ ಬಲಗೊಂಡಿದ್ದಾನೆ. |
26. | ಅವನೆದುರಿಗೆ ಕುತ್ತಿಗೆಯಿಂದಲೂ ತನ್ನ ಗುರಾಣಿಯ ದಪ್ಪವಾದ ಗುಬ್ಬಿಯಿಂದಲೂ ಓಡುತ್ತಾನೆ. |
27. | ತನ್ನ ಮುಖವನ್ನು ಕೊಬ್ಬಿನಿಂದ ಮುಚ್ಚಿಕೊಂಡು, ತನ್ನ ನಡುವಿನ ಮೇಲೆ ಬೊಜ್ಜನ್ನು ಕಟ್ಟಿಕೊಂಡಿದ್ದಾನೆ. |
28. | ಹಾಳಾದ ಪಟ್ಟಣ ಗಳಲ್ಲಿಯೂ ನಿವಾಸಿಗಳು ಇಲ್ಲದಂಥ ದಿಬ್ಬೆಗಳಾ ಗುವದಕ್ಕೆ ಸಿದ್ಧವಾದಂಥ ಮನೆಗಳಲ್ಲಿಯೂ ವಾಸ ಮಾಡುತ್ತಾನೆ. |
29. | ಅವನು ಐಶ್ವರ್ಯವಂತನಾಗುವದಿಲ್ಲ; ಅವನ ಆಸ್ತಿ ನಿಲ್ಲುವದಿಲ್ಲ; ಅವನ ಸ್ವಾಸ್ಥ್ಯವು ಭೂಮಿಯ ಮೇಲೆ ವಿಸ್ತಾರವಾಗುವದಿಲ್ಲ. |
30. | ಕತ್ತಲೆಯೊಳಗಿಂದ ಅವನು ತೊಲಗುವದಿಲ್ಲ; ಅವನ ಕೊಂಬೆಗಳನ್ನು ಜ್ವಾಲೆಯು ಬಾಡಿಸುವದು; ಅವನ ಬಾಯಿಯ ಶ್ವಾಸ ದಿಂದ ತೊಲಗಿ ಹೋಗುತ್ತಾನೆ. |
31. | ಮೋಸ ಹೋದ ವನು ವ್ಯರ್ಥತ್ವವನ್ನು ನಂಬದೇ ಇರಲಿ; ವ್ಯರ್ಥತ್ವವೇ ಅವನ ಪ್ರತಿಫಲವಾಗಿರುವದು. |
32. | ಅವನ ಸಮಯಕ್ಕೆ ಮುಂಚೆಯೇ ಅದು ತೀರುವದು; ಅವನ ಕೊಂಬೆಯು ಹಸಿರಾಗುವದಿಲ್ಲ. |
33. | ಹಣ್ಣಾಗದ ದ್ರಾಕ್ಷೆಯ ಗಿಡದಂತೆ ತನ್ನ ಕಾಯಿ ಉದುರಿಸಿ ಎಣ್ಣೆಯ ಮರದಂತೆ ತನ್ನ ಹೂವನ್ನು ಚದರಿಸುವನು. |
34. | ಕಪಟಿಗಳ ಸಭೆಯು ಹಾಳಾಗುವದು; ಲಂಚದ ಗುಡಾರಗಳನ್ನು ಬೆಂಕಿಯು ಸುಡುವದು. |
35. | ಅವರು ಕೇಡಿನಿಂದ ಬಸುರಾಗಿ ವ್ಯರ್ಥತ್ವ ವನ್ನು ಹೆರುವರು; ಅವರ ಗರ್ಭವು ಮೋಸವನ್ನು ಸಿದ್ಧಮಾಡುವದು. |
← Job (15/42) → |