← Job (14/42) → |
1. | ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಕಡಿಮೆದಿವಸದವನೂ ಕಳವಳದಿಂದ ತುಂಬಿದ ವನೂ ಆಗಿದ್ದಾನೆ. |
2. | ಅವನು ಹೂವಿನ ಹಾಗೆ ಅರಳು ತ್ತಾನೆ ಮತ್ತು ಕೊಯ್ಯಲ್ಪಡುತ್ತಾನೆ; ಅವನು ನೆರಳಿನಂತೆ ಓಡಿಹೋಗುತ್ತಾನೆ, ಹಾಗೂ ಮುಂದುವರೆಯುವ ದಿಲ್ಲ. |
3. | ಹಾಗಾದರೆ ಇಂಥವನ ಮೇಲೆ ನಿನ್ನ ಕಣ್ಣುಗಳನ್ನು ತೆರೆಯುತ್ತೀಯೋ? ನನ್ನನ್ನು ನಿನ್ನ ಸಂಗಡ ನ್ಯಾಯಕ್ಕೆ ಬರಮಾಡುತ್ತೀಯೋ? |
4. | ಅಪವಿತ್ರವಾದದ್ದರಿಂದ ಶುದ್ಧ ವಾದದ್ದನ್ನು ತರುವವನಾರು? ಒಬ್ಬನೂ ಇಲ್ಲ. |
5. | ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ. |
6. | ಹೀಗಿರುವ ದರಿಂದ ಅವನು ಕೂಲಿಯವನ ಹಾಗೆ ತನ್ನ ದಿವಸದಲ್ಲಿ ವಿಶ್ರಾಂತಿ ಪಡೆಯುವಂತೆ ಅವನು ಪೂರೈಸುವ ವರೆಗೆ ಅವನಿಂದ ತಿರುಗು. |
7. | ಮರಕ್ಕೆ ನಿರೀಕ್ಷೆಯುಂಟು; ಅದು ಕೊಯ್ಯಲ್ಪಟ್ಟರೆ ಮತ್ತೆ ಚಿಗುರುವದು. ಚಿಗುರುವದನ್ನು ನಿಲ್ಲಿಸುವದೇ ಇಲ್ಲ. |
8. | ಅದರ ಬೇರು ಭೂಮಿಯಲ್ಲಿ ಹಳೆಯದಾದರೂ ನೆಲದಲ್ಲಿ ಅದರ ಬುಡವು ಸತ್ತರೂ |
9. | ನೀರಿನ ವಾಸನೆಯಿಂದ ಚಿಗುರಿ ಸಸಿಯ ಹಾಗೆ ಕೊಂಬೆ ಗಳನ್ನು ಬಿಡುವದು. |
10. | ಆದರೆ ಮನುಷ್ಯನು ಸತ್ತು ಕ್ಷಯಿಸಿ ಹೋಗುತ್ತಾನೆ; ಮನುಷ್ಯನು ಪ್ರಾಣ ಬಿಟ್ಟ ಬಳಿಕ ಅವನೆಲ್ಲಿರುವನು? |
11. | ಹೇಗೆ ನೀರು ಸಮುದ್ರ ದಿಂದ ಮುಗಿದು ಹೋಗುತ್ತದೋ ಪ್ರವಾಹವು ಆರಿ ಬತ್ತಿಹೋಗುತ್ತದೆ ಹಾಗೆ ಮನುಷ್ಯನು ಮಲಗುತ್ತಾನೆ, |
12. | ಏಳುವದೇ ಇಲ್ಲ; ಆಕಾಶಗಳು ಇಲ್ಲದೆ ಹೋಗುವ ವರೆಗೆ ಅವರು ಎಚ್ಚರಗೊಳ್ಳುವದಿಲ್ಲ. ನಿದ್ರೆಯಿಂದ ಎಬ್ಬಿಸಲ್ಪಡುವದೂ ಇಲ್ಲ. |
13. | ನೀನು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿನ್ನ ಕೋಪವು ತಿರುಗುವ ವರೆಗೂ ನನ್ನನ್ನು ಅಡಗಿಸಿ ನನಗೆ ನೇಮಕವಾದ ಸಮಯವನ್ನು ನೇಮಿಸಿ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು. |
14. | ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ? ನನಗೆ ನೇಮಕ ಮಾಡಿದ ಸಮಯದ ದಿನಗಳೆಲ್ಲಾ ನನಗೆ ಬದಲು ಬರುವ ವರೆಗೆ ನಾನು ಕಾದುಕೊಂಡಿರುವೆನು. |
15. | ನೀನು ಕರೆಯುವಿ, ನಾನು ನಿನಗೆ ಉತ್ತರಕೊಡುವೆನು; ನಿನ್ನ ಕೈಕೆಲಸವನ್ನು ಬಯಸುವಿ. |
16. | ಈಗ ನನ್ನ ಹೆಜ್ಜೆಗಳನ್ನು ಎಣಿಕೆ ಮಾಡುತ್ತೀ; ನೀನು ನನ್ನ ಪಾಪವನ್ನು ನೋಡಿ ಕೊಳ್ಳುತ್ತೀಯಲ್ಲವೋ? |
17. | ನನ್ನ ದ್ರೋಹವನ್ನು ಚೀಲ ದಲ್ಲಿ ಮುದ್ರಿಸಿದ್ದಿ; ನನ್ನ ಅಕ್ರಮವನ್ನು ಮುಚ್ಚಿ ಹೊಲಿ ದಿದ್ದೀ. |
18. | ಆದರೂ ಬೆಟ್ಟವು ಬಿದ್ದು ಹಾಳಾಗುವದು; ಬಂಡೆಯು ತನ್ನ ಸ್ಥಳದಿಂದ ಜರಗುವದು. |
19. | ನೀರು ಕಲ್ಲುಗಳನ್ನು ಕೊರೆಯುವದು. ಭೂಮಿಯ ಧೂಳಿನಿಂದ ಬೆಳೆದು ಬರುವವುಗಳನ್ನು ನೀನು ತೊಳೆದುಬಿಡುತ್ತೀ; ಮನುಷ್ಯನ ನಿರೀಕ್ಷೆಯನ್ನು ನಾಶಮಾಡುತ್ತೀ. |
20. | ನೀನು ಅವನಿಗೆ ನಿತ್ಯಕ್ಕೂ ಮೇಲುಗೈ ಆಗಿರುವಿ; ಅವನು ಹೊರಟು ಹೋಗುವನು; ಅವನ ಮುಖಭಾವವನ್ನು ಮಾರ್ಪಡಿಸಿ ಅವನನ್ನು ಕಳುಹಿಸಿ ಬಿಡುತ್ತೀ. |
21. | ಅವನ ಮಕ್ಕಳು ಘನತೆಗೆ ಬರುತ್ತಾರೆ; ಅದು ಅವನಿಗೆ ತಿಳಿಯುವದಿಲ್ಲ; ಅವರು ಹೀನರಾಗುತ್ತಾರೆ, ಅವನು ಗ್ರಹಿಸಿಕೊಳ್ಳುವದಿಲ್ಲ. |
22. | ಆದರೆ ಅವನ ಮೇಲಿರುವ ಮಾಂಸವು ನೋಯುವದು; ಅವನಲ್ಲಿರುವ ಅವನ ಆತ್ಮವು ದುಃಖಪಡುವದು. |
← Job (14/42) → |