← Job (12/42) → |
1. | ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು-- |
2. | ನಿಸ್ಸಂದೇಹವಾಗಿ ನೀವೇ ಆ ಜನರು; ನಿಮ್ಮ ಸಂಗಡಲೇ ಜ್ಞಾನವು ಸಾಯುವದು. |
3. | ನಿಮ್ಮ ಹಾಗೆಯೇ ನನಗೂ ಸಹ ತಿಳುವಳಿಕೆ ಉಂಟು; ನಾನು ನಿಮಗಿಂತ ಕಡಿಮೆ ಇಲ್ಲ. ಹೌದು, ಇಂಥಾ ಮಾತುಗಳನ್ನು ತಿಳಿಯದಿರುವವನು ಯಾರು? |
4. | ನಾನು ನೆರೆಯವನಿಗೆ ನಗೆಯಾದವನು; ದೇವರಿಗೆ ಕೂಗು ತ್ತೇನೆ. ಆತನು ಉತ್ತರ ಕೊಡುತ್ತಾನೆ; ನೀತಿವಂತ ಮನು ಷ್ಯನನ್ನು ಗೇಲಿಮಾಡಿ ನಗುವರು. |
5. | ತನ್ನ ಕಾಲುಗ ಳಿಂದ ಜಾರುವದಕ್ಕೆ ಸಿದ್ಧನಾಗಿರುವವನು, ನೆಮ್ಮದಿಯಾ ಗಿರುವವನ ಯೋಚನೆಯಲ್ಲಿ ತಿರಸ್ಕಾರದ ದೀವಟಿ ಗೆಯಾಗಿದ್ದಾನೆ. |
6. | ಕಳ್ಳರ ಗುಡಾರಗಳು ವೃದ್ಧಿಯಾ ಗುತ್ತವೆ; ದೇವರಿಗೆ ಕೋಪ ಎಬ್ಬಿಸುವವರಿಗೆ ಅಭಯ ಉಂಟು. ದೇವರು ಅವರ ಕೈಯಲ್ಲಿ ಸಮೃದ್ಧಿಯನ್ನು ಬರ ಮಾಡುತ್ತಾನೆ. |
7. | ಆದರೂ ಪಶುಗಳನ್ನು ಕೇಳು. ಅವು ನಿನಗೆ ಬೋಧಿ ಸುವವು; ಆಕಾಶದ ಪಕ್ಷಿಗಳನ್ನು ಕೇಳು, ಅವು ನಿನಗೆ ತಿಳಿಸುವವು. |
8. | ಅಥವಾ ಭೂಮಿಯ ಸಂಗಡ ಮಾತ ನಾಡು; ಅದು ನಿನಗೆ ಬೋಧಿಸುವದು; ಸಮುದ್ರದ ವಿಾನುಗಳು ನಿನಗೆ ವಿವರಿಸುವವು. |
9. | ಕರ್ತನ ಕೈ ಇದನ್ನು ಮಾಡಿತೆಂದು ಇವೆಲ್ಲವುಗಳಲ್ಲಿ ತಿಳಿಯದಿರು ವದು ಯಾವದು? |
10. | ಆತನ ಕೈಯಲ್ಲಿ ಎಲ್ಲಾ ಜೀವಿ ಗಳ ಪ್ರಾಣವು ಎಲ್ಲಾ ಮನುಷ್ಯರ ಶ್ವಾಸವೂ ಇವೆ. |
11. | ಕಿವಿಯು ನುಡಿಗಳನ್ನು ಶೋಧಿಸುವದಿಲ್ಲವೇ? ಬಾಯಿಯು ಆಹಾರವನ್ನು ರುಚಿನೋಡುವದಿಲ್ಲವೇ? |
12. | ಮುದುಕರಲ್ಲಿ ಜ್ಞಾನವೂ ದಿನಗಳುದ್ದಕ್ಕೂ ಗ್ರಹಿ ಕೆಯೂ ಇವೆ. |
13. | ಜ್ಞಾನವೂ ಪರಾಕ್ರಮವೂ ಆತನಲ್ಲಿವೆ; ಆಲೋ ಚನೆಯೂ ಗ್ರಹಿಕೆಯೂ ಆತನವೇ. |
14. | ಇಗೋ, ಆತನು ಕೆಡವುತ್ತಾನೆ; ಅದು ತಿರುಗಿ ಕಟ್ಟಲ್ಪಡುವದಿಲ್ಲ. ಆತನು ಮನುಷ್ಯನಿಂದ ಮುಚ್ಚಿಬಿಡುತ್ತಾನೆ; ಅದು ತೆರೆ ಯಲ್ಪಡುವದಿಲ್ಲ. |
15. | ಇಗೋ, ಆತನು ಜಲಗಳನ್ನು ಬಿಗಿ ಹಿಡಿಯುತ್ತಾನೆ; ಅವು ಬತ್ತಿಹೋಗುತ್ತವೆ; ಆತನು ಅವುಗಳನ್ನು ಹೊರಗೆ ಕಳುಹಿಸಿದಾಗ ಅವು ಭೂಮಿ ಯನ್ನು ಬುಡಮೇಲು ಮಾಡುತ್ತವೆ. |
16. | ಬಲವೂ ಸುಜ್ಞಾ ನವೂ ಆತನಲ್ಲಿವೆ; ಮೋಸಹೋಗುವವನೂ ಮೋಸ ಗೊಳಿಸುವವನೂ ಆತನವರೇ. |
17. | ಆತನು ಸಲಹೆಗಾರ ರನ್ನು ಕೇಡಿಗೆ ನಡಿಸುತ್ತಾನೆ; ನ್ಯಾಯಾಧಿಪತಿಗಳನ್ನು ಮೂರ್ಖರನ್ನಾಗಿ ಮಾಡುತ್ತಾನೆ. |
18. | ಆತನು ಅರಸರ ಬಂಧನಗಳನ್ನು ಬಿಡಿಸಿ ಅವರ ನಡುಗಳಿಗೆ ನಡುಕಟ್ಟನ್ನು ಕಟ್ಟುತ್ತಾನೆ. |
19. | ಆತನು ಪ್ರಧಾನರನ್ನು ಕೇಡಿಗೆ ನಡಿಸು ತ್ತಾನೆ; ಬಲಿಷ್ಠರನ್ನು ಕೆಡವಿಬಿಡುತ್ತಾನೆ. |
20. | ನಂಬಿಕೆಯು ಳ್ಳವರ ಮಾತನ್ನು ತೆಗೆದುಹಾಕುತ್ತಾನೆ; ವೃದ್ಧರ ವಿವೇಕ ವನ್ನು ಇಲ್ಲದಾಗಿ ಮಾಡುತ್ತಾನೆ. |
21. | ಅಧಿಪತಿಗಳ ಮೇಲೆ ತಿರಸ್ಕಾರವನ್ನು ಹೊಯ್ಯುತ್ತಾನೆ; ಬಲಿಷ್ಠರ ಬಲವನ್ನು ಕುಂದಿಸುತ್ತಾನೆ. |
22. | ಕತ್ತಲೆಯೊಳಗಿನಿಂದ ಅಗಾಧವಾದ ವಿಷಯಗಳನ್ನು ಪ್ರಕಟಪಡಿಸುತ್ತಾನೆ; ಮರಣದ ನೆರ ಳನ್ನು ಬೆಳಕಿಗೆ ತರುತ್ತಾನೆ. |
23. | ಆತನು ಜನಾಂಗಗಳನ್ನು ಹೆಚ್ಚಿಸಿ ಅವುಗಳನ್ನು ನಾಶಮಾಡುತ್ತಾನೆ. ಜನಾಂಗ ಗಳನ್ನು ವಿಸ್ತಾರಮಾಡಿ ತಿರುಗಿ ಅವುಗಳನ್ನು ಹತ್ತಿಕ್ಕುತ್ತಾನೆ. |
24. | ಆತನು ಭೂಮಿಯ ಮುಖ್ಯಸ್ಥರ ವಿವೇಕವನ್ನು ತೆಗೆದು ಬಿಡುತ್ತಾನೆ. ಮಾರ್ಗವಿಲ್ಲದ ಕಾಡಿನಲ್ಲಿ ಅವರನ್ನು ಅಲೆಯ ಮಾಡುತ್ತಾನೆ. |
25. | ಅವರು ಬೆಳಕು ಇಲ್ಲದೆ ಕತ್ತಲೆಯಲ್ಲಿ ತಡವಾಡುತ್ತಾರೆ; ಆತನು ಅವರನ್ನು ಅಮಲೇರಿದವನ ಹಾಗೆ ಓಲಾಡುವಂತೆ ಮಾಡುತ್ತಾನೆ. |
← Job (12/42) → |