← Jeremiah (50/52) → |
1. | ಬಾಬೆಲಿಗೆ ವಿರೋಧವಾಗಿಯೂ ಕಸ್ದೀಯರ ದೇಶಕ್ಕೆ ವಿರೋಧವಾಗಿಯೂ ಕರ್ತನು ಪ್ರವಾದಿಯಾದ ಯೆರೆವಿಾಯನ ಮೂಲಕ ಹೇಳಿಸಿದ ವಾಕ್ಯವು. |
2. | ಜನಾಂಗಗಳಿಗೆ ತಿಳಿಸಿರಿ, ಸಾರಿರಿ; ಧ್ವಜವನ್ನೆತ್ತಿರಿ; ಸಾರಿರಿ, ಮರೆಮಾಡಬೇಡಿರಿ, ಬಾಬೆಲು ಹಿಡಿಯ ಲ್ಪಟ್ಟಳು, ಬೇಲ್‌ನಿಗೆ ನಾಚಿಕೆಯಾಯಿತು, ಮೆರೋದಾ ಕನು ತುಂಡು ತುಂಡಾಗಿ ಮುರಿದು ಹೋದನು, ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು. ಅವಳ ವಿಗ್ರಹಗಳು ಮುರಿದು ಹೋದವೆಂದು ಹೇಳಿರಿ; |
3. | ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ; ಅದು ಅವಳ ದೇಶವನ್ನು ಹಾಳು ಮಾಡಿ ಬಿಡುವದು; ಅವಳಲ್ಲಿ ಯಾರೂ ವಾಸಿಸುವದಿಲ್ಲ; ಮನುಷ್ಯರೂ ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ. |
4. | ಆ ದಿವಸಗಳಲ್ಲಿಯೂ ಕಾಲ ದಲ್ಲಿಯೂ ಇಸ್ರಾಯೇಲಿನ ಮಕ್ಕಳು ಬರುವರು; ಅವರೂ ಯೆಹೂದನ ಮಕ್ಕಳೂ ಒಟ್ಟಾಗಿ ಕೂಡಿ ಕೊಳ್ಳುವರೆಂದು ಕರ್ತನು ಅನ್ನುತ್ತಾನೆ. ಅವರು ಅಳುತ್ತಾ ಹೋಗಿ, ತಮ್ಮ ದೇವರಾದ ಕರ್ತನನ್ನು ಹುಡುಕುವರು. |
5. | ಚೀಯೋನಿನ ಕಡೆಗೆ ಅಭಿಮುಖರಾಗಿ ಅದರ ಮಾರ್ಗವನ್ನು ವಿಚಾರಿಸಿ--ಬನ್ನಿ, ಮರೆತುಹೋಗದ ನಿತ್ಯವಾದ ಒಡಂಬಡಿಕೆಯಿಂದ ಕರ್ತನನ್ನು ಸೇರಿಸಿ ಕೊಳ್ಳೋಣ ಅನ್ನುವರು. |
6. | ನನ್ನ ಜನರು ಕಳೆದುಹೋದ ಕುರಿಗಳಾಗಿದ್ದರು; ಅವರ ಕುರುಬರು ಅವರನ್ನು ತಪ್ಪಿ ಹೋಗುವಂತೆ ಮಾಡಿದರು; ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು; ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು; ಮಲಗುವ ಸ್ಥಳವನ್ನು ಮರೆತುಬಿಟ್ಟರು. |
7. | ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟರು, ಅವರ ಎದುರಾಳಿಗಳು--ನಮ್ಮಲ್ಲಿ ಅಪರಾಧವಿಲ್ಲ; ನೀತಿಯ ನಿವಾಸವಾದ ಕರ್ತನಿಗೆ, ಅವರ ತಂದೆಗಳ ನಿರೀಕ್ಷಣೆಯಾದ ಕರ್ತನಿಗೆ ವಿರೋಧವಾಗಿ ಪಾಪಮಾಡಿದ್ದಾರೆಂದು ಅಂದರು. |
8. | ಬಾಬೆಲಿನೊಳ ಗಿಂದ ಓಡಿಹೋಗಿರಿ; ಕಸ್ದೀಯರ ದೇಶದಿಂದ ಹೊರ ಡಿರಿ, ಮಂದೆಯ ಮುಂದೆ ಹೋತಗಳ ಹಾಗೆ ಇರ್ರಿ. |
9. | ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ; ಬಾಬೆಲಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ. ಅವರು ಅದಕ್ಕೆ ವಿರೋಧ ವಾಗಿ ಯುದ್ಧವನ್ನು ಸಿದ್ಧಮಾಡುವರು; ಅಲ್ಲಿಂದ ಅದು ಹಿಡಿಯಲ್ಪಡುವದು; ಅವರ ಬಾಣಗಳು ಬಲಿಷ್ಠನಾದ ಪ್ರವೀಣಶಾಲಿಯ ಹಾಗಿರುವವು. ಯಾವದೂ ವ್ಯರ್ಥವಾಗಿ ತಿರುಗವು. |
10. | ಕಸ್ದೀಯರ ದೇಶವು ಸುಲಿಗೆಯಾಗುವದು; ಅದನ್ನು ಸುಲುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವದೆಂದು ಕರ್ತನು ಅನ್ನುತ್ತಾನೆ. |
11. | ನನ್ನ ಸ್ವಾಸ್ತ್ಯವನ್ನು ನಾಶಮಾಡಿದವರೇ, ನೀವು ಸಂತೋಷಿಸಿದ್ದರಿಂದಲೂ ಉಲ್ಲಾಸಿಸಿದ್ದರಿಂದಲೂ ಕೊಬ್ಬಿದ ಕಡಸಿನ ಹಾಗೆ ಗರ್ವಪಟ್ಟದ್ದರಿಂದಲೂ ಹೋರಿಗಳ ಹಾಗೆ ಹೂಂಕರಿಸಿದ್ದರಿಂದಲೂ |
12. | ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು; ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು; ಇಗೋ, ಜನಾಂಗ ಗಳಲ್ಲಿ ಅಂತ್ಯವಾದದ್ದು ಕಾಡೂ ಒಣ ಭೂಮಿಯೂ ಅರಣ್ಯವೂ ಆಗುವದು. |
13. | ಕರ್ತನ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವದಿಲ್ಲ; ಸಂಪೂರ್ಣ ಹಾಳಾಗುವದು ಬಾಬೆಲನ್ನು ಹಾದುಹೋಗುವವ ರೆಲ್ಲರು ಅದರ ಎಲ್ಲಾ ಬಾಧೆಗಳ ವಿಷಯ ವಿಸ್ಮಯಪಟ್ಟು ಸಿಳ್ಳಿಡುವರು. |
14. | ಬಿಲ್ಲನ್ನು ಬೊಗ್ಗಿಸುವವರೆಲ್ಲರೇ, ಬಾಬೆಲಿಗೆ ವಿರೋಧವಾಗಿ ಸುತ್ತಲೂ ಯುದ್ಧವನ್ನು ಸಿದ್ಧಮಾಡಿರಿ. ಬಾಣಗಳನ್ನು ಅದಕ್ಕೆ ಎಸೆಯಿರಿ; ಕಡಿಮೆ ಮಾಡಬೇಡಿರಿ; ಅದು ಕರ್ತನಿಗೆ ವಿರೋಧವಾಗಿ ಪಾಪಮಾಡಿದೆ. |
15. | ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ; ಒಳಪಟ್ಟಿತು; ಅದರ ಅಸ್ತಿವಾರಗಳು ಬಿದ್ದು ಹೋದವು; ಅದರ ಗೋಡೆಗಳು ಕೆಡವಲ್ಪಟ್ಟವು; ಅದು ಕರ್ತನ ಪ್ರತಿದಂಡನೆಯೇ, ಅದರಿಂದ ಪ್ರತಿ ದಂಡನೆ ತಕ್ಕೊಳ್ಳಿರಿ. ಅದು ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. |
16. | ಬಿತ್ತುವವನನ್ನೂ ಸುಗ್ಗಿ ಕಾಲದಲ್ಲಿ ಕುಡುಗೋಲು ಹಿಡಿಯುವವನನ್ನೂ ಬಾಬೆಲಿನೊಳ ಗಿಂದ ಕಡಿದು ಬಿಡಿರಿ; ಕಷ್ಟಪಡಿಸುವ ಕತ್ತಿಯ ಭಯದಿಂದ ಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು; ತಮ್ಮ ತಮ್ಮ ದೇಶಗಳಿಗೆ ಓಡಿ ಹೋಗುವರು. |
17. | ಇಸ್ರಾಯೇಲನು ಚದರಿಹೋದ ಕುರಿಯಾಗಿ ದ್ದನು; ಸಿಂಹಗಳು ಅವನನ್ನು ಓಡಿಸಿಬಿಟ್ಟವು; ಮೊದಲು ಅಶ್ಶೂರಿನ ಅರಸನು ಅವನನ್ನು ನುಂಗಿಬಿಟ್ಟನು. ಕಡೆಯಲ್ಲಿ ಬಾಬೆಲಿನ ಅರಸನಾದ ಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ. |
18. | ಆದದರಿಂದ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಅಶ್ಶೂರಿನ ಅರಸನನ್ನು ಶಿಕ್ಷಿಸಿದ ಹಾಗೆ, ಬಾಬೆಲಿನ ಅರಸನನ್ನೂ ಅವನ ದೇಶವನ್ನೂ ಶಿಕ್ಷಿಸುತ್ತೇನೆ. |
19. | ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರಿಗಿ ಬರಮಾಡುತ್ತೇನೆ; ಅವನು ಕರ್ಮೆಲಿ ನಲ್ಲಿಯೂ ಬಾಷಾನಿನ್ನಲ್ಲಿಯೂ ಮೇಯುವನು; ಅವನ ಪ್ರಾಣವು ಎಫ್ರಾಯಿಮ್ ಬೆಟ್ಟದಲ್ಲಿಯೂ ಗಿಲ್ಯಾದಿ ನಲ್ಲಿಯೂ ತೃಪ್ತಿಹೊಂದುವದು. |
20. | ಕರ್ತನು ಹೀಗೆ ಅನ್ನುತ್ತಾನೆ--ಆ ದಿವಸಗಳಲ್ಲಿ ಆ ಕಾಲದಲ್ಲಿ ಇಸ್ರಾ ಯೇಲಿನ ಅಕ್ರಮವನ್ನು ಹುಡುಕಿದರೂ ಅಲ್ಲಿ ಏನೂ ಇರದು; ಯೆಹೂದದ ಪಾಪಗಳನ್ನು ಹುಡುಕಿದರೂ ಅವು ಸಿಕ್ಕುವದಿಲ್ಲ. ನಾನು ಉಳಿಸುವವರನ್ನು ಮನ್ನಿಸುತ್ತೇನೆ. |
21. | ಮೆರಾಥಯಿಮ್ ದೇಶಕ್ಕೂ ಪೆಕೋದಿನ ನಿವಾಸಿ ಗಳಿಗೂ ವಿರೋಧವಾಗಿ ಏರಿಹೋಗು; ಅವರನ್ನು ಹಿಂದಟ್ಟಿ ಕೆಡಿಸಿಬಿಟ್ಟು ಸಂಪೂರ್ಣ ನಾಶಮಾಡು, ನಾನು ನಿನಗೆ ಆಜ್ಞಾಪಿಸಿದ್ದೆಲಾದರ ಪ್ರಕಾರ ಮಾಡು ಎಂದು ಕರ್ತನು ಅನ್ನುತ್ತಾನೆ. |
22. | ಯುದ್ಧದ ಶಬ್ದವೂ ದೊಡ್ಡ ನಾಶನವೂ ದೇಶದಲ್ಲಿ ಇರುವದು. |
23. | ಎಲ್ಲಾ ಭೂಮಿಯ ಸುತ್ತಿಗೆಯೂ ಹೇಗೆ ತುಂಡಾಗಿ ಮುರಿಯಲ್ಪಟ್ಟಿತು; ಬಾಬೆಲ್ ಹೇಗೆ ಜನಾಂಗಗಳೊಳಗೆ ಹಾಳಾಯಿತು! |
24. | ನಾನು ಬೋನನ್ನು ಇಟ್ಟೆನು; ಹೌದು, ಬಾಬೆಲೇ ನೀನು ಹಿಡಿಯಲ್ಪಟ್ಟಿದ್ದೀ; ಆದರೆ ನಿನಗೆ ತಿಳಿಯದಿತ್ತು; ನೀನು ಕರ್ತನಿಗೆ ವಿರೋಧವಾಗಿ ಜಗಳವಾಡಿದ್ದ ರಿಂದಲೇ ಸಿಕ್ಕಿದ್ದೀ; ವಶಮಾಡಲ್ಪಟ್ಟಿದ್ದೀ; |
25. | ಕರ್ತನು ತನ್ನ ಆಯುಧ ಶಾಲೆಯನ್ನು ತೆರೆದು, ರೋಷದ ಆಯುಧಗಳನ್ನು ಹೊರಗೆ ತಂದಿದ್ದಾನೆ; ಕಸ್ದೀಯರ ದೇಶದಲ್ಲಿ ಸೈನ್ಯಗಳ ಕರ್ತನಾದ ದೇವರಿಗೆ ನಿರ್ವಹಿಸ ಬೇಕಾದ ಕಾರ್ಯವುಂಟು. |
26. | ಕಟ್ಟಕಡೆಯ ಮೇರೆ ಯಿಂದ ಅದಕ್ಕೆ ವಿರೋಧವಾಗಿ ಬನ್ನಿ; ಅದರ ಕಣಜಗಳನ್ನು ತೆರೆಯಿರಿ; ಅದನ್ನು ದಿಬ್ಬಗಳಂತೆ ತುಳಿ ಯಿರಿ; ಸಂಪೂರ್ಣವಾಗಿ ನಾಶಮಾಡಿರಿ; ಅದಕ್ಕೆ ಒಂದೂ ಉಳಿಯದಿರಲಿ. |
27. | ಅದರ ಹೋರಿಗಳನ್ನೆಲ್ಲಾ ಕೊಂದುಹಾಕಿರಿ; ಅವು ಕೊಲೆಗೆ ಇಳಿಯಲಿ; ಅವರಿಗೆ ಅಯ್ಯೋ! ಅವರ ದಿನವೂ ಅವರ ವಿಚಾರಣೆಯ ಕಾಲವೂ ಬಂತು. |
28. | ಅವರು ಚೀಯೋನಿನಲ್ಲಿ ನಮ್ಮ ದೇವರಾದ ಕರ್ತನ ಪ್ರತಿದಂಡನೆಯನ್ನೂ ಆತನ ಆಲಯದ ಪ್ರತಿ ದಂಡನೆ ಯನ್ನೂ ತಿಳಿಸುತ್ತಾ, ಬಾಬೆಲಿನ ದೇಶದಿಂದ ತಪ್ಪಿಸಿ ಕೊಂಡು ಓಡಿ ಹೋಗುವವರ ಸ್ವರವು! |
29. | ಬಾಬೆಲಿಗೆ ವಿರೋಧವಾಗಿ ಬಿಲ್ಲಿನವರನ್ನು ಒಟ್ಟಾಗಿ ಕರೆಯಿರಿ; ಬಿಲ್ಲು ಬೊಗ್ಗಿಸುವವರೆಲ್ಲರೇ, ಅದಕ್ಕೆ ವಿರೋಧವಾಗಿ ಸುತ್ತಲು ದಂಡು ಕಟ್ಟಿರಿ; ಅದರಲ್ಲಿ ಯಾವದು ತಪ್ಪಿಸಿ ಕೊಳ್ಳಲಾರದೆ ಇರಲಿ. ಅದರ ಕೃತ್ಯಗಳ ಪ್ರಕಾರ ಅದಕ್ಕೆ ಪ್ರತಿಫಲ ಕೊಡಿರಿ; ಅದು ಮಾಡಿದ್ದೆಲ್ಲಾದರ ಹಾಗೆ ಅದಕ್ಕೆ ಮಾಡಿರಿ; ಕರ್ತನಿಗೆ ವಿರೋಧವಾಗಿಯೂ ಇಸ್ರಾಯೇಲಿನ ಪರಿಶುದ್ಧನಿಗೆ ವಿರೋಧವಾಗಿಯೂ ಅದು ಗರ್ವ ತೋರಿಸಿತು. |
30. | ಆದದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು; ಅದರ ಯುದ್ಧಸ್ಥರೆಲ್ಲರು ಆ ದಿವಸದಲ್ಲಿ ತೆಗೆದುಹಾಕಲ್ಪಡು ವರೆಂದು ಕರ್ತನು ಅನ್ನುತ್ತಾನೆ. |
31. | ಅತಿ ಗರ್ವಿಷ್ಠನೇ, ಇಗೋ, ನಾನು ನಿನಗೆ ವಿರೋಧವಾಗಿದ್ದೇನೆಂದು ಸೈನ್ಯಗಳ ಕರ್ತನಾದ ದೇವರು ಅನ್ನುತ್ತಾನೆ; ನಿನ್ನ ದಿವಸವೂ ನಿನ್ನ ವಿಚಾರಣೆಯ ಕಾಲವೂ ಬಂತು. |
32. | ಆಗ ಅತಿ ಗರ್ವದ (ರಾಜ್ಯವು) ಎಡವಿ ಬೀಳುವದು; ಅದನ್ನು ಎಬ್ಬಿಸುವದಕ್ಕೆ ಯಾರೂ ಇರುವದಿಲ್ಲ; ಅದರ ಪಟ್ಟಣಗಳಲ್ಲಿ ನಾನು ಬೆಂಕಿ ಹಚ್ಚುವೆನು, ಅದು ಅದರ ಸುತ್ತಲಿರುವದನ್ನೆಲ್ಲಾ ನುಂಗಿಬಿಡುವದು. |
33. | ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ-- ಇಸ್ರಾಯೇಲಿನ ಮಕ್ಕಳೂ ಯೆಹೂದನ ಮಕ್ಕಳೂ ಕೂಡ ಹಿಂಸಿಸಲ್ಪಟ್ಟರು; ಅವರನ್ನು ಸೆರೆಗೆ ಒಯ್ಯುವವ ರೆಲ್ಲರು ಅವರನ್ನು ಬಲವಾಗಿ ಹಿಡಿದು, ಕಳುಹಿಸಿ ಬಿಡಲೊಲ್ಲದೆ ಇದ್ದರು. |
34. | ಅವರ ವಿಮೋಚಕನು ಬಲಿಷ್ಠನೇ, ಸೈನ್ಯಗಳ ಕರ್ತನು ಆತನ ಹೆಸರು; ಆತನು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ ಬಾಬೆಲಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವನು. |
35. | ಕಸ್ದೀಯರಿಗೂ ಬಾಬೆಲಿನ ನಿವಾಸಿಗಳಿಗೂ ಅದರ ಪ್ರಧಾನರಿಗೂ ಜ್ಞಾನಿಗಳಿಗೂ ವಿರೋಧವಾಗಿ ಕತ್ತಿ ಉಂಟೆಂದು ಕರ್ತನು ಅನ್ನುತ್ತಾನೆ. |
36. | ಸುಳ್ಳುಗಾರರಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಮೂರ್ಖರಾಗು ವರು; ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವರು ಭಯಭ್ರಾಂತಿ ಪಡುವರು. |
37. | ಅವರ ಕುದುರೆಗಳಿಗೂ ರಥಗಳಿಗೂ ಅದರೊಳ ಗಿರುವ ಎಲ್ಲಾ ಜನರಿಗೆ ವಿರೋಧವಾಗಿ ಖಡ್ಗ ಉಂಟು. ಅವರು ಹೆಂಗಸರ ಹಾಗೆ ಬೆದರುವರು; ಅದರ ಬೊಕ್ಕಸಗಳಿಗೆ ವಿರೋಧವಾಗಿಯೂ ಖಡ್ಗ ಉಂಟು. ಅವು ಕೊಳ್ಳೆಯಾಗುವವು. |
38. | ಬೇಗೆಯು ಅವರ ನೀರನ್ನೆಲ್ಲಾ ಹೀರಲಿ; ಅದು ಬತ್ತಿ ಹೋಗುವದು; ಅದು ವಿಗ್ರಹಗಳ ದೇಶವೇ, ಅವರು ವಿಗ್ರಹಗಳಿಂದ ಹುಚ್ಚರಾದರು. |
39. | ಆದದರಿಂದ ಅರಣ್ಯದ ಕಾಡು ಮೃಗಗಳು, ನರಿಗಳು ಕೂಡ ಅಲ್ಲಿ ವಾಸಮಾಡುವವು. ಗೂಬೆಗಳೂ ಸಹ ಅದರಲ್ಲಿ ವಾಸಮಾಡುವವು; ಅದು ಇನ್ನು ಮೇಲೆ ಎಂದೆಂದಿಗೂ ನಿವಾಸವಾಗುವದಿಲ್ಲ; ತಲತಲಾಂತರಗಳ ವರೆಗೂ ಯಾರೂ ಅದರಲ್ಲಿ ತಂಗುವದಿಲ್ಲ. |
40. | ದೇವರು ಸೊದೋಮನ್ನೂ ಗೊಮೋರವನ್ನು ಅವುಗಳ ಸವಿಾಪದಲ್ಲಿದ್ದ ಪಟ್ಟಣಗಳನ್ನೂ ಕೆಡವಿಹಾಕಿದಾಗ ಆದ ಹಾಗೆ ಅಲ್ಲಿ ಯಾವ ಮನುಷ್ಯನಾದರೂ ವಾಸಮಾಡುವದಿಲ್ಲ; ಅದರಲ್ಲಿ ಯಾವ ನರಪುತ್ರನಾದರೂ ತಂಗುವದಿ ಲ್ಲವೆಂದು ಕರ್ತನು ಅನ್ನುತ್ತಾನೆ. |
41. | ಇಗೋ, ಒಂದು ಜನಾಂಗ ಉತ್ತರದಿಂದ ಬರುತ್ತದೆ; ಅದು ದೊಡ್ಡ ಜನಾಂಗವು. ಭೂಮಿಯ ಮೇರೆಗಳಿಂದ ಅನೇಕ ಅರಸರು ಎಬ್ಬಿಸಲ್ಪಡುವರು. |
42. | ಅವರು ಬಿಲ್ಲನ್ನೂ ಭಲ್ಲೆಯನ್ನೂ ಹಿಡಿಯುವರು; ಅವರು ಕ್ರೂರರು; ಅಂತಃಕರುಣೆ ತೋರಿಸುವದಿಲ್ಲ; ಅವರ ಶಬ್ದವು ಸಮುದ್ರದ ಹಾಗೆ ಘೋಷಿಸುವದು; ಬಾಬೆಲಿನ ಮಗಳೇ, ನಿನಗೆ ವಿರೋಧವಾಗಿ ಯುದ್ಧಕ್ಕೆ ಸಿದ್ಧವಾಗಿ ರುವ ಪುರುಷರ ಹಾಗೆ ಕುದುರೆಗಳನ್ನು ಹತ್ತಿಕೊಂಡು ಬರುವರು. |
43. | ಬಾಬೆಲಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ. ಅವನ ಕೈಗಳು ನಿತ್ರಾಣವಾದವು. ಸಂಕಟವೂ ಹೆರುವ ಸ್ತ್ರೀಯ ಹಾಗೆ ನೋವೂ ಅವನನ್ನು ಹಿಡಿದವು. |
44. | ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ಉಕ್ಕುವಿಕೆಯಿಂದ ಬಲವಾದ ನಿವಾಸಕ್ಕೆ ಏರಿ ಬರುವನು; ಆದರೆ ನಾನು ಅವರನ್ನು ಕ್ಷಣಮಾತ್ರ ದಲ್ಲಿ ಅದಕ್ಕೆ ದೂರವಾಗಿ ಓಡಿಹೋಗುವಂತೆ ಮಾಡುವೆನು, ನಾನು ಅದರ ಮೇಲೆ ನೇಮಿಸತಕ್ಕ ಆಯಲ್ಪಟ್ಟವನು ಯಾರು? ನನ್ನ ಹಾಗೆ ಯಾರು? ಮತ್ತು ನನಗೆ ಕಾಲವನ್ನು ನೇಮಿಸುವವನಾರು? ನನ್ನ ಮುಂದೆ ನಿಲ್ಲತಕ್ಕ ಕುರುಬನು ಯಾರು? |
45. | ಆದದರಿಂದ ಕರ್ತನು ಬಾಬೆಲಿಗೆ ವಿರೋಧವಾಗಿ ಮಾಡಿದ ಆಲೋ ಚನೆಯನ್ನೂ ಆತನು ಕಸ್ದೀಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಚನೆಗಳನ್ನೂ ಕೇಳಿರಿ; ನಿಶ್ಚಯವಾಗಿ ಮಂದೆಯಲ್ಲಿ ಚಿಕ್ಕವುಗಳು ಅವರನ್ನು ಎಳೆಯುವವು; ನಿಶ್ಚಯವಾಗಿ ಅವರ ನಿವಾಸವನ್ನು ಅವರ ಸಂಗಡ ಹಾಳುಮಾಡುವನು. |
46. | ಬಾಬೆಲ್ ಹಿಡಿಯಲ್ಪಟ್ಟಿತ್ತೆಂಬ ಶಬ್ದದಿಂದ ಭೂಮಿಯು ಕದಲುತ್ತದೆ; ಅದರ ಕೂಗು ಜನಾಂಗಗಳೊಳಗೆ ಕೇಳಬಂತು. |
← Jeremiah (50/52) → |