← Jeremiah (5/52) → |
1. | ಯೆರೂಸಲೇಮಿನ ಬೀದಿಗಳಲ್ಲಿ ಅತ್ತಿತ್ತ ಓಡಾಡಿ ನ್ಯಾಯವನ್ನು ಮಾಡುವವನೂ ಸತ್ಯವನ್ನು ಹುಡುಕುವವನೂ ನಿಮಗೆ ಒಬ್ಬನಾದರೂ ಸಿಕ್ಕುವನೋ? ಅವಳ ವಿಶಾಲ ಸ್ಥಳಗಳಲ್ಲಿ ನೋಡಿ ತಿಳಿದು ಹುಡುಕಿರಿ. ಸಿಕ್ಕಿದರೆ ಅವಳಿಗೆ ಮನ್ನಿಸುವೆನು. |
2. | ಅವರು--ಕರ್ತನು ಜೀವಿಸುತ್ತಾನೆಂದು ಹೇಳಿದರೂ ನಿಶ್ಚಯವಾಗಿ ಸುಳ್ಳಾಗಿಯೇ ಅವರು ಆಣೆ ಇಡುತ್ತಾರೆ. |
3. | ಓ ಕರ್ತನೇ, ನಿನ್ನ ಕಣ್ಣುಗಳು ಸತ್ಯದ ಮೇಲೆ ಇವೆಯ ಲ್ಲವೋ? ಅವರನ್ನು ಹೊಡೆದಿ, ಆದರೆ ಅವರಿಗೆ ದುಃಖವಾಗಲಿಲ್ಲ; ಅವರನ್ನು ಸಂಹರಿಸಿದಿ, ಆದರೆ ಶಿಕ್ಷೆ ಹೊಂದಲೊಲ್ಲದೆ ಇದ್ದರು; ತಮ್ಮ ಮುಖಗಳನ್ನು ಬಂಡೆಗಿಂತ ಕಠಿಣ ಮಾಡಿಕೊಂಡಿದ್ದಾರೆ; ಅವರು ಹಿಂತಿರುಗುವದಕ್ಕೆ ನಿರಾಕರಿಸಿದ್ದಾರೆ. |
4. | ಆದದರಿಂದ ನಾನು--ನಿಶ್ಚಯವಾಗಿ ಇವರು ಬಡವರು, ಬುದ್ಧಿ ಹೀನರು; ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ಅರಿಯರು. |
5. | ನಾನು ದೊಡ್ಡವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡು ವೆನು; ಅವರು ಕರ್ತನ ಮಾರ್ಗವನ್ನೂ ತಮ್ಮ ದೇವರ ನ್ಯಾಯತೀರ್ಪನ್ನೂ ತಿಳಿದಿದ್ದಾರೆ; ಆದರೆ ಇವರು ಕೂಡ ನೊಗವನ್ನು ಮುರಿದು ಬಂಧನಗಳನ್ನು ಹರಿದು ಬಿಟ್ಟಿದ್ದಾರೆ. |
6. | ಹೀಗಿರುವದರಿಂದ ಅಡವಿಯ ಸಿಂಹವು ಅವರನ್ನು ಕೊಲ್ಲುವದು; ಸಂಜೆಯ ತೋಳವು ಅವರನ್ನು ಸೂರೆ ಮಾಡುವದು; ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವದು; ಅಲ್ಲಿಂದ ಹೊರಗೆ ಬರುವವ ರೆಲ್ಲರೂ ಸೀಳಲ್ಪಡುವರು; ಅವರ ದ್ರೋಹಗಳು ಬಹಳವಾಗಿವೆ; ಅವರ ಹಿಂತಿರುಗುವಿಕೆಯು ಹೆಚ್ಚಾಗಿದೆ. |
7. | ಇದಕ್ಕಾಗಿ ನಾನು ನಿನ್ನನ್ನು ಹೇಗೆ ಮನ್ನಿಸಲಿ? ನಿನ್ನ ಮಕ್ಕಳು ನನ್ನನ್ನು ಬಿಟ್ಟು ದೇವರಲ್ಲದವುಗಳ ಮೇಲೆ ಆಣೆ ಇಟ್ಟುಕೊಂಡಿದ್ದಾರೆ; ನಾನು ಅವರನ್ನು ತೃಪ್ತಿಪಡಿ ಸಿದ ಮೇಲೆ ಅವರು ವ್ಯಭಿಚಾರಮಾಡಿ ಸೂಳೆಯರ ಮನೆಗಳಲ್ಲಿ ಗುಂಪಾಗಿ ಕೂಡಿಕೊಂಡರು. |
8. | ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ. |
9. | ಇವುಗಳ ನಿಮಿತ್ತ ನಾನು ವಿಚಾರಿಸುವ ದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ? ಎಂದು ಕರ್ತನು ಅನ್ನುತ್ತಾನೆ. |
10. | ಅವಳ ಗೋಡೆಗಳನ್ನು ಏರಿರಿ, ಕೆಡಿಸಿರಿ; ಆದರೆ ಪೂರ್ಣವಾಗಿ ನಾಶಮಾಡಬೇಡಿರಿ. ಅವಳ ಕೋಟೆಯ ಉಪ್ಪರಿಗೆಗಳನ್ನು ತೆಗೆದುಬಿಡಿರಿ; ಅವು ಕರ್ತನವುಗಳಲ್ಲ. |
11. | ಇಸ್ರಾಯೇಲ್ಯನ ಮನೆತನದವರೂ ಯೆಹೂದನ ಮನೆತನದವರೂ ನನಗೆ ಬಹಳ ವಂಚನೆ ಮಾಡಿದ್ದಾ ರೆಂದು ಕರ್ತನು ಅನ್ನುತ್ತಾನೆ. |
12. | ಕರ್ತನನ್ನು ಸುಳ್ಳುಗಾರ ನನ್ನಾಗಿ ಮಾಡಿ ಅವರು--ಆತನು ಅಂಥವನಲ್ಲ; ನಮ್ಮ ಮೇಲೆ ಕೇಡುಬಾರದು; ಇಲ್ಲವೆ ಕತ್ತಿಯನ್ನಾದರೂ ಬರವನ್ನಾದರೂ ನಾವು ನೋಡುವದಿಲ್ಲ. |
13. | ಪ್ರವಾದಿಗಳು ಗಾಳಿಯಾಗುವರು; ವಾಕ್ಯವು ಅವರಲ್ಲಿ ಇಲ್ಲ; ಅವರಿಗೆ ಹೀಗಾಗುವದು ಎಂದು ಹೇಳಿದ್ದಾರೆ. |
14. | ಆದ ದರಿಂದ ಸೈನ್ಯಗಳ ದೇವರಾದ ಕರ್ತನು ಹೀಗೆ ಹೇಳು ತ್ತಾನೆ--ನೀವು ಈ ಮಾತನ್ನಾಡುವದರಿಂದ ಇಗೋ, ನಾನು ನಿನ್ನ ಬಾಯಲ್ಲಿರುವ ನನ್ನ ಮಾತುಗಳನ್ನು ಬೆಂಕಿಯಾಗಿಯೂ ಈ ಜನರನ್ನು ಕಟ್ಟಿಗೆಯಾಗಿಯೂ ಮಾಡುವೆನು; ಅದು ಅವರನ್ನು ತಿಂದುಬಿಡುವದು. |
15. | ಇಗೋ, ಇಸ್ರಾಯೇಲ್ಯನ ಮನೆತನವೇ, ನಾನು ದೂರದಿಂದ ನಿಮ್ಮ ಮೇಲೆ ಒಂದು ಜನಾಂಗವನ್ನು ತರಿಸುತ್ತೇನೆಂದು ಕರ್ತನು ಅನ್ನುತ್ತಾನೆ. ಅದು ಬಲವಾದ ಜನಾಂಗವು ಪೂರ್ವಕಾಲದ ಜನಾಂಗವು, ಆ ಜನಾಂಗದ ಭಾಷೆಯನ್ನು ನೀನರಿಯೆ; ಇಲ್ಲವೆ ಅವರು ಹೇಳುವಂಥದ್ದು ನಿನಗೆ ತಿಳಿಯದು. |
16. | ಅವರ ಬತ್ತಳಿಕೆ ತೆರೆದ ಸಮಾಧಿಯ ಹಾಗಿದೆ; ಅವರೆಲ್ಲರೂ ಪರಾಕ್ರಮ ಶಾಲಿಗಳೇ. |
17. | ನಿನ್ನ ಕುಮಾರರು, ಕುಮಾರ್ತೆಯರು ತಿನ್ನತಕ್ಕ ನಿನ್ನ ಪೈರನ್ನೂ ರೊಟ್ಟಿಯನ್ನೂ ತಿನ್ನುವರು, ಕುರಿಗಳನ್ನೂ ದನಗಳನ್ನೂ ತಿನ್ನುವರು, ದ್ರಾಕ್ಷೇ ಗಿಡ ಗಳನ್ನೂ ಅಂಜೂರದ ಗಿಡಗಳನ್ನೂ ತಿನ್ನುವರು. ನೀನು ನಂಬಿಕೊಂಡಿದ್ದ ಕೋಟೆಯುಳ್ಳ ಪಟ್ಟಣಗಳನ್ನು ಕತ್ತಿಯಿಂದ ಬಡವಾಗ ಮಾಡುವರು. |
18. | ಆದಾಗ್ಯೂ ಆ ದಿವಸಗಳಲ್ಲಿಯೂ ನಾನು ನಿಮ್ಮನ್ನು ಸಂಪೂರ್ಣ ವಾಗಿ ಅಳಿಸಿಬಿಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ. |
19. | ನಮ್ಮ ದೇವರಾದ ಕರ್ತನು ಯಾಕೆ ನಮಗೆ ಇವುಗಳನ್ನೆಲ್ಲಾ ಮಾಡುತ್ತಾನೆಂದು ಅವರು ಹೇಳು ವಾಗ--ನೀನು ಅವರಿಗೆ--ನೀವು ನನ್ನನ್ನು ಬಿಟ್ಟು, ನಿಮ್ಮ ದೇಶದಲ್ಲಿ ಬೇರೆ ದೇವರುಗಳನ್ನು ಸೇವಿಸಿದ ಹಾಗೆ ನಿಮ್ಮದಲ್ಲದ ದೇಶದಲ್ಲಿ ಅನ್ಯರನ್ನು ಸೇವಿಸುವಿರಿ ಎಂದು ಹೇಳಬೇಕು. |
20. | ಯಾಕೋಬನ ಮನೆತನದಲ್ಲಿ ಇದನ್ನು ತಿಳಿಸಿರಿ. ಯೆಹೂದದಲ್ಲಿ ಪ್ರಕಟಿಸಿರಿ, ಏನಂದರೆ |
21. | ಮೂಢರೇ, ಬುದ್ಧಿಹೀನ ಜನರೇ, ಕಣ್ಣುಗಳಿದ್ದು ನೋಡದವರೇ, ಕಿವಿಗಳಿದ್ದು ಕೇಳದವರೇ, ಇದನ್ನು ಕೇಳಿರಿ. |
22. | ನೀವು ನನಗೆ ಭಯಪಡುವದಿಲ್ಲವೋ? ನನ್ನ ಸಮ್ಮುಖದಲ್ಲಿ ನಡುಗುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ; ಸಮುದ್ರವು ದಾಟಕೂಡದ ಹಾಗೆ ಮರಳನ್ನು ನಿತ್ಯ ನೇಮಕದಿಂದ ನಾನು ಮೇರೆಯಾಗಿಟ್ಟಿದ್ದೇನೆ; ಅದರ ತೆರೆಗಳು ಎದ್ದರೂ ದಡ ವಿಾರಲಾರವು, ಘೋಷಿಸಿ ದರೂ ಅದನ್ನು ದಾಟಲಾರವು. |
23. | ಆದರೆ ಈ ಜನರಿಗೆ ತಿರುಗಿ ಬೀಳುವಂಥ, ಪ್ರತಿಭಟಿಸುವಂಥ ಹೃದಯ ಉಂಟು; ಅವರು ತಿರುಗಿ ಬಿದ್ದು ಹೋಗಿಬಿಟ್ಟಿದ್ದಾರೆ. |
24. | ಇಲ್ಲವೆ ತಮ್ಮ ಹೃದಯದಲ್ಲಿ--ಮುಂಗಾರು ಹಿಂಗಾರು ಮಳೆಯನ್ನು ಅದರದರ ಕಾಲದಲ್ಲಿ ನಮಗೆ ಕೊಡು ವಂಥ ಸುಗ್ಗಿಗೆ ನೇಮಕವಾದ ವಾರಗಳಲ್ಲಿ ನಮ್ಮನ್ನು ಕಾಪಾಡುವಂಥ ನಮ್ಮ ದೇವರಾದ ಕರ್ತನಿಗೆ ಭಯ ಪಡೋಣ ಎಂದು ಅಂದುಕೊಳ್ಳುವದಿಲ್ಲ. |
25. | ನಿಮ್ಮ ಅಕ್ರಮಗಳು ಇವುಗಳನ್ನು ತಪ್ಪಿಸಿ ಅವೆ; ನಿಮ್ಮ ಪಾಪ ಗಳು ಒಳ್ಳೆಯವುಗಳನ್ನು ನಿಮ್ಮಿಂದ ಹಿಂದೆಳೆದಿವೆ. |
26. | ನನ್ನ ಜನರಲ್ಲಿ ದುಷ್ಟರು ಸಿಕ್ಕಿದ್ದಾರೆ; ಉರುಲು ಇಡುವವನ ಹಾಗೆ ಹೊಂಚು ಹಾಕುತ್ತಾರೆ; ಬೋನು ಹಾಕಿ ಮನುಷ್ಯರನ್ನು ಹಿಡಿಯು ತ್ತಾರೆ. |
27. | ಪಂಜರವು ಪಕ್ಷಿಗಳಿಂದ ತುಂಬಿರುವ ಪ್ರಕಾರ ಅವರ ಮನೆಗಳು ಮೋಸದಿಂದ ತುಂಬಿಯವೆ. ಆದದರಿಂದ ಅವರು ದೊಡ್ಡವರೂ ಐಶ್ವರ್ಯವಂತರೂ ಆಗಿದ್ದಾರೆ; |
28. | ಕೊಬ್ಬಿದ್ದಾರೆ, ಪ್ರಕಾಶಿಸುತ್ತಾರೆ; ಹೌದು, ದುಷ್ಟರ ಕೃತ್ಯಗಳಿಗಿಂತ ವಿಾರಿ ಹೋಗಿದ್ದಾರೆ. ವ್ಯಾಜ್ಯ ವನ್ನು, ದಿಕ್ಕಿಲ್ಲದವನ ವ್ಯಾಜ್ಯವನ್ನು ವಿಚಾರಿಸುವದಿಲ್ಲ; ಆದಾಗ್ಯೂ ಅವರು ಸಫಲವಾಗುತ್ತಾರೆ; ಬಡವರ ನ್ಯಾಯವನ್ನು ತೀರಿಸರು. |
29. | ಇವುಗಳ ನಿಮಿತ್ತ ನಾನು ವಿಚಾರಿಸುವದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ ಎಂದು ಕರ್ತನು ಅನ್ನುತ್ತಾನೆ. |
30. | ಆಶ್ಚರ್ಯವೂ ಭಯಂಕರವೂ ಆದ ಕಾರ್ಯವು ದೇಶದಲ್ಲಿ ನಡೆಯು ತ್ತದೆ, |
31. | ಏನಂದರೆ ಪ್ರವಾದಿಗಳು ಸುಳ್ಳಾಗಿ ಪ್ರವಾದಿಸು ತ್ತಾರೆ, ಯಾಜಕರು ತಮ್ಮ ಆದಾಯದಿಂದ ದೊರೆತನ ಮಾಡುತ್ತಾರೆ; ನನ್ನ ಜನರು ಅದನ್ನು ಪ್ರೀತಿ ಮಾಡು ತ್ತಾರೆ; ಆದರೆ ಅದರ ಅಂತ್ಯದಲ್ಲಿ ನೀವು ಏನು ಮಾಡುವಿರಿ? |
← Jeremiah (5/52) → |