← Jeremiah (27/52) → |
1. | ಯೆಹೂದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳಿ ಕೆಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಯೆರೆ ವಿಾಯನಿಗೆ ಬಂತು ಯಾವದಂದರೆ |
2. | ಕರ್ತನು ನನಗೆ ಹೇಳಿದ್ದೇನಂದರೆ--ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು. |
3. | ಅವುಗಳನ್ನು ಎದೋಮಿನ ಅರಸನಿಗೂ ಮೋವಾಬಿನ ಅರಸನಿಗೂ ಅಮ್ಮೋನ್ಯರ ಅರಸನಿಗೂ ತೂರಿನ ಅರಸನಿಗೂ ಚೀದೋನಿನ ಅರಸನಿಗೂ ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಬರುವ ಸುದ್ದಿಗಾರರ ಕೈಯಿಂದ ಕಳುಹಿಸು. |
4. | ಅವರು ತಮ್ಮ ಯಜಮಾನರಿಗೆ ಹೇಳುವದಕ್ಕೆ ನೀನು ಅಪ್ಪಣೆಕೊಡತಕ್ಕದ್ದೇನಂದರೆ --ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೇಳುವದೇನಂದರೆ--ನೀವು ನಿಮ್ಮ ಯಜಮಾನರಿಗೆ ಹೀಗೆ ಹೇಳಬೇಕು-- |
5. | ನಾನೇ ಭೂಮಿಯನ್ನೂ ಭೂಮಿಯ ಮೇಲಿರುವ ಮನುಷ್ಯರನ್ನೂ ಮೃಗಗಳನ್ನೂ ನನ್ನ ಮಹಾಬಲದಿಂದ ನಾನು ಕೈಚಾಚಿ ಉಂಟು ಮಾಡಿ ನನಗೆ ಸರಿತೋಚಿದವರಿಗೆ ಅದನ್ನು ಕೊಟ್ಟಿ ದ್ದೇನೆ. |
6. | ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ. |
7. | ಜನಾಂಗಗಳೆಲ್ಲಾ ಅವನಿಗೂ ಅವನ ಮಗನಿಗೂ ಅವನ ಮಗನ ಮಗನಿಗೂ ಅವನ ದೇಶಕ್ಕೆ ಕಾಲ ಸವಿಾಪಿಸುವ ವರೆಗೂ ಸೇವಿಸುವವು. ಆಮೇಲೆ ಬಹಳ ಜನಾಂಗಗಳೂ ದೊಡ್ಡ ಅರಸರೂ ಅವನಿಂದ ಸೇವೆ ಮಾಡಿಸಿಕೊಳ್ಳುವರು. |
8. | ಬಾಬೆಲಿನ ಅರಸನಾದ ನೆಬೂಕ ದ್ನೇಚ್ಚರನಿಗೆ ಸೇವೆಮಾಡದೆ ಬಾಬೆಲಿನ ಅರಸನ ನೊಗಕ್ಕೆ ತನ್ನ ಕುತ್ತಿಗೆಯನ್ನು ಕೊಡದೆ ಇರುವ ಜನಾಂಗವೂ ರಾಜ್ಯವೂ ಯಾವದೋ ಆ ಜನಾಂಗವನ್ನು ನಾನು ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಇವನ ಕೈಯಿಂದ ಅವುಗಳನ್ನು ನಾಶಮಾಡಿಬಿಡುವ ವರೆಗೆ ದಂಡಿಸುವೆನೆಂದು ಕರ್ತನು ಅನ್ನುತ್ತಾನೆ. |
9. | ಆದ ದರಿಂದ ನೀವು ಬಾಬೆಲಿನ ಅರಸನನ್ನು ಸೇವಿಸಬೇಡಿ ರೆಂದು ನಿಮಗೆ ಹೇಳುವ ನಿಮ್ಮ ಪ್ರವಾದಿಗಳಿಗೂ ಕಣಿಹೇಳುವವರಿಗೂ ಸ್ವಪ್ನಗಾರರಿಗೂ ಮಂತ್ರದ ವರಿಗೂ ನಿಮ್ಮ ಶೂನ್ಯಗಾರರಿಗೂ ಕಿವಿಗೊಡಬೇಡಿರಿ. |
10. | ನಿಮ್ಮನ್ನು ನಿಮ್ಮ ದೇಶದಿಂದ ದೂರಮಾಡುವ ಹಾಗೆಯೂ ನಾನು ನಿಮ್ಮನ್ನು ಓಡಿಸಿ ಬಿಟ್ಟಮೇಲೆ ನೀವು ನಾಶವಾಗುವ ಹಾಗೆಯೂ ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. |
11. | ಆದರೆ ಬಾಬೆಲಿನ ಅರಸನ ನೊಗದಲ್ಲಿ ತನ್ನ ಕುತ್ತಿಗೆಯನ್ನು ಸೇರಿಸಿ ಅವನಿಗೆ ಸೇವೆ ಮಾಡುವ ಜನಾಂಗವು ಯಾವದೋ ಅದನ್ನು ಸ್ವಂತ ದೇಶದಲ್ಲಿ ನಿಲ್ಲಗೊಡಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಅವರು ಅದನ್ನು ಬೇಸಾಯಮಾಡಿ ಅದರಲ್ಲಿ ವಾಸಮಾಡುವರು. |
12. | ಆಗ ನಾನು ಯೆಹೂದದ ಅರಸನಾದ ಚಿದ್ಕೀ ಯನ ಸಂಗಡ ಈ ವಾಕ್ಯಗಳ ಪ್ರಕಾರ ಮಾತನಾಡಿ ದೆನು--ಬಾಬೆಲಿನ ಅರಸನ ನೊಗಕ್ಕೆ ನಿಮ್ಮ ಹೆಗಲು ಗಳನ್ನು ಕೊಟ್ಟು ಅವನಿಗೂ ಅವನ ಜನರಿಗೂ ಸೇವೆಮಾಡಿ ಬದುಕಿರಿ. |
13. | ಬಾಬೆಲಿನ ಅರಸನಿಗೆ ಸೇವೆ ಮಾಡದ ಜನಾಂಗಕ್ಕೆ ವಿರೋಧವಾಗಿ ಕರ್ತನು ಮಾತ ನಾಡಿದ ಪ್ರಕಾರ--ನೀನೂ ನಿನ್ನ ಜನರೂ ಯಾಕೆ ಕತ್ತಿಯಿಂದಲೂ ಕ್ಷಾಮದಿಂದಲೂ ಜಾಡ್ಯದಿಂದಲೂ ಸಾಯುವಿರಿ? |
14. | ಆದದರಿಂದ ಬಾಬೆಲಿನ ಅರಸನಿಗೆ ನೀವು ಸೇವೆಮಾಡಬೇಡಿರೆಂದು ನಿಮಗೆ ಹೇಳುವ ಪ್ರವಾದಿಗಳ ವಾಕ್ಯಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. |
15. | ನಾನು ಅವರನ್ನು ಕಳುಹಿಸಲಿಲ್ಲವೆಂದು ಕರ್ತನು ಅನ್ನುತ್ತಾನೆ; ಆದಾಗ್ಯೂ ಅವರು ನಾನು ನಿಮ್ಮನ್ನು ಓಡಿಸಿಬಿಡುವ ಹಾಗೆಯೂ ನೀವೂ ನಿಮಗೆ ಪ್ರವಾದಿಸುವ ಪ್ರವಾದಿಗಳೂ ನಾಶವಾಗುವ ಹಾಗೆಯೂ ನನ್ನ ಹೆಸರಿನಲ್ಲಿ ನಿಮಗೆ ಸುಳ್ಳಾಗಿ ಪ್ರವಾದಿಸುತ್ತಾರೆ. |
16. | ನಾನು ಯಾಜಕರ ಸಂಗಡಲೂ ಈ ಜನರೆಲ್ಲರ ಸಂಗಡಲೂ ಮಾತನಾಡಿದೆನು; ಏನಂದರೆ, ಕರ್ತನು ಹೀಗೆ ಹೇಳುತ್ತಾನೆ--ಇಗೋ, ಕರ್ತನ ಆಲಯದ ಪಾತ್ರೆಗಳು ಬೇಗ ಬಾಬೆಲಿನಿಂದ ತಿರುಗಿ ತರಲ್ಪಡು ವದೆಂದು ನಿಮಗೆ ಪ್ರವಾದಿಸುವ ನಿಮ್ಮ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿರಿ; ಅವರು ನಿಮಗೆ ಸುಳ್ಳನ್ನು ಪ್ರವಾದಿಸುತ್ತಾರೆ. |
17. | ಅವರಿಗೆ ಕಿವಿಗೊಡ ಬೇಡಿರಿ; ಬಾಬೆಲಿನ ಅರಸನಿಗೆ ಸೇವೆಮಾಡಿ ಬದುಕಿರಿ; ಈ ಪಟ್ಟಣವು ಯಾಕೆ ಹಾಳಾಗಬೇಕು? |
18. | ಆದರೆ ಅವರು ಪ್ರವಾದಿಗಳಾಗಿದ್ದರೆ, ದೇವರ ವಾಕ್ಯವು ಅವರ ಸಂಗಡ ಇದ್ದರೆ ಕರ್ತನ ಆಲಯದಲ್ಲಿಯೂ ಯೆಹೂ ದದ ಅರಸನ ಮನೆಯಲ್ಲಿಯೂ ಯೆರೂಸಲೇಮಿ ನಲ್ಲಿಯೂ ಉಳಿದ ಪಾತ್ರೆಗಳು ಬಾಬೆಲಿಗೆ ಹೋಗದ ಹಾಗೆ ಅವರು ಸೈನ್ಯಗಳ ಕರ್ತನಿಗೆ ವಿಜ್ಞಾಪನೆ ಮಾಡಲಿ. |
19. | ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆಹೂ ದದ ಅರಸನಾದ ಯೆಹೋಯಾಕೀಮನ ಮಗನಾದ ಯೆಕೊನ್ಯಯನನ್ನೂ ಯೆಹೂದದ ಮತ್ತು ಯೆರೂಸ ಲೇಮಿನ ಶ್ರೇಷ್ಠರೆಲ್ಲರನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ |
20. | ತಕ್ಕೊಂಡು ಹೋಗದಂಥ ಸ್ಥಂಭಗಳನ್ನು ಕುರಿತು ಸಮುದ್ರವನ್ನು ಕುರಿತು ಗದ್ದಿಗೆ ಗಳನ್ನು ಕುರಿತು ಈ ಪಟ್ಟಣದಲ್ಲಿ ಉಳಿದ ಬೇರೆ ಪಾತ್ರೆ ಗಳನ್ನು ಕುರಿತು ಸೈನ್ಯಗಳ ಕರ್ತನು ಹೇಳುವದೇನಂದರೆ-- |
21. | ಕರ್ತನ ಆಲಯದಲ್ಲಿಯೂ ಯೆಹೂದದ ಮತ್ತು ಯೆರೂಸಲೇಮಿನ ಅರಸನ ಮನೆಯಲ್ಲಿಯೂ ಉಳಿದಿರುವ ಪಾತ್ರೆಗಳ ವಿಷಯವಾಗಿ ಇಸ್ರಾಯೇಲಿನ ದೇವರಾದ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ -- |
22. | ಅವು ಬಾಬೆಲಿಗೆ ತರಲ್ಪಡುವವು; ನಾನು ಅವು ಗಳನ್ನು ವಿಚಾರಿಸುವ ದಿನದ ವರೆಗೆ ಅಲ್ಲಿಯೇ ಇರು ವವು. ಆಗ ನಾನು ಅವುಗಳನ್ನು ಗಮನಕ್ಕೆ ತಂದು ಈ ಸ್ಥಳಕ್ಕೆ ತಿರುಗಿ ತರುವೆನು ಎಂದು ಕರ್ತನು ಅನ್ನುತ್ತಾನೆ. |
← Jeremiah (27/52) → |