← Jeremiah (23/52) → |
1. | ನನ್ನ ಹುಲ್ಲುಗಾವಲಿನ ಕುರಿಗಳನ್ನು ಹಾಳು ಮಾಡಿ ಚದರಿಸುವ ಕುರುಬರಿಗೆ ಅಯ್ಯೋ, ಎಂದು ಕರ್ತನು ಅನ್ನುತ್ತಾನೆ. |
2. | ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ನನ್ನ ಜನರನ್ನು ಮೇಯಿಸುವ ಕುರುಬರಿಗೆ ವಿರೋಧ ವಾಗಿ ಹೀಗೆ ಹೇಳುತ್ತಾನೆ--ನೀವು ನನ್ನ ಮಂದೆಯನ್ನು ಚದರಿಸಿ ಓಡಿಸಿಬಿಟ್ಟು ವಿಚಾರಿಸದೆ ಇದ್ದೀರಿ; ಇಗೋ, ನಾನು ನಿಮ್ಮ ಕ್ರಿಯೆಗಳ ಕೆಟ್ಟತನವನ್ನು ನಿಮ್ಮಲ್ಲಿ ವಿಚಾರಿಸುತ್ತೇನೆಂದು ಕರ್ತನು ಅನ್ನುತ್ತಾನೆ. |
3. | ನಾನು ನನ್ನ ಮಂದೆಯ ಶೇಷವನ್ನು, ಅವರನ್ನು ಓಡಿಸಿಬಿಟ್ಟ ಎಲ್ಲಾ ದೇಶಗಳಿಂದ ಕೂಡಿಸಿ ತಮ್ಮ ಹಟ್ಟಿಗಳಿಗೆ ತಿರುಗಿ ತರುವೆನು; ಅವರು ಫಲಕಾರಿಯಾಗಿ ಹೆಚ್ಚುವರು. |
4. | ಅವರನ್ನು ಮೇಯಿಸತಕ್ಕ ಕುರುಬರನ್ನು ಅವರ ಮೇಲೆ ಇಡುತ್ತೇನೆ; ಅವರು ಇನ್ನು ಮೇಲೆ ಭಯಪಡುವದೇ ಇಲ್ಲ, ಅಂಜುವದಿಲ್ಲ, ಕೊರತೆಪಡುವದಿಲ್ಲ ಎಂದು ಕರ್ತನು ಅನ್ನುತ್ತಾನೆ. |
5. | ಇಗೋ, ದಿನಗಳು ಬರುವವೆಂದು ಕರ್ತನು ಅನ್ನು ತ್ತಾನೆ; ಆಗ ನಾನು ದಾವೀದನಿಗೆ ನೀತಿಯುಳ್ಳ ಚಿಗುರನ್ನು ಎಬ್ಬಿಸುತ್ತೇನೆ; ಅರಸನು ರಾಜ್ಯವಾಳಿ ವೃದ್ಧಿಯಾಗುವನು; ಭೂಮಿಯಲ್ಲಿ ನ್ಯಾಯವನ್ನೂ ನೀತಿಯನ್ನೂ ನಡಿಸು ವನು. |
6. | ಅವನ ದಿನಗಳಲ್ಲಿ ಯೆಹೂದವು ರಕ್ಷಿಸಲ್ಪಡು ವದು; ಇಸ್ರಾಯೇಲು ಭದ್ರವಾಗಿ ವಾಸಿಸುವದು; ಆತನು ಕರೆಯಲ್ಪಡುವ ಹೆಸರು ಯಾವದಂದರೆ--ನಮ್ಮ ನೀತಿಯು ಕರ್ತನೇ. |
7. | ಆದದರಿಂದ ಇಗೋ, ದಿನಗಳು ಬರುತ್ತವೆಂದು ಕರ್ತನು ಅನ್ನುತ್ತಾನೆ; ಆಗ ಇಸ್ರಾಯೇಲಿನ ಮಕ್ಕಳನ್ನು ಐಗುಪ್ತದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಹೇಳುವದೇ ಇಲ್ಲ. |
8. | ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮನೆತನದವರ ಸಂತಾನವನ್ನು ಉತ್ತರ ದೇಶದಿಂದಲೂ ತಾನು ಅವರನ್ನು ಹೊರಡಿಸಿ ಬಿಟ್ಟಿದ್ದ ಎಲ್ಲಾ ದೇಶ ಗಳಿಂದಲೂ ಬರಮಾಡಿದನು ಎಂದು ಹೇಳುವರು; ಅವರು ತಮ್ಮ ದೇಶದಲ್ಲಿ ವಾಸಮಾಡುವರು. |
9. | ಪ್ರವಾದಿಗಳ ನಿಮಿತ್ತ ನನ್ನ ಹೃದಯವು ನನ್ನಲ್ಲಿ ಮುರಿದಿದೆ; ನನ್ನ ಎಲುಬುಗಳೆಲ್ಲಾ ಕದಲುತ್ತವೆ; ಕರ್ತನ ನಿಮಿತ್ತವೂ ಆತನ ಪರಿಶುದ್ಧ ವಾಕ್ಯಗಳ ನಿಮಿತ್ತವೂ ಮತ್ತನಾದ ಮನುಷ್ಯನ ಹಾಗೆಯೂ ದ್ರಾಕ್ಷಾರಸಕ್ಕೆ ಒಳಗಾದ ಪುರುಷನ ಹಾಗೆಯೂ ಇದ್ದೇನೆ. |
10. | ದೇಶವು ವ್ಯಭಿಚಾರಗಳಿಂದ ತುಂಬಿದೆ; ಶಾಪದಿಂದ ದುಃಖಿಸು ತ್ತದೆ; ಅರಣ್ಯದ ಮನೋಹರವಾದ ಸ್ಥಳಗಳು ಒಣಗಿ ಹೋಗಿವೆ; ಅವರ ಓಟವು ಕೆಟ್ಟದ್ದಾಗಿದೆ; ಅವರ ಶಕ್ತಿಯು ಸರಿ ಇಲ್ಲ. |
11. | ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ. |
12. | ಆದದರಿಂದ ಅವರ ಮಾರ್ಗವು ಕತ್ತಲೆಯಲ್ಲಿರುವ ಜಾರುವ ಸ್ಥಳಗಳ ಹಾಗೆ ಅವರಿಗಿರುವದು; ಅವರು ತಳ್ಳಲ್ಪಟ್ಟು ಬೀಳುವರು; ಕೇಡನ್ನು, ಅವರ ವಿಚಾರಣೆಯ ವರುಷವನ್ನು ಅವರ ಮೇಲೆ ಬರಮಾಡುವೆನೆಂದು ಕರ್ತನು ಅನ್ನುತ್ತಾನೆ. |
13. | ಸಮಾರ್ಯದ ಪ್ರವಾದಿಗಳಲ್ಲಿ ಬುದ್ಧಿಹೀನತೆಯನ್ನು ನೋಡಿದ್ದೇನೆ; ಅವರು ಬಾಳನಿಂದ ಪ್ರವಾದನೆಯನ್ನು ಕೇಳಿ ನನ್ನ ಜನರಾದ ಇಸ್ರಾಯೇ ಲನ್ನು ತಪ್ಪುವಂತೆ ಮಾಡಿದ್ದಾರೆ. |
14. | ಯೆರೂಸಲೇಮಿನ ಪ್ರವಾದಿಗಳಲ್ಲಿ ಭಯಂಕರವಾದದ್ದನ್ನು ನೋಡಿದ್ದೇನೆ; ಅವರು ವ್ಯಭಿಚಾರಮಾಡಿ ಸುಳ್ಳಿನಲ್ಲಿ ನಡಕೊಂಡದ್ದ ಲ್ಲದೆ ದುಷ್ಟರು ತಮ್ಮ ದುಷ್ಟತ್ವವನ್ನು ಬಿಟ್ಟು ತಿರುಗದ ಹಾಗೆ ಅವರ ಕೈಗಳನ್ನು ಬಲಪಡಿಸುತ್ತಾರೆ; ಅವರೆಲ್ಲರೂ ನನಗೆ ಸೊದೋಮಿನ ಹಾಗೆಯೂ ಅದರ ನಿವಾಸಿಗಳು ಗೊಮೋರದ ಹಾಗೆಯೂ ಇದ್ದಾರೆ. |
15. | ಆದದರಿಂದ ಸೈನ್ಯಗಳ ಕರ್ತನು ಪ್ರವಾದಿಗಳ ವಿಷಯದಲ್ಲಿ ಹೇಳುವದೇನಂದರೆ--ಇಗೋ, ನಾನು ಅವರಿಗೆ ಮಾಚಿಪತ್ರೆಯನ್ನು ತಿನ್ನುವದಕ್ಕೆ ಕೊಡುತ್ತೇನೆ ವಿಷದ ನೀರನ್ನು ಕುಡಿಯಕೊಡುತ್ತೇನೆ; ಯೆರೂಸಲೇ ಮಿನ ಪ್ರವಾದಿಗಳ ಕಡೆಯಿಂದ ಭ್ರಷ್ಟತ್ವವು ದೇಶಕ್ಕೆಲ್ಲಾ ಹರಡಿದೆ. |
16. | ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ --ನಿಮಗೆ ಪ್ರವಾದಿಸುವ ಪ್ರವಾದಿಗಳ ವಾಕ್ಯಕ್ಕೆ ಕಿವಿ ಗೊಡಬೇಡಿರಿ; ಅವರು ನಿಮ್ಮನ್ನು ನಿಷ್ಫಲಮಾಡುತ್ತಾರೆ; ಕರ್ತನ ಬಾಯಿಂದಲ್ಲ, ಸ್ವಂತ ಹೃದಯದಿಂದ ದರ್ಶನ ವನ್ನು ಹೇಳುತ್ತಾರೆ. |
17. | ಆದರೂ ನನ್ನನ್ನು ಅಸಹ್ಯಿಸುವವ ರಿಗೆ ಅವರು--ನಿಮಗೆ ಸಮಾಧಾನವಾಗುವದೆಂದು ಕರ್ತನು ಹೇಳುತ್ತಾನೆ ಎಂದು ಹೇಳುತ್ತಲೇ ಇದ್ದಾರೆ; ತಮ್ಮ ಹೃದಯದ ಕಲ್ಪನೆಯ ಪ್ರಕಾರ ನಡಕೊಳ್ಳುವವ ರೆಲ್ಲರಿಗೆ--ನಿಮ್ಮ ಮೇಲೆ ಕೇಡು ಬರುವದಿಲ್ಲ ಅನ್ನುತ್ತಾರೆ. |
18. | ಆದರೆ ಯಾರು ಕರ್ತನ ಆಲೋಚನೆಯಲ್ಲಿ ನಿಂತು ಆತನ ವಾಕ್ಯವನ್ನು ತಿಳುಕೊಂಡು ಕೇಳಿದ್ದಾರೆ? ಯಾರು ಆತನ ವಾಕ್ಯದಲ್ಲಿ ಲಕ್ಷ್ಯವಿಟ್ಟು ಕೇಳಿದ್ದಾರೆ? |
19. | ಇಗೋ, ಕರ್ತನ ಬಿರುಗಾಳಿ ಉಗ್ರವಾಗಿ ಹೊರಟಿದೆ; ಅಘೋರ ವಾದ ಬಿರುಗಾಳಿಯು ದುಷ್ಟರ ತಲೆಯ ಮೇಲೆ ಕಠಿಣ ವಾಗಿ ಬೀಳುವದು. |
20. | ಆತನು ತನ್ನ ಹೃದಯದ ಅಲೋ ಚನೆಗಳನ್ನು ನಡೆಸಿ ತೀರಿಸುವ ವರೆಗೂ ಕರ್ತನ ಕೋಪವು ತಿರುಗುವದಿಲ್ಲ; ಅಂತ್ಯದಿನಗಳಲ್ಲಿ ಅದನ್ನು ಸಂಪೂರ್ಣವಾಗಿ ಯೋಚನೆ ಮಾಡುವಿರಿ. |
21. | ನಾನು ಪ್ರವಾದಿಗಳನ್ನು ಕಳುಹಿಸಲಿಲ್ಲ, ಆದಾಗ್ಯೂ ಅವರು ಓಡಿದರು; ನಾನು ಅವರ ಸಂಗಡ ಮಾತನಾಡಲಿಲ್ಲ ಆದಾಗ್ಯೂ ಪ್ರವಾದಿಸಿದರು. |
22. | ಆದರೆ ಅವರು ನನ್ನ ಆಲೋಚನೆಯಲ್ಲಿ ನಿಂತಿದ್ದರೆ, ಅವರು ಜನರಿಗೆ ನನ್ನ ವಾಕ್ಯಗಳನ್ನು ಕೇಳಕೊಟ್ಟು ಅವರನ್ನು ತಮ್ಮ ಕೆಟ್ಟ ಮಾರ್ಗದಿಂದಲೂ ತಮ್ಮ ಕ್ರಿಯೆಗಳ ಕೆಟ್ಟತನದಿಂದಲೂ ತಿರುಗಿಸುತ್ತಿದ್ದರು. |
23. | ಕರ್ತನು ಅನ್ನುತ್ತಾನೆ--ನಾನು ಸವಿಾಪದಲ್ಲಿ ದೇವರಾಗಿದ್ದು ದೂರದಲ್ಲಿ ದೇವರ ಲ್ಲವೋ? |
24. | ನಾನು ಅವನನ್ನು ನೋಡದ ಹಾಗೆ ಒಬ್ಬನು ಮರೆಯಾದ ಸ್ಥಳಗಳಲ್ಲಿ ತನ್ನನ್ನು ಅಡಗಿಸಿಕೊ ಳ್ಳಬಹುದೋ ಎಂದು ಕರ್ತನು ಅನ್ನುತ್ತಾನೆ; ನಾನು ಆಕಾಶದಲ್ಲಿಯೂ ಭೂಮಿಯಲ್ಲಿಯೂ ವ್ಯಾಪಿಸಿರುವವ ನಲ್ಲವೋ? ಎಂದು ಕರ್ತನು ಅನ್ನುತ್ತಾನೆ. |
25. | ನನ್ನ ಹೆಸರಿನಲ್ಲಿ ಸುಳ್ಳನ್ನು ಪ್ರವಾದಿಸುವ ಪ್ರವಾದಿಗಳು ಹೇಳುವದನ್ನು ಕೇಳಿದ್ದೇನೆ. ಅವರು--ನಾನು ಕನಸು ಕಂಡಿದ್ದೇನೆ, ಕನಸು ಕಂಡಿದ್ದೇನೆ ಅನ್ನುತ್ತಾರೆ. |
26. | ಸುಳ್ಳು ಪ್ರವಾದಿಸುವ ಪ್ರವಾದಿಗಳ ಹೃದಯದಲ್ಲಿ ಇದು ಎಷ್ಟರ ವರೆಗೆ ಇರುವದು? ಹೌದು, ಅವರು ತಮ್ಮ ಹೃದಯದ ಮೋಸವನ್ನು ಪ್ರವಾದಿಸುವವರೇ; |
27. | ಅವರ ತಂದೆ ಗಳು ಬಾಳನಿಂದ ನನ್ನ ಹೆಸರನ್ನು ಹೇಗೆ ಮರೆತರೋ ಹಾಗೆಯೇ ಇವರು ತಮ್ಮ ತಮ್ಮ ನೆರೆಯವರಿಗೆ ತಿಳಿಸುವ ಕನಸುಗಳಿಂದ ನನ್ನ ಜನರು ನನ್ನ ಹೆಸರನ್ನು ಮರೆತು ಬಿಡುವಂತೆ ಮಾಡುವದಕ್ಕೆ ಯೋಚಿಸುತ್ತಾರೆ. |
28. | ಕನಸು ಉಂಟಾದ ಪ್ರವಾದಿಯು ಕನಸನ್ನು ತಿಳಿಸಲಿ, ನನ್ನ ವಾಕ್ಯ ಉಂಟಾದವನು ನನ್ನ ವಾಕ್ಯವನ್ನು ನಂಬಿಗಸ್ತನಾಗಿ ಹೇಳಲಿ; ಗೋಧಿಗೂ ಹೊಟ್ಟಿಗೂ ಸಂಬಂಧವೇನೆಂದು ಕರ್ತನು ಅನ್ನುತ್ತಾನೆ. |
29. | ನನ್ನ ವಾಕ್ಯವು ಬೆಂಕಿಯ ಹಾಗಲ್ಲವೋ ಎಂದು ಕರ್ತನು ಅನ್ನುತ್ತಾನೆ. ಅದು ಬಂಡೆಯನ್ನು ತುಂಡು ಮಾಡುವ ಸುತ್ತಿಗೆಯ ಹಾಗಲ್ಲವೋ? |
30. | ಆದದರಿಂದ ಇಗೋ, ಪ್ರತಿಯೊಬ್ಬನೂ ತನ್ನ ನೆರೆಯವನಿಂದ ನನ್ನ ವಾಕ್ಯಗಳನ್ನು ಕದ್ದುಕೊಳ್ಳುವ ಪ್ರವಾದಿಗಳಿಗೆ ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. |
31. | ಇಗೋ, ತಮ್ಮ ನಾಲಿಗೆಗಳನ್ನು ಆಡಿ ಸುತ್ತಾ--ಆತನು ನುಡಿಯುತ್ತಾನೆ ಎಂದು ಅನ್ನುವ ಪ್ರವಾದಿಗಳಿಗೆ ನಾನು ವಿರೋಧವಾಗಿದ್ದೇನೆಂದು ಕರ್ತನು ಅನ್ನುತ್ತಾನೆ. |
32. | ಇಗೋ, ಸುಳ್ಳಿನ ಕನಸುಗಳನ್ನು ಪ್ರವಾದಿಸಿ; ತಮ್ಮ ಸುಳ್ಳುಗಳಿಂದಲೂ ನಿರರ್ಥಕವಾದ ವುಗಳಿಂದಲೂ ನನ್ನ ಜನರು ತಪ್ಪುವಂತೆ ಮಾಡುವವರಿಗೆ ವಿರೋಧವಾಗಿದ್ದೇನೆ; ನಾನು ಅವರನ್ನು ಕಳುಹಿಸಲಿಲ್ಲ, ಅವರಿಗೆ ಅಪ್ಪಣೆಕೊಡಲಿಲ್ಲ; ಆದದರಿಂದ ಅವರು ಹೇಗೂ ಈ ಜನರಿಗೆ ಪ್ರಯೋಜನವಾಗಿರುವದೇ ಇಲ್ಲವೆಂದು ಕರ್ತನು ಅನ್ನುತ್ತಾನೆ. |
33. | ಇದಲ್ಲದೆ ಈ ಜನರಾಗಲಿ ಪ್ರವಾದಿಯಾಗಲಿ ಯಾಜಕನಾಗಲಿ ಕರ್ತನ ಭಾರವೇನೆಂದು ನಿನ್ನನ್ನು ಕೇಳುವಾಗ ನೀನು ಅವರಿಗೆ--ಏನು ಭಾರ? ನಾನು ನಿಮ್ಮನ್ನು ತಳ್ಳಿಬಿಡುವೆನೆಂದು ಕರ್ತನು ಅನ್ನುತ್ತಾನೆಂದು ಹೇಳಬೇಕು. |
34. | ಕರ್ತನ ಭಾರವೆಂದೆನ್ನುವ ಪ್ರವಾದಿ ಯಾಗಲಿ ಯಾಜಕನಾಗಲಿ ಜನರಾಗಲಿ ಅವರ ವಿಷಯ ವೇನಂದರೆ--ನಾನು ಅಂಥಾ ಮನುಷ್ಯನನ್ನೂ ಅವನ ಮನೆಯನ್ನೂ ಶಿಕ್ಷಿಸುವೆನು. |
35. | ನೀವು ನಿಮ್ಮ ನಿಮ್ಮ ನೆರೆಯವರಿಗೂ ನಿಮ್ಮ ನಿಮ್ಮ ಸಹೋದರರಿಗೂ--ಕರ್ತನು ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. |
36. | ಆದರೆ ಕರ್ತನ ಭಾರವನ್ನು ಇನ್ನು ಎಂದಿಗೂ ನುಡಿಯುವದಿಲ್ಲ; ಒಬ್ಬೊ ಬ್ಬನಿಗೆ ತನ್ನ ನುಡಿಯೇ ಭಾರವಾಗುವದು; ನೀವು ಜೀವವುಳ್ಳ ದೇವರ ವಾಕ್ಯಗಳನ್ನು ಅಂದರೆ ನಮ್ಮ ದೇವರಾದ ಸೈನ್ಯಗಳ ಕರ್ತನ ವಾಕ್ಯಗಳನ್ನೇ ಮಾರ್ಪಡಿ ಸಿದ್ದೀರಿ. |
37. | ನೀನು ಪ್ರವಾದಿಗೆ--ಕರ್ತನು ನಿನಗೆ ಏನು ಉತ್ತರ ಕೊಟ್ಟಿದ್ದಾನೆ? ಕರ್ತನು ಏನು ಹೇಳಿದ್ದಾನೆ ಎಂದು ಹೇಳಬೇಕು. |
38. | ಆದರೆ ನೀವು--ಕರ್ತನ ಭಾರವೆಂದು ಹೇಳುತ್ತಿದ್ದೀರಿ. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ--ಕರ್ತನ ಭಾರವೆಂದು ನೀವು ಹೇಳಬಾರದೆಂಬದಾಗಿ ನಾನು ನಿಮಗೆ ಹೇಳಿ ಕಳುಹಿ ಸಿದ ಮೇಲೆ ಕರ್ತನ ಭಾರವೆಂಬ ಈ ಮಾತನ್ನು ನೀವು ಹೇಳುವದರಿಂದ |
39. | ಕರ್ತನು ಹೀಗೆ ಹೇಳು ತ್ತಾನೆ--ನಾನು ಇಗೋ, ನಾನೇ ನಿಮ್ಮನ್ನು ಪೂರ್ಣವಾಗಿ ಮರೆತುಬಿಡುವೆನು; ನಿಮ್ಮನ್ನು ನಿಮಗೂ ನಿಮ್ಮ ತಂದೆ ಗಳಿಗೂ ಕೊಟ್ಟ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತಳ್ಳಿಬಿಡುವೆನು. |
40. | ಮರೆತು ಹೋಗಲಾರದ ನಿತ್ಯವಾದ ನಿಂದೆಯನ್ನೂ ನಿತ್ಯವಾದ ಅವಮಾನವನ್ನೂ ನಿನ್ನ ಮೇಲೆ ಬರಮಾಡುತ್ತೇನೆ. |
← Jeremiah (23/52) → |