← Jeremiah (17/52) → |
1. | ಯೆಹೂದದ ಪಾಪವು ಕಬ್ಬಿಣದ ಲೇಖನಿಯಿಂದಲೂ ವಜ್ರದ ಮೊನೆಯಿಂದಲೂ ಬರೆಯಲ್ಪಟ್ಟಿದೆ; ಅದು ಅವರ ಹೃದಯದ ಹಲಿಗೆಯ ಮೇಲೆಯೂ ಬಲಿಪೀಠಗಳ ಕೊಂಬುಗಳ ಮೇಲೆಯೂ ಕೆತ್ತಲ್ಪಟ್ಟಿದೆ. |
2. | ಅವರ ಮಕ್ಕಳು ಅವರ ಬಲಿಪೀಠಗ ಳನ್ನೂ ಹಸುರಾದ ಗಿಡಗಳಲ್ಲಿಯೂ ಎತ್ತರವಾದ ಗುಡ್ಡಗಳ ಮೇಲೆಯೂ ಇರುವ ಅವರ ತೋಪುಗಳನ್ನೂ ಜ್ಞಾಪಕಮಾಡಿಕೊಳ್ಳುತ್ತಾರಲ್ಲಾ. |
3. | ಹೊಲದಲ್ಲಿರುವ ನನ್ನ ಪರ್ವತವೇ, ನಿನ್ನ ಬದುಕನ್ನೂ ಎಲ್ಲಾ ಬೊಕ್ಕಸಗಳನ್ನೂ ಎಲ್ಲಾ ಪ್ರಾಂತ್ಯಗಳಲ್ಲಿ ಪಾಪಕ್ಕಾಗಿರುವ ನಿನ್ನ ಉನ್ನತ ಸ್ಥಳಗಳನ್ನೂ ನಾನು ಕೊಳ್ಳೆಗೆ ಒಪ್ಪಿಸುವೆನು. |
4. | ಆಗ ನಾನು ನಿನಗೆ ಕೊಟ್ಟ ಸ್ವಾಸ್ತ್ಯವನ್ನು ನಿನ್ನಷ್ಟಕ್ಕೆ ನೀನೇ ಬಿಟ್ಟು ಬಿಡುವಿ; ನಿನಗೆ ತಿಳಿಯದ ದೇಶದಲ್ಲಿ ನಿನ್ನ ಶತ್ರುಗಳನ್ನು ನೀನು ಸೇವಿಸುವಂತೆ ಮಾಡುವೆನು, ನೀವು ನನ್ನ ರೋಷಾಗ್ನಿಯನ್ನು ಹತ್ತಿಸಿದ್ದೀರಿ, ಅದು ನಿತ್ಯವೂ ಜ್ವಲಿಸುತ್ತಿರುವದು. |
5. | ಕರ್ತನು ಹೀಗೆ ಹೇಳುತ್ತಾನೆ--ಮನುಷ್ಯನಲ್ಲಿ ನಂಬಿಕೆ ಇಟ್ಟು ಅವನನ್ನು ತನ್ನ ಬಾಹುವನ್ನಾಗಿ ಮಾಡಿ ಕೊಂಡು ಕರ್ತನ ಕಡೆಯಿಂದ ಯಾವನ ಹೃದಯವು ತೊಲಗುವದೋ ಅವನು ಶಾಪಗ್ರಸ್ತನು. |
6. | ಅವನು ಅಡವಿಯಲ್ಲಿರುವ ಕುರುಚಲ ಗಿಡದ ಹಾಗಿರುವನು; ಒಳ್ಳೇದು ಬರುವಾಗ ನೋಡದೆ ಇರುವನು; ನಿವಾಸಿ ಗಳಿಲ್ಲದ ಚೌಳುನೆಲವಾಗಿರುವ ಅರಣ್ಯದ ನೀರಿಲ್ಲದ ಸ್ಥಳಗಳಲ್ಲಿ ವಾಸವಾಗಿರುವನು. |
7. | ಯಾವನು ಕರ್ತನಲ್ಲಿ ಭರವಸವಿಟ್ಟಿರುವನೋ ಯಾವನಿಗೆ ಕರ್ತನು ನಿರೀಕ್ಷೆ ಯಾಗಿದ್ದಾನೋ ಆ ಮನುಷ್ಯನು ಧನ್ಯನು. |
8. | ಅವನು ನೀರಿನ ಬಳಿಯಲ್ಲಿ ನೆಡಲ್ಪಟ್ಟು ಹೊಳೆಯ ಬಳಿಯಲ್ಲಿ ತನ್ನ ಬೇರುಗಳನ್ನು ಹರಡಿರುವ ಮರದ ಹಾಗಿರುವನು; ಧಗೆಯು ಬರುವಾಗ ಅದು ಬಾಡಿಹೋಗದೆ ಅದರ ಎಲೆ ಹಸುರಾಗಿರುವದು; ಕ್ಷಾಮದ ವರುಷದಲ್ಲಿ ಅದಕ್ಕೆ ಚಿಂತೆ ಇರುವದಿಲ್ಲ ಇಲ್ಲವೆ ಫಲಫಲಿಸುವದನ್ನು ನಿಲ್ಲಿಸುವದಿಲ್ಲ. |
9. | ಹೃದಯವು ಎಲ್ಲಾದಕ್ಕಿಂತ ವಂಚನೆಯುಳ್ಳದ್ದಾ ಗಿಯೂ ಮಹಾದುಷ್ಟತನದ್ದೂ ಆಗಿದೆ, ಅದನ್ನು ತಿಳಿಯುವವನಾರು? |
10. | ಕರ್ತನಾದ ನಾನೇ ಹೃದಯ ವನ್ನು ಪರೀಕ್ಷಿಸುತ್ತೇನೆ; ಅಂತರಿಂದ್ರಿಯಗಳನ್ನು ಶೋಧಿ ಸುತ್ತೇನೆ. ಒಬ್ಬೊಬ್ಬನಿಗೆ ಅವನವನ ಮಾರ್ಗಗಳ ಪ್ರಕಾರವೂ ಅವನ ಕ್ರಿಯೆಗಳ ಫಲದ ಪ್ರಕಾರವೂ (ಪ್ರತಿಫಲ) ಕೊಡುತ್ತೇನೆ. |
11. | ಕೌಜುಗವು ತನ್ನದಲ್ಲದ ಮರಿಗಳನ್ನು ಕೂಡಿಸಿ ಕೊಳ್ಳುವ ಹಾಗೆ ಅನ್ಯಾಯವಾಗಿ ಐಶ್ವರ್ಯವನ್ನು ಸಂಪಾದಿಸುವವನು ಇದ್ದಾನೆ; ಅವನು ತನ್ನ ಮದ್ಯ ಪ್ರಾಯದಲ್ಲಿ ಅದನ್ನು ಬಿಡುವನು; ತನ್ನ ಅಂತ್ಯದಲ್ಲಿ ಅವನು ಮೂರ್ಖನಾಗಿರುವನು. |
12. | ಆದಿಯಿಂದ ಮಹಿಮೆಯುಳ್ಳ ಉನ್ನತ ಸಿಂಹಾ ಸನವು ನಮ್ಮ ಪರಿಶುದ್ಧ ಸ್ಥಳವಾಗಿದೆ. |
13. | ಇಸ್ರಾಯೇಲಿನ ನಿರೀಕ್ಷೆಯಾದ ಓ ಕರ್ತನೇ, ನಿನ್ನನ್ನು ತೊರೆದು ಬಿಟ್ಟವರೆಲ್ಲರು ನಾಚಿಕೆಗೆ ಒಳಗಾಗುವರು, ಜೀವವುಳ್ಳ ನೀರಿನ ಬುಗ್ಗೆಯಾದ ಕರ್ತನಿಂದ ತೊಲಗಿ ಹೋದವರು ದೂಳಿನಲ್ಲಿ ಬರೆಯಲ್ಪಡುವರು. |
14. | ಓ ಕರ್ತನೇ, ನನ್ನನ್ನು ಸ್ವಸ್ಥಮಾಡು, ಆಗ ಸ್ವಸ್ಥನಾಗು ವೆನು; ನನ್ನನ್ನು ರಕ್ಷಿಸು, ಆಗ ರಕ್ಷಿಸಲ್ಪಡುವೆನು; ನೀನೇ ನನ್ನ ಸ್ತೋತ್ರವು. |
15. | ಇಗೋ, ಅವರು ನನಗೆ-- ಕರ್ತನ ವಾಕ್ಯವು ಎಲ್ಲಿ? ಅದು ಈಗ ಬರಲಿ ಅನ್ನುತ್ತಾರೆ. |
16. | ಆದರೆ ನಾನು ನಿನ್ನನ್ನು ಹಿಂಬಾಲಿಸುವ ಪಾಲಕ ನಾಗಲು ಹಿಂಜರಿಯಲಿಲ್ಲ; ದುರ್ದಿನವನ್ನು ಅಪೇಕ್ಷಿಸ ಲಿಲ್ಲವೆಂದು ನೀನು ಬಲ್ಲೆ; ನನ್ನ ತುಟಿಗಳಿಂದ ಹೊರ ಟದ್ದು ನಿನ್ನ ಸನ್ನಿಧಿಯಲ್ಲಿ ಸರಿಯಾಗಿತ್ತು. |
17. | ನೀನು ನನಗೆ ಭಯಾಸ್ಪದವಾಗಬೇಡ; ಕೆಟ್ಟ ದಿನದಲ್ಲಿ ನೀನೇ ನನ್ನ ನಿರೀಕ್ಷೆಯು. |
18. | ನನ್ನನ್ನು ಹಿಂಸಿಸುವವರು ನಾಚಿಕೆ ಪಡಲಿ; ಆದರೆ ನನಗೆ ನಾಚಿಕೆಯಾಗದಿರಲಿ. ಅವರು ದಿಗಿಲುಪಡಲಿ; ಆದರೆ ನಾನು ದಿಗಿಲುಪಡದಂತೆ ಮಾಡುವ ಕೆಟ್ಟದಿನವನ್ನು ಅವರ ಮೇಲೆ ಬರಮಾಡು, ಎರಡರಷ್ಟು ಅವರನ್ನು ನಾಶಪಡಿಸು. |
19. | ಕರ್ತನು ನನಗೆ ಹೀಗೆ ಹೇಳಿದನು--ಹೋಗಿ ಜನರ ಮಕ್ಕಳ ಬಾಗಿಲಲ್ಲಿಯೂ ಯೆಹೂದದ ಅರಸರು ಪ್ರವೇಶಿಸುವಲ್ಲಿಯೂ ಹೊರಡುವಲ್ಲಿಯೂ ಯೆರೂಸ ಲೇಮಿನ ಎಲ್ಲಾ ಬಾಗಿಲುಗಳಲ್ಲಿಯೂ ನಿಂತುಕೊಂಡು |
20. | ಅವರಿಗೆ ಹೀಗೆ ಹೇಳು. ಏನಂದರೆ--ಯೆಹೂದದ, ಅರಸರೇ, ಸಮಸ್ತ ಯೆಹೂದವೇ, ಈ ಬಾಗಿಲುಗಳಲ್ಲಿ ಪ್ರವೇಶಿಸುವ ಯೆರೂಸಲೇಮಿನ ಎಲ್ಲಾ ನಿವಾಸಿಗಳೇ, ಕರ್ತನ ವಾಕ್ಯವನ್ನು ಕೇಳಿರಿ. |
21. | ಕರ್ತನು ಹೀಗೆ ಹೇಳುತ್ತಾನೆ--ನಿಮಗೆ ನೀವೇ ಎಚ್ಚರಿಕೆಯಾಗಿರ್ರಿ; ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಇಲ್ಲವೆ ಯೆರೂಸಲೇಮಿನ ಬಾಗಿಲುಗಳೊಳಗೆ ತಕ್ಕೊಂಡು ಬರಬೇಡಿರಿ. |
22. | ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ನಿಮ್ಮ ಮನೆಗಳೊಳಗಿಂದ ತಕ್ಕೊಂಡು ಹೋಗಬೇಡಿರಿ; ಯಾವ ಕೆಲಸವನ್ನೂ ಮಾಡಬೇಡಿರಿ; ನಾನು ನಿಮ್ಮ ತಂದೆಗಳಿಗೆ ಆಜ್ಞಾಪಿಸಿದ ಪ್ರಕಾರವೇ ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕು ಎಂಬದು. |
23. | ಆದರೆ ಅವರು ವಿಧೇಯರಾಗಲಿಲ್ಲ; ಕಿವಿಗೊಟ್ಟು ಕೇಳಲಿಲ್ಲ; ವಿಧೇಯರಾಗದ ಹಾಗೆಯೂ ಉಪದೇಶ ಹೊಂದದ ಹಾಗೆಯೂ ತಮ್ಮ ಕುತ್ತಿಗೆಯನ್ನು ಬೊಗ್ಗಿಸದ ಹಾಗೆಯೂ ಮಾಡಿಕೊಂಡರು. |
24. | ನೀವು ನನ್ನನ್ನು ಜಾಗ್ರತೆಯಾಗಿ ಕೇಳಿ ಸಬ್ಬತ್ತಿನ ದಿನದಲ್ಲಿ ಈ ಪಟ್ಟಣದ ಬಾಗಿಲುಗಳಲ್ಲಿ ಹೊರೆಯನ್ನು ತಕ್ಕೊಂಡುಬಾರದೆ ಸಬ್ಬತ್ತಿನ ದಿನದಲ್ಲಿ ಯಾವದೊಂದು ಕೆಲಸಮಾಡದೆ ಪರಿಶುದ್ಧ ಮಾಡಿದರೆ |
25. | ದಾವೀದನ ಸಿಂಹಾಸನದ ಮೇಲೆ ಕೂಡ್ರುವ ಅರಸರು ಮತ್ತು ಪ್ರಧಾನರು ರಥಗಳಲ್ಲಿಯೂ ಕುದುರೆಗಳ ಮೇಲೆಯೂ ಸವಾರಿ ಮಾಡಿಕೊಂಡು ಯೆಹೂದದ ಮನುಷ್ಯರಾಗಿಯೂ ಯೆರೂಸಲೇಮಿನ ನಿವಾಸಿಗಳಾಗಿಯೂ ಇದ್ದು ಅವರೂ ಅವರ ಪ್ರಧಾನರೂ ಈ ಪಟ್ಟಣದ ಬಾಗಿಲುಗಳಲ್ಲಿ ಪ್ರವೇಶಿಸುವರು; ಈ ಪಟ್ಟಣವು ಎಂದೆಂದಿಗೂ ನಿಲ್ಲು ವದು. |
26. | ಇದಲ್ಲದೆ ಯೆಹೂದದ ಪಟ್ಟಣ ಗಳಿಂದಲೂ ಯೆರೂಸಲೇಮಿನ ಸುತ್ತಲಿನ ಸ್ಥಳಗಳಿಂದಲೂ ಬೆನ್ಯಾ ವಿಾನ್ ದೇಶದಿಂದಲೂ ಬೈಲಿನಿಂದಲೂ ಬೆಟ್ಟಗ ಳಿಂದಲೂ ದಕ್ಷಿಣದಿಂದಲೂ ದಹನಬಲಿಗಳನ್ನೂ ಬಲಿ ಗಳನ್ನೂ ಆಹಾರ ಅರ್ಪಣೆಗಳನ್ನೂ ಧೂಪವನ್ನೂ ತರುವರು; ಸ್ತೋತ್ರದರ್ಪಣೆಗಳನ್ನು ಕರ್ತನ ಆಲಯಕ್ಕೆ ತರುವರು. |
27. | ಆದರೆ ನೀವು ಸಬ್ಬತ್ತಿನ ದಿವಸವನ್ನು ಪರಿಶುದ್ಧ ಮಾಡಬೇಕೆಂದೂ ಸಬ್ಬತ್ತಿನ ದಿವಸದಲ್ಲಿ ಹೊರೆಯನ್ನು ಹೊತ್ತುಕೊಂಡು ಯೆರೂಸಲೇಮಿನ ಬಾಗಿಲುಗಳಲ್ಲಿ ಪ್ರವೇಶಿಸಬಾರದೆಂದೂ ಹೇಳಿದ ನನ್ನ ಮಾತನ್ನು ಕೇಳದೆ ಹೋದರೆ, ಅದರ ಬಾಗಿಲುಗಳಲ್ಲಿ ಬೆಂಕಿಯನ್ನು ಹಚ್ಚುತ್ತೇನೆ; ಅದು ಆರಿ ಹೋಗದೆ ಯೆರೂಸಲೇಮಿನ ಅರಮನೆಗಳನ್ನು ದಹಿಸಿಬಿಡುವದು. |
← Jeremiah (17/52) → |