← Jeremiah (16/52) → |
1. | ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ-- |
2. | ಈ ಸ್ಥಳದಲ್ಲಿ ನೀನು ಹೆಂಡತಿಯನ್ನು ತಕ್ಕೊಳ್ಳಬೇಡ; ನಿನಗೆ ಕುಮಾರರಾಗಲಿ ಕುಮಾರ್ತೆಯರಾಗಲಿ ಈ ಸ್ಥಳದಲ್ಲಿ ಇರಬಾರದು; |
3. | ಈ ಸ್ಥಳದಲ್ಲಿ ಹುಟ್ಟಿರುವ ಕುಮಾರ ಕುಮಾರ್ತೆ ರಯರನ್ನು ಕುರಿತಾಗಿಯೂ ಅವರನ್ನು ಹೆತ್ತ ತಾಯಿಗಳನ್ನು ಈ ದೇಶದಲ್ಲಿ ಅವರನ್ನು ಪಡೆದ ತಂದೆಗಳನ್ನು ಕುರಿ ತಾಗಿಯೂ ಕರ್ತನು ಹೀಗೆ ಹೇಳುತ್ತಾನೆ-- |
4. | ಅವರು ಬಹು ಕ್ರೂರವಾದ ಮರಣಗಳಿಂದ ಸಾಯುವರು; ಅವರಿಗೋಸ್ಕರ ಗೋಳಾಟ ಆಗುವದಿಲ್ಲ; ಅವರು ಹೂಣಿಡಲ್ಪಡುವದಿಲ್ಲ; ಭೂಮಿಯ ಮೇಲೆ ಅವರು ಗೊಬ್ಬರವಾಗುವರು; ಕತ್ತಿಯಿಂದಲೂ ಕ್ಷಾಮದಿಂದಲೂ ಸಂಹಾರವಾಗುವರು; ಅವರ ಹೆಣಗಳು ಆಕಾಶದ ಪಕ್ಷಿಗಳಿಗೂ ಭೂಮಿಯ ಮೃಗಗಳಿಗೂ ಆಹಾರ ವಾಗುವವು. |
5. | ಕರ್ತನು ಹೀಗೆ ಹೇಳುತ್ತಾನೆ--ದುಃಖದ ಮನೆ ಯಲ್ಲಿ ಪ್ರವೇಶಿಸಬೇಡ, ಅವರ ಸಂಗಡ ಗೋಳಾಡು ವದಕ್ಕೂ ದುಃಖಪಡುವದಕ್ಕೂ ಹೋಗಬೇಡ; ನಾನು ನನ್ನ ಸಮಾಧಾನವನ್ನೂ ಕೃಪೆಯನ್ನೂ ಕರುಣೆಯನ್ನೂ ಈ ಜನರಿಂದ ತೆಗೆದುಹಾಕಿದ್ದೇನೆಂದು ಕರ್ತನು ಅನ್ನುತ್ತಾನೆ. |
6. | ದೊಡ್ಡವರೂ ಚಿಕ್ಕವರೂ ಈ ದೇಶದಲ್ಲಿ ಸಾಯುವರು; ಅವರು ಹೂಣಿಡಲ್ಪಡುವದಿಲ್ಲ, ಅವರಿ ಗೋಸ್ಕರ ಯಾರೂ ಗೋಳಾಡುವದಿಲ್ಲ; ಅವರಿ ಗೋಸ್ಕರ ತಮ್ಮನ್ನು ಕೊಯ್ದು ಕೊಳ್ಳುವದಿಲ್ಲ, ಬೋಳಿಸಿ ಕೊಳ್ಳುವದೂ ಇಲ್ಲ. |
7. | ಸತ್ತವರ ವಿಷಯದಲ್ಲಿ ಅವರನ್ನು ಆದರಿಸುವ ಹಾಗೆ ಜನರು ಹರಿದುಕೊಳ್ಳುವದಿಲ್ಲ; ಅವರ ತಂದೆ ತಾಯಿಗಳ ವಿಷಯವಾದರೋ ಅವರಿಗೆ ಆದರಣೆಯ ಪಾತ್ರೆಯನ್ನು ಕುಡಿಯಲು ಕೊಡುವದಿಲ್ಲ. |
8. | ಅವರ ಸಂಗಡ ಕೂತುಕೊಂಡು ಉಣ್ಣುವದಕ್ಕೂ ಕುಡಿಯುವದಕ್ಕೂ ಔತಣದ ಮನೆಯಲ್ಲಿ ಪ್ರವೇಶಿಸ ಬೇಡ. |
9. | ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿಮ್ಮ ಕಣ್ಣುಗಳ ಮುಂದೆ ನಿಮ್ಮ ದಿನಗಳಲ್ಲಿಯೇ ಉಲ್ಲಾಸ ಸಂತೋಷದ ಧ್ವನಿಯನ್ನೂ ಮದಲಿಂಗನ ಸ್ವರವನ್ನೂ ಮದಲಗಿತ್ತಿಯ ಸ್ವರವನ್ನೂ ಈ ಸ್ಥಳದೊಳಗಿಂದ ನಿಲ್ಲಿಸಿ ಬಿಡುತ್ತೇನೆ. |
10. | ಇದಲ್ಲದೆ ನೀನು ಈ ಜನರಿಗೆ ಈ ಮಾತುಗಳನ್ನೆಲ್ಲಾ ತಿಳಿಸಿದ ಮೇಲೆ ಅವರು ನಿನಗೆ--ಕರ್ತನು ನಮ್ಮ ಮೇಲೆ ಈ ದೊಡ್ಡ ಕೇಡನ್ನು ಏಕೆ ವಿಧಿಸಿದ್ದಾನೆ? ನಮ್ಮ ಅಕ್ರಮ ಏನು? ನಾವು ನಮ್ಮ ದೇವರಾದ ಕರ್ತನಿಗೆ ವಿರೋಧವಾಗಿ ಮಾಡಿರುವ ಪಾಪವೇನು ಎಂದು ಹೇಳಿದರೆ ನೀನು ಅವರಿಗೆ ಹೇಳಬೇಕಾದದ್ದೇನಂದರೆ--ಕರ್ತನು ಹೀಗನ್ನುತ್ತಾನೆ. |
11. | ನಿಮ್ಮ ತಂದೆಗಳು ನನ್ನನ್ನು ಬಿಟ್ಟು ಬೇರೆ ದೇವರುಗಳನ್ನು ಹಿಂಬಾಲಿಸಿ ಸೇವಿಸಿ ಆರಾಧಿಸಿ ನನ್ನನ್ನು ತೊರೆದುಬಿಟ್ಟು, ನನ್ನ ನ್ಯಾಯ ಪ್ರಮಾಣವನ್ನು ಕೈಕೊಳ್ಳಲಿಲ್ಲ. |
12. | ನೀವು ನಿಮ್ಮ ತಂದೆಗಳಿಗಿಂತ ಇನ್ನೂ ಕೆಟ್ಟ ಕೆಲಸ ಮಾಡಿದ್ದೀರಿ; ಇಗೋ, ನನ್ನನ್ನು ಕೇಳದ ಹಾಗೆ ನಿಮ್ಮ ನಿಮ್ಮ ಕೆಟ್ಟ ಹೃದಯದ ಕಲ್ಪನೆಯ ಪ್ರಕಾರ ನಡೆದುಕೊಂಡಿದ್ದೀರಿ. |
13. | ಆದದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ ನಿಮಗೂ ನಿಮ್ಮ ತಂದೆಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು; ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆಮಾಡುವಿರಿ ನಾನು ನಿಮಗೆ ಕನಿಕರ ತೋರಿಸುವದಿಲ್ಲ. |
14. | ಆದದರಿಂದ ಇಗೋ, ಕರ್ತನು ಹೇಳುವದೇ ನಂದರೆ--ಇಗೋ, ಇಸ್ರಾಯೇಲಿನ ಮಕ್ಕಳನ್ನು ಐಗುಪ್ತ ದೇಶದೊಳಗಿಂದ ಬರಮಾಡಿದ ಕರ್ತನ ಜೀವದಾಣೆ ಎಂದು ಇನ್ನು ಹೇಳುವದಿಲ್ಲ; |
15. | ಆದರೆ ಕರ್ತನ ಜೀವದಾಣೆ, ಇಸ್ರಾಯೇಲಿನ ಮಕ್ಕಳನ್ನು ಉತ್ತರ ದೇಶ ದೊಳಗಿಂದಲೂ ನಾನು ಅವರನ್ನು ಅಟ್ಟಿ ಬಿಟ್ಟಿದ್ದ ಸಮಸ್ತ ದೇಶಗಳೊಳಗಿಂದಲೂ ಬರಮಾಡಿ ನಾನು ಅವರ ಪಿತೃಗಳಿಗೆ ಕೊಟ್ಟಂಥ ಅವರ ದೇಶಕ್ಕೆ ಅವರನ್ನು ತಿರಿಗಿ ಬರಮಾಡುವೆನು ಎಂದು ಹೇಳುವ ದಿನಗಳು ಬರುವವು. |
16. | ಇಗೋ, ನಾನು ಅನೇಕ ವಿಾನುಗಾರರನ್ನು ಕಳುಹಿಸುತ್ತೇನೆಂದು ಕರ್ತನು ಅನ್ನುತ್ತಾನೆ; ಇವರು ಅವರನ್ನು ಹಿಡಿಯುವರು; ಆಮೇಲೆ ಅನೇಕ ಬೇಟೆ ಗಾರರನ್ನು ಕಳುಹಿಸುವೆನು; ಇವರು ಎಲ್ಲಾ ಬೆಟ್ಟಗುಡ್ಡಗಳ ಮೇಲೆಯೂ ಎಲ್ಲಾ ಗುಡ್ಡಗಳ ಮೇಲೆಯೂ ಎಲ್ಲಾ ಬಂಡೆಗಳ ಬಿರುಕುಗಳಲ್ಲಿಯೂ ಅವರನ್ನು ಬೇಟೆಯಾಡು ವರು. |
17. | ನನ್ನ ಕಣ್ಣುಗಳು ಅವರ ಎಲ್ಲಾ ಮಾರ್ಗಗಳ ಮೇಲೆ ಅವೆ; ಅವು ನನ್ನ ಮುಖಕ್ಕೆ ಮರೆಯಾದವುಗಳಲ್ಲ ಇಲ್ಲವೆ ಅವರ ಅಕ್ರಮವು ನನ್ನ ಕಣ್ಣುಗಳಿಗೆ ಅಡಗಿರು ವದಿಲ್ಲ; |
18. | ಆದರೆ ನಾನು ಮೊದಲು ಅವರ ಅಕ್ರಮಕ್ಕೂ ಪಾಪಕ್ಕೂ ಎರಡರಷ್ಟು ಪ್ರತಿಫಲ ಕೊಡು ತ್ತೇನೆ. ಅವರು ನನ್ನ ದೇಶವನ್ನು ತಮ್ಮ ಹೇಸಿಗೆ ಹೆಣ ಗಳಿಂದ ಅಪವಿತ್ರ ಮಾಡಿ ನನ್ನ ಸ್ವಾಸ್ತ್ಯವನ್ನು ತಮ್ಮ ಅಸಹ್ಯಗಳಿಂದ ತುಂಬಿಸಿದ್ದಾರೆ. |
19. | ಓ ಕರ್ತನೇ, ನನ್ನ ಬಲವೇ, ನನ್ನ ಕೋಟೆಯೇ, ಇಕ್ಕಟ್ಟಿನ ದಿವಸದಲ್ಲಿ ನನ್ನ ಆಶ್ರಯವೇ, ಭೂಮಿಯ ಅಂತ್ಯಗಳಿಂದ ಅನ್ಯರು ನಿನ್ನ ಬಳಿಗೆ ಬಂದು--ನಿಶ್ಚಯ ವಾಗಿ ನಮ್ಮ ತಂದೆಗಳು ಸುಳ್ಳನ್ನು ವ್ಯರ್ಥವನ್ನು ಲಾಭ ವಿಲ್ಲದವುಗಳನ್ನು ಬಾಧ್ಯವಾಗಿ ಹೊಂದಿದ್ದಾರೆ. |
20. | ಮನು ಷ್ಯನು ದೇವರಲ್ಲದ ದೇವರುಗಳನ್ನು ತನಗೆ ಮಾಡು ವದುಂಟೇ? |
21. | ಆದದರಿಂದ ಇಗೋ, ನಾನು--ಇದೊಂದು ಸಾರಿ ಅವರಿಗೆ ತಿಳಿಯುವಂತೆ ಮಾಡುವೆನು. ನನ್ನ ಕೈಯನ್ನೂ ಪರಾಕ್ರಮವನ್ನೂ ಅವರಿಗೆ ತಿಳಿಸುವೆನು. ನನ್ನ ಹೆಸರು ಕರ್ತನೇ ಎಂದು ಅವರು ತಿಳುಕೊಳ್ಳುವರು. |
← Jeremiah (16/52) → |