← Isaiah (63/66) → |
1. | ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ. |
2. | ನಿನ್ನ ವಸ್ತ್ರಗಳು ಯಾಕೆ ಕೆಂಪಾದವು? ನಿನ್ನ ಬಟ್ಟೆಗಳು ಯಾಕೆ ದ್ರಾಕ್ಷೇಯನ್ನು ತುಳಿಯುವವನ ಹಾಗಿವೆ? |
3. | ದ್ರಾಕ್ಷೇ ತೊಟ್ಟಿಯನ್ನು ನಾನೊಬ್ಬನೇ ತುಳಿದಿದ್ದೇನೆ, ಜನಗಳಲ್ಲಿ ಒಬ್ಬನಾದರೂ ನನ್ನ ಸಂಗಡ ಇರಲಿಲ್ಲ; ನನ್ನ ಕೋಪದಲ್ಲಿ ಅವರನ್ನು ತುಳಿದಿದ್ದೇನೆ, ನನ ಉರಿಯಲ್ಲಿ ಅವರನ್ನು ಜಜ್ಜಿಬಿಟ್ಟಿದ್ದೇನೆ. ಆದದರಿಂದ ಅವರ ರಕ್ತವು ನನ್ನ ಬಟ್ಟೆಗಳ ಮೇಲೆ ಚಿಮುಕಿಸ ಲ್ಪಟ್ಟಿದೆ, ನನ್ನ ವಸ್ತ್ರಗಳೆಲ್ಲಾ ಮೈಲಿಗೆಯಾದವು. |
4. | ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. |
5. | ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. |
6. | ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು. |
7. | ಕರ್ತನು ನಮಗೆ ಮಾಡಿದ್ದೆಲ್ಲಾದರ ಪ್ರಕಾರ, ಕರ್ತನ ಪ್ರೀತಿ ಕೃಪೆಗಳನ್ನೂ ಕರ್ತನ ಸ್ತೋತ್ರಗಳನ್ನೂ ಜ್ಞಾಪಕಪಡಿಸುವೆನು; ಆತನು ತನ್ನ ಅಂತಃಕರುಣೆಯ ಪ್ರಕಾರವೂ ತನ್ನ ಕೃಪೆಯ ಮಹಾ ಒಳ್ಳೇತನದ ಪ್ರಕಾರವೂ ಇಸ್ರಾಯೇಲಿನ ಮನೆಯವರಿಗೆ ದೊಡ್ಡ ಉಪಕಾರ ಮಾಡಿದನಲ್ಲಾ. |
8. | ಆತನು--ನಿಶ್ಚಯವಾಗಿ ಅವರು ನನ್ನ ಜನರೇ, ಸುಳ್ಳಾಡದ ಮಕ್ಕಳೇ ಎಂದು ಹೇಳಿದನು; ಆದದರಿಂದ ಅವರಿಗೆ ರಕ್ಷಕನಾಗಿದ್ದನು. |
9. | ಅವರಿಗೆ ಆದ ಎಲ್ಲಾ ಶ್ರಮೆಯಲ್ಲಿ ಆತನಿಗೆ ಶ್ರಮೆ ಆಯಿತು; ಆತನ ಸಮ್ಮುಖದ ದೂತನು ಅವರನ್ನು ರಕ್ಷಿಸಿದನು; ತನ್ನ ಪ್ರೀತಿಯಲ್ಲಿಯೂ ತನ್ನ ಕನಿಕರ ದಲ್ಲಿಯೂ ಆತನೇ ಅವರನ್ನು ವಿಮೋಚಿಸಿದನು; ಪೂರ್ವಕಾಲದ ದಿನಗಳಲ್ಲೆಲ್ಲಾ ಅವರನ್ನು ಎತ್ತಿಕೊಂಡು ಹೊತ್ತುಕೊಂಡನು. |
10. | ಆದರೆ ಅವರು ತಿರುಗಿ ಬಿದ್ದು, ಆತನ ಪರಿಶುದ್ಧಾತ್ಮನನ್ನು ದುಃಖಪಡಿಸಿದರು; ಆದ ದರಿಂದ ಆತನು ತಿರುಗಿಕೊಂಡು, ಅವರಿಗೆ ಶತ್ರು ವಾದನು; ಆತನೇ ಅವರಿಗೆ ವಿರೋಧವಾಗಿ ಯುದ್ಧ ಮಾಡಿದನು. |
11. | ಆಗ ಆತನು ಪೂರ್ವಕಾಲದ ದಿನ ಗಳನ್ನು ಮೋಶೆಯನ್ನೂ ತನ್ನ ಜನರನ್ನೂ ಜ್ಞಾಪಕ ಮಾಡಿಕೊಂಡು--ಅವರನ್ನು ತನ್ನ ಮಂದೆಯ ಕುರುಬನ ಸಂಗಡ ಸಮುದ್ರದೊಳಗಿಂದ ಏರ ಮಾಡಿದವನು ಎಲ್ಲಿ? ಅವನ ಮಧ್ಯದಲ್ಲಿ ತನ್ನ ಪರಿಶುದ್ಧಾತ್ಮನನ್ನು ಇಟ್ಟವನು ಎಲ್ಲಿ? |
12. | ಮೋಶೆಯ ಬಲಗೈಯ ಮುಖಾಂ ತರ, ತನ್ನ ಮಹಿಮೆಯುಳ್ಳ ತೋಳಿನಿಂದ ಅವರನ್ನು ನಡಿಸಿದವನೂ ತನಗೆ ನಿತ್ಯವಾದ ಹೆಸರನ್ನುಂಟು ಮಾಡುವ ಹಾಗೆ ಅವರ ಮುಂದೆ ನೀರುಗಳನ್ನು ಭೇದಿಸಿದವನು ಎಲ್ಲಿ? |
13. | ಅಡವಿಯಲ್ಲಿ ಕುದುರೆಯಂತೆ ಅಗಾಧಗಳಲ್ಲಿ ಅವರನ್ನು ಎಡವದ ಹಾಗೆ ನಡಿಸಿ ದವನು ಎಲ್ಲಿ ಅಂದನು. |
14. | ಪಶುವು ತಗ್ಗಿಗೆ ಇಳಿ ಯುವ ಪ್ರಕಾರ, ಕರ್ತನ ಆತ್ಮನು ಅವರಿಗೆ ವಿಶ್ರಾಂತಿ ಕೊಟ್ಟನು; ಈ ಪ್ರಕಾರ ನೀನು ನಿನಗೆ ಮಹಿಮೆ ಯುಳ್ಳ ಹೆಸರನ್ನು ಉಂಟು ಮಾಡುವ ಹಾಗೆ, ನಿನ್ನ ಜನರನ್ನು ನಡಿಸಿದಿ. |
15. | ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ? |
16. | ಅಬ್ರಹಾಮನು ನಮ್ಮನ್ನು ತಿಳಿಯದಿದ್ದರೂ ಇಸ್ರಾಯೇಲನು ನಮ್ಮನ್ನು ಗುರುತಿಸದಿದ್ದರೂ ನಿಸ್ಸಂದೇಹವಾಗಿ ನೀನೇ ನಮ್ಮ ತಂದೆಯಾಗಿದ್ದೀ; ಕರ್ತನಾದ ನೀನೇ ನಮ್ಮ ತಂದೆಯು, ನಮ್ಮ ವಿಮೋಚಕನು; ನಿನ್ನ ಹೆಸರು ಸದಾಕಾಲವೂ ಇದೆ. |
17. | ಓ ಕರ್ತನೇ, ಏಕೆ ನಮ್ಮನ್ನು ನಿನ್ನ ಮಾರ್ಗಗ ಳಿಂದ ತಪ್ಪಿಹೋಗುವಂತೆ ಮಾಡಿದ್ದೀ. ಏಕೆ ನಮ್ಮ ಹೃದಯವನ್ನು ನಿನಗೆ ಭಯಪಡದ ಹಾಗೆ ಕಠಿಣ ಮಾಡಿದ್ದೀ. ನಿನ್ನ ಸೇವಕರಿಗೋಸ್ಕರವೂ ನಿನ್ನ ಬಾಧ್ಯತೆಯ ಗೋತ್ರಗಳಿಗೋಸ್ಕರವೂ ಹಿಂತಿರುಗು. |
18. | ಸ್ವಲ್ಪ ಕಾಲ ಮಾತ್ರ ನಿನ್ನ ಪರಿಶುದ್ಧ ಜನರು ಅದನ್ನು ಸ್ವಾಧೀನ ಮಾಡಿಕೊಂಡರು; ನಮ್ಮ ಶತ್ರು ಗಳು ನಿನ್ನ ಪರಿಶುದ್ಧ ಸ್ಥಳವನ್ನು ತುಳಿದುಬಿಟ್ಟಿದ್ದಾರೆ. |
19. | ನಾವು ನಿನ್ನವರಾಗಿದ್ದೇವೆ; ಅವರ ಮೇಲೆ ನೀನು ದೊರೆತನ ಮಾಡಲಿಲ್ಲ; ಅವರು ನಿನ್ನ ಹೆಸರಿನಿಂದ ಕರೆಯಲ್ಪಡಲಿಲ್ಲ. |
← Isaiah (63/66) → |