← Isaiah (48/66) → |
1. | ಇಸ್ರಾಯೇಲೆಂಬ ಹೆಸರಿನವರೂ ಯೆಹೂದವೆಂಬ ಒರತೆಯಿಂದ ಬಂದವರೂ ಆದ ಯಾಕೋಬನ ಮನೆತನದವರೇ, ಇದನ್ನು ಕೇಳಿರಿ; ಕರ್ತನ ಹೆಸರಿನ ಮೇಲೆ ಆಣೆಯಿಟ್ಟು, ಇಸ್ರಾಯೇಲಿನ ದೇವರನ್ನು ಸ್ಮರಿಸುತ್ತೀರಿ. ಆದರೆ ಸತ್ಯದಿಂದಲೂ ಅಥವಾ ನೀತಿಯಿಂದಲೂ ಅಲ್ಲ. |
2. | ಅವರು ತಾವು ಪರಿಶುದ್ಧ ಪಟ್ಟಣದವರು ಎಂದು ಇಸ್ರಾಯೇಲಿನ ದೇವರ ಮೇಲೆ ಆತುಕೊಳ್ಳುತ್ತಾರೆ. ಸೈನ್ಯಗಳ ಕರ್ತನು ಎಂಬದು ಆತನ ಹೆಸರು. |
3. | ಆರಂಭದಲ್ಲೇ ಹಳೇ ಸಂಗತಿಗಳನ್ನು ನಾನು ಪ್ರಕಟಿಸಿದ್ದೇನೆ. ಅವು ನನ್ನ ಬಾಯಿಂದ ಹೊರಟವು ಮತ್ತು ನಾನು ಅವುಗಳನ್ನು ತೋರಿಸಿದ್ದೇನೆ. ನಾನು ತಟ್ಟನೆ ನಡೆಸಲು ಅವು ನೆರವೇರಿದವು. |
4. | ನೀನು ಹಟಗಾರ, ನಿನ್ನ ಕತ್ತಿನ ನರವು ಕಬ್ಬಿಣ, ನಿನ್ನ ಹಣೆ ಹಿತ್ತಾಳೆ ಎಂದು ನಾನು ತಿಳಿದುಕೊಂಡಿದ್ದೇನೆ. |
5. | ಆದದರಿಂದಲೇ ಈ ಕಾರ್ಯ ಗಳನ್ನು ನನ್ನ ವಿಗ್ರಹವು ನಡಿಸಿದೆ, ನನ್ನ ಕೆತ್ತಿದ ವಿಗ್ರಹ ಮತ್ತು ಎರಕದ ವಿಗ್ರಹ ಇವುಗಳನ್ನು ವಿಧಿಸಿದೆ ಎಂದು ನೀನು ಹೇಳಿಕೊಳ್ಳದಂತೆ ನಾನು ಪುರಾತನ ಕಾಲದಲ್ಲಿಯೇ ತಿಳಿಸಿದೆನು. |
6. | ನೀನು ಕೇಳಿದ್ದೀ; ಇವೆಲ್ಲ ವುಗಳನ್ನು ದೃಷ್ಟಿಸು; ನೀವು ಅದನ್ನು ತಿಳಿಸದೇ ಇದ್ದಿರೋ? ಇಂದಿನಿಂದ ಹೊಸ ಸಂಗತಿಗಳನ್ನು ನೀನು ತಿಳಿಯದಿದ್ದ ಗುಪ್ತವಾದ ವಿಷಯಗಳನ್ನು ನಿನಗೆ ಅರು ಹುತ್ತೇನೆ. |
7. | ಆರಂಭದಲ್ಲಿ ಆಗದಿದ್ದವುಗಳು ಈಗ ಉಂಟಾಗಿವೆ; ಇಗೋ, ಅವು ನನಗೆ ತಿಳಿದಿದ್ದವೆಂದು ನೀನು ಹೇಳದಂತೆ ಈ ದಿನಕ್ಕೆ ಮುಂಚೆಯೇ ಅವು ಗಳನ್ನು ಕುರಿತು ನಿನಗೆ ಕೇಳಗೊಡಿಸಲಿಲ್ಲ. |
8. | ಹೌದು, ನೀನು ಕೇಳಿಲ್ಲ, ತಿಳಿದೂ ಇಲ್ಲ; ಪುರಾತನ ಕಾಲದಿಂದ ನಿನ್ನ ಕಿವಿಯು ತೆರೆದೇ ಇಲ್ಲ; ಯಾಕಂದರೆ ನೀನು ದೊಡ್ಡ ವಂಚಕನು ಎಂದೂ ಗರ್ಭದಿಂದಲೇ ನೀನು ದ್ರೋಹಿಯೆಂದೂ ನಾನು ತಿಳಿದುಕೊಂಡಿದ್ದೇನೆ. |
9. | ನನ್ನ ಹೆಸರು ಕೆಡದಂತೆ ನನ್ನ ಕೋಪವನ್ನು ತಡೆ ಮಾಡಿದೆ. ನನ್ನ ಸ್ತುತಿಗೆ ಕಳಂಕಬಾರದಂತೆ ನಿನ್ನನ್ನು ನಿರ್ಮೂಲಮಾಡದೆ ತಾಳಿಕೊಳ್ಳುವೆನು. |
10. | ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ. |
11. | ನನಗಾಗಿಯೇ, ನನಗೋಸ್ಕರವೇ, ಇದನ್ನು ಮಾಡುವೆನು; ನನ್ನ ಹೆಸರು ಯಾಕೆ ಅಪವಿತ್ರ ವಾಗುವದು? ನನ್ನ ಮಹಿಮೆಯನ್ನು ನಾನು ಮತ್ತೊ ಬ್ಬನಿಗೆ ಸಲ್ಲಗೊಡಿಸೆನು. |
12. | ಓ ಯಾಕೋಬೇ, ನಾನು ಕರೆದ ಇಸ್ರಾಯೇಲೇ, ನನ್ನ ಕಡೆಗೆ ಕಿವಿಗೊಡು; ಆತನು--ನಾನೇ; ನಾನೇ ಮೊದಲನೆಯವನು, ನಾನೇ ಕಡೆಯವನು. |
13. | ನನ್ನ ಕೈ ಭೂಮಿಗೆ ಅಸ್ತಿವಾರವನ್ನು ಹಾಕಿತು; ನನ್ನ ಬಲಗೈ ಆಕಾಶವನ್ನು ಹರಡಿತು; ನಾನು ಅವುಗಳನ್ನು ಕರೆಯಲು ಅವು ಒಟ್ಟಾಗಿ ನಿಂತುಕೊಂಡವು. |
14. | ನೀವೆಲ್ಲರೂ ಕೂಡಿಕೊಂಡು ಕೇಳಿರಿ. ಅವುಗಳ ಮಧ್ಯದಲ್ಲಿ ಈ ಸಂಗತಿಗಳನ್ನು ಪ್ರಕಟಿಸಿದವರು ಯಾರು? ಕರ್ತನು ಅವನನ್ನು ಪ್ರೀತಿಮಾಡಿದ್ದಾನೆ. ಆತನು ಬಾಬೆಲಿನಲ್ಲಿ ಅವನ ಇಷ್ಟವನ್ನು ನೆರವೇರಿಸುವನು; ಆತನ ಹಸ್ತವು ಕಸ್ದೀಯರ ಮೇಲಿರುವದು. |
15. | ನಾನೇ ನಾನಾಗಿಯೇ ಮಾತಾಡಿದ್ದೇನೆ; ಹೌದು, ನಾನು ಅವನನ್ನು ಕರೆದು ಬರಮಾಡಿದ್ದೇನೆ; ಅವನು ಅವನ ಮಾರ್ಗವನ್ನು ಏಳಿಗೆ ಪಡಿಸುವನು. |
16. | ನನ್ನ ಸವಿಾಪಕ್ಕೆ ಬಂದು ಇದನ್ನು ಕೇಳಿರಿ; ಆದಿಯಿಂದಲೂ ನಾನು ಗುಟ್ಟಾಗಿ ಮಾತಾಡಲಿಲ್ಲ, ಅಂದಿನಿಂದಲೂ ಅಲ್ಲಿ ನಾನು ಇದ್ದೇನೆ; ಈಗ ದೇವರಾದ ಕರ್ತನು ಆತನ ಆತ್ಮ ದೊಡನೆ ನನ್ನನ್ನು ಕಳುಹಿಸಿದ್ದಾನೆ. |
17. | ನಿನ್ನ ವಿಮೋಚ ಕನೂ ಇಸ್ರಾಯೇಲಿನ ಪರಿಶುದ್ಧನೂ ಆಗಿರುವ ಕರ್ತನು ಹೀಗೆನ್ನುತ್ತಾನೆ--ನಿನ್ನ ಉಪಯೋಗಕ್ಕಾಗಿ ನಿನಗೆ ಬೋಧಿಸುವವನೂ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡಿಸುವವನೂ ಆದ ನಾನೇ ನಿನ್ನ ಕರ್ತನೂ ನಿನ್ನ ದೇವರೂ ಆಗಿದ್ದೇನೆ. |
18. | ಓ, ನೀನು ನನ್ನ ಆಜ್ಞೆಗಳಿಗೆ ಕಿವಿಗೊಟ್ಟಿದ್ದರೆ ಚೆನ್ನಾಗಿತ್ತು! ಆಗ ನಿನ್ನ ಸಮಾಧಾನವು ನದಿಯಂತೆಯೂ ನಿನ್ನ ನೀತಿಯು ಸಮುದ್ರದ ಅಲೆಗಳಂತೆಯೂ ಇರುತ್ತಿದ್ದವು; |
19. | ನಿನ್ನ ಸಂತಾನವು ಸಹ ಹರಳಿನಂತೆಯೂ ನಿನ್ನ ಹೊಟ್ಟೆಯಲ್ಲಿ ಹುಟ್ಟುವವರು ದಪ್ಪ ಮರಳಿನಂತೆಯೂ ಇರುವರು; ಅವರ ಹೆಸರು ತೆಗೆದುಹಾಕಲ್ಪಡದೆ ನನ್ನ ಸಮ್ಮುಖದಿಂದ ನಾಶವಾಗದೆ ಇರುತ್ತಿತ್ತು. |
20. | ಬಾಬೆಲಿನಿಂದ ಹೊರಡಿರಿ, ಕಸ್ದೀಯರ ಕಡೆ ಯಿಂದ ಓಡಿಹೋಗಿರಿ; ಹರ್ಷ ಧ್ವನಿಯಿಂದ ಇದನ್ನು ಹೇಳಿ ಪ್ರಕಟಿಸಿರಿ, ಭೂಮಿಯ ಕಟ್ಟಕಡೆಯವರೆಗೂ ಪ್ರಚಾರಪಡಿಸಿರಿ; ಕರ್ತನು ತನ್ನ ಸೇವಕನಾದ ಯಾಕೋಬನನ್ನು ವಿಮೋಚಿಸಿದ್ದಾನೆಂದು ನೀವು ಹೇಳಿರಿ. |
21. | ಆತನು ಅವರನ್ನು ಮರುಭೂಮಿಯಲ್ಲಿ ನಡೆಸಿದಾಗ ಅವರು ದಾಹಗೊಳ್ಳಲಿಲ್ಲ; ಅವರಿಗಾಗಿ ನೀರನ್ನು ಬಂಡೆಯೊಳಗಿಂದ ಹರಿಸಿದನು; ಆತನು ಬಂಡೆಯನ್ನು ಸೀಳಲು ನೀರು ರಭಸದಿಂದ ಹೊರಗೆ ಬಂತು; |
22. | ದುಷ್ಟರಿಗೆ ಸಮಾಧಾನವೇ ಇಲ್ಲ ಎಂದು ಕರ್ತನು ನುಡಿಯುತ್ತಾನೆ. |
← Isaiah (48/66) → |