← Isaiah (43/66) → |
1. | ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ. |
2. | ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು. |
3. | ನಾನೇ ನಿನ್ನ ಕರ್ತನೂ ದೇವರೂ ಇಸ್ರಾಯೇಲಿನ ಪರಿಶುದ್ಧನೂ ರಕ್ಷಕನೂ ಆಗಿದ್ದೇನೆ. ಐಗುಪ್ತವನ್ನು ನಿನ್ನ ವಿಮೋಚನೆಗೂ ಇಥಿಯೋಪ್ಯ ಮತ್ತು ಸೆಬಾ ಸೀಮೆಗಳನ್ನು ನಿನಗೊಸ್ಕರ ಕೊಟ್ಟಿದ್ದೇನೆ. |
4. | ನೀನು ನನ್ನ ದೃಷ್ಟಿಯಲ್ಲಿ ಅಮೂಲ್ಯನೂ ಮಾನ್ಯನೂ ಪ್ರಿಯನೂ ಆಗಿರುವದರಿಂದ ನಾನು ನಿನಗೋಸ್ಕರ ಮನುಷ್ಯರನ್ನೂ ನಿನ್ನ ಪ್ರಾಣಕ್ಕೆ (ಪ್ರತಿಯಾಗಿ) ಜನಾಂಗಗಳನ್ನೂ ಕೊಡುವೆನು. |
5. | ಭಯಪಡಬೇಡ; ನಾನೇ ನಿನ್ನೊಂದಿಗೆ ಇದ್ದೇನೆ; ನಿನ್ನ ಸಂತತಿಯವರನ್ನು ಮೂಡಣದಿಂದ ತರುವೆನು; ಪಶ್ಚಿಮದಿಂದ ನಿನ್ನನ್ನು ಕೂಡಿಸುವೆನು. |
6. | ನಾನು--ಒಪ್ಪಿಸಿಬಿಡು ಎಂದು ಉತ್ತರಕ್ಕೆ ತಡೆಯಬೇಡ ಎಂದು ದಕ್ಷಿಣಕ್ಕೆ ಹೇಳಿ, ದೂರದಲ್ಲಿರುವ ನನ್ನ ಕುಮಾರರನ್ನು ಭೂಮಿಯ ಅಂತ್ಯದಿಂದ ನನ್ನ ಕುಮಾರ್ತೆಯರನ್ನು |
7. | ನನ್ನ ಹೆಸರಿ ನಿಂದ ಕರೆಯಲ್ಪಟ್ಟ ಪ್ರತಿಯೊಬ್ಬನನ್ನೂ ಬರಮಾಡು ವೆನು; ಅವನನ್ನು ನನ್ನ ಮಹಿಮೆಗಾಗಿ ಸೃಷ್ಟಿಸಿದ್ದೇನೆ, ನಾನು ಅವನನ್ನು ನಿರ್ಮಿಸಿದ್ದೇನೆ: ಹೌದು, ನಾನು ಅವನನ್ನು ಉಂಟುಮಾಡಿದ್ದೇನೆ. |
8. | ಕಣ್ಣಿದ್ದರೂ ಕುರುಡರಾದ, ಕಿವಿಯಿದ್ದರೂ ಕಿವುಡ ರಾದ ಜನರನ್ನು ಕರೆ. |
9. | ಎಲ್ಲಾ ಜನಾಂಗಗಳು ಒಟ್ಟಿಗೆ ಕೂಡಿಕೊಳ್ಳಲಿ, ಎಲ್ಲಾ ಜನರೂ ಸೇರಿಕೊಳ್ಳಲಿ. ಅವರಲ್ಲಿ ಇದನ್ನು ಪ್ರಕಟಿಸುವವರೂ ಹಿಂದಿನವು ಗಳನ್ನು ನಮಗೆ ತೋರಿಸುವವರು ಯಾರು? ನಾವು ನೀತಿವಂತರೆಂದು ಸ್ಥಾಪಿಸಿಕೊಳ್ಳುವದಕ್ಕೆ ಸಾಕ್ಷಿಗಳನ್ನು ಕರತರಲಿ; ಆ ಸಾಕ್ಷಿಗಳು ಇದನ್ನು ಕೇಳಿ ನಿಜವೆಂದು ಹೇಳಲಿ. |
10. | ಕರ್ತನು ಹೇಳುವದೇನಂದರೆ--ನೀವು ನನ್ನ ಸಾಕ್ಷಿಗಳಾಗಿದ್ದೀರಿ; ನಾನೇ ಆತನೆಂದು ನೀವು ತಿಳಿದು ನಂಬಿ ಗ್ರಹಿಸುವ ಹಾಗೆಯೇ ನಾನು ನಿನ್ನನ್ನು ಸೇವಕನನ್ನಾಗಿ ಆರಿಸಿಕೊಂಡಿದ್ದೇನೆ. ನನಗಿಂತ ಮುಂಚೆ ಯೂ ನನ್ನ ನಂತರದಲ್ಲಿಯೂ ಯಾವ ದೇವರೂ ಇರಲಿಲ್ಲ. |
11. | ನಾನೇ, ನಾನೇ, ಕರ್ತನಾಗಿದ್ದೇನೆ, ನನ್ನ ಹೊರತು ಯಾವ ರಕ್ಷಕನೂ ಇಲ್ಲ. |
12. | ನಿಮ್ಮಲ್ಲಿ ಅನ್ಯದೇವರು ಇಲ್ಲದಿರುವಾಗಲೇ ನಾನೇ ರಕ್ಷಣೆ ಯನ್ನು ಪ್ರಕಟಿಸಿ ತೋರಿಸಿದ್ದೇನೆ; ಆದದರಿಂದ ನೀವು ನನ್ನ ಸಾಕ್ಷಿಗಳು; ನಾನೇ ದೇವರೆಂದು ಕರ್ತನು ನುಡಿಯು ತ್ತಾನೆ. |
13. | ಹೌದು, ಅಂದಿನಿಂದಲೇ ನಾನಿದ್ದೇನೆ; ನನ್ನ ಕೈಯಿಂದ ಬಿಡಿಸುವವರು ಯಾರೂ ಇಲ್ಲ; ನನ್ನ ಕೆಲಸಕ್ಕೆ ಅಡ್ಡಿ ಬರುವವನಾರು? |
14. | ನಿಮ್ಮ ವಿಮೋಚಕನೂ ಇಸ್ರಾಯೇಲಿನ ಪರಿ ಶುದ್ಧನೂ ಆಗಿರುವ ಕರ್ತನು ಇಂತೆನ್ನುತ್ತಾನೆ--ನಾನು ನಿಮಗೋಸ್ಕರ ಬಾಬೆಲಿಗೆ ಕಳುಹಿಸಿ ಅವರ ಘನ ವಂತರನ್ನೆಲ್ಲಾ ಮತ್ತು ಹಡಗುಗಳಲ್ಲಿ ಆರ್ಭಟಿಸುವ ಕಸ್ದೀಯರನ್ನು ತಗ್ಗಿಸಿದೆನು. |
15. | ನಾನು ಕರ್ತನಾದ ನಿಮ್ಮ ಪರಿಶುದ್ದನೂ ಇಸ್ರಾಯೇಲನ್ನು ಸೃಷ್ಟಿಸಿದವನೂ ನಿಮ್ಮ ಅರಸನೂ ಆಗಿದ್ದೇನೆ. |
16. | ಯಾವಾತನು ಸಮುದ್ರ ದಲ್ಲಿ ದಾರಿಮಾಡಿ ಜಲಪ್ರವಾಹಗಳಲ್ಲಿ ಮಾರ್ಗವನ್ನು ಏರ್ಪಡಿಸಿದನೋ. |
17. | ಯಾವಾತನು ರಥ ಕುದುರೆ ಗಳ ದಂಡನ್ನು ಪರಾಕ್ರಮರಾದವರನ್ನು ಹೊರಡಿಸಿ ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ ದೀಪದೋ ಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿ ದನೋ ಆ ಕರ್ತನು ಇಂತೆನ್ನುತ್ತಾನೆ-- |
18. | ಹಿಂದಿನ ಸಂಗತಿಗಳನ್ನು ಜ್ಞಾಪಕಕ್ಕೆ ತಂದುಕೊಳ್ಳಬೇಡಿರಿ; ಇಲ್ಲವೆ ಹಳೇ ಸಂಗತಿಗಳನ್ನು ಯೋಚಿಸಬೇಡಿರಿ. |
19. | ಇಗೋ, ನಾನು ಒಂದು ಹೊಸ ಕಾರ್ಯವನ್ನು ಮಾಡುವೆನು, ಅದು ಈಗಲೇ ಮೊಳೆತು ಬರುವದು; ನಿಮಗೆ ಅದು ತಿಳಿದಿಲ್ಲವೋ? ನಾನು ಅರಣ್ಯದಲ್ಲಿ ಮಾರ್ಗವನ್ನು ಮರುಭೂಮಿಯಲ್ಲಿ ನದಿಗಳನ್ನು ಸಹ ಉಂಟುಮಾಡು ವೆನು. |
20. | ಅಡವಿಯ ಮೃಗಗಳು, ಘಟಸರ್ಪಗಳು ಮತ್ತು ಗೂಬೆಗಳು ನನ್ನನ್ನು ಸನ್ಮಾನಿಸುತ್ತವೆ. ಅಡವಿಯ ನೀರನ್ನು ಮರುಭೂಮಿಯಲ್ಲಿ ನದಿಗಳನ್ನು ನಾನು ಆರಿ ಸಿಕೊಂಡ ನನ್ನ ಪ್ರಜೆಗಳಿಗೆ ಕುಡಿಯುವದಕ್ಕೆ ಕೊಟ್ಟೆನು. |
21. | ನನ್ನ ಸ್ತೋತ್ರವನ್ನು ಪ್ರಚುರಪಡಿಸಲಿ ಎಂದು ನಾನು ಈ ಜನರನ್ನು ನನಗೋಸ್ಕರ ರೂಪಿಸಿದ್ದೇನೆ. |
22. | ಆದರೂ ಓ ಯಾಕೋಬೇ, ನೀನು ನನ್ನನ್ನು ಪ್ರಾರ್ಥಿಸಲಿಲ್ಲ; ಓ ಇಸ್ರಾಯೇಲೇ, ನನ್ನ ವಿಷಯದಲ್ಲಿ ನೀನು ಬೇಸರಗೊಂಡಿದ್ದೀ! |
23. | ನಿನ್ನ ದಹನಬಲಿಯ ಎಳೇ ಕರುಗಳನ್ನು ನನಗೆ ತರಲಿಲ್ಲ ಇಲ್ಲವೆ ನಿನ್ನ ಯಜ್ಞ ಗಳಿಂದ ನನ್ನನ್ನು ಸನ್ಮಾನಿಸಲಿಲ್ಲ; ನೀನು ಕಾಣಿಕೆಯನ್ನು ಅರ್ಪಿಸದೆ ಇದ್ದದ್ದಕ್ಕೆ ನಾನು ಕಾರಣವಲ್ಲ, ಇಲ್ಲವೆ ಧೂಪಕ್ಕಾಗಿ ನಿನ್ನನ್ನು ಬೇಸರಗೊಳಿಸಲಿಲ್ಲ. |
24. | ನೀನು ನನಗೋಸ್ಕರ ಹಣದಿಂದ ಗಂಧಕಾಷ್ಟವನ್ನು ಕೊಂಡು ಕೊಳ್ಳಲಿಲ್ಲ ಇಲ್ಲವೆ ನಿನ್ನ ಯಜ್ಞಪಶುಗಳ ಕೊಬ್ಬಿನಿಂದ ನನ್ನನ್ನು ತೃಪ್ತಿಪಡಿಸಲಿಲ್ಲ. ಆದರೆ ನಿನ್ನ ಪಾಪಗಳಿಂದ ನನ್ನನ್ನು ತೊಂದರೆಗೊಳಿಸಿದ್ದೀ, ಅಕ್ರಮಗಳಿಂದ ನನ್ನನು ಬೇಸರಗೊಳಿಸಿದ್ದೀ. |
25. | ನಾನಾಗಿ ನಾನೇ ನನಗೋಸ್ಕರ ನಿನ್ನ ದ್ರೋಹಗಳನ್ನು ಅಳಿಸಿಬಿಡುತ್ತೇನೆ. ನಿನ್ನ ಪಾಪ ಗಳನ್ನು ನನ್ನ ನೆನಪಿನಲ್ಲಿಡೆನು. |
26. | ನನಗೆ ಜ್ಞಾಪಕ ಪಡಿಸು, ನಾವಿಬ್ಬರೂ ವಾದಿಸುವಾ, ನೀನು ನೀತಿವಂತ ನೆಂದು ಪ್ರಚುರಪಡಿಸು. |
27. | ನಿನ್ನ ಮೂಲಪಿತೃ ಪಾಪ ಮಾಡಿದ್ದಾನೆ, ಬೋಧಕರು ನನಗೆ ವಿರೋಧವಾಗಿ ದ್ರೋಹಮಾಡಿದ್ದಾರೆ. |
28. | ಆದಕಾರಣ ಪರಿಶುದ್ಧ ಸ್ಥಾನದ ಪ್ರಧಾನರನ್ನು ಅಪವಿತ್ರಮಾಡಿ, ಯಾಕೋ ಬನ್ನು ಶಾಪಕ್ಕೂ, ಇಸ್ರಾಯೇಲನ್ನು ದೂಷಣೆಗಳಿಗೂ ಒಪ್ಪಿಸಿಬಿಟ್ಟಿದ್ದೇನೆ. |
← Isaiah (43/66) → |