← Isaiah (23/66) → |
1. | ತೂರಿನ ವಿಷಯವಾದ ದೈವೋಕ್ತಿ. ತಾರ್ಷೀಷಿನ ಹಡಗುಗಳೇ, ಗೋಳಾ ಡಿರಿ; ಅದು ಹಾಳಾಗಿರುವದರಿಂದ ನಿಮಗೆ ಮನೆಯಿಲ್ಲ ಮತ್ತು ಒಳಗೆ ಪ್ರವೇಶವೂ ಇಲ್ಲ. ಇದು ಕಿತ್ತೀಮ್ ದೇಶದವರಿಂದ ಅವರಿಗೆ ತಿಳಿಯಿತು. |
2. | ದ್ವೀಪಗಳ ನಿವಾಸಿಗಳೇ, ಸಮುದ್ರವನ್ನು ದಾಟುವ ಚೀದೋನಿನ ವರ್ತಕರಿಂದ ಸಮೃದ್ಧಿಯನ್ನು ಹೊಂದಿದವರೇ, ಮೌನ ವಾಗಿರ್ರಿ. |
3. | ವಿಶಾಲವಾದ ನೀರುಗಳಿಂದ ಸೀಹೋರಿನ ಧಾನ್ಯವೂ ನದಿಯ ಸುಗ್ಗಿಯೂ ನೈಲಿನ ಬೆಳೆಯಿಂ ದಲೂ ಅದಕ್ಕೆ ಆದಾಯವಾಗಿತ್ತು. ಅನೇಕ ಜನಾಂಗ ಗಳಿಗೆ ವ್ಯಾಪಾರ ಸ್ಥಳವಾಗಿತ್ತು. |
4. | ಚೀದೋನೇ, ನಾಚಿಕೆ ಪಡು, ಸಮುದ್ರವು, ಸಮುದ್ರದುರ್ಗವೂ--ನಾವು ಪ್ರಸವವೇದನೆ ಪಡುವದಿಲ್ಲ, ಹೆರುವದಿಲ್ಲ; ಇಲ್ಲವೆ ಮಕ್ಕಳನ್ನು ಬೆಳೆಸುವದಿಲ್ಲ ಕನ್ಯಾಸ್ತ್ರೀಯರನ್ನು ಸಾಕಿ ಸಲ ಹಲಿಲ್ಲ ಎಂದು ಹೇಳಿದೆಯಷ್ಟೆ. |
5. | ಐಗುಪ್ತದ ಸುದ್ದಿಗೆ ಆದ ಹಾಗೆ ತೂರಿನ ಸುದ್ದಿಗೆ ಬಹಳ ವೇದನೆಪಡು ವರು. |
6. | ತಾರ್ಷೀಷಿಗೆ ದಾಟಿಹೋಗಿರಿ, ದ್ವೀಪ ನಿವಾ ಸಿಗಳೇ ಗೋಳಾಡಿರಿ. |
7. | ನಿಮ್ಮ ಉಲ್ಲಾಸದ ಪಟ್ಟಣವೂ ಪೂರ್ವಕಾಲದ ಹಳೆಯ ಸಂಪ್ರದಾಯದಿಂದ ಬಂದಿದ್ದೂ ಇದೆಯೋ? ಅವಳ ಸ್ವಂತ ಕಾಲುಗಳು ಅದನ್ನು ದೂರ ದೇಶದಲ್ಲಿ ನಿವಾಸಿಸುವದಕ್ಕೆ ತಕ್ಕೊಂಡು ಹೋ ಗುವವು. |
8. | ಅದು ಕಿರೀಟದಾಯಕವಾದ ಪಟ್ಟಣವು ಅದರ ವರ್ತಕರಾದ ಪ್ರಭುಗಳು, ವ್ಯಾಪಾರಿಗಳು ಭೂಮಿಯಲ್ಲಿ ಘನವುಳ್ಳವರಾಗಿದ್ದಾರೆ. ಇಂಥ ತೂರಿಗೆ ವಿರುದ್ಧವಾಗಿ ಈ ಆಲೋಚನೆ ಮಾಡಿದವರು ಯಾರು? |
9. | ಗರ್ವದ ಸಕಲ ವೈಭವವನ್ನು ಹೊಲಸು ಮಾಡಬೇ ಕೆಂತಲೂ ಭೂಮಿಯಲ್ಲಿ ಘನವುಳ್ಳವರೆಲ್ಲರನ್ನು ಅವ ಮಾನಪಡಿಸಬೇಕೆಂತಲೂ ಸೈನ್ಯಗಳ ಕರ್ತನೇ, ಹೀಗೆ ಸಂಕಲ್ಪಿಸಿದ್ದಾನೆ. |
10. | ತಾರ್ಷೀಷಿನ ಮಗಳೇ, ನದಿಯಂತೆ ನಿನ್ನ ದೇಶದಲ್ಲಿ ಹಾದುಹೋಗು, ಅಲ್ಲಿ ಇನ್ನು ಬಲವು ಇರುವುದೇ ಇಲ್ಲ. |
11. | ಆತನು ಸಮುದ್ರದ ಮೇಲೆ ತನ್ನ ಕೈಚಾಚಿ ರಾಜ್ಯಗಳನ್ನು ನಡುಗಿಸಿದ್ದಾನೆ; ಕರ್ತನು ವ್ಯಾಪಾರದ ಪಟ್ಟಣವನ್ನು (ಕಾನಾನ್) ಅದರ ದುರ್ಗ ಗಳನ್ನು ನಾಶಮಾಡಬೇಕೆಂದು ಆಜ್ಞಾಪಿಸಿದ್ದಾನೆ. |
12. | ಆತನು ಹೇಳಿದ್ದೇನಂದರೆ--ಹಿಂಸೆಗೆ ಈಡಾದ ಕನ್ಯೆಯಂತಿರುವ ಚೀದೋನ್ ನಗರಿಯೇ, ಇನ್ನು ಮೇಲೆ ನಿನಗೆ ಹರ್ಷವೇ ಇಲ್ಲ; ಎದ್ದು ಕಿತ್ತೀಮಿಗೆ ಸಮುದ್ರದ ಮೇಲೆ ಹಾದುಹೋಗು ಅಲ್ಲಿಯೂ ನಿನಗೆ ವಿಶ್ರಾಂತಿ ಇರದು. |
13. | ಇಗೋ, ಕಸ್ದೀಯರ ದೇಶವು! ಅಶ್ಶೂರರು ಅದನ್ನು ಅರಣ್ಯ ನಿವಾಸಿಗಳಿಗೆ ಈಡು ಮಾಡುವತನಕ ಈ ಜನರು ಇರಲಿಲ್ಲ. (ನಿರ್ನಾ ಮವಾಗಿರಲಿಲ್ಲ) ಅವರು ಗೋಪುರಗಳನ್ನೂ ಅದರ ಅರಮನೆಗಳನ್ನೂ ಕಟ್ಟಿಸಿಕೊಂಡು ಅದನ್ನು ಹಾಳು ಮಾಡಿದ್ದಾರೆ. |
14. | ತಾರ್ಷೀಷಿನ ಹಡಗುಗಳೇ, ಗೋ ಳಾಡಿರಿ! ನಮ್ಮ ಆಶ್ರಯಸ್ಥಾನವು ಹಾಳಾಯಿತು. |
15. | ಆ ದಿವಸದಲ್ಲಿ ಆಗುವದೇನಂದರೆ, ತೂರ್ ಪಟ್ಟಣವು ಒಬ್ಬ ಅರಸನ ದಿವಸಗಳ ಪ್ರಕಾರ ಎಪ್ಪತ್ತು ವರುಷಗಳ ತನಕ (ಮೂಲ ದಿನಗಳು) ಜ್ಞಾಪಕಕ್ಕೆ ಬಾರದೇ ಇರುವದು; ಎಪ್ಪತ್ತು ವರುಷಗಳ ಕೊನೆಯಲ್ಲಿ ತೂರ್ ಪಟ್ಟಣವು ಸೂಳೆಯರ ವಿಷಯವಾದ ಗೀತೆಯ ಹಾಗಾಗುವದು. |
16. | ಮರೆತುಹೋದ ಸೂಳೆಯೇ, ಕಿನ್ನರಿಯನ್ನು ತಕ್ಕೋ, ಪಟ್ಟಣಗಳಲ್ಲಿ ಅಲೆಯುತ್ತಾ ನೀನು ನೆನಪಾಗುವ ಹಾಗೆ ಚೆನ್ನಾಗಿ ನುಡಿಸಿ ಬಹಳ ಗೀತೆಗಳನ್ನು ಹಾಡು (ಎಂಬದೇ). |
17. | ಎಪ್ಪತ್ತು ವರುಷ ಗಳಾದ ಮೇಲೆ ಆಗುವದೇನಂದರೆ -- ಕರ್ತನು ತೂರನ್ನು ಪರಾಮರಿಸುವನು (ಹಿತ ತರುವನು). ಅದು ತನ್ನ ಆದಾಯಕ್ಕಾಗಿ ಹಿಂದಿರುಗಿ ಭೂಲೋಕ ದಲ್ಲಿರುವ ಎಲ್ಲಾ ರಾಜ್ಯಗಳ ಸಂಗಡ ಭೂಮಿಯ ಮೇಲೆ ಸೂಳೆತನ ಮಾಡುವದು. |
18. | (ಆದರೆ) ಅವಳ ವ್ಯಾಪಾರವೂ ಆದಾಯವೂ ಬೊಕ್ಕಸದಲ್ಲಿ ಹಾಕದೆ ಇಲ್ಲವೆ ಇಟ್ಟುಕೊಳ್ಳದೆ ಕರ್ತನಿಗೆ ಪರಿಶುದ್ಧವಾಗು ವದು. ಅವಳ ವ್ಯಾಪಾರವು ಕರ್ತನ ಸನ್ನಿಧಾನದಲ್ಲಿ ವಾಸಿಸುವ ವರೆಗೆ ಬೇಕಾದಷ್ಟು ಅನ್ನವನ್ನೂ ಶ್ರೇಷ್ಠವಾದ ಉಡುಪನ್ನೂ ಒದಗಿಸಲು ಅನು ಕೂಲವಾಗುವದು. |
← Isaiah (23/66) → |