← Isaiah (10/66) → |
1. | ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಬರಹ ಬರೆಯುವವರಿಗೆ ಅಯ್ಯೋ! |
2. | ಇವರು ವಿಧವೆಯರನ್ನು ಸೂರೆಮಾಡಿ ದಿಕ್ಕಿಲ್ಲದವರಿಂದ ಸುಲುಕೊಂಡು ದೀನರಿಗೆ ನ್ಯಾಯ ವನ್ನು ತಪ್ಪಿಸಿ ನನ್ನ ಬಡ ಜನರ ನ್ಯಾಯವನ್ನು ತೆಗೆಯ ಬೇಕೆಂದಿದ್ದಾರೆ. |
3. | ವಿಚಾರಣೆಯ ದಿನದಲ್ಲಿಯೂ ದೂರ ದಿಂದ ಬರುವ ನಾಶನದಲ್ಲಿಯೂ ನೀವು ಏನು ಮಾಡು ವಿರಿ? ಸಹಾಯಕ್ಕಾಗಿ ನೀವು ಯಾರ ಬಳಿಗೆ ಓಡುವಿರಿ? ನಿಮ್ಮ ವೈಭವವನ್ನು ಎಲ್ಲಿ ಬಿಡುವಿರಿ? |
4. | ನಾನಿಲ್ಲದೆ ಕೈದಿಗಳ ಕೆಳಗೆ ಮುದುರಿಕೊಂಡು, ಹತರಾಗಿರುವವರ ಕೆಳಗೆ ಬಿದ್ದಿರುವದೇ ಇವರ ಗತಿ. ಇಷ್ಟಾದರೂ ಆತನ ಕೋಪವು ತೀರದೆ ಆತನ ಕೈ ಇನ್ನೂ ಚಾಚಿಯೇ ಇರುವದು. |
5. | ಓ ನನ್ನ ಕೋಪದ ಕೋಲಾದ ಅಶ್ಶೂರವೇ, ಕೈಯಲ್ಲಿರುವ ಬೆತ್ತವು ನನ್ನ ರೌದ್ರವೇ. |
6. | ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು. |
7. | ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ. |
8. | ಅವನು ಅಂದು ಕೊಳ್ಳುವದೇನಂದರೆ--ನನ್ನ ಅಧಿಪತಿಗಳೆಲ್ಲಾ ರಾಜರಲ್ಲವೇ? |
9. | ಕಲ್ನೋ, ಕರ್ಕೆ ವಿಾಷಿನ ಹಾಗಲ್ಲವೋ? ಹಾಮಾತ್ ಅರ್ಪದಿನ ಹಾಗಲ್ಲವೇ? ಸಮಾರ್ಯವು ದಮಸ್ಕದ ಹಾಗ ಲ್ಲವೋ? |
10. | ಯೆರೂಸಲೇಮಿನಲ್ಲಿಯೂ ಸಮಾರ್ಯ ದಲ್ಲಿಯೂ ಹೆಚ್ಚಾಗಿದ್ದ ಅವರ ವಿಗ್ರಹಗಳು ಹಾಗೂ ಕೆತ್ತಿದ ವಿಗ್ರಹಗಳ ರಾಜ್ಯಗಳು ನನ್ನ ಕೈಗೆ ಸಿಕ್ಕಿದಂತೆ |
11. | ನಾನು ಸಮಾರ್ಯಕ್ಕೂ ಅದರ ವಿಗ್ರಹಗಳಿಗೂ ಮಾಡಿದಂತೆ ಯೆರೂಸಲೇಮಿಗೂ ಅದರ ವಿಗ್ರಹ ಗಳಿಗೂ ಮಾಡದೆ ಇರುವೆನೋ? |
12. | ಆದಕಾರಣ, ಕರ್ತನು ಚೀಯೋನ್ ಪರ್ವತದ ಮೇಲೆಯೂ ಯೆರೂಸಲೇಮಿನ ಮೇಲೆಯೂ ತನ್ನ ಕಾರ್ಯಗಳನ್ನು ಮಾಡಿ ಮುಗಿಸಿದ ಮೇಲೆ, ಅಶ್ಶೂರದ ಅರಸನ ಹೃದಯದ ದೊಡ್ಡಸ್ತಿಕೆಯ ಫಲವನ್ನು ಅವನ ಉನ್ನತವಾದ ದೃಷ್ಟಿಯ ಘನತೆಯನ್ನು ನಾನು ದಂಡಿ ಸುವೆನು. |
13. | ಅವನು ತನ್ನೊಳಗೆ--ನನ್ನ ಕೈಯ ಬಲ ದಿಂದಲೂ ಜ್ಞಾನದಿಂದಲೂ ಅದನ್ನು ಮಾಡಿದೆ; ನಾನು ವಿವೇಕಿ ಮತ್ತು ಜನಾಂಗಗಳ ಮೇರೆಗಳನ್ನು ಕಿತ್ತು ಅವರ ನಿಧಿಗಳನ್ನು ಕೊಳ್ಳೆಹೊಡೆದು ಅದರ ನಿವಾಸಿಗಳನ್ನು ಮಹಾವೀರನಂತೆ ಕೆಡವಿಬಿಟ್ಟಿದ್ದೇನೆ. |
14. | ಜನಗಳ ಐಶ್ವರ್ಯವು ಗೂಡಿನಂತೆ ನನ್ನ ಕೈಗೆ ಸಿಕ್ಕಿದೆ, ಬಿಡಲ್ಪಟ್ಟ ಮೊಟ್ಟೆಗಳನ್ನು ಕೂಡಿಸುವಂತೆ ಭೂಮಿಯನ್ನೆಲ್ಲಾ ಸಂಗ್ರಹಿಸಿಕೊಂಡಿದ್ದೇನೆ; ರೆಕ್ಕೆಯಾ ಡಿಸಿ ಬಾಯಿತೆರೆದು ಕಿಚುಗುಟ್ಟುವವರು ಯಾರೂ ಇಲ್ಲವೆಂದು ಅಂದುಕೊಂಡನು. |
15. | ಕೊಡಲಿಯು ಕಡಿಯುವವನಿಗೆ ವಿರುದ್ಧವಾಗಿ ಕೊಚ್ಚಿಕೊಂಡೀತೆ? ಇಲ್ಲವೆ ಗರಗಸವು ತನ್ನನ್ನು ಎಳೆಯುವವನ ಮೇಲೆ ಹೆಚ್ಚಿಸಿ ಕೊಂಡೀತೇ? ಕೋಲು ತನ್ನನ್ನು ಎತ್ತಿದವನ ಮೇಲೆಯೇ ಬೀಸುವಂತೆ ಅಥವಾ ಬೆತ್ತವು ತಾನು ಮರವಲ್ಲ ಎಂಬಂತೆ ತನ್ನನ್ನು ತಾನು ಎತ್ತಿಕೊಂಡ ಹಾಗೆ ಇರುವದು. |
16. | ಆದಕಾರಣ ಸೈನ್ಯಗಳ ಕರ್ತನಾದ ಕರ್ತನು ಅವನ ಕೊಬ್ಬಿನಲ್ಲಿ ಕ್ಷಯವನ್ನುಂಟುಮಾಡುವನು; ದಹಿ ಸುವ ಅಗ್ನಿಯಂತಿರುವ ಉರಿಯೊಂದು ಅವನ ವೈಭ ವದ ಕೆಳಗೆ ಹತ್ತಿಕೊಳ್ಳುವದು. |
17. | ಇಸ್ರಾಯೇಲಿನ ಬೆಳಕು ಬೆಂಕಿಯಾಗುವದು, ಅದರ ಪರಿಶುದ್ಧನು ಜ್ವಾಲೆ ಯಂತಿರುವನು; ಅದು ಒಂದೇ ದಿನದಲ್ಲಿ ಅವನ ಮುಳ್ಳು ದತ್ತೂರಿಗಳನ್ನು ದಹಿಸಿನುಂಗಿಬಿಡುವದು; |
18. | ಅದು ದೇಹ ಮತ್ತು ಆತ್ಮಗಳನ್ನೂ ಅವನವನ ಹಾಗೂ ಫಲವತ್ತಾದ ಹೊಲವು ಹೊಂದಿರುವ ಘನತೆಯನ್ನೂ ದಹಿಸಿಬಿಡುವದು; ಅದು ಮೂರ್ಛೆ ಹೋಗುವ ರೋಗಿಯಂತಿರುವದು. |
19. | ಅವನ ಉಳಿ ದವನ ವೃಕ್ಷಗಳು ಮಗುವು ಬರೆಯುವಷ್ಟು ಕಡಿಮೆ ಯಾಗಿರುವದು. |
20. | ಆ ದಿನದಲ್ಲಿ ಇಸ್ರಾಯೇಲ್ಯರಲ್ಲಿ ಉಳಿದವರೂ ಯಾಕೋಬಿನ ಮನೆತನದಿಂದ ತಪ್ಪಿಸಿಕೊಂಡವರೂ ಇನ್ನು ಮೇಲೆ ತಮ್ಮನ್ನು ಹೊಡೆದವನ ಆಧಾರವನ್ನು ಬಿಟ್ಟು ಇಸ್ರಾಯೇಲಿನ ಪರಿಶುದ್ಧನಾದ ಕರ್ತನ ಸತ್ಯವನ್ನು ಆಧಾರ ಮಾಡಿಕೊಳ್ಳುವರು. |
21. | ಉಳಿದವರು ಅಂದರೆ ಯಾಕೋಬ್ಯರಲ್ಲಿ ಉಳಿದವರೂ ಸಹ ಪರಾ ಕ್ರಮಿಯಾದ ದೇವರ ಕಡೆಗೆ ಹಿಂತಿರುಗುವರು. |
22. | ತನ್ನ ಜನರಾದ ಇಸ್ರಾಯೇಲ್ಯರು ಸಮುದ್ರದ ಮರಳಿನಂತೆ ಇದ್ದರೂ ಅವರಲ್ಲಿ ಉಳಿದವರು ಮಾತ್ರ ಹಿಂತಿರು ಗುವರು; ನಾಶವಾಗುವದಕ್ಕೆ ವಿಧಿಸಲ್ಪಟ್ಟದ್ದು ನೀತಿ ಯೊಂದಿಗೆ ತುಂಬಿ ತುಳುಕುವದು. |
23. | ಸೈನ್ಯಗಳ ದೇವರಾದ ಕರ್ತನು ಎಲ್ಲಾ ದೇಶದ ಮಧ್ಯದಲ್ಲಿ ನಿಶ್ಚ ಯಿಸಲ್ಪಟ್ಟ ಕ್ಷೀಣತೆಯನ್ನು ಉಂಟುಮಾಡುವನು. |
24. | ಆದದರಿಂದ ಸೈನ್ಯಗಳ ದೇವರಾದ ಕರ್ತನು ಇಂತೆ ನ್ನುತ್ತಾನೆ--ಚೀಯೋನಿನಲ್ಲಿ ವಾಸಿಸುವ ಓ ನನ್ನ ಜನರೇ, ಐಗುಪ್ತ್ಯರಂತೆ ನಿಮ್ಮನ್ನು ಕೋಲಿನಿಂದ ಹೊಡೆದು ನಿಮಗೆ ವಿರುದ್ಧವಾಗಿ ದೊಣ್ಣೆಯನ್ನು ಎತ್ತುವ ಅಶ್ಶೂರರಿಗೆ ಭಯಪಡಬೇಡಿರಿ. |
25. | ಇನ್ನು ಸ್ವಲ್ಪ ಕಾಲದಲ್ಲಿ, (ನಿಮ್ಮ ಮೇಲಿನ) ಉಗ್ರವು ತೀರಿ ನನ್ನ ಕೋಪವು ಅವರ ನಾಶನಕ್ಕಾ ಗುವದು. |
26. | ಸೈನ್ಯಗಳ ಕರ್ತನು ಓರೇಬನ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು. |
27. | ಆ ದಿನದಲ್ಲಿ ಅವರು ಹೊರಿಸಿದ ಹೊರೆಯು ನಿಮ್ಮ ಬೆನ್ನಿನಿಂದಲೂ ಹೂಡಿದ ನೊಗವು ನಿಮ್ಮ ಕುತ್ತಿಗೆಯಿಂದಲೂ ತೊಲಗುವದು; ನೀವು ಅಭಿಷಿಕ್ತರಾದ ಕಾರಣ ನೊಗವು ನಾಶವಾಗಿ ಹೋಗುವದು. |
28. | ಅವನು ಅಯ್ಯಾಥಿಗೆ ಬಂದನು, ಮಿಗ್ರೋನನ್ನು ಹಾದುಹೋಗಿ ಮಿಕ್ಮಾಷಿನಲ್ಲಿ ತನ್ನ ಸಾಮಗ್ರಿಯನ್ನು ಇಟ್ಟಿದ್ದಾನೆ. |
29. | ಅವರು ಕಣಿವೆಯನ್ನು ದಾಟಿದ್ದಾರೆ; ಗೆಬಾದಲ್ಲಿ ಇಳುಕೊಂಡಿದ್ದಾರೆ; ರಾಮಾ ಹೆದರುತ್ತದೆ; ಸೌಲನ ಗಿಬ್ಯಾ ಓಡಿಹೋಯಿತು. |
30. | ಓ ಗಲ್ಲೀಮ್‌ಮಗಳೇ, ನಿನ್ನ ಸ್ವರವೆತ್ತಿ ಕೂಗು; ಓ ಬಡ ಅನತೋ ತಳೇ, ಲಯೆಷಿನ ವರೆಗೂ ಕೇಳಿಸುವಂತೆ ಕೂಗು. |
31. | ಮದ್ಮೇನ ದಿಕ್ಕಾಪಾಲಾಯಿತು; ಗೇಬೀಮಿನ ನಿವಾಸಿ ಗಳು ಓಡಿಹೋಗಲು ಕೂಡಿಕೊಂಡರು. |
32. | ಆ ದಿನ ದಲ್ಲಿ ಅವನು ನೋಬಿನಲ್ಲಿ ಇಳುಕೊಂಡವನಂತೆ ಇದ್ದಾಗ್ಯೂ ಚೀಯೋನ್ ಕುಮಾರ್ತೆಯ ಪರ್ವತಕ್ಕೂ ಯೆರೂಸಲೇಮಿನ ಗುಡ್ಡಕ್ಕೂ ವಿರೋಧವಾಗಿ ತನ್ನ ಕೈಯನ್ನು ಅಲ್ಲಾಡಿಸುವನು. |
33. | ಇಗೋ, ಕರ್ತನೂ ಸೈನ್ಯಗಳ ಕರ್ತನು ಭಯಂಕರ ವಾಗಿ ಕೊಂಬೆಯನ್ನು ಕತ್ತರಿಸುವನು. ಉನ್ನತ ವೃಕ್ಷಗಳು ಕಡಿದು ಕೆಳಗೆ ಬೀಳುವವು; ಗರ್ವಿಷ್ಠರು ತಗ್ಗಿಸಲ್ಪಡು ವರು. |
34. | ಆತನು ಅಡವಿಯ ಪೊದೆಗಳನ್ನು ಕಬ್ಬಿಣ ದಿಂದ ಕಡಿದುಬಿಡುವನು; ಲೆಬನೋನು ಒಬ್ಬ ಬಲಿಷ್ಠ ನಿಂದ ಬಿದ್ದುಹೋಗುವದು. |
← Isaiah (10/66) → |