← Hosea (7/14) → |
1. | ನಾನು ಇಸ್ರಾಯೇಲನ್ನು ಗುಣಮಾಡ ಬೇಕೆಂದಿರುವಾಗ ಎಫ್ರಾಯಾಮಿನ ದುಷ್ಕೃತ್ಯವನ್ನೂ ಸಮಾರ್ಯದ ಕೆಟ್ಟತನವನ್ನೂ ಕಂಡು ಹಿಡಿಯುತ್ತೇನೆ; ಅವರು ಸುಳ್ಳನ್ನು ನಡಿಸುತ್ತಾರೆ; ಕಳ್ಳನು ಒಳಗೆ ಬರುತ್ತಾನೆ. ಕಳ್ಳರ ಗುಂಪು ಹೊರಗೆ ಸುಲುಕೊಳ್ಳು ತ್ತದೆ. |
2. | ನಾನು ಅವರ ಕೆಟ್ಟತನವನ್ನೆಲ್ಲಾ ಜ್ಞಾಪಕಮಾಡು ತ್ತೇನೆಂದು ಅವರು ತಮ್ಮ ಹೃದಯಗಳಲ್ಲಿ ನೆನಸಿಕೊಳ್ಳು ವದಿಲ್ಲ; ಈಗ ಅವರ ಸ್ವಂತ ಕೃತ್ಯಗಳು ಅವರನ್ನು ಸುತ್ತಿಕೊಂಡಿವೆ; ಅವು ನನ್ನ ಮುಖದ ಮುಂದೆ ಇವೆ. |
3. | ಅವರು ತಮ್ಮ ಕೆಟ್ಟತನದಿಂದ ಅರಸನನ್ನೂ ಸುಳ್ಳುಗ ಳಿಂದ ಪ್ರಧಾನರನ್ನೂ ಸಂತೋಷಪಡಿಸುತ್ತಾರೆ. |
4. | ಅವರೆ ಲ್ಲರೂ ವ್ಯಭಿಚಾರಿಗಳು; ರೊಟ್ಟಿಗಾರನು ಬಿಸಿಮಾಡಿದ ಒಲೆಯ ಹಾಗೆ ಇದ್ದಾರೆ, ಅವನು ಹಿಟ್ಟು ನಾದಿದ ಮೇಲೆ ಅದು ಹುಳಿಯಾಗುವ ತನಕ ಬಿಸಿಮಾಡುವ ದನ್ನು ಬಿಟ್ಟುಬಿಡುತ್ತಾನೆ. |
5. | ನಮ್ಮ ಅರಸನ ದಿನದಲ್ಲಿ ಪ್ರಧಾನರು ದ್ರಾಕ್ಷಾರಸದ ಬುದ್ದಲಿಗಳಿಂದ ಅಸ್ವಸ್ಥರಾ ಗುತ್ತಾರೆ, ಅವನು ಪರಿಹಾಸ್ಯಗಾರರ ಸಂಗಡ ತನ್ನ ಕೈಚಾಚುತ್ತಾನೆ. |
6. | ಅವರು ಹೊಂಚು ಹಾಕಿಕೊಂಡಿ ರುವಾಗ ತಮ್ಮ ಹೃದಯವನ್ನು ಅವರು ಒಲೆಯ ಹಾಗೆ ಸಿದ್ಧಮಾಡಿದ್ದಾರೆ; ಅವರ ರೊಟ್ಟಿಗಾರನು ರಾತ್ರಿ ಯೆಲ್ಲಾ ನಿದ್ರೆ ಮಾಡುತ್ತಾನೆ, ಬೆಳಿಗ್ಗೆ ಅದು ಪ್ರಜ್ವಲಿ ಸುವ ಬೆಂಕಿಯ ಹಾಗೆ ಉರಿಯುತ್ತದೆ. |
7. | ಅವರೆಲ್ಲರೂ ಒಲೆಯ ಹಾಗೆ ಬಿಸಿಯಾಗಿದ್ದಾರೆ; ತಮ್ಮ ನ್ಯಾಯಾ ಧಿಪತಿಗಳನ್ನು ನುಂಗಿಬಿಟ್ಟಿದ್ದಾರೆ; ಅವರ ಅರಸುಗಳೆಲ್ಲಾ ಬಿದ್ದು ಹೋಗಿದ್ದಾರೆ; ಅವರಲ್ಲಿ ಒಬ್ಬನಾದರೂ ನನ್ನನ್ನು ಪ್ರಾರ್ಥಿಸುವದೇ ಇಲ್ಲ. |
8. | ಎಫ್ರಾಯಾಮು ಜನರೊಂದಿಗೆ ತನ್ನನ್ನು ಬೆರೆಸಿ ಕೊಂಡಿದ್ದಾನೆ; ಎಫ್ರಾಯಾಮು ತಿರುವಿ ಹಾಕದ ರೊಟ್ಟಿ ಯಾಗಿದ್ದಾನೆ. |
9. | ಪರಕೀಯರು ಅವನ ಶಕ್ತಿಯನ್ನು ನುಂಗಿಬಿಟ್ಟಿದ್ದಾರೆ; ಅದು ಅವನಿಗೆ ಗೊತ್ತಿಲ್ಲ; ಹೌದು, ನರೆ ಕೂದಲು ಅಲ್ಲಲ್ಲಿ ಅವನ ಮೇಲೆ ಅದೆ. ಆದಾಗ್ಯೂ ಅವನು ತಿಳಿಯದೇ ಇದ್ದಾನೆ. |
10. | ಇಸ್ರಾಯೇಲಿನ ಗರ್ವವು ತನ್ನ ಮುಖದ ಮುಂದೆ ಸಾಕ್ಷಿ ಕೊಡುತ್ತದೆ; ಆದರೆ ಅವರು ತಮ್ಮ ಕರ್ತನಾದ ದೇವರ ಕಡೆಗೆ ತಿರುಗದೆ ಇದ್ದಾರೆ, ಇಲ್ಲವೆ ಆತನನ್ನು ಇದಕ್ಕೆಲ್ಲಾ ಹುಡು ಕುವದಿಲ್ಲ. |
11. | ಎಫ್ರಾಯಾಮು ಸಹ ಹೃದಯವಿಲ್ಲದ ಬುದ್ಧಿಹೀನವಾದ ಪಾರಿವಾಳದ ಹಾಗಿದ್ದಾನೆ; ಅವರು ಐಗುಪ್ತವನ್ನು ಕರೆಯುತ್ತಾರೆ, ಅವರು ಅಶ್ಯೂರಕ್ಕೆ ಹೋಗುತ್ತಾರೆ. |
12. | ಅವರು ಹೋಗುವಾಗ, ನಾನು ಅವರ ಮೇಲೆ ನನ್ನ ಬಲೆಯನ್ನು ಹಾಸುವೆನು; ಆಕಾಶದ ಪಕ್ಷಿಗಳ ಹಾಗೆ ಅವರನ್ನು ಕೆಳಗೆ ಇಳಿಸಿ ಅವರ ಸಭೆಯು ಕೇಳಿರುವ ಪ್ರಕಾರ ಅವರನ್ನು ಶಿಕ್ಷಿಸುವೆನು. |
13. | ಅವರಿಗೆ ಅಯ್ಯೋ, ಅವರು ನನ್ನನ್ನು ಬಿಟ್ಟು ಓಡಿ ಹೋಗಿದ್ದಾರೆ; ಅವರು ನಾಶವಾಗಲಿ! ಯಾಕಂದರೆ ನನಗೆ ಅವರು ವಿರುದ್ಧವಾಗಿ ದ್ರೋಹ ಮಾಡಿದ್ದಾರೆ; ನಾನು ಅವರಿಗೆ ವಿಮೋಚನೆ ಮಾಡಿದ್ದಾಗ್ಯೂ ಅವರು ನನಗೆ ವಿರುದ್ಧ ವಾಗಿ ಸುಳ್ಳು ಹೇಳಿದ್ದಾರೆ. |
14. | ತಮ್ಮ ಹಾಸಿಗೆಯ ಮೇಲೆ ಗೋಳಾಡುವಾಗಲೂ ಅವರು ತಮ್ಮ ಹೃದಯದಿಂದ ನನ್ನನ್ನು ಕೂಗಲಿಲ್ಲ; ಕಾಳು ಮತ್ತು ದ್ರಾಕ್ಷಾರಸಗಳ ನಿಮಿತ್ತ ಕೂಡಿ ಬಂದು ನನಗೆ ವಿರುದ್ಧವಾಗಿ ತಿರುಗಿ ಬಿದ್ದಿದ್ದಾರೆ. |
15. | ನಾನು ಅವರ ತೋಳುಗಳನ್ನು ಬಂಧಿಸಿ ಬಲಪಡಿಸಿದ್ದೇನೆ, ಆದಾಗ್ಯೂ ಅವರು ನನಗೆ ವಿರುದ್ಧ ವಾಗಿ ಕೇಡು ಮಾಡಲು ಊಹಿಸಿಕೊಂಡಿದ್ದಾರೆ. |
16. | ಅವರು ಹಿಂತಿರುಗುತ್ತಾರೆ, ಆದರೆ ಮಹೋನ್ನತನಾ ದಾತನ ಕಡೆಗೆ ಅಲ್ಲ. ಅವರು ಮೋಸ ಮಾಡುವ ಬಿಲ್ಲಿನ ಹಾಗೆ ಇದ್ದಾರೆ; ಅವರ ಪ್ರಧಾನರ ನಾಲಿಗೆಯ ಹುಚ್ಚು ಕೂಗಾಟದ ನಿಮಿತ್ತ ಕತ್ತಿಯಿಂದ ಬೀಳುವರು; ಇದೇ ಐಗುಪ್ತದೇಶದಲ್ಲಿ ಅವರಿಗಿರುವ ನಿಂದೆಯಾಗಿದೆ. |
← Hosea (7/14) → |