← Hosea (4/14) → |
1. | ಇಸ್ರಾಯೇಲಿನ ಮಕ್ಕಳಾದ ನೀವು ಕರ್ತನ ವಾಕ್ಯವನ್ನು ಕೇಳಿರಿ; ದೇಶದ ನಿವಾಸಿಗಳ ಸಂಗಡ ಕರ್ತನಿಗೆ ತರ್ಕವುಂಟು; ದೇಶದಲ್ಲಿ ಸತ್ಯವೂ ಇಲ್ಲ, ಕನಿಕರವೂ ಇಲ್ಲ, ಇಲ್ಲವೆ ದೇವರ ತಿಳುವಳಿ ಕೆಯೂ ಇಲ್ಲ. |
2. | ಆಣೆಯಿಡುವದೂ ಸುಳ್ಳು ಹೇಳು ವದೂ ಕೊಲ್ಲುವದೂ ಕದಿಯುವದೂ ವ್ಯಭಿಚಾರ ಮಾಡುವದೂ ಹೆಚ್ಚಾಗಿಬಿಟ್ಟಿವೆ; ರಕ್ತಕ್ಕೆ ರಕ್ತ ಸೇರುತ್ತದೆ; |
3. | ಆದದರಿಂದ ದೇಶವು ದುಃಖಪಡುವದು; ಅದರಲ್ಲಿ ವಾಸಿಸುವ ಪ್ರತಿಯೊಬ್ಬನೂ ಕುಗ್ಗಿ ಹೋಗುವನು; ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ ಸಮುದ್ರದ ವಿಾನುಗಳೂ ತೆಗೆದುಹಾಕಲ್ಪಡುವವು. |
4. | ಆದಾಗ್ಯೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವ ರನ್ನು ಖಂಡಿಸದಿರಲಿ; ನಿಮ್ಮ ಜನರೆಲ್ಲರೂ ಯಾಜಕ ನೊಂದಿಗೆ ವಾದಿಸುವವರ ಹಾಗಿದ್ದಾರೆ. |
5. | ಆದದರಿಂದ ನೀನು ಹಗಲಿನಲ್ಲಿ ಬೀಳುವಿ; ಪ್ರವಾದಿಯೂ ನಿನ್ನ ಸಂಗಡ ರಾತ್ರಿಯಲ್ಲಿ ಬೀಳುವನು; ನಾನು ನಿನ್ನ ತಾಯಿ ಯನ್ನು ನಾಶ ಮಾಡುವೆನು. |
6. | ನನ್ನ ಜನರು ತಿಳುವಳಿ ಕೆಯ ಕೊರತೆಯಿಂದ ನಾಶವಾಗಿದ್ದಾರೆ; ಆದಕಾರಣ ನೀನು ತಿಳುವಳಿಕೆಯನ್ನು ತಳ್ಳಿಬಿಟ್ಟದ್ದರಿಂದ ನಾನು ಸಹ ನನಗೆ ಯಾಜಕನಾಗದಂತೆ ನಿನ್ನನ್ನು ತಳ್ಳಿಬಿಡುತ್ತೇನೆ; ನೀನು ನಿನ್ನ ದೇವರ ನ್ಯಾಯಪ್ರಮಾಣವನ್ನು ಮರೆತು ಬಿಟ್ಟಿದ್ದರಿಂದ ನಾನು ಸಹ ನಿನ್ನ ಮಕ್ಕಳನ್ನು ಮರೆತು ಬಿಡುವೆನು. |
7. | ಅವರು ಹೆಚ್ಚಿದ ಹಾಗೆಲ್ಲಾ ನನಗೆ ವಿರೋಧವಾಗಿ ಪಾಪಮಾಡಿದರು; ಆದದರಿಂದ ನಾನು ಅವರ ಮಾನವನ್ನು ನಾಚಿಕೆಗೆ ಮಾರ್ಪಡಿಸುವೆನು. |
8. | ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ ಮತ್ತು ಅವರು ದುಷ್ಟತನದ ಮೇಲೆ ಮನಸ್ಸಿಡುತ್ತಾರೆ. |
9. | ಯಾಜಕನು ಹೇಗೋ, ಹಾಗೆಯೇ ಜನರು ಇರು ವರು; ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡು ವೆನು. |
10. | ಅವರು ತಿಂದರೂ ಸಾಕಾಗುವದಿಲ್ಲ; ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿಯಾಗುವದಿಲ್ಲ; ಯಾಕಂದರೆ ಅವರು ಕರ್ತನ ಕಡೆಗೆ ಗಮನಿಸುವದನ್ನು ಬಿಟ್ಟುಬಿಟ್ಟಿದ್ದಾರೆ. |
11. | ವ್ಯಭಿಚಾರವೂ ದ್ರಾಕ್ಷಾರಸವೂ ಹೊಸ ದ್ರಾಕ್ಷಾರಸವೂ ಹೃದಯವನ್ನು ಕೆಡಿಸುತ್ತದೆ. |
12. | ನನ್ನ ಜನರು ಮರದ ತುಂಡುಗಳಿಗೆ ಆಲೋಚನೆ ಕೇಳುತ್ತಾರೆ; ಅವರ ಕೋಲು ಅವರಿಗೆ ತಿಳಿಸುತ್ತದೆ. ವ್ಯಭಿಚಾರದ ಆತ್ಮಗಳು ಅವರನ್ನು ತಪ್ಪಿಸಿಬಿಟ್ಟಿದೆ; ಅವರು ತಮ್ಮ ದೇವರ ಕೈಕೆಳಗಿರದೆ ವ್ಯಭಿಚಾರ ಮಾಡಿದ್ದಾರೆ. |
13. | ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸು ತ್ತಾರೆ; ಗುಡ್ಡಗಳ ಮೇಲೆ ಧೂಪವನ್ನು ಸುಡುತ್ತಾರೆ. ಅಲ್ಲೋನ್, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ಚೆನ್ನಾಗಿರುವದರಿಂದ ಹಾಗೆ ಮಾಡುತ್ತಾರೆ; ಆದದರಿಂದ ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವರು; ನಿಮ್ಮ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವರು. |
14. | ನಿಮ್ಮ ಕುಮಾರ್ತೆಯರು ವ್ಯಭಿಚಾರ ಮಾಡುವಾಗಲೂ ನಿಮ್ಮ ಹೆಂಡತಿಯರು ವ್ಯಭಿಚಾರ ಮಾಡುವಾಗಲೂ ನಾನು ಶಿಕ್ಷಿಸುವದಿಲ್ಲ. ಯಾಕಂದರೆ ಸೂಳೆಯರ ಸಂಗಡ ತಮ್ಮನ್ನು ಬೇರ್ಪಡಿಸಿಕೊಂಡಿ ದ್ದಾರೆ; ಸೂಳೆಯರ ಸಂಗಡ ಬಲಿಅರ್ಪಿಸುತ್ತಾರೆ; ಆದದರಿಂದ ವಿವೇಕವಿಲ್ಲದ ಜನರು ಬಿದ್ದು ಹೋಗು ವರು. |
15. | ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿ ದರೂ ಯೆಹೂದವು ಅಡ್ಡಿಯಾಗದಿರಲಿ, ಗಿಲ್ಗಾಲಿಗೆ ಹೋಗದೆ ಇಲ್ಲವೆ ಬೇತಾವೆನಿಗೆ ಏರದೆ ಕರ್ತನ ಜೀವದಾಣೆ ಎಂದು ಪ್ರಮಾಣಮಾಡದೆ ಇರ್ರಿ. |
16. | ಹಿಂಜರಿಯುವ ಕಡಸಿನ ಹಾಗೆ ಇಸ್ರಾಯೇಲು ಹಿಂಜ ರಿಯುತ್ತದೆ; ಈಗ ಕರ್ತನು ವಿಸ್ತಾರ ಸ್ಥಳದಲ್ಲಿರುವ ಕುರಿಮರಿಯ ಹಾಗೆ ಅವರನ್ನು ಮೇಯಿಸುವನು. |
17. | ಎಫ್ರಾಯಾಮನು ವಿಗ್ರಹಗಳಿಗೆ ಸೇರಿಕೊಂಡಿ ದ್ದಾನೆ, ಅವನನ್ನು ಬಿಟ್ಟುಬಿಡು. |
18. | ಅವರು ಮಿತಿವಿಾರಿ ಕುಡಿಯುತ್ತಾರೆ; ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ; ಅವರನ್ನು ಆಳುವವರು ನಾಚಿಕೆ ಯನ್ನು ಪ್ರೀತಿ ಮಾಡಿಯೇ ಮಾಡುತ್ತಾರೆ. |
19. | ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸದೆ ಮತ್ತು ಅವರು ತಮ್ಮ ಬಲಿಗಳಿಂದ ನಾಚಿಕೆ ಪಡುವರು. |
← Hosea (4/14) → |