Haggai (1/2) → |
1. | ಅರಸನಾದ ದಾರ್ಯಾವೆಷನ ಎರಡನೇ ವರುಷದ, ಆರನೇ ತಿಂಗಳಿನ ಮೊದಲನೇ ದಿನದಲ್ಲಿ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಕೈಯಿಂದ ಯೆಹೂದದ ಅಧಿಪತಿಯಾದ ಶೆಯಲ್ತಿ ಯೇಲನ ಮಗನಾದ ಜೆರುಬ್ಬಾಬೆಲನಿಗೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನಿಗೂ ಉಂಟಾಯಿತು. |
2. | ಸೈನ್ಯಗಳ ಕರ್ತನು ಮಾತನಾಡಿ ಹೀಗೆ ಹೇಳುತ್ತಾನೆ, ಏನಂದರೆ--ಕಾಲವು ಅಂದರೆ ಕರ್ತನ ಆಲಯವನ್ನು ಕಟ್ಟುವ ಕಾಲವು ಬರಲಿಲ್ಲ ಎಂದು ಈ ಜನರು ಅನ್ನು ತ್ತಾರೆ. |
3. | ಆಗ ಕರ್ತನ ವಾಕ್ಯವು ಪ್ರವಾದಿಯಾದ ಹಗ್ಗಾಯನ ಮೂಲಕ ಉಂಟಾಯಿತು. ಏನಂದರೆ-- |
4. | ಈ ಮನೆ ಹಾಳಾಗಿರಲಾಗಿ ನೀವು ನಿಮ್ಮ ಚಿತ್ರ ಹಲಗೆಗಳುಳ್ಳ ಮನೆಗಳಲ್ಲಿ ವಾಸಮಾಡುವದಕ್ಕೆ ಇದು ನಿಮಗೆ ಸಮಯವೋ? |
5. | ಆದದರಿಂದ ಈಗ ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. |
6. | ನೀವು ಬಹಳವಾಗಿ ಬಿತ್ತಿದ್ದೀರಿ, ಆದರೆ ಕೊಂಚವಾಗಿ ತಂದಿದ್ದೀರಿ; ನೀವು ತಿನ್ನುತ್ತೀರಿ, ಆದರೆ ಸಾಕಾಗಲಿಲ್ಲ; ಕುಡಿಯುತ್ತೀರಿ, ಆದರೆ ತೃಪ್ತಿ ಯಾಗಲಿಲ್ಲ; ಧರಿಸುತ್ತೀರಿ, ಆದರೆ ಬೆಚ್ಚಗಾಗಲಿಲ್ಲ; ಸಂಬಳವನ್ನು ಸಂಪಾದಿಸುವವನು ಅದನ್ನು ತೂತು ಗಳುಳ್ಳ ಚೀಲದಲ್ಲಿ ಹಾಕುವದಕ್ಕೆ ಸಂಪಾದಿಸುತ್ತಾನೆ. |
7. | ಸೈನ್ಯಗಳ ಕರ್ತನು ಹೇಳುವದೇನಂದರೆ -- ನಿಮ್ಮ ಮಾರ್ಗಗಳನ್ನು ಯೋಚಿಸಿಕೊಳ್ಳಿರಿ. |
8. | ಬೆಟ್ಟಕ್ಕೆ ಹೋಗಿ ಮರವನ್ನು ತಂದು ಮನೆಯನ್ನು ಕಟ್ಟಿರಿ; ಆಗ ನಾನು ಅದಕ್ಕೆ ಮೆಚ್ಚಿ ಮಹಿಮೆಯನ್ನು ಹೊಂದುವೆನೆಂದು ಕರ್ತನು ಹೇಳುತ್ತಾನೆ. |
9. | ಬಹಳ ಆಗಬೇಕೆಂದು ನಿರೀಕ್ಷಿ ಸಿದಿರಿ. ಆದರೆ ಇಗೋ, ಕೊಂಚವೇ ಆಯಿತು; ನೀವು ಅದನ್ನು ಮನೆಗೆ ತಂದಾಗ ನಾನು ಅದರ ಮೇಲೆ ಊದಿಬಿಟ್ಟೆನು. ಯಾತಕ್ಕೆ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ. ನನ್ನ ಆಲಯವು ಹಾಳಾಗಿ ರುವದರಿಂದ ನೀವು ನಿಮ್ಮ ನಿಮ್ಮ ಸ್ವಂತ ಮನೆಗಳಿಗೆ ಓಡಿ ಹೋಗುತ್ತೀರಲ್ಲಾ? |
10. | ಆದದರಿಂದ ನಿಮ್ಮ ನಿಮಿತ್ತವೇ ಆಕಾಶವು ಮಂಜನ್ನು ತಡೆಯುತ್ತದೆ; ಭೂಮಿಯು ತನ್ನ ಹುಟ್ಟುವಳಿಯನ್ನು ತಡೆದುಬಿಟ್ಟಿದೆ. |
11. | ಇದಲ್ಲದೆ ನಾನು ಭೂಮಿಯ ಮೇಲೆಯೂ ಬೆಟ್ಟಗಳ ಮೇಲೆಯೂ ಧಾನ್ಯದ ಮೇಲೆಯೂ ಹೊಸ ದ್ರಾಕ್ಷಾರಸದ ಮೇಲೆ ಯೂ ಎಣ್ಣೆಯ ಮೇಲೆಯೂ ಭೂಮಿ ಹುಟ್ಟುವಳಿಯ ಮೇಲೆಯೂ ಮನುಷ್ಯರ ಮೇಲೆಯೂ ದನಗಳ ಮೇಲೆಯೂ ಕೈ ಕಷ್ಟಗಳೆಲ್ಲಾದರ ಮೇಲೆಯೂ ಕ್ಷಾಮ ವನ್ನು ಕರೆದೆನು. |
12. | ಆಗ ಶೆಯಲ್ತೀಯೇಲನ ಮಗನಾದ ಜೆರುಬ್ಬಾ ಬೆಲನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನೂ ಜನರಲ್ಲಿ ಉಳಿದವರೆ ಲ್ಲರೂ ತಮ್ಮ ದೇವರಾದ ಕರ್ತನ ಶಬ್ದವನ್ನೂ ತಮ್ಮ ದೇವರಾದ ಕರ್ತನು ಕಳುಹಿಸಿದ ಪ್ರವಾದಿಯಾದ ಹಗ್ಗಾಯನ ಮಾತುಗಳನ್ನೂ ಕೇಳಿದರು; ಜನರು ಕರ್ತ ನಿಗೆ ಭಯಪಟ್ಟರು. |
13. | ಆಗ ಕರ್ತನ ಸೇವಕನಾದ ಹಗ್ಗಾಯನು ಕರ್ತನ ಮಾತನ್ನು ಜನರಿಗೆ ತಂದು--ನಾನು ನಿಮ್ಮ ಸಂಗಡ ಇದ್ದೇನೆಂದು ಕರ್ತನು ಹೇಳು ತ್ತಾನೆ. |
14. | ಕರ್ತನು ಯೆಹೂದದ ಅಧಿಪತಿಯಾದ ಶೆಯಲ್ತೀಯೇಲನ ಮಗನಾದ ಜೆರುಬ್ಬಾಬೆಲನ ಆತ್ಮ ವನ್ನೂ ಪ್ರಧಾನ ಯಾಜಕನಾದ ಯೆಹೋಚಾದಾಕನ ಮಗನಾದ ಯೆಹೋಶುವನ ಆತ್ಮವನ್ನೂ ಜನರಲ್ಲಿ ಉಳಿದವರೆಲ್ಲರ ಆತ್ಮವನ್ನೂ ಉದ್ರೇಕಿಸಿದ್ದರಿಂದ ಅವರು ಬಂದು ಅರಸನಾದ ದಾರ್ಯಾವೆಷನ ಎರಡನೆಯ ವರುಷದ ಆರನೆಯ ತಿಂಗಳಿನ ಇಪ್ಪತ್ತು ನಾಲ್ಕನೆಯ ದಿನದಲ್ಲಿ |
15. | ತಮ್ಮ ದೇವರಾದ ಸೈನ್ಯಗಳ ಕರ್ತನ ಆಲಯದಲ್ಲಿ ಬಂದು ಕೆಲಸ ಮಾಡಿದರು. |
Haggai (1/2) → |