← Genesis (8/50) → |
1. | ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು. |
2. | ಅಗಾಧದ ಬುಗ್ಗೆಗಳೂ ಆಕಾಶದ ಕಿಟಕಿಗಳೂ ಮುಚ್ಚಲ್ಪಟ್ಟವು. ಇದಲ್ಲದೆ ಆಕಾಶದಿಂದ ಬೀಳುವ ಮಳೆಯೂ ನಿಂತಿತು. |
3. | ಹೀಗೆ ಭೂಮಿಯ ಮೇಲಿದ್ದ ಜಲವು ಕ್ರಮವಾಗಿ ತಗ್ಗಿಹೋಯಿತು. ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆ ಯಾಯಿತು. |
4. | ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟಗಳ ಮೇಲೆ ನೆಲೆಸಿತ್ತು. |
5. | ಹತ್ತನೆಯ ತಿಂಗಳಿನ ವರೆಗೆ ನೀರು ಕ್ರಮವಾಗಿ ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ತುದಿಗಳು ಕಾಣ ಬಂದವು. |
6. | ನಾಲ್ವತ್ತು ದಿವಸಗಳಾದ ತರುವಾಯ ಆದದ್ದೇ ನಂದರೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು |
7. | ಒಂದು ಕಾಗೆಯನ್ನು ಹೊರಗೆ ಬಿಟ್ಟನು; ಅದು ಹೊರಟು ಭೂಮಿಯ ಮೇಲಿದ್ದ ಜಲವು ಆರಿಹೋಗುವ ವರೆಗೆ ಹೋಗುತ್ತಾ ಬರುತ್ತಾ ಇತ್ತು. |
8. | ಭೂಮುಖದ ಮೇಲೆ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ನೋಡುವಂತೆ ಒಂದು ಪಾರಿವಾಳವನ್ನು ಬಿಟ್ಟನು. |
9. | ಆದರೆ ನೀರು ಭೂಮುಖದಲ್ಲೆಲ್ಲಾ ಇದ್ದದ್ದರಿಂದ ಪಾರಿವಾಳದ ಅಂಗಾಲಿಗೆ ವಿಶ್ರಮಿಸುವದಕ್ಕೆ ಸ್ಥಳವು ಸಿಕ್ಕದೆ ಅದು ತಿರಿಗಿ ಅವನ ಬಳಿಗೆ ನಾವೆಗೆ ಬಂತು. ಅವನು ಕೈಚಾಚಿ ಅದನ್ನು ಹಿಡಿದು ನಾವೆಯೊಳಗೆ ಸೇರಿಸಿ ಕೊಂಡನು. |
10. | ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು. |
11. | ಸಾಯಂಕಾಲದಲ್ಲಿ ಪಾರಿವಾಳವು ಅವನ ಬಳಿಗೆ ಬರಲಾಗಿ ಇಗೋ, ಕಿತ್ತಿದ್ದ ಹಿಪ್ಪೆ ಎಲೆಯು ಅದರ ಬಾಯಲ್ಲಿತ್ತು; ಆಗ ನೋಹನು ಭೂಮಿಯ ಮೇಲಿನಿಂದ ನೀರು ಕಡಿಮೆಯಾಯಿತೆಂದು ತಿಳು ಕೊಂಡನು. |
12. | ಇನ್ನೂ ಏಳು ದಿನಗಳು ತಡೆದು ಪಾರಿವಾಳವನ್ನು ಬಿಟ್ಟಾಗ ಅದು ತಿರಿಗಿ ಅವನ ಬಳಿಗೆ ಬರಲೇ ಇಲ್ಲ. |
13. | ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆದದ್ದೇನಂದರೆ, ನೀರು ಭೂಮಿಯ ಮೇಲಿನಿಂದ ಒಣಗಿಹೋಗಿತ್ತು. ನೋಹನು ನಾವೆಯ ಮುಚ್ಚಳವನ್ನು ತೆಗೆದು ನೋಡಲಾಗಿ, ಇಗೋ, ಭೂಮಿಯು ಒಣಗಿಹೋಗಿತ್ತು. |
14. | ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು. |
15. | ಆಗ ದೇವರು ನೋಹನೊಂದಿಗೆ ಮಾತನಾಡಿ ಹೇಳಿದ್ದೇನಂದರೆ-- |
16. | ನೀನೂ ನಿನ್ನ ಸಂಗಡ ನಿನ್ನ ಹೆಂಡತಿಯೂ ನಿನ್ನ ಕುಮಾರರೂ ಅವರ ಹೆಂಡತಿ ಯರೂ ನಾವೆಯೊಳಗಿಂದ ಹೊರಗೆ ಹೋಗಿರಿ. |
17. | ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು. |
18. | ಆಗ ನೋಹನ ಸಂಗಡ ಅವನ ಹೆಂಡತಿ ಕುಮಾರರು ಸೊಸೆಯರು ಹೊರಗೆ ಬಂದರು. |
19. | ಎಲ್ಲಾ ಮೃಗಗಳೂ ಕ್ರಿಮಿಗಳೂ ಪಕ್ಷಿಗಳೂ ಭೂಮಿ ಯಲ್ಲಿ ಹರಿದಾಡುವ ಎಲ್ಲವುಗಳು ತಮ್ಮತಮ್ಮ ಜಾತ್ಯಾ ನುಸಾರವಾಗಿ ನಾವೆಯೊಳಗಿಂದ ಹೊರಬಂದವು. |
20. | ನೋಹನು ಕರ್ತನಿಗೆ ಬಲಿಪೀಠವನ್ನು ಕಟ್ಟಿ ಶುದ್ಧವಾದ ಎಲ್ಲಾ ಪಶು ಪಕ್ಷಿಗಳಿಂದಲೂ (ಕೆಲವನ್ನು) ತೆಗೆದು ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು. |
21. | ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ. |
22. | ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು. |
← Genesis (8/50) → |