← Genesis (5/50) → |
1. | ಆದಾಮನ ವಂಶಾವಳಿಯ ಪುಸ್ತಕವು ಇದೇ. ದೇವರು ಮನುಷ್ಯನನ್ನು ಸೃಷ್ಟಿಸಿದ ದಿನದಲ್ಲಿ ತನ್ನ ಹೋಲಿಕೆಯಲ್ಲಿ ಆತನು ಅವನನ್ನು ಉಂಟುಮಾಡಿದನು. |
2. | ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು; ಅವರು ಸೃಷ್ಟಿಸಲ್ಪಟ್ಟ ದಿನದಲ್ಲಿ ಆತನು ಅವರನ್ನು ಆಶೀರ್ವದಿಸಿ ಅವರನ್ನು ಆದಾಮ ನೆಂದು ಕರೆದನು (ಹೆಸರಿಟ್ಟನು). |
3. | ಆದಾಮನಿಗೆ ನೂರಮೂವತ್ತು ವರುಷವಾದಾಗ ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು. |
4. | ಸೇತನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
5. | ಆದಾಮನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಮೂವತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು. |
6. | ಸೇತನು ನೂರ ಐದು ವರುಷದವನಾಗಿದ್ದಾಗ ಅವನಿಂದ ಎನೋಷನು ಹುಟ್ಟಿದನು. |
7. | ಸೇತನಿಂದ ಎನೋಷನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರಏಳುವರುಷ ಗಳಾಗಿದ್ದವು. ಇದಲ್ಲದೆ ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
8. | ಸೇತನು ಬದುಕಿದ ದಿನಗಳೆಲ್ಲಾ ಒಟ್ಟು ಒಂಭೈನೂರ ಹನ್ನೆರಡು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು. |
9. | ಎನೋ ಷನು ತೊಂಭತ್ತು ವರುಷದವನಾಗಿದ್ದಾಗ ಅವನಿಂದ ಕೇನಾನನು ಹುಟ್ಟಿದನು. |
10. | ಎನೋಷನಿಂದ ಕೇನಾ ನನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಹದಿನೈದು ವರುಷಗಳಾಗಿದ್ದವು. ಇದಲ್ಲದೆ ಅವ ನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
11. | ಎನೋಷನ ದಿನಗಳೆಲ್ಲಾ ಒಟ್ಟು ಒಂಭೈನೂರ ಐದು ವರುಷಗಳಾಗಿದ್ದವು. ತರುವಾಯ ಅವನು ಸತ್ತನು. |
12. | ಕೇನಾನನು ಎಪ್ಪತ್ತು ವರುಷದವನಾಗಿ ದ್ದಾಗ ಅವನಿಂದ ಮಹಲಲೇಲನು ಹುಟ್ಟಿದನು. |
13. | ಕೇನಾನನಿಂದ ಮಹಲಲೇಲನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ನಾಲ್ವತ್ತು ವರುಷಗಳಾ ಗಿದ್ದವು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
14. | ಕೇನಾನನ ದಿನಗಳೆಲ್ಲಾ ಒಟ್ಟು ಒಂಭೈನೂರ ಹತ್ತು ವರುಷಗಳಾಗಿದ್ದವು. ತರುವಾಯ ಅವನು ಸತ್ತನು. |
15. | ಮಹಲಲೇಲನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಯೆರೆದನು ಹುಟ್ಟಿ ದನು. |
16. | ಮಹಲಲೇಲನಿಂದ ಯೆರೆದನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರ ಮೂವತ್ತು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾ ರ್ತೆಯರೂ ಹುಟ್ಟಿದರು. |
17. | ಮಹಲಲೇಲನ ದಿನಗ ಳೆಲ್ಲಾ ಎಂಟುನೂರ ತೊಂಭತ್ತೈದು ವರುಷ ಗಳಾಗಿದ್ದವು; ತರುವಾಯ ಅವನು ಸತ್ತನು. |
18. | ಯೆರೆ ದನು ನೂರ ಅರುವತ್ತೆರೆಡು ವರುಷದವನಾಗಿದ್ದಾಗ ಅವನಿಂದ ಹನೋಕನು ಹುಟ್ಟಿದನು. |
19. | ಯೆರೆದನಿಂದ ಹನೋಕನು ಹುಟ್ಟಿದ ಮೇಲೆ ಅವನ ದಿನಗಳು ಎಂಟುನೂರು ವರುಷಗಳಾಗಿದ್ದವು; ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು. |
20. | ಯೆರೆದನ ದಿನಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೆರಡು ವರುಷಗಳಾಗಿದ್ದವು; ತರುವಾಯ ಅವನು ಸತ್ತನು. |
21. | ಹನೋಕನು ಅರುವತ್ತೈದು ವರುಷದವನಾಗಿದ್ದಾಗ ಅವನಿಂದ ಮೆತೂಷೆಲಹನು ಹುಟ್ಟಿದನು. |
22. | ಹನೋ ಕನಿಂದ ಮೆತೂಷೆಲಹನು ಹುಟ್ಟಿದ ತರುವಾಯ ಅವನು ಮುನ್ನೂರು ವರುಷ ದೇವರೊಂದಿಗೆ ನಡೆದನು. ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
23. | ಹನೋಕನ ದಿನಗಳೆಲ್ಲಾ ಒಟ್ಟು ಮುನ್ನೂರ ಅರುವತ್ತೈದು ವರುಷಗಳಾಗಿದ್ದವು. |
24. | ದೇವರೊಂದಿಗೆ ನಡೆಯುತ್ತಿದ್ದ ಹನೋಕನನ್ನು ಆತನು ತಕ್ಕೊಂಡದ್ದರಿಂದ ಅವನು ಕಾಣದೆಹೋದನು. |
25. | ಮೆತೂಷೆಲಹನು ನೂರ ಎಂಭತ್ತೇಳು ವರುಷದ ವನಾಗಿದ್ದಾಗ ಅವನಿಂದ ಲೆಮೆಕನು ಹುಟ್ಟಿದನು. |
26. | ಮೆತೂಷೆಲಹನಿಂದ ಲೆಮೆಕನು ಹುಟ್ಟಿದ ಮೇಲೆ ಅವನ ದಿನಗಳು ಏಳುನೂರ ಎಂಭತ್ತೆರಡು ವರುಷ ಗಳಾಗಿದ್ದವು. ಅವನಿಂದ ಕುಮಾರರೂ ಕುಮಾರ್ತೆ ಯರೂ ಹುಟ್ಟಿದರು. |
27. | ಮೆತೂಷೆಲಹನ ದಿನ ಗಳೆಲ್ಲಾ ಒಟ್ಟು ಒಂಭೈನೂರ ಅರುವತ್ತೊಂಭತ್ತು ವರುಷಗಳಾಗಿದ್ದವು; ತರುವಾಯ ಅವನು ಸತ್ತನು. |
28. | ಲೆಮೆಕನು ನೂರ ಎಂಭತ್ತೆರಡು ವರುಷದವ ನಾಗಿದ್ದಾಗ ಅವನಿಂದ ಒಬ್ಬ ಮಗನು ಹುಟ್ಟಿದನು. |
29. | ಅವನಿಗೆ ನೋಹ ಎಂದು ಕರೆದು--ಕರ್ತನು ಭೂಮಿಯನ್ನು ಶಪಿಸಿದ್ದರಿಂದ ನಮಗೆ ಉಂಟಾದ ಕೈಕಷ್ಟದಲ್ಲಿಯೂ ಪ್ರಯಾಸದಲ್ಲಿಯೂ ಇವನೇ ನಮ್ಮನ್ನು ಆದರಿಸುವನು ಎಂದು ಹೇಳಿದನು. |
30. | ಲೆಮೆಕನಿಂದ ನೋಹನು ಹುಟ್ಟಿದ ಮೇಲೆ ಅವನ ದಿನಗಳು ಐನೂರ ತೊಂಭತೈದು ವರುಷಗಳಾಗಿದ್ದವು; ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು. |
31. | ಲೆಮೆಕನ ದಿನಗಳೆಲ್ಲಾ ಒಟ್ಟು ಏಳುನೂರ ಎಪ್ಪತ್ತೇಳು ವರುಷಗಳಾಗಿದ್ದವು. ತರುವಾಯ ಅವನು ಸತ್ತನು. |
32. | ನೋಹನು ಐನೂರು ವರುಷದವನಾಗಿದ್ದನು; ನೋಹನಿಂದ ಶೇಮ್ ಹಾಮ್ ಯೆಫೆತ್ ಎಂಬವರು ಹುಟ್ಟಿದರು. |
← Genesis (5/50) → |